Werewolf Syndrome!

ಅಬ್ಬಾ ಇದು ಮುಖವಾಡನಾ ಅಂತಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ವಿಯರ್ ವೋಲ್ಫ್ ಸಿಂಡ್ರೋಮ್. ತೆಲೆಕೂದಲಿನಂತೆ ಮುಖದ ತುಂಬೆಲ್ಲಾ ತೊಳದ ತರಹ ಕೂದಲು ಬೆಳೆದು ಬಿಡುತ್ತೆ. ಈ ರೋಗಕ್ಕೆ ಕಾರಣವಾಗಲಿ, ಔಶಧವಾಗಲಿ ಇನ್ನೂ ಕಂಡುಹಿಡಿದಿಲ್ಲ. ನಾರ್ಮಲ್ ಎನ್ನಸುವಂತ ತಂದೆ ತಾಯಿಗಳಿಗೂ ಇಂತ ಅಬ್ ನಾರ್ಮಲ್ ಮಕ್ಕಳು ಹುಟ್ಟಿಬಿಡುತ್ತಾರೆ. ಪ್ರಪಂಚದೆಲ್ಲೆಡೆ ವಿಜ್ಞಾನಿಗಳು ಈ ವಿಯರ್ ವೋಲ್ಫ್ ಬಗ್ಗೆ ರಿಸರ್ಚ್ ಮಾಡ್ತಾನೆ ಇದ್ದಾರೆ. ಆದ್ರೆ ರಿಸಲ್ಟ್ ಮಾತ್ರ ಸೊನ್ನೆ.

!-- Facebook share button Start -->

Born Aged!!

ಆಧುನಿಕ ಯುಗದಲ್ಲಿ ಮನುಷ್ಯನಿಗೆ ಬಿಡಿಸಲಾಗದ ಸಮಸ್ಯೆಗಳೆ ಇಲ್ಲಾ ಅಂತ ಅಂದುಕೊಳ್ಳುತ್ತಿದ್ದರೆ, ಮನುಷ್ಯನನ್ನೆ ಬೆಚ್ಚಿಬೀಳಿಸುವ ವಿರಳಾತಿ ವಿರಳ ಖಾಯಿಲೆಗಳ ಬಗ್ಗೆ ಗೊತ್ತೆ.? ಮದ್ದೆ ಇಲ್ಲದ ಎಷ್ಟೋ ರೋಗಗಳಿಗೆ ಪ್ರಪಂಚದಾದ್ಯಂತ ಅನೇಕರು ಬಲಿಯಾಗುತ್ತಿದ್ದಾರೆ ಅನ್ನೋದು ಅಚ್ಚರಿಯಾದ್ರೂ, ನಿಜ. ಇಂಥಾ ರೋಗಗಳೂ ಇವೆಯಾ ಎನ್ನುವಂಥ ಜಾ ಡ್ರಾಪಿಂಗ್ ಖಾಯಿಲೆಗಳು ಇಲ್ಲಿವೆ ನೋಡಿ. 

ಪ್ರಪಂಚದಲ್ಲಿ ಕೆಲವೇ ಕಲವು ಜನರಿಗೆ ಕಾಡುವಂತ ರೋಗ ಈ ಪ್ರೊಜೆರಿಯಾ. ಹಿಂದಿಯ ಪಾ ಚಿತ್ರದಲ್ಲಿ ಅಮಿತಾಭ್ ಅಭಿನಯದ ಆರೋ ಪಾತ್ರ ಇದೇ ರೋಗದಿಂದ ಬಳಲುತ್ತಿರುತ್ತಾನೆ.

 ಈ ರೋಗಕ್ಕೆ ತುತ್ತಾದವರ ಜೀವಿತಾವಧಿ ಬರೀ 13 ವರ್ಶ.

