Operation Fire From HELL..!ಎಲ್ಲರಿಗೂ ಗೊತ್ತಿರೋ ಹಾಗೆ ಅಮೇರಿಕಾದ ನೆವಿಸೀಲ್ಸ್ ಗಳು ಸಾವಿದ್ದಹಾಗೆ. ಅವ್ರ ಎದುರಿಗಿದ್ದವರ್ಯಾರೂ ಬದುಕುವ ಚಾನ್ಸೇ ಇರೋದಿಲ್ಲ. ಇನ್ನು ಅಂತ ಕಮಾಂಡೋಗಳು ಒಂದು ಆಪರೇಷನ್ ನನ್ನ ಕೈಗೊಂಡ್ರೆ ಒಂದಿಂಚೂ ಬಿಡದ ಹಾಗೆ ಮುಗಿಸೋದು ಅವ್ರ ಕೆಪ್ಯಾಸಿಟಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಗಳಾಗಿರೋ ಸಿಲ್ಸ್ ಗಳು ಕೈಗೊಂಡ ಮತ್ತೊಂದು ಪರ್ಫೆಕ್ಟ್ ಮಿಷನ್ ಫೈರ್ ಫ್ರಂಮ್ ಹೆಲ್..! 

ಒಂದು ಕಾಲದಲ್ಲಿ ಅಲ್ ಖೈದಾದ ಮುಖ್ಯಸ್ಥ. ಆಗಿನ್ನು ಒಸಮಾ ಬಿನ್ ಲಾಡೆನ್ ಇಷ್ಟು ಪಾಪುಲರ್ ಆಗಿರಲಿಲ್ಲ. ಆತನೇನಿದ್ದರು ಎಲೆ ಮರೆಕಾಯಾಗಿದ್ದ.. ಆದ್ರೆ ಜರ್ಕಾವಿ, ಅಲ್ ಖೈದಾದ ವಿಷಬೀಜವನ್ನ ವಿಶ್ವದಾದ್ಯಂತ ಪಸರಿಸಲು ಪಣತೊಟ್ಟಂತವನು. ಹೀಗಾಗೇ ಈತನ್ನ ಅಮೆರಿಕಾ ಟಾರ್ಗೆಟ್ ಮಾಡಿತ್ತು. ಈತ ಅಲ್ ಖೈದಾದ ಬಾಂಬಿಂಗ್ ಸ್ಪೆಷಲಿಸ್ಟೇ ಸರಿ. ಯಾಕಂದ್ರೆ ಈತ ದೇಶ ವಿದೇಶಗಳಲ್ಲಿ ಬಾಂಬ್ ಗಳನ್ನ ಸಿಡಿಸೋದ್ರಲ್ಲಿ, ಸೂಸೈಡ್ ಬಾಂಬರ್ ಗಳನ್ನ ತಯಾರು ಮಾಡೋದ್ರಲ್ಲಿ ಸಿದ್ಧ ಹಸ್ತ.

ಅಷ್ಟೇ ಅಲ್ದೆ ಜರ್ಕಾವಿ, ಅಮೆರಿಕಾದ ಸುಪ್ರಸಿದ್ಧ ವ್ಯಕ್ತಿಗಳನ್ನ ಅಪಹರಿಸಿ ತಮ್ಮ ಛೇಲಾಗಳನ್ನ ಬಿಡುವಂತೆ ಕಾಡುತ್ತಿದ್ದ. ಅಷ್ಟೇ ಅಲ್ಲದೆ ಇರಾಕ್ ನಲ್ಲಿ ಜರ್ಕಾವಿ ತನ್ನದೇ ಆದ ಒಂದು ಸುಸಜ್ಜಿದ ಸಂಘವನ್ನ ಕಟ್ಟಿಕೊಂಡಿದ್ದ. ಅಲ್ಲಿ ಕುಳಿತುಕೊಂಡೇ ಅಮೆರಿಕಾದ ಮೇಲೆ ನಡೆಸಬಹುದಾದ ದಾಳಿಗಳ ಬಗ್ಗೆ ಪ್ಲಾನ್ ಮಾಡ್ತಿದ್ದ. ಈತನಿಂದ ರೋಸಿಹೋಗಿದ್ದ ಅಮೆರಿಕಾ ಈತನಿಗೊಂದು ಗತಿ ಕಾಣಿಸಲೇ ಬೇಕು ಅಂತ ನಿರ್ಧರಿಸಿತ್ತು. ಹೀಗಾಗೇ ಅವ್ರು ಮೊರೆ ಹೋಗಿದ್ದು, ವರ್ಡ್ದ್ಸ್ ಮೋಸ್ಟ್ ಡೇಂಜರಸ್ ಕಮಾಂಡೋಗಳಾದ ನೆವಿ ಸೀಲ್ಸ್ ಗೆ.

