Rubber Boy..!!!


ಮೀಟ್ ಮಿಸ್ಟರ್ ರಬ್ಬರ್ ಬಾಯ್ ಉರುಫ್ ಡ್ಯಾನಿಯಲ್ ಸ್ಮಿತ್. ಈತ ತನ್ನ ಗಿನ್ನಿಸ್ ರೆಕಾರ್ಡನ್ನ ತಾನೇ ಐದು ಬಾರಿ ಮುರಿದಿದ್ದಾನೆ.. ಮೈಯಲ್ಲಿ ಮಾಂಸವನ್ನ ಬಿಟ್ರೆ ಬೇರೇನೂ ಇಲ್ಲಾ ಅನ್ನೋ ಹಾಗೆ ಹೆಂಗೆ ಬೇಕಂಗೆ ಬಾಡಿಯನ್ನ ಟ್ವಿಸ್ಟ್ ಮಾಡಿ ಶಾಕ್ ಕೊಡಬಲ್ಲ.. ಇಷ್ಟೇ ಅಲ್ಲದೆ ಇಷ್ಟು ದೊಡ್ಡ ದೇಹವನ್ನ ಪುಟ್ಟ ಬಾಕ್ಸ್ ಅಲ್ಲಿ ಮಡಚಿಟ್ಟು ನಿಮಗೆ ಸರ್ಪೈಸ್ ಕೊಡಬಲ್ಲ..

ಈಗಾಗಲೇ ಡ್ಯಾನಿಯಲ್ ಸ್ಮಿತ್ ಅಮೇರಿಕಾ ಗಾಟ್ (got) ಟ್ಯಾಲೆಂಟ್ ಎಂಬ ರಿಯಾಲಿಟಿ ಶೋಗಳನ್ನ ತನ್ನ ಮುಡಿಗೇರಿಸಿಕೊಂಡಿದ್ದಾನೆ. ಮೈಯನ್ನ ಹೀಗೆ ರಬ್ಬರ್ ಬೆಂಡು ಮಾಡೋ ಹಾಗೆ ಬೆಂಡ್ ಮಾಡ್ತಾನೆ. ಅಮೇರಿಕಾದಲ್ಲಿ ಫುಲ್ ಫೇಮಸ್ ಆಗಿರುವ ಸ್ಮಿತ್, ಅಮೇರಿಕಾದಲ್ಲಿ ಯಾವುದೇ ಪ್ರತಿಷ್ಠಿತ ಸಮಾರಂಭವಿದ್ರೂ ಈತನ ಶೋ ಇರ್ಲೇ ಬೇಕು. ಇಲ್ಲದಿದ್ರೆ ಆ ಸಮಾರಂಭಕ್ಕೆ ಕಳೆಯೇ ಇಲ್ಲಾ ಅನ್ನುವಷ್ಟರ ಮಟ್ಟಿಗೆ ಈತನ ಕೀರ್ತಿ ಹಬ್ಬಿದೆ.

ನೋಡ್ದೋರು ಹಾಗೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿಚಿತ್ರ ವಿಚಿತ್ರ ಪೋಸ್ ನಲ್ಲಿ ಬಾಡಿ ಬೆಂಡ್ ಮಾಡಿ ಅಚ್ಚರಿ ಮೂಡಿಸುತ್ತಾನೆ. ಈತ ನಿಜಕ್ಕೂ ರಬ್ಬರ್ ಮ್ಯಾನೆ ಬಿಡಿ.
!-- Facebook share button Start -->