Seal Of Death-Part3


ದಿ ಮೋಸ್ಟ್ ವಾಟೆಂಡ್ ಟೆರರಿಸ್ಟ್ ನ ಮಟ್ಟಹಾಕಲು ಅಮೇರಿಕಾ ಆಯ್ದುಕೊಂಡದ್ದು ನೆವಿ ಸೀಲ್ಸ್ ಗಳನ್ನ. ಯಾಕಂದ್ರೆ ಅವ್ರು ಪ್ರಪಂಚದ ಮೋಸ್ಟ್ ಸ್ಕಿಲ್ಡ್ ಕಿಲ್ಲರ್ಸ್. ಅಂದ್ಹಾಗೆ ಅವ್ರು ಯಾವೆಲ್ಲಾ ವೆಪನ್ ಗಳನ್ನ ಉಪಯೋಗಿಸ್ತಾರೆ ಗೊತ್ತಾ.. ಕೆಲವು ವೆಪನ್ ಗಳು ಇಂದಿಗೂ ನಿಗೂಢವಾಗಿದ್ರು, ಗೊತ್ತಿರುವ ವೆಪನ್ ಗಳ ಲಿಸ್ಟ್ ಇಲ್ಲಿವೆ ನೋಡಿ.. 

ಸೀಲ್ ಅಂದ್ರೆ ಸೀ, ಎರ್, ಲ್ಯಾಂಡ್. ಅಂದ್ರೆ ಸಮುದ್ರ, ಆಕಾಶ ಮತ್ತು ಭೂಮಿಯ ಮೇಲೆ ಅಷ್ಟೇ ಅಕ್ಯೂರೇಟ್ ಆಗಿ, ಅಷ್ಟೇ ಪರ್ಫೆಕ್ಟಾಗಿ ಹೋರಾಡೋರು ಅಂತ ಅರ್ಥ. ಹೀಗಾಗೇ ಈ ಸೀಲ್ಸ್ ಗಳಿಗೆ ಅತ್ಯಂತ ಆಧುನಿಕಯ ಶಸ್ತ್ರಾಸ್ತ್ರಗಳನ್ನ ಒದಗಿಸಲಾಗುತ್ತೆ. ಇವ್ರ ವೆಪನ್ ಗಲು ಪ್ರಪಂಚದ ಅತ್ಯಂತ ಕ್ವಾಲಿಟಿ ವೆಪೆನ್ ಗಳು. ಅಂದ್ಹಾಗೆ ಇವ್ರು ಉಪಯೋಗಿಸಲು ಹಲವಾರು ಶಸ್ತ್ರಾಸ್ತ್ರಗಳ ಮಾಹಿತಿ ಯಾರಿಗೂ ತಿಳಿದಿಲ್ಲ. ಅವುಗಳನ್ನ ಗೌಪ್ಯವಾಗಿ ಇಡಲಾಗಿದೆ. ಇವುಗಳ ಬಗ್ಗೆ ಖುದ್ದಿ ಯು.ಎಸ್ ಮಿಲಿಟರಿಗೆ ಗೊತ್ತಿಲ್ಲ. ಮೋಸ್ಟ್ ಕಾಮನ್ ಅನ್ನವಂತ ವೆಪನ್ ಗಳನ್ನ ಮಾತ್ರ ಎಲ್ಲರಿಗೂ ತೊರಿಸಲಾಗುತ್ತೆ.

ಗ್ರಾಫಿಕ್ಸ್- MH-47 ಸ್ಪೆಷಲ್ ಒಪ್ಸ್ ಚಿನೂಕ್.