ಪರ್ಫೆಕ್ಷನಿಸ್ಟ್ ಗಳಾದ ಕಮಾಂಡೋಗಳು, ಜರ್ಕಾವಿ ಎಲ್ಲಿದ್ದಾನೇ ಅನ್ನೋದನ್ನ ಮೊದಲೇ ತಿಳಿದಿದ್ವು. ಅದು 2010ರ ಜೂನ್ ತಿಂಗಳು, ಜರ್ಕಾವಿ ತನ್ನ ಛೇಲಾಗಳ ಜೊತೆಗೂಡಿ ಇರಾಕ್ ನ ಬಾಗ್ದಾದ್ ನಲ್ಲಿ ತನ್ನ ಸಭೆ ನಡೆಸಿದ್ದ. ಈ ವಿಷಯವನ್ನ ತಿಳಿದ ಸೀಲ್ ಗಳು ಅಲ್ಲಿಗೆ ಧಾವಿಸಿದ್ರು. ಲಾಡೆನ್ ನನ್ನ ಕೊಂದ ಹಾಗೆ ಅವ್ರು ಜರ್ಕಾವಿಯನ್ನ ಅಟ್ಟಾಡಿಸಿ ಕೊಲ್ಲಲಿಲ್ಲ. ಬದಲಾಗಿ MH-47 ಸ್ಪೆಷಲ್ ಒಪ್ಸ್ ಚಿನೂಕ್ ಯುದ್ಧವಿಮಾನದಲ್ಲಿ ತೆರಳಿದ್ದ ಸೀಲ್ ಗಳು , ಆತನ ಅಡುಗುದಾಣವನ್ನ ಜಸ್ಟ್ ಒಂದು ಬಾಂಬ್ ಹಾಕಿ ಉಡಾಯಿಸಿದ್ರು . 

 ಅಷ್ಟೇ.. ಜರ್ಕಾವಿಯ ಚಾಪ್ಟರ್ ಕ್ಲೋಸ್ ಆಗಿ ಹೋಯ್ತು. ಜೊತೆಗೆ ಆತನ ಛೇಲಾಗಳದ್ದೂ..ಇಂತಹ ಡಿಫರೆಂಟ್ ಕಾನ್ಸೆಪ್ಟ್ ಗಳಿಂದಾಗೇ ನೆವಿ ಸೀಲ್ ಗಳು ಭೂಮಿ ಮೇಲಿರೋ ಮೋಸ್ಟ್ ಡೇಂಜರಸ್ ಕಮಾಂಡೊಗಳು ಅನ್ನೋ ಹೆಸ್ರು ಪಡೆದದ್ದು

