Showing posts with label costly house in India. Show all posts
Showing posts with label costly house in India. Show all posts

HI-FI HOUSE- Hurst House England

ಇನ್ನು ನಾವು ನಿಮ್ಗೆ ತೋರಿಸೋ ಬಂಗ್ಲೆ ಫುಲ್ ಪಾಪುಲರ್ ಬಲ್ಡಿಂಗ್. ಈ ಅರಮನೆಯಲ್ಲಿ ಅತೀರಥ ಮಹಾರಥರೆಲ್ಲಾ ಐಷಾರಾಮಿ ಜೀವನವನ್ನ ನಡೆಸಿಕೊಂಡು ಹೋಗಿದ್ದಾರೆ. ಸುಪ್ರಸಿದ್ಧ ಹಾಲಿವುಡ್ ಮೂವಿಗಳಲ್ಲೂ ಈ ಬಂಗ್ಲೆ ರಾರಾಜಿಸಿದೆ. ಅದಕ್ಕಾಗೇ ಈ ಅರಮನೆಯನ್ನ ಪಾಪ್ ಸಂಸ್ಕೃತಿಯ ಕನ್ನಡಿ ಅನ್ನಲಾಗುತ್ತೆ.
  
ಇದು ಅಂತಿಂತ ಮನೆಯಲ್ಲ. ಇಡೀ ಪ್ರಂಪಚದಲ್ಲೇ ಪ್ರಖ್ಯಾತಿಯನ್ನ ಪಡೆದ ಇಂಗ್ಲೇಡ್ ಹರ್ಸ್ಟ್ ಬಂಗಲೆ. ಈ ಬಂಗಲೆಯಲ್ಲಿ ಇದ್ದು ಹೋದವರು ಪ್ರಪಂಚದ ಮೋಸ್ಟ್ ಪಾಪುಲರ್ ಪರ್ಸನ್ ಗಳೇ. ಸುಂದರ ಜಾಗ, ದಟ್ಟ ಕಾನನ ನಡುವೆ ದಟ್ಟವಾಗಿ ಎದ್ದಿರುವ ಹರ್ಸ್ಟ್ ಅರಮನೆ. ಅಂದ್ಹಾಗೆ ಈ ಬಂಗಲೆಗೆ ಈ ಹೆಸ್ರು ಯಾಕೆ ಬಂತು ಗೊತ್ತಾ..?. ಮುದ್ರಣ ಜಗತ್ತಿನ ದೈತ್ಯ ಉದ್ಯಮಿ ವಿಲಿಯಂ ರ್ಯಾಂಡಾಫ್ ಹರ್ಸ್ಟ್ ಈ ಬಂಗಲೆಯ ಒಡೆಯ. ಹೀಗಾಗೇ ಆತನ ಅಡ್ಡ ಹೆಸ್ರೇ ಈ ಬಂಗಲೆಗೆ ಬಂದು ಬಿಟ್ಟಿದೆ.




ಇಂಗ್ಲೆಂಡ್ ನ ಬೆವರ್ಲಿ ಹಿಲ್ಸ್ ನಲ್ಲಿ ಈ ಮನೆಯಿದೆ. ಈ ಬೃಹತ್ ಬಂಗಲೆಯಲ್ಲಿ 29 ಶಯನ ಗೃಹ, 3 ಈಜುಕೊಳಗಳಿವೆ. ಇಂತಹ ಬೃಹತ್, ಮತ್ತು ಸುಂದರ ಬಂಗಲೆಯಲ್ಲಿ ನೂರಾರು ಸಿನಿಮಾಗಳ ಚಿತ್ರೀಕರಣವೂ ನಡೆದಿದೆ. ಅಂದ್ಹಾಗೆ ಸುಪ್ರಸಿದ್ಧ ಚಲನಚಿತ್ರ ಗಾಡ್ ಫಾದರ್ ಚಿತ್ರದ ಚಿತ್ರೀಕರಣವೂ ಇದೀ ಮನೆಯಲ್ಲಿ ನಡೆದಿದೆ. ಆ ನಂತರ ಈ ಮನೆ ಪಾಪ್ ಸಂಸ್ಕೃತಿಯ ಸಂಕೇತವಾಗಿ ನಿಂತಿದೆ.