 ಇವರೆಲ್ಲಾ ಹುಟ್ಟು ಮುದುಕರು. ಅಂಗಳದ ತುಂಬೆಲ್ಲಾ ಆಡಿಕೊಂಡು ಕುಣಿದುಕೊಂಡು ಇರಬೇಕಾದ ಪುಟ್ಟ ಮಕ್ಕಳು ಜೆನೆಟಿಕ್ ಕೋಡ್ ನಲ್ಲಾದ ವ್ಯತ್ಯಾಸದಿಂದ ಮಕ್ಕಳು 80 ವರ್ಶದ ಹಣ್ಣು ಹಣ್ಣು ಮುದುಕರಾಗಿ ಬಿಡುತ್ತಾರೆ. ವಿಶ್ವದೆಲ್ಲಡೆ ಬರೀ 48 ಇಂತಹ ಮಕ್ಕಳಿದ್ದಾರೆ. ವಿಜ್ಞಾನಿಗಳೂ ಏನು ಮಾಡಲಾಗದೆ ಕೈ ಚೆಲ್ಲಿಕುಳಿತಿದ್ದಾರೆ.


!-- Facebook share button Start -->

Crazy Invention, Baby Mop!!!


ಪುಟ್ಟ ಪುಟ್ಟ ಮಕ್ಕಳು ಮುದ್ದು ಮುದ್ದಾಗಿ ಅಂಬೇಗಾಲು ಇಡುತ್ತಿದ್ದರೆ ಎಂಥವರಿಗೂ ಅಪ್ಪಿಕೊಂಡು ಮದ್ದಾಡಬೇಕೆನಿಸುತ್ತೆ. ಆದ್ರೆ ಅದೇ ಜಪಾನಿನಲ್ಲಿ ಪುಟ್ಟ ಮಕ್ಕಳು ಅಂಬೇಗಾಲಿಡಲು ಪ್ರಾರಂಭಿಸಿದ್ರೆ ಅವ್ರೇನು ಮಾಡ್ತಾರೆ ಗೊತ್ತಾ... ಈ ಸ್ಟೋರಿ ನೋಡಿ. 



ಹೀಗೆ ಕ್ಯೂಟ್ ಕ್ಯೂಟಾಗಿ ಅದಾಗ ತಾನೆ ಅಂಬೆಗಾಲಿಡಲು ಕಲೆತ ಮಕ್ಕಳನ್ನ ನೋಡೋದೆ ಒಂದು ಖುಷಿ. ಸೋ ಸ್ವೀಟ್ ಅಂತ ಮಗುವನ್ನ ಮುದ್ದುಮಾಡೋರೆ ಹೆಚ್ಚು. ಅಂತದ್ರಲ್ಲಿ ಜಪಾನಿಗರು ಅಂಬೇಗಾಲಿಡಲು ಶುರುಮಾಡಿದ ಮಕ್ಕಳನ್ನ ಏನ್ ಮಾಡ್ತಾರೆ ಗೊತ್ತಾ... ಪುಟಾಣಿಗಳಿಂದ ಮನೆಯೊರೆಸೋ ಕಾರ್ಯ ಶುರು ಹಚ್ಕೋತಾರೆ.


ಹೇಗಿದ್ರೂ ಮನೇತುಂಬಾ ತೆವಳುತ್ತಾ ಓಡಾಡಿಕೊಂಡಿರ್ತವೆ ಅಂತ, ಮಕ್ಕಳಿಗೆ ನೆಲ ಒರೆಸಲು ಅನುಕೂಲವಾಗುವಂತ ಬಟ್ಟೆಯನ್ನ ಹೊಲಸಿ ಮನೆಯಲ್ಲಿ ಬಿಟ್ಟು ಬಿಡ್ತಾರೆ. ಇದ್ರಿಂದಾಗಿ ಮನೇನೂ ಕ್ಲೀನ್, ಮಗುನೂ ಖುಷ್ ಅನ್ನೋದು ಇವ್ರ ಮಾತು..


 ಹೀಗೆ ಇಂಥದ್ದೊಂದು ವಿಚಿತ್ರ ಕಾಸ್ಟೂಮನ್ನ ಜಪಾನಿಗರು ಕಂಡುಹಿಡಿದದ್ದೇ ತಡ ಈ ಕ್ಲೀನಿಂಗ್ ಡ್ರೆಸ್ ಫುಲ್ ಫೇಮಸ್ಸಾಯ್ತು.. ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಈ ಡ್ರೆಸ್ ನ ಬೇಡಿಕೆಯೂ ಹೆಚ್ಚಿದೆ. ವಿಚಿತ್ರಾ ಅಲ್ವಾ...