!-- Facebook share button Start -->

The Mossads Secret Wars..!ಇಸ್ರೆಲ್ಸ್ ಮೊಸಾಡ್ ಗಳು ಬರೀ ಆಪರೇಷನ್ ರ್ಯಾತ್ ಆಫ್ ಗಾಡ್ ನಲ್ಲಿ ಮಾತ್ರ ತಮ್ಮ ಕೈಚಳಕವನ್ನ ತೋರಿಸಿಲ್ಲ. ಬದಲಾಗಿ ಸಾಲು ಸಾಲು ಸಿಕ್ರೇಟ್ ಆಪರೇಷನ್ ಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವ್ರ ಹತ್ತಿರ ಅಮೇರಿಕಾದ ನೆವಿ ಸೀಲ್ ಗಳ ಹತ್ತಿರವಿರುವಂತ ಆಧುನಿಕ ಶಸ್ತ್ರಾಸ್ತ್ರಗಳಿಲ್ಲ. ಮತ್ತು ಅವರಷ್ಟು ನಿಗೂಢರೂ ಅಲ್ಲ. ಆದ್ರೆ, ಇವ್ರು ನೆವಿ ಸೀಲ್ಸ್ ಗಳಿಗೆ ಪೈಪೋಟಿ ನೀಡೋವಷ್ಟು ಚುರುಕಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅ ಡೆತ್ ಇನ್ ದುಬೈ ಪ್ರಕರಣ. 

ಆತ ಇಡೀ ಐರೋಪ್ಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಅಂದ್ರೆ ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದವು ಇದ್ದಕ್ಕಿದ್ದಂತೆ ಯೂರೋಪ್ ಖಂಡದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಆಗಿ ಬದಲಾದ. ಆತನ ಹೆಸರೇ ಮೊಹ್ಮದ್ ಅಲ್ ಮಭೂ.


ನೋಡೋಕೆ ಸಿದಾ ಸಾದಾನಾಗಿದ್ದ ಮೊಹ್ಮದ್ ತೆಡಾ ಆಗಿದ್ದ. ಆತ ಮೆಕ್ಯಾನಿಕ್ ಆಗೇ ಇದ್ದಿದ್ರೆ ಬದುಕುತ್ತಿದ್ದನೇನೋ. ಆದ್ರೆ ಮತಾಂಧನಾದ ಮೊಹ್ಮದ್,ತನ್ನ ಚಿಕ್ಕ ಗ್ಯಾರೇಜ್ ನಲ್ಲಿ ಹುಟ್ಟುಹಾಕಿದ್ದು, ಇಸ್ ಅದ್ ದಿನ್ ಆಲ್ ಕ್ವಾಸಮ್ ಬ್ರಿಗೇಡ್ ಅನ್ನೋ ಉಗ್ರ ಸಂಘಟನೆಯನ್ನ. ಅಷ್ಟೇ ಅಲ್ಲದೆ ಆತ ಇಸ್ರೆಲ್ ನಲ್ಲಿ ನ ಬಹುತೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿರಂತರವಾಗಿ ಕಾಂಟ್ಯಾಕ್ಟ್ ನಲ್ಲಿದ್ದ.

ಇಸ್ರೇಲ್ ನನ್ನೇ ಟಾರ್ಗೆಟ್ ಮಾಡಿ ಹಲವಾರು ಬಾರಿ ದಾಳಿಯನ್ನೂ ಮಾಡಿದ್ದ. ಅಷ್ಟೇ ಅಲ್ಲದೆ ಈತ 1989ರಲ್ಲಿ ಇಬ್ಬರು ಇಸ್ರೇಲಿ ಸೈನಿಕರನ್ನ ಸಹ ಕೊಂದಿದ್ದ. ಇದು ಇಸ್ರೇಲ್ ಸರ್ಕಾರವನ್ನ ಕೆರಳಿಸಿತ್ತು. ಅಂದಿನಿಂದಲೇ ಮೊಹ್ಮದ್ ನ ಅಂತ್ಯಹಾಡಲು ಇಸ್ರೇಲ್ ಸರ್ಕಾರ ಕಾಯುತ್ತಿತ್ತು. ಆದ್ರೆ ಮೊಹ್ಮದ್ ತುಂಬಾ ಚಾಣಾಕ್ಷ, ಆತನ ಹತ್ತಿರವಿದ್ದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ನಕಲಿ ಪಾಸ್ ಪೋರ್ಟ್ ಗಳು. ಆ ಪಾಸ್ ಪೋರ್ಟ್ ಗಳ ಸಹಾಯದಿಂದಲೇ ಆತ ವರ್ಡ್ಲ್ ಟೂರ್ ನಡೆಸಿದ್ದ. ಈ ವಿಶ್ವ ಪರ್ಯಟನೆಯಲ್ಲೇ ತನ್ನ ಹಮಾಸ್ ಸಂಘಟನೆಯನ್ನ ಬೆಳೆಸುತ್ತಿದ್ದ.


