Powerful Five- Jayalalitha

ದಿ ಆಕ್ಟ್ರೆಸ್ ಟರ್ನಡ್ ಪವರ್ ಫುಲ್ ಪಾಲಿಟೀಷಿಯನ್. ಬಣ್ಣದ ಬದುಕಿನ ಮೂಲಕವೇ ರಾಜಕೀಯಕ್ಕೆ ಕಾಲಿರಿಸಿದ ಧುರೀಣೆ. ಒಂದಲ್ಲ ಎರಡಲ್ಲ ಮೂರು ಬಾರಿ ತಮಿಲು ನಾಡಿನ್ನ ಮುಖ್ಯ ಮಂತ್ರಿಯಾಗಿ ಆಳಿದಾಕೆ. ಆಕೆ ಮತ್ಯಾರು ಅಲ್ಲಾ ಐರನ್ ಲೇಡಿ ಆಫ್ ತಮಿಳುನಾಡು ಜಯಲಲಿತ. 

ಸಿಲ್ಕ್, ಜ್ಯೂವೆಲ್ಲರಿ, ಪೆನ್ಲಿಲ್ಡ್ ಐಬ್ರೋ. ಇದು ಜಯಲಲಿತಾರ ಐಡೆಂಟಿಟಿ. ಒಂದು ಕಾಲದಲ್ಲಿ ತಾಳಕ್ಕೆ ತಕ್ಕಂತೆ ಕುಳಿಯುತ್ತಿದ್ದ ಹಿರೋಯಿನ್ ಜಯಲಲಿತ ಮೂರು ಬಾರಿ ತಮಿಳುನಾಡು ರಾಜಕೀಯವನ್ನ ಕುಣಿಸಿದ್ದಾರೆ. ಮೋಹಕ ಚಲುವೆಯಾಗಿದ್ದ ಜಯಲಲಿತಾರನ್ನ ಬರೀ ನಟಿಯಾಗಿ ನೋಡದೆ, ಇಲ್ಲಿನ ಜನ ಆಕೆಯನ್ನ ರಾಜಕಾರಣಿಯಾಗೂ ಕಂಡಿದ್ದಾರೆ. ಆಕೆ ಸಿ ಸ್ಕ್ವಾಯರ್. ಅಂದ್ರೆ ಒನ್ ಆಫ್ ದಿ ಮೋಸ್ಟ್ ಕಾಂಟ್ರಿವರ್ಷಿಯಲ್ ಆಂಡ್ ಕಲರ್ ಫುಲ್ ಇಂಡಿಯನ್ ಪಾಲಿಟೀಷಿಯನ್ .ಜಯಲಲಿತಾರ ಜೀವನ ಸಿನಿಮಾಗಳಷ್ಟೇ ಕಲರ್ ಫುಲ್. ಅಣ್ಣಾ ಡಿಎಂಕೆಯ ಅಮ್ಮಾ ಎಂದೇ ಕರೆಯಲ್ಪಡುವ ಜಯಲಲಿತಾ , ಕರುಣಾಜನಕವಾಗಿ ಡಿ.ಎಂಕೆಗೆ ಸೋಲುಣಿಸಿದ್ದಾರೆ. 234 ಕ್ಷೇತ್ರಗಳಲ್ಲಿ ಡಿಎಂಕೆ ಕೇವಲ 32 ಸ್ಥಾನ ಪಡೆದಿದೆ. ಜಯಾಲಲಿತಾ ನೇತೃತ್ವದ ಎಐಎಡಿಎಂಕೆ 202 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ತಮಿಳುನಾಡಿನ ಗದ್ದುಗೆ ಏರಿದ್ದಾರೆ. ಕಾಲು ಭಾಗವನ್ನೂ ಗೆಲ್ಲಲಾಗದ ಡಿಎಂಕೆ ಸ್ಥಿತಿ ಕರುಣಾಜನಕವಾಗಿದೆ.