ಈ ಮನೆಯಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ವಾಸಿಸಿದ್ದರು ಅನ್ನೋದು ಮತ್ತೊಂದು ಖ್ಯಾತಿ. ಇವ್ರಷ್ಟೇ ಅಲ್ಲದೆ ಪ್ರಪಂಚದ ಪಾಪುಲರ್ ಅನ್ನೋ ವ್ಯಕ್ತಿಗಳೆಲ್ಲಾ ಈ ಮನೆಯಲ್ಲಿ ಇದ್ದು ಹೋದವರೇ. ಅಂತವರಲ್ಲಿ ಇಂಗ್ಲೆಂಡ್ ಫುಟ್ ಬಾಲ್ ತಾರೆ ಡೇವಿಡ್ ಬೆಕಮ್, ಅವ್ರ ಪತ್ನಿ ವಿಕ್ಟೋರಿಯಾ ಬೆಕಮ್ ಮದ್ವೆಯಾದ ಹೊಸತರಲ್ಲಿ ಇಲ್ಲೇ ನೆಲೆಸಿದ್ದರಂತೆ.



ಅಷ್ಟೇ ಅಲ್ದೆ. ಅವ್ರಿಗೆ ಈ ಮನೆ ಎಷ್ಟು ಇಷ್ಟ ಆಯ್ತು ಅಂದ್ರೇ ಹರ್ಸ್ಟ್ ಬಂಗಲೆಯ ಪಕ್ಕದಲ್ಲೇ ಮನೆಯೊಂದನ್ನ ಹುಡುಕಿ ವಾಸವಾಗಿದ್ದಾರಂತೆ. ಅಂದ್ಹಾಗೆ ಅವ್ರ ನೆರೆಮನೆಗಳಲ್ಲಿ ಟಾಮ್ ಕ್ರೂಸ್, ಕೇಟಿ ಹೋಮ್ಸ್ ಮುಂತಾದವರ ಮನೆಗಳೂ ಸಹ ಇಲ್ಲೇ ಇವೆ.
!-- Facebook share button Start -->

HI-FI HOUSE- The Penthouse England


ಇದು ಇಂಗ್ಲೆಂಡ್ ನ ಸುಪ್ರಸಿದ್ಧ ಅಪಾರ್ಟ್ ಮೆಂಟ್ ಪೆಂಟ್ ಹೌಸ್ ಹೈಡ್ ಪಾರ್ಕ್. ಇಂತ ಅಪಾರ್ಟ್ ಮೆಂಟ್ನಲ್ಲಿ ಒಂದೇ ಒಂದು ರೂಮು ಪಡಿಯೋಕೆ ಅಂತ ಲಂಡನ್ ನ ಶ್ರೀಮಂತರೆಲ್ಲರೂ ತುದಿಗಾಲಲ್ಲಿ ನಿಂತಿರ್ತಾರೆ. ಹೀಗಾಗೇ ಇದನ್ನ ಶ್ರೀಮಂತರ ಅಡ್ಡಾ ಅನ್ನಬಹುದೇನೋ. ಯಾಕಂದ್ರೆ ಬಡವರಿಗೆ ಕೈಗೆಟುಕದ ದರದಲ್ಲಿ ಈ ಅಪಾರ್ಟ್ ಮೆಂಟ್ ನ ರೂಮುಗಳಿವೆ.



ಬಾಡಿಗೆದಾರನ ಅಭಿರುಚಿಗೆ ತಕ್ಕಂತೆ ಇಲ್ಲಿನ ಮನೆಗಳ ಇಂಟೀರಿಯರ್ ಡಿಸೈನನ್ನ ಮಾಡಲಾಗುತ್ತೆ. ಅತ್ಯಂತ ಮುತುವರ್ಜಿವಹಿಸಿ, ಕಿಟಕಿ ಕರ್ಟನ್ ನಿಂದ ಹಿಡಿದು ಪ್ರತಿಯೊಂದನ್ನೂ ತುಂಬಾ ಕ್ರಿಯೇಟಿವ್ ಆಗಿ ಡಿಸೈನ್ ಮಾಡಲಾಗುತ್ತೆ. ಇದು ಅತಿ ಪ್ರಸಿದ್ಧ ವಾಸಸ್ಥಳವಷ್ಟೇ ಅಲ್ಲದೆ, ಸುಪ್ರಸಿದ್ಧ ವ್ಯವಹಾರ ಕೇಂದ್ರವೂ ಹೌದು. ಇಲ್ಲಿ ರೋಲೆಕ್ಸ್, ಮೆಕ್ ಲಾರೆನ್, ಆಟೋಮೇಟಿವ್, ಆಂಡ್ ಅಬುದಾಭಿ ಇಸ್ಲಾಮಿಕ್ ನಂತಹ ಪ್ರಮುಖ ವಾಣಿಜ್ಯ ವ್ಯವಹಾರಗಳು ನಡಿಯೋದು ಇದೇ ಪೆಂಟೆ ಹೌಸ್ ಹೈಡ್ ಪಾರ್ಕ್ ನಲ್ಲಿ.