ನಿರಂತರವಾಗಿ ಈತನ ಮೇಲೆ ಕಣ್ಣಿಟ್ಟಿದ್ದ ಇಸ್ರೆಲ್ ಸರ್ಕಾರ, ಆತನನ್ನ ಮುಗಿಸೋ ಮುಹೂರ್ತಕ್ಕಾಗಿ ಕಾಯುತ್ತಿತ್ತು. ಅದಕ್ಕವರು ಆಯ್ಕೆ ಮಾಡಿಕೊಂಡದ್ದು ಒನ್ಸ್ ಅಗೇನ್ ಇಸ್ರೇಲ್ಸ್ ಮೊಸಾಡ್ ಗಳನ್ನ. ತುಂಬಾನೇ ಪ್ರೀಪ್ಲಾನ್ಡ್ ಆಗಿದ್ದ ಮೊಸಾಡ್ ಗಳು ಮೊಹ್ಮದ್ ನನ್ನ ಮುಗಿಸಿದ್ದು  ಜನವರಿ 19, 2010ರಂದು. ಮೊಹ್ಮದ್ ನ ಸಾವು ಖಚಿತವಾಗಿತ್ತು. ಯಾಕಂದ್ರೆ ಅವ್ನ ಎದುರಿಗಿದ್ದದ್ದು ಖುದ್ದು ಸಾವು. ಉರುಫ್ ಮೊಸಾಡ್ ಗಳು.

ದುಬೈನ ರೊಟಾನಾ ಹೋಟೆಲ್ ನಲ್ಲಿ ತಂಗಿದ್ದ ಮೊಹ್ಮದ್ ನ ಪತ್ತೆ ಹಚ್ಚಿದ ಮೊಸಾಡ್ ತಂಡ , ಆತನನ್ನ ಸುಸಜ್ಜಿತವಾಗೇ ಮುಗಿಸಿತ್ತು. ಮೊಹ್ಮದ್ ಹೋಟೆಲ್ ನಲ್ಲಿ ಓಡಾಡುತ್ತಿದ್ದ ಫೂಟೆಜ್ ಗಳು ಸಿಸಿ ಕ್ಯಾಮೆರಾಗಳಿಗೆ ಸೆರೆಸಿಕ್ಕಿವೆ. 
ಈತನನ್ನ ಕೊಲ್ಲಲು ಮೊಸಡ್ ಗಳು ಒಂದೂ ಗುಂಡನ್ನ ಹಾರಿಸಿಲ್ಲ ಅಂದ್ರೆ ಅಚ್ಚರಿಯಾಗುತ್ತೆ. ಜೊತೆಗೆ ಈ ಟೆರರಿಸ್ಟ್ ನ ಹತ್ಯೆ ನಡೆದದ್ದು ಖುದ್ದು ಹೋಟೆನ್ ನಲ್ಲಿರೋರಿಗೂ ಗೊತ್ತಾಗಿರಲಿಲ್ಲ. ಅಷ್ಟು ವ್ಯವಸ್ಥಿತವಾಗಿ ಮೊಸಾಡ್ ಗಳು ತಮ್ಮ ಕಾರ್ಯ ನಿರ್ವಹಿಸಿದ್ರು. ಮೊಹ್ಮದ್ ನನ್ನ ಮುಖಾಮುಖಿಯಾದ ಮೊಸಾಡ್ ಗಳು ಆತನಿಗೆ ಪಾರ್ಶ್ವವಾಯು ತಗಲುವಂತೆ ಇಂಜೆಕ್ಷನ್ ನೀಡಿ, ದಿಂಬಿನಿಂದ ಉಸಿರುಕಟ್ಟುವಂತೆ ಮಾಡಿ ಮೊಹ್ಮದ್ ನ ಕಥೆ ಮುಗಿಸಿದ್ರು.
!-- Facebook share button Start -->