!-- Facebook share button Start -->

Crazy Invention, USB Vacuume Cleaner!!!


ನಿಮ್ಮನೇಲಿ ಕಂಪ್ಯೂಟರ್ರೂ, ಲ್ಯಾಪ್ ಟಾಪು ಇದೇ ಅಂದ್ಮೇಲೆ ಅದ್ರ ಕೀ ಬೋರ್ಡ್ ನಲ್ಲಿ ಕಿಲೋಗಟ್ಟಲೆ ಧೂಳು ಇದ್ದಿರಲೇ ಬೇಕು.. ಬರೀ ಮನೆಗಳಲ್ಲಷ್ಟೇ ಅಲ್ಲಾ, ಆಫೀಸುಗಳಲ್ಲೂ ಇದೇ ಕಥೆ. ಯಾಕಂದ್ರೆ ಕೀ ಬೋರ್ಡ್ ನ ಸಂದಿಗೊಂದಿಗಳಲ್ಲಿ ಸೇರಿಕೊಂಡಿರುವ ಧೂಳನ್ನ ಕ್ಲೀನ್ ಮಾಡೋದು ಸುಲಭದ ಮಾತಲ್ಲ. ಅದಕ್ಕಂತಾನೇ ಜಪಾನಿಗರು ಹೊಸ ವ್ಯಾಕ್ಯೂಮ್ ಕ್ಲೀನರ್ ಕಂಡುಹಿಡಿದಿದ್ದಾರೆ.. 

ಅಷ್ಟು ದೊಡ್ಡ ವ್ಯಾಕ್ಯೂಮ್ ಕ್ಲೀನರ್ ನಿಂದ ಇಷ್ಟು ಪುಟ್ಟಕೀಬೋರ್ಡನ್ನ ಹೇಗಪ್ಪಾ ಕ್ಲೀನ್ ಮಾಡ್ತಾರೆ ಅಂತ ಕನ್ಫೂಸ್ ಆಗ್ಬೇಡಿ. ಪುಟ್ಟದಾದ ಕೀಬೋರ್ಡನ್ನ ಕ್ಲೀನ್ ಮಾಡಲು ಪುಟ್ಟದಾದ ವ್ಯಾಕುಮ್ ಕ್ಲೀನರ್ ನ್ನೇ ಕಂಡು ಹಿಡಿಯಲಾಗಿದೆ.. ಆದ್ರೆ ಇದು ಕಾಮನ್ ವ್ಯಾಕ್ಯೂಮ್ ಕ್ಲೀನರ್ ಅಲ್ಲ. ಬದಲಾಗಿ ಯುಎಸ್ ಬಿ ವ್ಯಾಕ್ಯೂಮ್ ಕ್ಲೀನರ್.


ಹೌದು. ಈ ಚಿಕ್ಕದಾದ ಚೊಕ್ಕದಾದ ವ್ಯಾಕ್ಯೂಮ್ ಕ್ಲೀನರ್ ನಿಂದ ಯಾವುದೇ ಕಷ್ಟವಿಲ್ಲದೆ ಕೀ ಬೋರ್ಡನ್ನ ಕ್ಲೀನ್ ಮಾಡಬಹುದು. ಈ ಮಷೀನನ್ನ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನ ಯು.ಎಸ್ ಬಿ ಪೋರ್ಟ್ ಗೆ ಕನೆಕ್ಟ್ ಮಾಡಲಾಗುತ್ತೆ. ಹೀಗಾಗೇ ಇದಕ್ಕೆ ಯು.ಎಸ್. ಬಿ ವ್ಯೂಕ್ಯೂಮ್ ಕ್ಲೀನರ್ ಎಂಬ ಹೆಸ್ರು ಬಂತು..



ಒಟ್ನಲ್ಲಿ ಈ ಕ್ರೇಜಿ invention ಸಿಲ್ಲಿಯಾಗಿದ್ರೂ ತುಂಬಾನೇ ಯ್ಯೂಸ್ ಫುಲ್ ಆಗಿದೆ ಅಲ್ವಾ.. ಮತ್ತೆ ತಡಯಾಕೆ. ಈಗ್ಲೇ ನಿಮ್ಮ ಮನೆಗೆ, ಆಫೀಸಿಗೆ ಈ ಮಷೀನನ್ನ ತಂದು ನಿಮ್ಮ ಕಂಪ್ಯೂಟರನ್ನ ಕ್ಲೀನ್ ಆಂಡ್ ನೀಟಾಗಿಡಿ.