ಮೂಲತಃ ಕರ್ನಾಟಕದವರಾದ ಜಯಲಲಿತಾ ಜಯರಾಮ್ 1948ರ ಫೆಬ್ರವರಿ 24ರಂದು ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಜನಿಸಿದ್ರು. ಆದ್ರೆ ಅವ್ರ ಕರಿಯರ್ ಅಂತ ಶುರುವಾಗಿದ್ದು ತಮಿಳುನಾಡಿನಲ್ಲೇ... ಜಯಲಲಿತಾರ ರಾಜಕೀಯ ಹಾದಿ ಸುಗಮವಾಗಿರಲಿಲ್ಲ. 1999ರಲ್ಲಿ ಈಕೆ ಏಕೈಕ ಮಹಿಳಾ ಸದಸ್ಯೆಯಾಗಿ ಅಸಂಬ್ಲಿಗೆ ಎಂಟ್ರಿಯಾಗಿದ್ರು. ಆಗ ಡಿಎಂಐಸಿ ಯಿಂದ ಅಸೆಂಬ್ಲಿಯಲ್ಲೇ ಜಯಾರ ವಸ್ತ್ರಾಪಹರಣವಾಯ್ತು. ಆದ್ರೂ, ಈಕೆ ಎಲ್ಲಾ ಅಪಮಾನಗಳನ್ನ ಸಹಿಸಿ ಮೇಲೆದ್ದು ಬಂದ ಅಭಿನವ ದ್ರೌಪದಿಯೇ ಸರಿ.ಶಾಸಕರಾಗಿ, ಪಕ್ಷದ ವಿವಿಧ ಪದಾಧಿಕಾರಿ ಹುದ್ದೆಯಲ್ಲಿ ಸೇವೆಸಲ್ಲಿಸಿದ ಜಯಲಲಿತಾ 1991ರಿಂದ 1996ರವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡ್ರು. 2002ರಿಂದ 2006 ಎರಡನೇ ಬಾರಿ ಅಧಿಕಾರ ಚಲಾಯಿಸಿದ್ರು. ಇದೀಗ ಲ್ಯಾಂಡ್‌ ಸೈಡ್ ವಿಕ್ಟರಿ ಸಂಪಾದಿಸಿರೋ ಅಮ್ಮ, ಮತ್ತೆ ಸಿಎಂ ಆಗಿದ್ದಾರೆ.
ತಮ್ಮ ಕಲರ್ ಫುಲ್ ಸಾರಿ ಗಳಿಂದ, ಕಲರ್ ಟಿವಿ ಕಾಂಟ್ರವರ್ಸಿಗಳಿಂದ, ಕೆಜಿ ಕೆಜಿ ಬಂಗಾರದ ಸೊಬಗಿನಿಂದ ಅಮ್ಮಾ ಫೇಮಸ್ಸಾದ್ರೂ, ಜನ ಮಾತ್ರ ಜಯಮ್ಮನಿಗೇ ಜೈಕಾರ ಹಾಕಿದ್ದಾರೆ. ಆ ಮೂಲಕ ಮೂರನೇ ಬಾರಿ ಜಯಲಲಿತ ತುಮಿಳು ನಾಡಿದ ಚುಕ್ಕಾಣಿ ಹಿಡಿದಿದ್ದಾರೆ.
!-- Facebook share button Start -->