ಇದು ಪ್ರಪಂಚ ಅತ್ಯಂತ ಕಾಸ್ಟ್ಲಿ ಯುದ್ಧ ವಿಮಾನ. ಇದನ್ನ ಕೇವಲ ಮತ್ತು ಕೇವಲ ಸೀಲ್ಸ್ ಗಳು ಬಳಸ್ತಾರೆ. ಅವ್ರು ಮಿಷನ್ ನಲ್ಲಿದ್ದಾಗ ವೈರಿಯನ್ನ ಅತ್ಯಂತ ಹತ್ತಿರದಿಂದ ಹೊಡೆಯಲು ಈ ವಿಮಾನ ಅತ್ಯಂತ ಸಹಾಯಕಾರಿ. ಯಾಕಂದ್ರೆ ಇದು ಭೂಮಿಯ ಮೇಲೆ ಅತ್ಯಂತ ಕೆಳಮಟ್ಟದಲ್ಲೂ ಹಾರಬಹುದಾದ ಯುದ್ಧ ವಿಮಾನ.

ಗ್ರಾಫಿಕ್ಸ್- ಸಿಕೋರಸ್ಕೈ UH-60 ಬ್ಲಾಕ್ ಹಾಕ್

ಈ ಯುದ್ಧವಿಮಾನವನ್ನ ಕಮಾಂಡರ್ ಗಳು ಬಳಸ್ತಾರೆ. ಸೀಲ್ ಗಳಿಗೆ ಕರೆಕ್ಟಾಗಿ ಆಜ್ಞೆ ನೀಡಲು. ಮತ್ತು ಸೀಲ್ ಗಳ ಪ್ರತಿಯೊಂದು ಕಾರ್ಯಾಚರಣೆಯ ಮೇಲೆ ಕಣ್ಣಿಟ್ಟಿರಲು ಇದನ್ನ ಬಳಸಲಾಗುತ್ತೆ. ಇಂತಹ ಎರಡು ವಿಮಾನಗಳನ್ನ ಒಸಾಮಾ ಮಿಷನ್ ನಲ್ಲಿ ಬಳಸಲಾಗಿತ್ತು.

ಗ್ರಾಫಿಕ್ಸ್- MH-6 ಲಿಟಲ್ ಬರ್ಡ್.

ಈ ಡೆಡ್ಲಿ ಲಿಟ್ಲ್ ಬರ್ಡ್ ಗಳನ್ನ ಕೆಲವೊಂದು ಸಿಕ್ರೇಟ್ ಮಿಷನ್ ಗಳನ್ನ ಮಾತ್ರ ಬಳಸಲಾಗುತ್ತೆ.

ಗ್ರಾಫಿಕ್ಸ್- ಸಾಬ್ AT-4 ಆರ್ಮರ್ ವೆಪನ್

ಇದೊಂದು ಡೆಡ್ಲಿ ವೆಪೆನ್ನೇ ಸರಿ. ಇದನ್ನ ಸೀಲ್ಸ್ ಗಳು ತಮ್ಮ ಭುಜದ ಮೇಲಿಟ್ಟಕೊಂಡು ಬಳಸ್ತಾರೆ. ಒಂದೇ ಒಂದು ಬಾರಿಗೆ ಇದ್ರಿಂದ ಹೊರಬರುವ ಗುಂಡುಗಳ ಸಂಖ್ಯೆ 116. ಅಂದ್ರೆ ನಿಂತ ನಿಂತಲ್ಲೇ ಸೀಲ್ಸ್ ಗಳು ನೂರು ಹೆಣಗಳನ್ನ ಉರುಳಿಸಬಲ್ಲರು.

ಗ್ರಾಫಿಕ್ಸ್- M14 ಸ್ನೀಪರ್ ರೈಫಲ್
M4A1 ಕಾರ್ಬೈನ್
H&K MK23 ಮಾಡ್ ಹ್ಯಾಂಡ್ ಗನ್


ಒಂದು ವೇಳೆ ಶತ್ರು ನಮ್ಮಿಂದ ಕೆಲವೇ ಹೆಜ್ಜೆ ದೂರ ಇದ್ರೆ ಅಂತವರನ್ನ ಸದೆಬಡಿಯುಲು ಸೀಲ್ಸ್ ಗಳು ಆಟೋಮ್ಯಾಟಿಕ್ ರೈಫಲ್ ಗಳನ್ನ, ಹ್ಯಾಂಡ್ ಗನ್ ಗಳನ್ನ ಬಳಸ್ತಾರೆ. ಅವುಗಳಲ್ಲಿ ಪ್ರಮುಖವಾದವು, M14 ಸ್ನೀಪರ್ ರೈಫಲ್, M4A1 ಕಾರ್ಬೈನ್, H&K MK23 ಮಾಡ್ ಹ್ಯಾಂಡ್ ಗನ್ ಗಳು.