!-- Facebook share button Start -->

Crazy Invention, Easy Bed!!!


ಈ ಚಿಂಕಿ, ಜಪಾನಿಗಳೇ ಹಾಗೆ. ದೆ ಆರ್ ಕ್ರೇಜಿ ಅಬೌಟ್ಗ್ಯಾಜೆಟ್ಸ್. ಅದಕ್ಕಂತಾನೇ ಅವ್ರು ದಿನಕ್ಕೊಂದು ಹೊಸದಾದ ಇನ್ವೆನ್ಶನ್ ಗಳನ್ನ ಮಾಡ್ತಾನೇ ಇರ್ತಾರೆ. ಅವುಗಳಲ್ಲಿ ಕೆಲವು ತುಂಬಾನೇ ಕ್ರಿಯೇಟಿವ್ ಅನ್ನಿಸುವಂತವುಗಳಾದ್ರೆ ಮತ್ತೆ ಕೆಲವು ತೀರಾ ಫನ್ನಿ ಮತ್ತು ಸಿಲ್ಲಿಯಾಗಿರುತ್ವೆ..

ಗಡದ್ದಾಗಿ ನಿದ್ದೆ ಹೊಡೆದು, ಬೆಳೆಗ್ಗೆ ಲೇಟಾಗಿ ಎದ್ದು ಹಾಸಿಗೆ ಮಡಚೋಕು ಟೈಮ್ ಇರದಷ್ಟು ಸೀನ್ ಕ್ರಿಯೇಟ್ ಮಾಡೋರಿಗೊಂದು ಖುಷಿಕೊಡೋ ಸುದ್ದಿ. ನೀವು ಹಾಗೆ ಬೇಕಾಬಿಟ್ಟಿ ಬಿಟ್ಟು ಹೋದ ಬೆಡ್ ಈಗ ತಂತಾನೇ ಕ್ಲೀನ್ ಆಂಡ್ ನೀಟಾಗುತ್ತೆ.

ಇತ್ತೀಚಿಗೆ ಜನ್ರು ತುಂಬಾನೇ ಸೋಮಾರಿಗಳಾಗುತ್ತಿದ್ದಾರೆ. ಅವ್ರಿಗೆ ತಮ್ಮ ಬೆಡ್ಡನ್ನ ಕ್ಲೀನಾಗಿ, ನೀಟಾಗಿ ಇಟ್ಟಕೊಳ್ಳುವಷ್ಟೂ ಟೈಮ್ ಇಲ್ಲಾ.. ಹೀಗಾಗೇ ಕ್ರಿಯೇಟಿವ್ ಟೀಮೊಂದು ಈ ಕ್ರಿಯೇಟಿವ್ ಬೆಡ್ ನ ನಿರ್ಮಾಣ ಮಾಡಿದೆ. ವೈರಿಟಿ ಸೈಜ್ ಗಳಲ್ಲಿ, ಡಿಫರೆಂಟ್ ಕಲರ್ ಮತ್ತು ಲುಕ್ ಗಳಲ್ಲಿ ಈ ಬೆಡ್ ಗಳು ಲಭ್ಯ.


ಬೆಳಿಗ್ಗೆ ಎದ್ದಾದ ತಕ್ಷಣ ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು. ಇಡೀ ಬೆಡ್ ತಂತಾನೇ ಬೆಡ್ ಶೀಟನ್ನ ಬದಲಿಸಿ, ನೀಟ್ ಆಂಡ್ ಕ್ಲೀನ್ ಮಾಡಿಬಿಡುತ್ತೆ. ಈ ಸೆಲ್ಫ್ ಮೇಕಿಂಗ್ ಈಸಿ ಬೆಡ್, ವಿದೇಶಿಗರ ಜೀವನವನ್ನ ತುಂಬಾನೇ ಈಸಿ ಮಾಡಿಬಿಟ್ಟಿದೆಯಂತೆ. ಅಟೋಮೇಶನ್ ಟೆಕ್ನಾಲಜಿಯನ್ನ ಬೆಡ್ ರೂಂವರೆಗೂ ತರೋದಂತ್ರೆ ಇದೇ ಇರ್ಬೇಕು ಅಲ್ವಾ..