Powerful Five- Mamata Banerjee

ಏರು ಧ್ವನಿ, ದಿಟ್ಟ ನುಡಿ. ಲಾಲೂ ಕಿರಿಕ್‌ಗೂ ಅಷ್ಟೇ ಚೂಪು ಮಾತಿನಿಂದ ಉತ್ತರ ಕೊಡೋ ಚಾಕಚಕ್ಯತೆ. ಮಾತಿನ ಮಧ್ಯೆ ಮಧ್ಯೆ ಎಲ್ಲೋ ನೆನೆಪಾದ ಪುಟ್ಟ ಕವಿತೆ. ಜೊತೆ ಜೊತೆಗೆ ಠಾಗೋರರ ಸುಂದರ ಕೋಟ್ ಗಳು. ಇದು ನೇರ ನುಡಿ, ನೇರ ನಡೆಗೆ ಹೆಸರಾದ ಮಮತಾ ಬ್ಯಾನರ್ಜಿ ಸ್ಟೈಲ್.. ಖಡಕ್ಕಾಗಿ ಮಾತಾಡೋ ದೀದಿ ಈಗ ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸ ಬದಲಿಸಿದ್ದಾರೆ.


    ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ದಶಕಗಳ ಕಾಲ ಬಂಗಾಳವನ್ನ ಬಿಟ್ಟು ಬಿಡದೆ ಆಳಿದ ಹುಲಿಗಳೀಗ ಪಂಜರ ಸೇರಿಕೊಂಡಿವೆ. ಹೌದು. 30 ವರ್ಷಗಳ ಎಡರಂಗದ ಆಳ್ವಿಕೆಗೆ ಮಮತಾ ದೀದಿ ತಿಲಾಂಜಲಿ ಇಟ್ಟಿದ್ದಾರೆ. ಬಿಳಿ ಸೀರೆಯುಟ್ಟು, ಹವಾಯಿ ಚಪ್ಪಲಿ ತೊಟ್ಟು ಡಿಫರೆಂಟಾಗಿ ಮಾಡಿದ ಹೋರಾಟಗಳೆಲ್ಲಾ ಕ್ಲಿಕ್ ಆಗಿವೆ. ಪರಿಣಾಮ ಮಮತಾ ಈಗ ಪಶ್ಚಿಮ ಬಂಗಾಳದ ಸಿ.ಎಂ..!.


ನೋಡೋಕೆ ಖಡಕ್ಕಾಗಿ ಕಾಣೋ ದೀದಿ ನಿಜಕ್ಕೂ ಮಮತಾಮಯಿ. ಬಹುಮುಖ ಪ್ರತಿಭೆಯ ಬ್ಯಾನರ್ಜಿ ಒಬ್ಬ ಒಳ್ಳೆ ಭಾಷಣಗಾರ್ತಿ, ಒಬ್ಬ ಸುಂದರ ಕವಿಯತ್ರಿ, ಮತ್ತಷ್ಟೇ ಮೋಹಕ ಪೇಂಟರ್ ಕೂಡ ಹೌದು. ಇನ್ ಒನ್ ಲೈನ್ ಮಮತಾ ಲವ್ಸ್ ಪಿ ಥ್ರೀ. ಅಂದ್ರೆ ಪೋಯಟ್ರಿ, ಪೇಂಟಿಂಗ್, ಆಂಡ್ ಪಾಲಿಟಿಕ್ಸ್.


ದಶಕಗಳ ಕಾಲ ಬೀದಿ ಬದಿ ನಿಂತು ತಮ್ಮ ಕಷ್ಟ-ಸುಖಗಳಿಗಾಗಿ ಹೋರಾಡಿದ ಮಮತಕ್ಕನಿಗೆ ಬಂಗಾಳದ ಜನತೆ ಮಮತೆಯ ಉಡುಗೊರೆ ನೀಡಿದ್ದಾರೆ. ಒಂದು ಐತಿಹಾಸಿಕ ಗೆಲುವೊಂದನ್ನು ಅವರ ಮಡಿಲಿಗೆ ಹಾಕಿದ್ದಾರೆ.