ಇವಿಷ್ಟು ನಮಗೆ ಗೊತ್ತಿರುವ ಸೀಲ್ ವೆಪೆನ್ ಗಳು. ಆದ್ರೆ ಇವುಗಳಿಗಿಂತ ಪವರ್ ಫುಲ್, ಫುಲ್ಲಿ ಆಟೋಮ್ಯಾಟಿಕ್, ಅಡ್ವಾನ್ಸಡ್ ವೆಪನ್ ಗಳು ನೆವಿ ಸೀಲ್ಸ್ ಗಳ ಹತ್ತಿರ ಇವೆ. ಆದ್ರೆ ಅವೆಲ್ಲಾ ಯಾವವು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಆದ್ರೆ ಇವೆಲ್ಲದಕ್ಕಿಂತ ಮುಖ್ಯವಾಗಿ, ಎಲ್ಲಾ ವೆಪನ್ ಗಳಿಗಿಂತ ಖತರನಾಕ್ ವೆಪನ್ ಅಂದ್ರೆ ಅದು ಖುದ್ದು ಸೀಲ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.!-- Facebook share button Start -->

Seal Of Death-Part2


ಒಸಾಮಾ ಬಿನ್ ಲಾಡೆನ್ ಸಾಯೋದಕ್ಕೂ ಮುಂಚೆ ನಿಮ್ಗೆ ಯು.ಎಸ್ ನೆವಿ ಸೇಲ್ಸ್ ಬಗ್ಗೆ ಗೊತ್ತಿರ್ಲಿಲ್ಲ ಅಂದ್ರೆ ಅದು ದುರಾದೃಷ್ಟವೇ ಸರಿ. ಅವ್ರು ಪ್ರಪಂಚದಲ್ಲಿರುವ ಸೂಪರ್ ಹ್ಯೂಮನ್ ಗಳು. ಅಂದ್ಹಾಗೆ ಬರಾಕ್ ಒಬಾಮಾ ಅಮೇರಿಕಾದ ಅತ್ಯಂತ ಇಂಪಾರ್ಟೆಂಟ್ ಮಿಷನ್ ಗಾಗಿ ಈ ಸೀಲ್ಸ್ ಗಳನ್ನೇ ಯಾಕೆ ನೇಮಿಸಿದ ಗೊತ್ತಾ.. ಒಬ್ಬ ಸೀಲ್ಸ್ ಆಗಬೇಕು ಅಂದ್ರೆ ಏನೆಲ್ಲಾ ಕಸರತ್ತು ಮಾಡ್ಬೇಕು ಗೊತ್ತಾ.. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ... 

ನೀವು ಕೂಡ ಯು.ಎಸ್ ಆರ್ಮಿಯ ನೆವಿ ಸೀಲ್ ಆಗ್ಬೇಕಂದ್ರೆ ಈ ಮೂರು ಪ್ರಶ್ನೆಗಳನ್ನ ನಿಮಗೆ ನೀವೆ ಕೇಳಿಕೊಳ್ಳಿ. ನಿಮಗೆ ಸಾವಿನ ಬಗ್ಗೆ ಭಯವಿದೆಯಾ...
ನಿಮಗೆ ನೀವು ಸಾವಿಗೆ ತುಂಬಾ ಹತ್ತಿರವಾಗಿರೋದು ಇಷ್ಟಾ ಆಗುತ್ತಾ.., ಇವೆರಡಕ್ಕಿಂತ ಮುಖ್ಯವಾಗಿ ನೀವು 30 ತಿಂಗಳ ಪ್ರಪಂಚ ಅತ್ಯಂತ ಕಠಿಣ ಆರ್ಮಿ ಟ್ರೈನಿಂಗನ್ನ ಮಾಡಲು ರೆಡಿಯಾಗಿದ್ದೀರಾ.. ಲಾಡೆನ್ ನನ್ನ ಮುಗಿಸಿದ ಯು.ಎಸ್ ಆರ್ಮಿಯ ನೆವಿ ಸೀಲ್ಸ್ ಈ ಪ್ರಶ್ನೆಗಳನ್ನ ಎಂದೂ ಕೇಳಿಕೊಳ್ಳಲಿಲ್ಲ. ಹೀಗಾಗೇ ಅವ್ರು ಪ್ರಪಂಚದ ಅತ್ಯಂತ ಪರ್ಫೆಕ್ಟ್ ಮೆನ್ ಗಳು.