ನೀವು ಸೋಮಾರಿಗಳ ಲಿಸ್ಟ್ ನಲ್ಲಿ ಸೇರೋದಾದ್ರೆ, ನಿಮ್ಗೂ ನಿಮ್ಮ ಹಾಸಿಗೆಯನ್ನ ಮಡಚುವಷ್ಟು ಟೈಂ ಇಲ್ಲದೆ ಇದ್ರೆ, ಧಾರಾಳವಾಗಿ ಈ ಈಸಿ ಬೆಡ್ ನ ಮೊರೆ ಹೋಗಬಹುದು.
!-- Facebook share button Start -->

Burp...Uff Sorry!!!


ಸಭೆ ಸಮಾರಂಭಗಳಲ್ಲಿ ಊಟವಾದ ನಂತ್ರ ಸುಮ್ಮನೆ ಹಾಗೆ ಒಮ್ಮೆ ತೀಗಿದರೆ ಸಾಕು,. ಛೇ ಇವ್ರೆನಪ್ಪಾ.. ಸ್ವಲ್ಪನೂ ಮ್ಯಾನರ್ಸ್ ಇಲ್ಲಾ ಅಂತ ಮೂಗು ಮುರಿಯೋರೆ ಹೆಚ್ಚು. ಅಂತದ್ರಲ್ಲಿ ಈ ತೇಗೇ ನಿಮ್ಮನ್ನ ಗಿನ್ನಿಸ್ ಬುಕ್ಕಲ್ಲಿ ಹೆಸರು ಬರುವಂತೆ ಮಾಡಿದ್ರೆ ಹೇಗಿರಬೇಡ.. ಹೌದು ಅಂತದ್ದೊಂದು ಅಚ್ಚರಿಯೂ ನಡೆದಿದೆ. 
ಛಿ, ಛಿ ಇದೇನ್ರಿ ಇವ್ರು ಒಳ್ಳೆ ಎಮ್ಮೆ ಥರ ತೇಗ್ತಾರೆ ಇಂತ ಮುಖ ಕಿವುಚಬೇಡಿ. ಈ ತೇಗೇ ಇವ್ರನ್ನ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಇವ್ರ ಹೆಸ್ರನ್ನ ದಾಖಲಿಸುವಂತೆ ಮಾಡಿದೆ.

ಎಲ್ಲರಿಗೂ ಒಂದಾದರೊಂದು talent ಇದ್ದೇ ಇರುತ್ತೆ. ಆದ್ರೆ ಪೌಲ್ ಹನ್ ನ ಪಾಲಿಗೆ ಇದು ಎಬಿಲಿಟಿ. ಪೌಲ್ ಬೋರಬ್ಬರಿ 110 ಡೆಸಿಬಲ್ಸ್ ವರೆಗೂ ತೇಗಬಲ್ಲ.. ವ್ಯಾಕ್ ಇದೂ ಒಂದು ಟ್ಯಾಲೆಂಟಾ ಅಂತ ಮೂಗು ಮುರಿಯಬೇಡಿ. ಯಾಕಂದ್ರೆ ಪೌಲ್ ಈಗ ಲಂಡನ್ ನ ವೇರಿ ಫೇಮಸ್ ಸೆಲೆಬ್ರಿಟಿ.

ಈ ತಮ್ಮ ಟ್ಯಾಲೆಂಟನ್ನ ಮೊದ್ಲು ಅವ್ರು ಬ್ರಿಟನ್ ಗಾಟ್ ಟ್ಯಾಲೆಂಟ್ ನಲ್ಲಿ ಪ್ರದರ್ಶಿಸಿದ್ರು. ಆದ್ರೆ ಎಲ್ಲಾ ಜಡ್ಜಗಳು ಇವ್ರನ್ನ ಶೋನಿಂದ ಹೊರಬೀಳುವಂತೆ ಮಾಡಿದ್ರು.. ತದ ನಂತ್ರ ಇವ್ರು ಗಿನ್ನಿಸ್ ಬುಕ್ ಸೇರಿದ ಮೇಲೆ ಇವ್ರ ಎಬಿಲಿಟಿ ಎಲ್ಲರ ಗಮನಕ್ಕೆ ಬಂದದ್ದು.. ಆದ್ರೂ ಇದ್ಯಾಕೋ ತೀರ ಅತಿಯಾಯ್ತಲ್ಲ...
!-- Facebook share button Start -->

World's Widest Mouth..!!!