ಈ ಅಪಾರ್ಟ್ ಮೆಂಟ್ ನ ಒಟ್ಟೂ ವಿಸ್ತೀರ್ಣ ಮೂರು ಲಕ್ಷ 85 ಸಾವಿರ ಚದರ ಅಡಿಗಳು. ಇದ್ರಲ್ಲಿ 86 ನಿವಾಸಿ ಗೃಹಗಳಿವೆ. ಅಂದ್ಹಾಗೆ ಅಲ್ಲಿನ ಒಂದು ಮನೆಯ ಒಂದು ತಿಂಗಳ ಬಾಡಿಗೆ ಜಸ್ಟ್ 60 ಲಕ್ಷ ಡಾಲರ್ ಗಳಿಂದ ಪ್ರಾರಂಭ. ಅಷ್ಟೋಂದು ದುಡ್ಡಿದ್ದರೆ ನೀವು ಕೂಡ ಈ ಅಪಾರ್ಟ್ ಮೆಂಟ್ನಲ್ಲಿ ಎಂಜಾಯ್ ಮಾಡಿ. ಜೊತೆ ಜೊತೆಗೆ ನಿಮ್ಮ ಬಿಸಿನೆಸ್ಸಲ್ಲೂ ಇಂಟರ್ ನ್ಯಾಷನಲ್ ಲೆವೆಲ್ ಗೆ ಕೊಂಡೋಯ್ಯಿರಿ.
!-- Facebook share button Start -->

HI-FI HOUSE- Fairfield Pond, The Hamptons

ಅಂಬಾನಿಯ ಹೈಟೆಕ್ ಮನೆಗಿಂತ, ಫ್ರಾನ್ಸ್ ನ ಲಿಯೋಪಾಲ್ಡ್ ಬಂಗ್ಲೋ ಗಿಂತ ಈ ಮನೆ ಕೊಂಚ ಡಿಫರೆಂಟ್. ದಟ್ಟ ಕಾನನದ ನಡುವೆ ಹಬ್ಬಿಕೊಂಡಿರುವ ಈ ಅರಮನೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಒಂದು ಕಾಲದಲ್ಲಿ ವಾಸಕ್ಕಂತಲೇ ಈ ಬಂಗ್ಲೆಯನ್ನ ಕಟ್ಟಲಾಗಿದ್ರು, ಈಗ ಇದು ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಅದು ಯಾವ ಅರಮನೆ ಅಂದ್ರಾ..

!-- Facebook share button Start -->

HI-FI House - Mukesh Ambani House in Mumbai


ಮನೆಕಟ್ಟಿ ನೋಡು ಮದ್ವೆ ಮಾಡಿ ನೋಡು ಅನ್ನೋದು ನಾನ್ನುಡಿ. ಇಂದಿನ ಕಾಲದಲ್ಲಿ ಕೋರ್ಟ್ ನಲ್ಲಿ ಒಂದು ಸೈನ್ ಮಾಡಿ ಕ್ಷಣಮಾತ್ರದಲ್ಲೇ ಮದ್ವೆಮಾಡ್ಕೋ ಬಹುದು. ಆದ್ರೆ ಈ ಮನೆಕಟ್ಟೋದಿದೆಯಲ್ಲಾ ಅದು ಕಷ್ಟಸಾಧ್ಯವೇ ಸರಿ. ಅಂತದ್ರಲ್ಲಿ ದುಡ್ಡಿದ್ದವರಂತೂ ಕೋಟಿಗಟ್ಟಲೆ ಹಣ ಸುರಿದು ಅರಮನೆಯಂತ ಮನೆಕಟ್ಟಿಕೊಂಡಿರ್ತಾರೆ. ಅಂತಹ ಕಾಸ್ಟ್ಲಿ ಮನೆಗಳ ಪರಿಚಯ ಇಲ್ಲಿದೆ.

!-- Facebook share button Start -->