CHOTISI AASHA....!

ಪ್ರತಿಯೊಬ್ಬರಿಗೂ ಆಸೆ ಅನ್ನೋದು ಇದ್ದೆ ಇರುತ್ತೆ. ಚಿಕ್ಕ  ಆಸೆಗಳು, ಪುಟ್ಟ ಪುಟ್ಟ ಕನಸುಗಳು ನನಸಾದಾಗ ಆಗೋ ಖುಷಿ ಅಷ್ಟಿಷ್ಟಲ್ಲ . ಚಿಕ್ಕ ಮಕ್ಕಳಿಗೆ ಚಾಕಲೇಟಿನ ಆಸೆಯಾದರೆ , ವಯಸ್ಸಾದವರಿಗೆ ಕಾಶಿ ನೋಡಿ ಕಣ್ಣುಮುಚ್ಕೊಬೇಕು  ಎಂಬ ಮಹಾದಸೆಯಿರುತ್ತೆ. ಆದ್ರೆ ಕೊನೆಯಾಸೆ ಅನ್ನೋದು ಇರುತ್ತಲ್ಲ ಅದು ಪುಣ್ಯವಂತರಿಗೆ ಮಾತ್ರ ಇಡೆರುತ್ತೆ. ಇಲ್ಲಿವೆ ಕೆಲವು ಹಾರ್ಟ್ ಟಚಿಂಗ್ ಸ್ಟೋರಿಗಳು....
೧. ಕೊಲ್ಬಿ ಕರ್ಟನ್ ...
 
ಆಕೆ ಹತ್ತು ವರ್ಷದ ಪುಟ್ಟ ಪೋರಿ ಕೊಲ್ಬಿ ಕರ್ಟನ್... ಮುದ್ದು ಮುಖದ ಕೊಲ್ಬಿಗೆ ಅದ್ಯಾವ ಗಳಿಗೆಯಲ್ಲಿ ಕ್ಯಾನ್ಸರ್ ಎಂಬ ಮಹಾಮಾರಿ ತಗಲಿಕೊಂಡಿತೋ ಗೊತ್ತಿಲ್ಲ ಆಡಿಕೊಂದಿರಬೇಕಾದ ಕೂಸು ಹಾಸಿಗೆ ಹಿಡಿಯಿತು ... ಆದರು ಆಕೆಗೆ ಒಂದೇ ಕನಸು ...ಸಾಯುವ ಮುನ್ನ ಇನ್ನು ರಿಲಿಸಾಗದ ಅಪ್ ( up ) ಚಿತ್ರವನ್ನ ನೋಡಬೇಕೆಂಬುದು...!
 
ಸಾವಿನ ದಿನಗಳು ಹತ್ತಿರವಾದಂತೆ ಕೊಲ್ಬಿ ಹಾಸಿಗೆ ಹಿಡಿದಳು. ಅದಾಗತಾನೆ ಅಪ್ ಚಿತ್ರದ ಟ್ರೈಲರ್ ಟಿವಿಯಲ್ಲಿ ಓಡಾದತೊಡಗಿತ್ತು... ಕೊಲ್ಬಿಗೆ ಅದೊಂದೇ ಕನಸು... ಸಾಯುವ ಮುನ್ನ ಪು ಚಿತ್ರವನ್ನ ನೋಡಬೇಕೆಂಬುದು... ದಿನಕಳೆದಂತೆ ಕೊಲ್ಬಿಯ ಕ್ಯಾನ್ಸರ್ ಉಲ್ಬಣಿಸಿತು  ...ಕೊಲ್ಬಿ ನಿತ್ರಾಣ ಸ್ಥಿತಿಗೆ  ತಲುಪಿದಳು. ಅಮ್ಮನ ಕಣ್ಣಲ್ಲಿ ಧಾರಾಕಾರ ನೀರು ... ಮೆಲ್ಲಗೆ ಕೊಲ್ಬಿ ಪಿಸುಗುಟ್ಟಿದಳು ..." ಅಮ್ಮ, ನಾನು ಅಪ್ ಚಿತ್ರ ರಿಲೀಸ್ ಆಗೋವರ್ಗು ಬದುಕಿರ್ತೀನಿ ಅಲ್ವ..? ". ತಾಯಿಗೆ ದುಃಖ ಉಮ್ಮಳಿಸಿ ಬಂತು ...ಕಾರಣ ಕೊಲ್ಬಿ ಸಾವಿಗೆ ಹತ್ತಿರವಗಿದ್ದಾಳೆ... ಚಿತ್ರ ರಿಲೀಸ್ ಆಗಲು ಇನ್ನೂ ತಿಂಗಳು ಬೇಕು...!
 