ಇಂಗ್ಲೀಷ್ ಹಿಂದಿಯಲ್ಲಿ ಮಮತಾಳಿಗೆ ಹಿಡಿತವಿರದಿದ್ರು, ಬಂಗಾಳಿಯಲ್ಲಿ ತರಾಟೆ ತೆಗೆಯಲು ಶುರುವಿಟ್ಟುಕೊಂಡ್ರೇ ಮಹಾ ಕಾಳಿಯೇ ಸರಿ. ಬಿಳಿ ಸೀರೆ ಹವಾಯಿ ಚಪ್ಪಲಿಯನ್ನ ತೊಟ್ಟು ಸಿಂಪ್ಲಿಸಿಟಿಯನ್ನ ಮೆರೆಯುವ ಮಮತಾ ನಿಜ ಜೀವನದಲ್ಲೂ ತುಂಬಾ ಸಿಂಪಲ್. ಈ ಕಾರಣಕ್ಕಾಗೇ ಮಮತಾ ಇಂದು ಬಂಗಾಳದ ಜನತೆಯ ನೆಚ್ಚಿನ ದೀದಿಯಾಗಿದ್ದಾರೆ.
!-- Facebook share button Start -->

HI-FI HOUSE- Hurst House England

ಇನ್ನು ನಾವು ನಿಮ್ಗೆ ತೋರಿಸೋ ಬಂಗ್ಲೆ ಫುಲ್ ಪಾಪುಲರ್ ಬಲ್ಡಿಂಗ್. ಈ ಅರಮನೆಯಲ್ಲಿ ಅತೀರಥ ಮಹಾರಥರೆಲ್ಲಾ ಐಷಾರಾಮಿ ಜೀವನವನ್ನ ನಡೆಸಿಕೊಂಡು ಹೋಗಿದ್ದಾರೆ. ಸುಪ್ರಸಿದ್ಧ ಹಾಲಿವುಡ್ ಮೂವಿಗಳಲ್ಲೂ ಈ ಬಂಗ್ಲೆ ರಾರಾಜಿಸಿದೆ. ಅದಕ್ಕಾಗೇ ಈ ಅರಮನೆಯನ್ನ ಪಾಪ್ ಸಂಸ್ಕೃತಿಯ ಕನ್ನಡಿ ಅನ್ನಲಾಗುತ್ತೆ.
  
ಇದು ಅಂತಿಂತ ಮನೆಯಲ್ಲ. ಇಡೀ ಪ್ರಂಪಚದಲ್ಲೇ ಪ್ರಖ್ಯಾತಿಯನ್ನ ಪಡೆದ ಇಂಗ್ಲೇಡ್ ಹರ್ಸ್ಟ್ ಬಂಗಲೆ. ಈ ಬಂಗಲೆಯಲ್ಲಿ ಇದ್ದು ಹೋದವರು ಪ್ರಪಂಚದ ಮೋಸ್ಟ್ ಪಾಪುಲರ್ ಪರ್ಸನ್ ಗಳೇ. ಸುಂದರ ಜಾಗ, ದಟ್ಟ ಕಾನನ ನಡುವೆ ದಟ್ಟವಾಗಿ ಎದ್ದಿರುವ ಹರ್ಸ್ಟ್ ಅರಮನೆ. ಅಂದ್ಹಾಗೆ ಈ ಬಂಗಲೆಗೆ ಈ ಹೆಸ್ರು ಯಾಕೆ ಬಂತು ಗೊತ್ತಾ..?. ಮುದ್ರಣ ಜಗತ್ತಿನ ದೈತ್ಯ ಉದ್ಯಮಿ ವಿಲಿಯಂ ರ್ಯಾಂಡಾಫ್ ಹರ್ಸ್ಟ್ ಈ ಬಂಗಲೆಯ ಒಡೆಯ. ಹೀಗಾಗೇ ಆತನ ಅಡ್ಡ ಹೆಸ್ರೇ ಈ ಬಂಗಲೆಗೆ ಬಂದು ಬಿಟ್ಟಿದೆ.
ಇಂಗ್ಲೆಂಡ್ ನ ಬೆವರ್ಲಿ ಹಿಲ್ಸ್ ನಲ್ಲಿ ಈ ಮನೆಯಿದೆ. ಈ ಬೃಹತ್ ಬಂಗಲೆಯಲ್ಲಿ 29 ಶಯನ ಗೃಹ, 3 ಈಜುಕೊಳಗಳಿವೆ. ಇಂತಹ ಬೃಹತ್, ಮತ್ತು ಸುಂದರ ಬಂಗಲೆಯಲ್ಲಿ ನೂರಾರು ಸಿನಿಮಾಗಳ ಚಿತ್ರೀಕರಣವೂ ನಡೆದಿದೆ. ಅಂದ್ಹಾಗೆ ಸುಪ್ರಸಿದ್ಧ ಚಲನಚಿತ್ರ ಗಾಡ್ ಫಾದರ್ ಚಿತ್ರದ ಚಿತ್ರೀಕರಣವೂ ಇದೀ ಮನೆಯಲ್ಲಿ ನಡೆದಿದೆ. ಆ ನಂತರ ಈ ಮನೆ ಪಾಪ್ ಸಂಸ್ಕೃತಿಯ ಸಂಕೇತವಾಗಿ ನಿಂತಿದೆ.


