ಈ
ಚಿಂಕಿ, ಜಪಾನಿಗಳೇ ಹಾಗೆ. ದೆ ಆರ್ ಕ್ರೇಜಿ ಅಬೌಟ್ಗ್ಯಾಜೆಟ್ಸ್. ಅದಕ್ಕಂತಾನೇ ಅವ್ರು ದಿನಕ್ಕೊಂದು
ಹೊಸದಾದ ಇನ್ವೆನ್ಶನ್ ಗಳನ್ನ ಮಾಡ್ತಾನೇ ಇರ್ತಾರೆ. ಅವುಗಳಲ್ಲಿ ಕೆಲವು ತುಂಬಾನೇ ಕ್ರಿಯೇಟಿವ್
ಅನ್ನಿಸುವಂತವುಗಳಾದ್ರೆ ಮತ್ತೆ ಕೆಲವು ತೀರಾ ಫನ್ನಿ ಮತ್ತು ಸಿಲ್ಲಿಯಾಗಿರುತ್ವೆ..
ಗಡದ್ದಾಗಿ
ನಿದ್ದೆ ಹೊಡೆದು, ಬೆಳೆಗ್ಗೆ ಲೇಟಾಗಿ ಎದ್ದು ಹಾಸಿಗೆ ಮಡಚೋಕು
ಟೈಮ್ ಇರದಷ್ಟು ಸೀನ್ ಕ್ರಿಯೇಟ್ ಮಾಡೋರಿಗೊಂದು ಖುಷಿಕೊಡೋ
ಸುದ್ದಿ. ನೀವು ಹಾಗೆ ಬೇಕಾಬಿಟ್ಟಿ ಬಿಟ್ಟು ಹೋದ ಬೆಡ್ ಈಗ ತಂತಾನೇ ಕ್ಲೀನ್ ಆಂಡ್ ನೀಟಾಗುತ್ತೆ.
ಇತ್ತೀಚಿಗೆ
ಜನ್ರು ತುಂಬಾನೇ ಸೋಮಾರಿಗಳಾಗುತ್ತಿದ್ದಾರೆ. ಅವ್ರಿಗೆ ತಮ್ಮ ಬೆಡ್ಡನ್ನ ಕ್ಲೀನಾಗಿ, ನೀಟಾಗಿ ಇಟ್ಟಕೊಳ್ಳುವಷ್ಟೂ ಟೈಮ್ ಇಲ್ಲಾ..
ಹೀಗಾಗೇ ಕ್ರಿಯೇಟಿವ್ ಟೀಮೊಂದು ಈ ಕ್ರಿಯೇಟಿವ್
ಬೆಡ್ ನ ನಿರ್ಮಾಣ ಮಾಡಿದೆ. ವೈರಿಟಿ ಸೈಜ್ ಗಳಲ್ಲಿ, ಡಿಫರೆಂಟ್
ಕಲರ್ ಮತ್ತು ಲುಕ್ ಗಳಲ್ಲಿ ಈ ಬೆಡ್ ಗಳು ಲಭ್ಯ.
ಬೆಳಿಗ್ಗೆ ಎದ್ದಾದ ತಕ್ಷಣ ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು. ಇಡೀ ಬೆಡ್ ತಂತಾನೇ ಬೆಡ್ ಶೀಟನ್ನ ಬದಲಿಸಿ, ನೀಟ್ ಆಂಡ್ ಕ್ಲೀನ್ ಮಾಡಿಬಿಡುತ್ತೆ. ಈ ಸೆಲ್ಫ್ ಮೇಕಿಂಗ್ ಈಸಿ ಬೆಡ್, ವಿದೇಶಿಗರ ಜೀವನವನ್ನ ತುಂಬಾನೇ ಈಸಿ ಮಾಡಿಬಿಟ್ಟಿದೆಯಂತೆ. ಅಟೋಮೇಶನ್ ಟೆಕ್ನಾಲಜಿಯನ್ನ ಬೆಡ್ ರೂಂವರೆಗೂ ತರೋದಂತ್ರೆ ಇದೇ ಇರ್ಬೇಕು ಅಲ್ವಾ..
ನೀವು ಸೋಮಾರಿಗಳ ಲಿಸ್ಟ್ ನಲ್ಲಿ ಸೇರೋದಾದ್ರೆ, ನಿಮ್ಗೂ ನಿಮ್ಮ ಹಾಸಿಗೆಯನ್ನ ಮಡಚುವಷ್ಟು ಟೈಂ ಇಲ್ಲದೆ ಇದ್ರೆ, ಧಾರಾಳವಾಗಿ ಈ ಈಸಿ ಬೆಡ್ ನ ಮೊರೆ ಹೋಗಬಹುದು.