ಅಂದ್ಹಾಗೆ ಒಬ್ಬ ಸೀಲ್ ಆಗಲು ಅವನಿಗಿರಬೇಕಾದ ಅರ್ಹತೆಗಳು ಯಾವ್ಯಾವು ಗೊತ್ತಾ.. ನೆನಪಿರಲಿ ಇವು ಬರೀ ಅರ್ಹತೆಗಳಷ್ಟೇ.. ನಿಮ್ಮನ್ನ ಫೈನಲಿ ಸೀಲ್ ಆಘಿ ಸೆಲೆಕ್ಟ್ ಮಾಡೋಕೆ ಬೇರೆ ಬೇರೆ ಟೆಸ್ಟ್ ಗಳಿರುತ್ತವೆ.
500 ಯಾರ್ಡ್ ನ್ನ ಬರೀ 12.5 ನಿಮಿಷದಲ್ಲಿ ಈಜಬೇಕು
42 ಪುಷ್ ಅಪ್ಸ್ ಅನ್ನ 2 ನಿಮಿಷದಲ್ಲಿ ಮಾಡ್ಬೇಕು.
50 ಸಿಟ್ ಅಪ್ಸ ನ್ನ 2 ನಿಮಿಷದಲ್ಲಿ ಮುಗಿಸಬೇಕು.
6 ಪುಲ್ ಅಪ್ಸ್ ನ್ನ 2 ನಿಮಿಷದಲ್ಲಿ ಮಾಡ್ಬೇಕು.


ಹೌದು. ಸೀಲ್ಸ್ ಗಳ ಟ್ರೈನಿಂಗ್ ಕಠಿಣಗಳಲ್ಲಿ ಕಠೋರ. ಅವ್ರನ್ನ ಅಲ್ಲಿ ಮನುಶ್ಯರಂತಲ್ಲ, ಸೂಪರ್ ಮ್ಯಾನ್ ಗಳ ಥರಾನೇ ಟ್ರೀಟ್ ಮಾಡ್ತಾರೆ ಹೀಗಾಗೇ ಅಲ್ಲಿ ಅವ್ರು ಬರೀ 12.5 ನಿಮಿಷದಲ್ಲೇ 500 ಯಾರ್ಡ್ ನಷ್ಟು ದೂರ ಈಜಬೇಕು. 42 ಪುಷ್ ಅಪ್ ಗಳನ್ನ ಕೇವಲ 2 ನಿಮಿಷದಲ್ಲಿ ಮುಗಿಸ್ಬೇಕು. ಅಷ್ಟೇ ಅಲ್ಲದೆ 50 ಸಿಟ್ ಅಪ್ ಗಳನ್ನ, 6 ಪುಲ್ ಅಪ್ ಗಳನ್ನ ಎರಡೇ ಎರಡು ನಿಮಿಷಗಳನ್ನ ಮಾಡಿ ಮುಗಿಸಬೇಕು. ಸಾಮಾನ್ಯ ಮನುಷ್ಯಪಾಲಿಗೆ ಇದು ಅಸಾಧ್ಯವೇ ಸರಿ.ಒಂದು ವೇಳೆ ಹಾಗೇನಾದ್ರು ಈ ಅರ್ಹತೆಯ ಪರೀಕ್ಷೆಯನ್ನ ನೀವು ಯಶಸ್ವಿಯಾಗಿ ಪೂರೈಸಿದ್ರೆ, ಮುಂಬರುವ ದಿನಗಳು ನಿಮಗೆ ನರಕವನ್ನೇ ತೋರಿಸುತ್ತವೆ. ಯಾಕಂದ್ರೆ ಅಲ್ಲಿ 5 ವಾರಗಳ ಕಾಲ ಮೆಂಟಲ್ ಟ್ರೈನಿಂಗ್ ಮತ್ತು 8 ವಾರಗಳ ಕಾಲ ಬೇಸಿಕ್ ಕಂಡೀಷನಿಂಗ್ ಟ್ರೈನಿಂಗ್ ಗಳಿರುತ್ತವೆ. ಅವು ಭೂಮಿಯ ಮೇಲೆ ನರಕವನ್ನೇ ತೋರಿಸುತ್ತವೆ.

ಇವೆಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಸೀಲ್ ಆಗಬೇಕಂದ್ರೆ, ಆತ ತನ್ನ ಕೈಕಾಲುಗಳನ್ನ ಕಟ್ಟಿ ನೀರಲ್ಲಿ ಬಿಸಾಕಿದಾಗಲೂ ಈಜಿ ಹೊರಬರುವ ಸಾಮರ್ಥ್ಯ ಅವನ್ನಿಲ್ಲಿರಬೇಕು.ಇದನ್ನ ಗ್ರೌಂಡ್ ಪ್ರೂಫಿಂಗ್ ಅಂತ ಅನ್ನಲಾಗುತ್ತೆ. ಗ್ರೌಂಡ್ ಪ್ರೂಫಿಂಗ್ ಬಲ್ಲವನೆ ಒಬ್ಬ ಯಶಸ್ವಿ ಸೀಲ್ ಅಂತ ಅನ್ನಿಸಿಕೊಳ್ಳೋಕೆ ಸಾಧ್ಯ.

ಇದಷ್ಟೇ ಅಲ್ಲದೆ ಇನ್ನೂ ಭಯಾನಕ ಟೆಸ್ಟ್ ಗಳನ್ನ ಏರ್ಪಡಸಿಲಾಗುತ್ತೆ. ಅದ್ರಲ್ಲೊಂದು ಎಲ್ ವೀಕ್. ಅಂದ್ರೆ 5 ದಿನ 5 ರಾತ್ರಿಯ ಕಠಿಣ ಅಭ್ಯಾಸ. ಈ 120 ಗಂಟೆಗಳಲ್ಲಿ ಸೀಲ್ಸ್ ಬರೀ 4 ಗಂಟೆಗಳ ಕಾಲ ಮಾತ್ರ ನಿದ್ರಿಸಬಹುದು. ಇದ್ರ ಜೊತೆ ಜೊತೆಗೆ ಸೀಲ್ ಗಳಿಗೆ ಜೀರೋ ಡಿಗ್ರಿ ಟೆಂಪರೇಚರ್ ನಲ್ಲಿ ಶತ್ರುಗಳನ್ನ ಹೇಗೆ ಕೊಲ್ಲೋದು ಅನ್ನೋದನ್ನ ಸಹ ಕಲೆಸಿಕೊಡಲಾಗಿರುತ್ತೆ.

ಪ್ಯಾರಾಟ್ರೂಪಿಂಗ್,
ಅಡ್ವಾನ್ಸಡ್ ಸ್ಕೂಬಾ ಆಪರೇಷನ್ಸ್,
ಕ್ಲೋಸ್ ಕ್ವಾಟರ್ ಕಾಂಬ್ಯಾಟ್,
ಸ್ನೈಪರ್ ಅಸಲ್ಟ್ಸ್,
ಅಂಡರ್ ವಾಟರ್ ಡೆಮೊಲಿಷನ್,
ಕಾಂಬ್ಯಾಟ್ ಸ್ವಿಮ್ಮಿಂಗ್ ಅಟ್ಯಾಕ್ಸ್,
ಡೀಪ್ ರಿಕೊನೈನ್ಸ್