ಈ ಮನೆಯಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ವಾಸಿಸಿದ್ದರು ಅನ್ನೋದು ಮತ್ತೊಂದು ಖ್ಯಾತಿ. ಇವ್ರಷ್ಟೇ ಅಲ್ಲದೆ ಪ್ರಪಂಚದ ಪಾಪುಲರ್ ಅನ್ನೋ ವ್ಯಕ್ತಿಗಳೆಲ್ಲಾ ಈ ಮನೆಯಲ್ಲಿ ಇದ್ದು ಹೋದವರೇ. ಅಂತವರಲ್ಲಿ ಇಂಗ್ಲೆಂಡ್ ಫುಟ್ ಬಾಲ್ ತಾರೆ ಡೇವಿಡ್ ಬೆಕಮ್, ಅವ್ರ ಪತ್ನಿ ವಿಕ್ಟೋರಿಯಾ ಬೆಕಮ್ ಮದ್ವೆಯಾದ ಹೊಸತರಲ್ಲಿ ಇಲ್ಲೇ ನೆಲೆಸಿದ್ದರಂತೆ.ಅಷ್ಟೇ ಅಲ್ದೆ. ಅವ್ರಿಗೆ ಈ ಮನೆ ಎಷ್ಟು ಇಷ್ಟ ಆಯ್ತು ಅಂದ್ರೇ ಹರ್ಸ್ಟ್ ಬಂಗಲೆಯ ಪಕ್ಕದಲ್ಲೇ ಮನೆಯೊಂದನ್ನ ಹುಡುಕಿ ವಾಸವಾಗಿದ್ದಾರಂತೆ. ಅಂದ್ಹಾಗೆ ಅವ್ರ ನೆರೆಮನೆಗಳಲ್ಲಿ ಟಾಮ್ ಕ್ರೂಸ್, ಕೇಟಿ ಹೋಮ್ಸ್ ಮುಂತಾದವರ ಮನೆಗಳೂ ಸಹ ಇಲ್ಲೇ ಇವೆ.
!-- Facebook share button Start -->