ಆದ್ರೆ ಶತಾಯ ಗತಾಯ ತನ್ನ ಪುಟ್ಟ ಏಂಜಲ್ ನ ಕೊನೆಯಾಸೆ ತೀರಿಸಬೇಕೆಂಬ ಪಣತೊಟ್ಟ ತಾಯಿ, ಸಂಬಂಧಿಕರೊಬ್ಬರ ಸಹಾಯ ಪಡೆದು ಪಿಕ್ಸರ್ನ ನಂಬರ್ ಪಡೆದಳು.. ನಡೆದ ವಿಷಯವನ್ನೆಲ್ಲ ತಿಳಿಸಿ ಸಹಾಯಮಾಡಿ ಅಂತ ಗೋಗರೆದಳು ... ಪಿಕ್ಸರ್  ಅಧಿಕಾರಿಯ ಮನವೂ ಕರಗಿತು... ಸರಿ, ತಡಮಾಡದೆ ಮಾರನೆ ದಿನವೇ ತನ್ನ ಏಜೆಂಟ್  ಮುಖಾಂತರ ಚಿತ್ರದ ಡಿವಿಡಿಗಳನ್ನ ಕಳುಹಿಸಿದ. ಜೊತೆಗೆ ಒಂದಿಷ್ಟು ಗೊಂಬೆಗಳು... 
 
ಇತ್ತ ಕೊಲ್ಬಿಯ ಸ್ಥಿತಿ  ಚಿಂತಾಜನಕವಾಗಿತ್ತು .. ಪದೇ  ಪದೇ ಪ್ರಜ್ಞೆ ತಪ್ಪುತ್ತಿದ್ದಳು.. ಆದರು ಚಿತ್ರ ನೋಡಬೇಕೆಂಬ ಆಸೆ ಬಲವಾಗಿತ್ತು.. ಏಜೆಂಟ್ನ ಜೊತೆ ಮನೆಮಂದಿಯೆಲ್ಲ ಸೇರಿ  ಚಿತ್ರವನ್ನ ನೋಡಲು ಆರಂಭಿಸಿದರು ...ಹಾಸಿಗೆ ಹಿಡಿದ  ಕೊಲ್ಬಿಗೆ ಆಕೆಯ ತಾಯಿ ಚಿತ್ರದ ವಿವರಣೆ ನೀಡುತ್ತಿದ್ದಳು..ಚಿತ್ರ ನೋಡಿದ ಏಳೇ ಘಂಟೆಗಳಲ್ಲಿ   ಇಹಲೋಕ ತ್ಯಜಿಸಿದಳು... ಹೀಗೆ ಕೊನೆಗೂ ಕೊಲ್ಬಿ, ಅಪ್ ಚಿತ್ರವನ್ನ ನೋಡಿ ತನ್ನ ಕೊನೆಯ ಆಸೆಯನ್ನ ತೀರಿಸಿಕೊಂಡಳು. ..
 
 
ಕೊಲ್ಬಿಗಾಗಿ ಇಷ್ಟೆಲ್ಲಾ ಮಾಡಿದ ಪಿಕ್ಸರ್ ಮಾತ್ರ ಈ ಘಟನೆಯಿಂದ ಚಿತ್ರಕ್ಕೆ ಪ್ರಚಾರ ಪಡೆದುಕೊಳ್ಳಲು ಇಚ್ಚಿಸಲಿಲ್ಲ ..ಆ ನಂತರ ರಿಲೀಸಾದ ಅಪ್ ಚಿತ್ರ ಸೂಪರ್ , ಡೂಪರ್   ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದೆಲ್ಲ ಇತಿಹಾಸ ....
 
- ಮಮತಾ ಪಾಟೀಲ್
!-- Facebook share button Start -->

NEWSPAPERS TO FUEL CARS...!