ಇದ್ರ ಜೊತೆ ಜೊತೆಗೆ ಪ್ಯಾರಾಟ್ರೂಪಿಂಗ್, ಅಡ್ವಾನ್ಸಡ್ ಸ್ಕೂಬಾ ಆಪರೇಷನ್ಸ್, ಕ್ಲೋಸ್ ಕ್ವಾಟರ್ ಕಾಂಬ್ಯಾಟ್, ಸ್ನೈಪರ್ ಅಸಲ್ಟ್ಸ್, ಅಂಡರ್ ವಾಟರ್ ಡೆಮೊಲಿಷನ್, ಕಾಂಬ್ಯಾಟ್ ಸ್ವಿಮ್ಮಿಂಗ್ ಅಟ್ಯಾಕ್ಸ್, ಡೀಪ್ ರಿಕೊನೈನ್ಸ್ ಹೀಗೆ ತಹರೇವಾರಿ, ಕಠಿಣಾತಿ ಕಠಿಣ ಟ್ರೈನಿಂಗನ್ನ ನೀಡಲಾಗುತ್ತೆ.

ಈಗ ನಿಮಗೆ ಗೊತ್ತಾಗಿರಬೇಕು ಯಾಕೆ ಲಾಡೆನ್ ಗೆ ಇವ್ರ ಮುಂದೆ ಬದುಕುವ ಚಾನ್ಸೇ ಇರ್ಲಿಲ್ಲ ಎಂದು. ಯಾಕಂದ್ರೆ ಇವ್ರು ಸೂಪರ್ ಹ್ಯೂಮನ್ಸ್, ಡೆಡ್ಲಿಕಿಲ್ಲರ್ಸ್.
!-- Facebook share button Start -->

Seal Of Death!


ದಿ ಸೀಲ್ಸ್. ಲಾಡೆನ್ ನ ಹುಟ್ಟಡಗಿಸಲು ಅಮೇರಿಕಾ ಬಳಸಿದ ಪ್ರಪಂಚದ ಅತ್ಯಂತ ಸುಸಜ್ಜಿತ ಸೇನೆಯಿದು. ಲಾಡೆನ್ ನನ್ನ ಬೇಟೆಯಾಡಲು ಈ ಸೀಲ್ಸ್ ಅನ್ನ ಕಳಿಸಿದ್ದಾರೆ ಅಂದ್ರೆ ಲಾಡೆನ್ ಗೆ ಸಾವು ಹತ್ತಿರವಾಗಿದೆಯಂತಾನೇ ಅರ್ಥ. ಅಷ್ಟರ ಮಟ್ಟಿಗೆ ಅವ್ರು ಮಿಸ್ಟರ್ ಪರ್ಫಕ್ಷನಿಸ್ಟುಗಳು. ಇವ್ರು ಎಲ್ಲರಂತಲ್ಲ. ಹಿಡಿದ ಮಿಷನ್ ಅನ್ನ ಮುಗಿಸೋವರೆಗೂ ಮಲಗೋದಿಲ್ಲ..


ಪ್ರಪಂಚದ ಮೋಸ್ಟ್ ವಾಂಟೆಡ್ ಟೆರರಿಸ್ಟ್ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ಇಡೀ ವಿಶ್ವವೇ ಖುಷಿಯಲ್ಲಿ ತೇಲಾಡಿತ್ತು. ವಿಶ್ವವನ್ನೇ ಗೆದ್ದ ಖುಷಿಯಲ್ಲಿ ಅಮೇರಿಕಾ ಇತ್ತು. ನಮ್ಮ ತಂಟೆಗೆ ಬಂದ್ರೆ ಹುಷಾರ್ ಅನ್ನೋ ಸಂದೇಶವನ್ನ ಅಮೇರಿಕಾ ಇಡೀ ಪ್ರಪಂಚಕ್ಕೆ ಸಾರಿತ್ತು. ಅಂದ್ಹಾಗೆ ಲಾಡೆನ್ ನ ತೆಲೆಗೆ, ಎದೆಗೆ ಗುಂಡನ್ನ ಇಟ್ಟವರು ಯಾರು ಗೊತ್ತೇ.. ಇವ್ರೇ ಯು.ಎಸ್. ಆರ್ಮಿಯ ನೆವಿ ಸೀಲ್ಸ್.. 