Operation Wrath Of God..!


ಆಪರೇಷನ್ ಜಿರೊನಿಮೊ. ಇದು ಅಮೇರಿಕಾ ಲಾಡೆನ್ ನನ್ನ ಸದೆಬಡೆಯಲು ಇಟ್ಟ ಹೆಸ್ರು. ಈ ಆಪರೇಷನ್ ನನ್ನ ಪ್ರಪಂಚದ ಅತ್ಯಂತ ಶಕ್ತಿಶಾಲಿ ಕಮಾಂಡೊಗಳಾದ ಯು.ಎಸ್ ನೆವಿ ಸೀಲ್ ಗಳು ಯಶಸ್ವಿಯಾಗಿ ನಿರ್ವಹಿಸಿದ್ರು. ಆಪರೇಷನ್ ಜಿರೊನಿಮೊದ ಯಶಸ್ವಿಯನ್ನ ಐತಿಹಾಸಿಕ ದಿಗ್ವಿಜಯವೆಂದೇ ಬಣ್ಣಿಸಲಾಯ್ತು. ಆದ್ರೆ, ಇಂತಹ ಅದೆಷ್ಟೋ ಕಮಾಂಡೊ ಆಪರೇಷನ್ ಗಳು ವಿಶ್ವದಾದ್ಯಂತ ನಡೆದಿವೆ.ಅವೆಲ್ಲಾ ಯಾವು ಗೊತ್ತಾ?
ಅದು 1972ರ ಸಮಯ. ಇಸ್ರೆಲ್ ನಲ್ಲಿ ಮಾತ್ರ ಭಯದ ವಾತಾವರಣ ಶುರುವಾಗಿತ್ತು. ಕಾರಣ ಮ್ಯೂನೀಚ್ ಗಳು ನಡೆಸಿದ ಕಗ್ಗೊಲೆಗಳು ಇಸ್ರೇಲಿ ಜನತೆಯ ನಿದ್ದೆಗೆಡಿಸಿತ್ತು. ಅಲ್ಲಿ ಅಪಹರಣಗಳು, ಕೊಲೆಗಳು ಎಲ್ಲೆ ಮೀರಿದ್ವು. ಇಂತಹ ದುಷ್ಟರನ್ನ ಸದೆಬಡಿಯಲು ಇಲ್ಲಿನ ಸರ್ಕಾರ ಕೈಗೊಂಡಿದ್ದು ಆಪರೇಷನ್ ರ್ಯಾತ್ ಆಫ್ ಗಾಡ್. 
ದ್ಯಾಟ್ ವಾಸ್ ಅ ಬ್ಲ್ಯಾಕ್ ಸೆಪ್ಟಂಬರ್. ಹೌದು 1972ರ ಸೆಪ್ಟಂಬರ್ ಇಸ್ರೇಲ್ ಜನತೆಗೆ ಬ್ಲ್ಯಾಕ್ ಸೆಪ್ಟಂಬರ್ ಆಗಿತ್ತು. ಕಾರಣ ಅಲ್ಲಿ ಆ ದೇಶದ ಪ್ರಮುಖ ಓಲಂಪಿಕ್ ಆಟಗಾರರನ್ನ ಅವ್ರು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕಳೆದುಕೊಂಡಿದ್ರು.. 1972 ಬೇಸಿಗೆಕಾಲದಲ್ಲಿ ಜರ್ಮನಿಯ ರಾಜಧಾನಿ ಮ್ಯೂನೀಚ್ ನಲ್ಲಿ ಒಲಂಪಿಕ್ ಅನ್ನ ಆಯೋಜಿಸಲಾಗಿತ್ತು. ಮೊದಲಿನಿಂದಲೂ ಜರ್ಮನಿಗೆ ಇಸ್ರೇಲ್ ಜನತೆಯನ್ನ ಕಂಡರೆ ಆಗದು. ಹೀಗಾಗಿ ಒಲಂಪಿಕ್ ನಲ್ಲಿ ಬಂದಿಳಿದ ಇಸ್ರೇಲ್ ಟೀಮನ್ನ ಮ್ಯೂನೀಚ್ ಭಯೋತ್ಪಾದಕರು ತಮ್ಮ ಒತ್ತೆಯಾಳನ್ನಾಗಿರಿಸಿಕೊಂಡ್ರು.

