* ಬಗೆಹರಿಸಲಾಗದ ಸಮಸ್ಯೆಗಳ ಜೊತೆ ವ್ಯವಹರಿಸೋದು ಹೇಗೆ?
ಚಿಂತೆಯನ್ನ ನೀವು ಹೇಗೆ ಬಗೆಹರಿಸಬಹುದು? ದೀರ್ಘಕಾಲ ದಿಂದ ನಿಮ್ಮನ್ನ ಕೊಳ್ಳುತ್ತಿರುವ ಚಿಂತೆಗಳು ನಿಮ್ಮನ್ನ ಒಟ್ಟಾಗಿ ಬಾಧಿಸಬಹುದು. ಅಂತ ಸಮಯದಲ್ಲಿ ನೀವು ಭಾವನಾತ್ಮಕವಾಗಿ ಗತ್ತಿಯಗೋದು ಒಳ್ಳೆಯದು.
ಮೊದಲೇ ಹೇಳಿದಂತೆ ಚಿಂತೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಮಾನಸಿಕವಾಗಿ ಕುಗ್ಗಬಾರದು. ಕೆಲವೊಮ್ಮೆ ನೀವು ತಾತ್ಕಾಲಿಕವಾಗಿ ಪ್ರಕ್ಷುಭ್ದರಾಗಬಹುದು , ಹಿಂದೆಯೇ ಆತಂಕ ನಿಮ್ಮನ್ನ ಕಾಡಲು ಶುರುಮಾಡಬಹುದು. ಅಂತ ಸಮಯದಲ್ಲಿ ನೀವು ' ನನಗೇ ಯಾಕೆ ಹಿಗಗುತ್ತಿದೆ? ನಾನು ಈ ತರಹ ಯೋಚಿಸಬಾರದು?' ಅಂತನೂ ಅನ್ನಿಸಬಹುದು. ಇಂತಹ ವಿಷವರ್ತುಲದಿಂದ ಹೊರಬರುವ ಏಕೈಕ ಮಾರ್ಗವೆಂದರೆ ಭಾವನಾತ್ಮಕವಾಗಿ ಸಮಸ್ಯೆಗಳನ್ನ ಎದುರಿಸೋದನ್ನ ಕಲಿಯೋದು. ನಕಾರಾತ್ಮಕ ನಂಬಿಕೆಗಳು ನಿಮ್ಮನ್ನ ಬೆದರಿಸಬಹುದು, ನನ್ನ ಯೋಚನೆಗಳು ತರ್ಕಬದ್ಧವಾಗಿಯೂ , ನಿಯಂತ್ರಣ ದಲ್ಲಿಯೂ ಇರಬೇಕು ಅಥವಾ ನನಗೇ ಭಯ ಮತ್ತು ಕೋಪದ ಮೇಲೆ ನಿಯಂತ್ರಣ ವಿದೆ ಅಂತ ಭಾವಿಸಬೇಕು.
ನಿಮ್ಮ ಭಯಗಳು, ಭಾವನೆಗಳು ನೈಸರ್ಗಿಕವಾದವು ಅಂತ ಅರ್ಥಮಾಡಿಕೊಳ್ಳಿ. ಕಷ್ಟ, ಚಿಂತೆ, ದುಃಖ, ಸಮಸ್ಯೆಗಳು ಮಾನವ ಜೀವನದ ಒಂದು ಭಾಗ ಅನ್ನೋದನ್ನ ತಿಳಿದುಕೊಳ್ಳಿ. ಆಗ ಮಾತ್ರ ನಿಮಗೆ ಸಮಸ್ಯೆ ಎದುರಿಸೋ ಶಕ್ತಿ ಬರುತ್ತೆ. ಈ ಸಲಹೆಗಳು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಭಾವನೆಗಳ ನಡುವೆ ಒಂದು ಉತ್ತಮ ಸಮತೋಲನವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತವೆ.
ಅನಿಶ್ಚಿತತೆ ಅನ್ನೋದು ಚಿಂತೆ ಮತ್ತು ಆತಂಕವನ್ನ ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಆಗಬಹುದಾದ ತಪ್ಪುಗಳನ್ನೇ ಚಿಂತಿಸುತ್ತಾ ಹೋದರೆ ಉಪಯೋಗವಿಲ್ಲ. ನೀವು ಭವಿಷ್ಯದ ಬಗ್ಗೆ ಚಿಂತಿಸಿದಷ್ಟು , ನಿಮ್ಮ ಭವಿಷ್ಯ ಸುರಕ್ಷಿತವಾಗಿರಬಹುದು ಅಂತ ಭಾವಿಸಿದರೆ ಅದು ನಿಮ್ಮ ಭ್ರಮೆಯಷ್ಟೇ. ನೀವು ನಿಮ್ಮ ಮುಂಬರುವ ದಿನಗಳಲ್ಲಿ ಬರೀ ಕೆಟ್ಟದ್ದನ್ನೇ ಪಟ್ಟಿಮಾಡಿದರೆ ಹೇಗೆ? ಅದನ್ನೆಲ್ಲ ಬಿಟ್ಟು ಪ್ರಸಕ್ತ ಸಮಯವನ್ನ ಆನಂದಿಸೋದನ್ನ ಕಲೆತುಕೊಳ್ಳಿ.
!-- Facebook share button Start -->