ಒಸಾಮಾ ಪಾಕ್ ಪಾಪಿಗಳ ನಾಡಿನಲ್ಲಿದ್ದಾನೇ ಅನ್ನೋದು ಅನ್ ಡೌಟ್ ಫುಲ್ ಆದ ತಕ್ಷಣ, ಅಮೇರಿಕಾ ಆತನನ್ನ ನಿರ್ನಾಮ ಮಾಡಲು ಸ್ಕೆಚ್ ಹಾಕತೊಡಗಿತು. ಒಸಾಮಾ ಬದುಕಲು ಚಾನ್ಸೇ ಕೊಡದ ಹಾಗೆ ಆತನನ್ನ ಬೇಟೆಯಾಡಲಾಯಿತು. ಯಾಕಂದ್ರೆ ಲಾಡೆನ್ ನ ಮುಂದೆ ನಿಂದದ್ದು ಖುದ್ದು ಸಾವು. ಅಂದ್ರೆ ಯು.ಎಸ್ ನೆವಿಯ ಸೀಲ್ಸ್. ಮೇ ಒಂದರ ಮಧ್ಯರಾತ್ರಿಯಂದು ಲಾಡೆನ್ ಎದುರಿಗಿದ್ದವರು ಪ್ರಪಂಚದ ಖತನಾಕ್ ಸೇನೆಯ ಪರ್ಫೆಕ್ಟ್ ಸೋಲ್ಜರ್ಸ್ ಸೀಲ್ಸ್. 


ಎರಡು ಡಜನ್ ಸೀಲ್ಸ್ ಗಳು ಲಾಡೆನ್ ನನ್ನ ಅಟ್ಟಾಡಿಸಿ ಕೊಂದ್ರು. ಕಡುಗಪ್ಪಿನ ಮಧ್ಯರಾತ್ರಿಯ ಮಂದ ಬೆಳಕಿನಲ್ಲೂ ಅವ್ರು ತಮ್ಮ ಶತ್ರುವನ್ನ ಬಿಡಲಿಲ್ಲ. ದಿಟ್ಟತನ ದಿಂದ ಹೋರಾಡಿದ ಸೀಲ್ಸ್ ಕಡೆಗೂ ಲಾಡೆನ್ ದೇಹಕ್ಕೆ ಗುಂಡನ್ನ ತೂರಿಸಿಯೇ ಬಿಟ್ರು. ಅವ್ರು ಸೀಲ್ಸ್. ಹೈಲಿ ಸ್ಕಿಲ್ಡ್ ಕಿಲ್ಲರ್ಸ್ ಆಫ್ ದಿ ವರ್ಡ್. ಅವ್ರಿಗೆ ತಾವು ಸೀಲ್ಸ್ ಆಗಿರೋದಕ್ಕೆ ತುಂಬಾ ಹೆಮ್ಮೆಯಿದೆ.

ಹಾಗಂತ ಅವ್ರು ಲಾಡೆನ್ ನ ಕೊಂದ ಕ್ರೆಡಿಟನ್ನ ತಮ್ಮ ಕೊರಳಿಗೆ ಹಾಕಿಕೊಳ್ಳೋದಿಲ್ಲ. ಎಲ್ಲರ ಮುಂದೆಯೂ ಬಡಾಯಿಕೊಚ್ಚಿಕೊಳ್ಳೋದಿಲ್ಲ. ಮೇಲಾಗಿ ಅವ್ರ ಹೆಸ್ರುಗಳೇನು ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ಅವ್ರಿಗಿರುವ ಏಕೈಕ ಉದ್ದೇಶ ಒಬ್ಬ ಶತ್ರುವನ್ನೂ ಉಳಿಸಬಾರದು ಅನ್ನೋದಷ್ಟೇ. ಹೀಗಾಗೆ ದ್ಯಾಟ್ ವಾಸ್ ಅ ಪರ್ಫೆಕ್ಸ್ ಮಿಷನ್..
!-- Facebook share button Start -->