ಹೀಗೆ ಇಸ್ರೇಲ್ ನ ಪ್ರಮುಖ ಆಟಗಾರರನ್ನ ಒತ್ತೆಯಾಳನ್ನಾಗಿರಿಸಿಕೊಂಡ ಮ್ಯೂನೀಚ್ ಟೆರರಿಸ್ಟ್ ಗಳು ತಮ್ಮ ವಿಲಕ್ಷಣ ಬೇಡಿಕೆಗಳನ್ನ ಮುಂದಿಡುತ್ತಲೇ ಸಾಗಿದ್ರು. ಅವ್ರ ಪ್ರಮುಖ ಬೇಡಿಕೆ ಇಸ್ರೆಲ್ ನ ಜೈಲಿನಲ್ಲಿರುವ 234 ಪ್ಯಾಲಸ್ತೇನಿಯನ್ ಮತ್ತು ನಾನ್ ಅರಬ್ ಖೈದಿಗಳನ್ನ ಬಿಡುಗಡೆ ಮಾಡಿ ಅನ್ನೋದು. ಒಬ್ಬರನ್ನೋ ಇಬ್ಬರನ್ನೋ ಬಿಡುಗಡೆ ಮಾಡಿ ಅಂದ್ರೆ ಕೇಳಬಹುದಿತ್ತೇನೋ. ಆದ್ರೆ ಇವ್ರು ಬಿಡುಗಡೆಗೆ ಆಗ್ರಹಿಸಿದ್ದು 234 ಖತರ್ನಾಕ್ ಖೈದಿಗಳನ್ನ, ಪ್ರಪಂಚದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳನ್ನ.. ಇಸ್ರೇಲ್ ಸರ್ಕಾರಕ್ಕೆ ಇವ್ರನ್ನ ರಿಲೀಸ್ ಮಾಡೋದು ಹೈಲಿ ಇಂಪಾಸಿಬಲ್ ಆಗಿತ್ತು. ಜೊತೆಗೆ ಇಂತಹ ಉಗ್ರರು ಬಿಡುಗಡೆಯಾಗಿಬಿಟ್ರೆ, ಬರೀ ಇಸ್ರೇಲ್ ಗಷ್ಟೇ ಇಲ್ಲದೆ ಇಡೀ ವಿಶ್ವಕ್ಕೆ ಗಂಡಾಂತರ ಕಾದಿತ್ತು. ಹೀಗಾಗಿ 1972ರಲ್ಲಿ ಎಲ್ಲಾ ರಾಷ್ಟ್ರಗಳು ಇಂತಹ ಟೆರರಿಸ್ಟ್ ಗಳ ಒತ್ತಡಕ್ಕೆ ಮಣಿಯತಂದೆ ಇಸ್ರೆಲ್ ಅಧ್ಯಕ್ಷನಿಗೆ ಪುಕ್ಕಟ್ಟೆ ಸಲಹೆ ನೀಡಿದ್ರು.