ನಿನ್ನೆಯ ನ್ಯೂಸ್ ಪೇಪರ್ ನಾಳೆಯ ಇಂಧನ ...!
ಹೌದು. ಓದಿ ಮುಗಿಸಿದ ಮೇಲೆ ನ್ಯೂಸ್ ಪೇಪರನ್ನ ತೂಕಕ್ಕೆ ಹಾಕಿದರು, ಮುರು ಕಾಸು ಕೈಗೆ ಸಿಗೋದಿಲ್ಲ . ಅಂತದ್ರಲ್ಲಿ ಗಗನಕ್ಕೇರುತ್ತಿರುವ ದ್ರವ ರೂಪದ ಬಂಗಾರ ಸಿಗುತ್ತಾ...? ಅಂತ ಮುಗುಮುರಿಬೇಡಿ. ಇದು ಪೇಪರ್ ಆಣೆಗೂ ನಿಜ.  ಟುಲೈನ್ ಯುನಿವೆರ್ಸಿಟಿಯ ವಿಜ್ಞಾನಿಗಳು ಈ ವಿಷಯವನ್ನ ಬಹಿರಂಗ ಪಡಿಸಿದ್ದಾರೆ . ಸುಮಾರು ವರ್ಷಗಳಿಂದ ಪರ್ಯಾಯ ಜೈವಿಕ ಇಂಧನದ ಹಿಂದೆ ಬಿದಿದ್ದ ಈ ವಿಜ್ಞಾನಿಗಳು ಕಡೆಗೂ ಸಕ್ಸೆಸ್ ಕಂಡಿದ್ದಾರೆ. ಈ ವಿಜ್ಞಾನಿಗಳು TU-103 ಅನ್ನೋ ಬ್ಯಾಕ್ಟೇರಿಯ ಕಂಡು ಹಿಡಿದಿದ್ದಾರೆ...
ಇವ್ರು  ಬ್ಯಾಕ್ಟೇರಿಯ ಕಂಡು ಹಿಡಿದಿದ್ದಕ್ಕು , ಪೇಪರ್ ಇಂಧನ ಆಗೋದಕ್ಕೂ ಏನು ಸಂಬಂಧ ಅಂದ್ರಾ..?. ವೇಟ್ ಅ ಮಿನಿಟ್... ಈ ಬ್ಯಾಕ್ಟೆರಿಯಾನೆ ಸ್ವಾಮಿ ಪೇಪರನ್ನ ಫ್ಯುವೆಲ್ ಆಗಿ ಕನ್ವರ್ಟ್ ಮಾಡೋದು...!. TU-103 ಅನ್ನೋ ಈ ಬ್ಯಾಕ್ಟೇರಿಯ ಪೆಪರನಲ್ಲಿರುವ  ಸೆಲ್ಲುಲೋಸ್ ಅನ್ನ , ತನ್ನ ಆಹಾರವನ್ನಾಗಿ ಬಳಸಿಕೊಂಡು ಬುಟನೊಲ್ ಅನ್ನ ಬಿಡುಗಡೆ ಮಾಡುತ್ತೆ . ಹೀಗೆ ಈ ಬುಟನೊಲ್ ಬಳಸಿಕೊಂಡು ಇಂಧನವನ್ನ ತಯಾರಿಸಬಹುದಾಗಿದೆ.
 
ಅಂದಹಾಗೆ ಈ TU-103 ನೈಸರ್ಗಿಕವಾಗೆ ನಿಸರ್ಗದಲ್ಲಿ ದೊರೆಯುತ್ತದೆ . ಹೀಗಾಗಿ ಈ ಬ್ಯಾಕ್ಟೆರಿಯಾಗಾಗಿ ಹೆಚ್ಚು ಹಣವನ್ನ ಸಹ ಖರ್ಚು ಮಾಡಬೇಕಾಗಿಲ್ಲ .  ಈಗಾಗಲೇ ಟುಲೈನ್ ಯುನಿವೆರ್ಸಿಟಿಯ ವಿಜ್ಞಾನಿಗಳು Times Picayune, New Orleans' ಪತ್ರಿಕೆಗಳನ್ನ ಬಳಸಿ ಯಶಸ್ವಿಯಾಗಿ ಬುಟನೊಲ್ ತಯಾರಿಸಿದ್ದಾರೆ.

 
ಸೊ ಇನ್ಮೇಲೆ ಹಳೆ ಪೇಪರ್ಗಳನ್ನ ಕೇಜಿ ಲೆಕ್ಕಕ್ಕೆ ತೂಕಕ್ಕೆ ಹಾಕೋದನ್ನ ಬಿಟ್ಟುಬಿಡಿ . ಮುಂದೊಂದು ದಿನ ಈ ಹಳೆ ಪೆಪರನಿಂದಲೇ ನಿಮ್ಮ ಕಾರು ಓಡಿದರೂ ಓಡಬಹುದು..!.
ಮಮತಾ ಪಾಟೀಲ್ ,
ಯಾದಗಿರಿ.
IMAGE 1: An old edition of the Times Picayune (Wikimedia Commons)

IMAGE 2: Butanol (Wikimedia Commons)
!-- Facebook share button Start -->