ಇವ್ನುಂದು ಬಾಯಿನೋ ಬೊಂಬಾಯಿನೋ ಅನ್ನೋ ಮಾತು ಈತನಿಗೆ ಅಕ್ಷರಶಃ ಅನ್ವಿಯಿಸುತ್ತೆ. ಯಾಕಂದ್ರೆ ಫ್ರಾನ್ಸಿಸ್ಕೋ ಡೊಮಿಂಗೋದು ಪ್ರಪಂಚದ ಅತ್ಯಂತ ದೊಡ್ಡ ಬಾಯಿ.. ಇಡೀ ಕೋಕ್ ಬಾಟಲನ್ನೇ ಕ್ಷಣ ಮಾತ್ರದಲ್ಲಿ ಬಾಯಲ್ಲಿ ತೂರಿಸಿಕೊಂಡು ಬಿಡಬಲ್ಲ ಈ ಭೂಪ.



ರಬ್ಬರ್ ನಂತೆ ಬೆಂಡಾಗೋ ಈ ಬಾಯಿ ಬರೋಬ್ಬರಿ 6.69 ಇಂಚ್ ಉದ್ದವಿದೆ. ತನ್ನ ಬಾಯಿಯಿಂದಾನೇ ಬಾಯಿಮಾತದ ಈ ಭೂಪ, ಎಲ್ಲಾ ಜಾಹಿರಾತು ಕಂಪನಿಗಳಿಗೆ ಸೆಂಟರ್ ಆಫ್ ಅರ್ಟ್ಯಾಕ್ಷನ್




!-- Facebook share button Start -->

IS THIS A TALENT?


ಇವ್ರು ಇಟಲಿಯ ಟ್ಯಾಲೆಂಟ್ ಇಲ್ಕರ್ ಯಿಲ್ ಮಾಜ್. ಇವ್ರೊಂದು ವಿಕರಾಳ ( ಅಂದ್ರೆ ವಿಲಕ್ಷಣ ಎಂಬ ಅರ್ಥ ) ಗಿನ್ನೆಸ್ ರೆಕಾರ್ಡನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮೂಗಿಂದ ಹಾಲನ್ನ ಎಳೆದುಕೊಂಡು ಕಣ್ಣೀಂದ ಅದನ್ನ ಚಿಮ್ಮಿಸುತ್ತಾರೆ.

ಇಷ್ಟೇ ಆಗಿದ್ರೆ ಸಾಮಾನ್ಯ ಅನ್ನಬಹುದಿತ್ತೇನೋ ಆದ್ರೆ ಇವ್ರು ಚಿಮ್ಮಿಸೋ ಹಾಲಿನ ಉದ್ದ 9.2 ಫೀಟ್. ಅಷ್ಟೇ ಅಲ್ದೆ ಈ ಹಾಲಿನ ಕಾರಂಜಿಯಿಂದಾನೇ ಇಲ್ಕರ್, ಉರಿಯುತ್ತಿರುವ ಮೇಣದ ಬತ್ತಿಯನ್ನ ಆರಿಸುತ್ತಾರೆ.

ಮೂಗಿಂದ ಜ್ಯೂಸು, ಹಾಲು ಹೀಗೆ ತರಾವರಿ ದ್ರವಗಳನ್ನ ಎಳೆದುಕೊಂಡು ಕಣ್ಣಿದಾ ಸೀದಾ ಗ್ಲಾಸ್ ಚಿಮ್ಮಿಸುತ್ತಾರೆ. ನಿಜಕ್ಕೂ ಇದು ವಿರಳಾತಿ ವಿರಳ ಟ್ಯಾಲೆಂಟ್ ಅಲ್ವಾ..

!-- Facebook share button Start -->