ಆದ್ರೆ ತೀರಾ ಕ್ರೂರಿಗಳಾದ ಮ್ಯೂನೀಚ್ ಟೆರರಿಸ್ಟ್ ಗಳು ಹಾಡಹಗಲೇ 5 ಪ್ರಮುಖ ಆಟಗಾರರನ್ನ ಕೊಲೆಗೈದರು. ಇದಿಂದ್ರ ರೊಚ್ಚಿಗೆದ್ದ ಇಸ್ರೇಲ್ ಸರ್ಕಾರ ಕೊಲೆಗೈದ ಒಬ್ಬೇ ಒಬ್ಬ ಟೆರರಿಸ್ಟ್ ಬದುಕಬಾರದು ಅಂತ ನಿರ್ಧರಿಸಿಬಿಟ್ಟಿತು. ಅದಕ್ಕಾಗೇ ಅವ್ರು ಮೊರೆ ಹೋಗಿದ್ದು, ಇಸ್ರೆಲ್ ನ ಅತ್ಯಂತ ಬಲಿಷ್ಟ ಕಮಾಂಡೋ ಟೀಮ್, ಇಸ್ರೇಲ್ಸ್ ಮೊಸಾಡ್ ಗೆ.


ಇಸ್ರೇಲ್ ಆಟಗಾರರನ್ನ ಕೊಂದ ಪಾಪಿಗಳನ್ನ ಸದೆಬಡೆಯಲು ಮೊಸಾಡ್ ಗಳು ಇಟ್ಟ ಹೆಸ್ರು ಆಪರೇಷನ್ ರ್ಯಾತ್ ಆಫ್ ಗಾಡ್. ಒಂದು ಅಂದಾಜಿನ ಪ್ರಕಾರ ಆಪರೇಷನ್ ರ್ಯಾತ್ ಆಫ್ ಗಾಡ್ 20 ವರ್ಷಗಳ ಕಾಲ, ಅಂದ್ರೆ 1992ರ ತನಕ ನಡೆದಿದೆಯಂತೆ. 1972ರ ಸೆಪ್ಟಂಬರ್ ನಿಂದ ಟೆರರಿಸ್ಟ್ ಗಳ ಜಾಡನ್ನ ಹಿಡಿದು ಬೆನ್ನು ಬಿದ್ದ ಮೊಸಾಡ್ ಗಳು ಇಡೀ ಯೂರೋಪನ್ನ ಜಾಲಾಡಿ, ಒಬ್ಬರನ್ನೂ ಬಿಡದೆ ಆ ಮ್ಯೂನಿಚ್ ಟೆರರಿಸ್ಟ್ ಗಳನ್ನ ಕೊಂದಿದ್ದಾರೆ.

ಅಂದ್ರೆ ಅವ್ರು ಕೈಗೊಂಡ ಆಪರೇಷನ್ ಗಳನ್ನ ಸಂಪೂರ್ಣವಾಗಿ ಮುಗಿಸದೇ ಕೂರೋರಲ್ಲ. ಹಾಗೇ ಇಸ್ರೇಲ್ ನ ತಂಟೆಗೆ ಬಂದ್ರೇ ಹುಷಾರ್ ಅನ್ನೋ ಸಂದೇಶವನ್ನ ಸಹ ಮೊಸಾಡ್ ಗಳು ಈ ಆಪರೇಷನ್ ಮೂಲಕ ವಿಶ್ವಕ್ಕೆ ಕೂಗಿ ಕೂಗಿ ಹೇಳಿದ್ರು... ಹೀಗಾಗೇ ಆಪರೇಷನ್ ರ್ಯಾತ್ ಆಫ್ ಡೆತ್ ನ್ನ ಇನ್ನೂ ಸಹ ವಿಶ್ವದಾದ್ಯಂತ ನೆನೆಸಿಕೊಳ್ಳಲಾಗುತ್ತೆ. !-- Facebook share button Start -->