HI-FI HOUSE- The Penthouse England


ಇದು ಇಂಗ್ಲೆಂಡ್ ನ ಸುಪ್ರಸಿದ್ಧ ಅಪಾರ್ಟ್ ಮೆಂಟ್ ಪೆಂಟ್ ಹೌಸ್ ಹೈಡ್ ಪಾರ್ಕ್. ಇಂತ ಅಪಾರ್ಟ್ ಮೆಂಟ್ನಲ್ಲಿ ಒಂದೇ ಒಂದು ರೂಮು ಪಡಿಯೋಕೆ ಅಂತ ಲಂಡನ್ ನ ಶ್ರೀಮಂತರೆಲ್ಲರೂ ತುದಿಗಾಲಲ್ಲಿ ನಿಂತಿರ್ತಾರೆ. ಹೀಗಾಗೇ ಇದನ್ನ ಶ್ರೀಮಂತರ ಅಡ್ಡಾ ಅನ್ನಬಹುದೇನೋ. ಯಾಕಂದ್ರೆ ಬಡವರಿಗೆ ಕೈಗೆಟುಕದ ದರದಲ್ಲಿ ಈ ಅಪಾರ್ಟ್ ಮೆಂಟ್ ನ ರೂಮುಗಳಿವೆ.ಬಾಡಿಗೆದಾರನ ಅಭಿರುಚಿಗೆ ತಕ್ಕಂತೆ ಇಲ್ಲಿನ ಮನೆಗಳ ಇಂಟೀರಿಯರ್ ಡಿಸೈನನ್ನ ಮಾಡಲಾಗುತ್ತೆ. ಅತ್ಯಂತ ಮುತುವರ್ಜಿವಹಿಸಿ, ಕಿಟಕಿ ಕರ್ಟನ್ ನಿಂದ ಹಿಡಿದು ಪ್ರತಿಯೊಂದನ್ನೂ ತುಂಬಾ ಕ್ರಿಯೇಟಿವ್ ಆಗಿ ಡಿಸೈನ್ ಮಾಡಲಾಗುತ್ತೆ. ಇದು ಅತಿ ಪ್ರಸಿದ್ಧ ವಾಸಸ್ಥಳವಷ್ಟೇ ಅಲ್ಲದೆ, ಸುಪ್ರಸಿದ್ಧ ವ್ಯವಹಾರ ಕೇಂದ್ರವೂ ಹೌದು. ಇಲ್ಲಿ ರೋಲೆಕ್ಸ್, ಮೆಕ್ ಲಾರೆನ್, ಆಟೋಮೇಟಿವ್, ಆಂಡ್ ಅಬುದಾಭಿ ಇಸ್ಲಾಮಿಕ್ ನಂತಹ ಪ್ರಮುಖ ವಾಣಿಜ್ಯ ವ್ಯವಹಾರಗಳು ನಡಿಯೋದು ಇದೇ ಪೆಂಟೆ ಹೌಸ್ ಹೈಡ್ ಪಾರ್ಕ್ ನಲ್ಲಿ.


ಈ ಅಪಾರ್ಟ್ ಮೆಂಟ್ ನ ಒಟ್ಟೂ ವಿಸ್ತೀರ್ಣ ಮೂರು ಲಕ್ಷ 85 ಸಾವಿರ ಚದರ ಅಡಿಗಳು. ಇದ್ರಲ್ಲಿ 86 ನಿವಾಸಿ ಗೃಹಗಳಿವೆ. ಅಂದ್ಹಾಗೆ ಅಲ್ಲಿನ ಒಂದು ಮನೆಯ ಒಂದು ತಿಂಗಳ ಬಾಡಿಗೆ ಜಸ್ಟ್ 60 ಲಕ್ಷ ಡಾಲರ್ ಗಳಿಂದ ಪ್ರಾರಂಭ. ಅಷ್ಟೋಂದು ದುಡ್ಡಿದ್ದರೆ ನೀವು ಕೂಡ ಈ ಅಪಾರ್ಟ್ ಮೆಂಟ್ನಲ್ಲಿ ಎಂಜಾಯ್ ಮಾಡಿ. ಜೊತೆ ಜೊತೆಗೆ ನಿಮ್ಮ ಬಿಸಿನೆಸ್ಸಲ್ಲೂ ಇಂಟರ್ ನ್ಯಾಷನಲ್ ಲೆವೆಲ್ ಗೆ ಕೊಂಡೋಯ್ಯಿರಿ.
!-- Facebook share button Start -->