ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ?

ಚಿಂತೆ ನಿಮಗೆ ಒಂದು ಸಮಸ್ಯೆಯನ್ನ ಪರಿಹರಿಸಲು ಪ್ರೇರಣೆ ನಿಡುತ್ತಿದ್ದರೆ ಅದು ಒಳ್ಳೆಯದು. ಆದರೆ ಅದೇ ಚಿಂತೆ ನಿಮ್ಮನ್ನು ಮುಂದೆ ಬರುವ ಕಷ್ಟದ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂದು ಭಯಭೀತಿ ಗೊಳಿಸಿದರೆ ಆ ಚಿಂತೆ ಒಂದು ಸಮಸ್ಯೆಯೇ ಸರಿ. ಸಂಶಯ ಮತ್ತು ಆತಂಕಗೊಲಿಸುಮ ಚಿಂತೆಗಳು ನಿಮ್ಮನ್ನ ನಿಷ್ಕ್ರಿಯ ಗೊಳಿಸಬಹುದು. ಆತಂಕ ಹೆಚ್ಚಾಗುತ್ತಿದ್ದಂತೆ ನಿಮ್ಮ ಭಾವನಾತ್ಮಕ ಶಕ್ತಿ ಕುಗ್ಗಿ ಚಿಂತೆ ನಿಮ್ಮ ದಿನ ನಿತ್ಯದ ಬದುಕಿನ ಶಾಂತಿಯನ್ನ ಸಹ ಕೆಡಿಸುತ್ತದೆ. ಚಿಂತೆ ಅನ್ನೋದು ನಮ್ಮನ್ನ ಬಹುಕಾಲ ಬಾಧಿಸುವ ಮಾನಸಿಕ ಸ್ವಭಾವ. ಹೀಗಾಗಿ ನೀವು ಹೆಚ್ಚೆಚ್ಚು ಸಕಾರಾತ್ಮಕ ದೃಷ್ಟಿಕೋನದಿಂದ ಬದುಕಲು, ಶಾಂತವಾಗಿರು ನಿಮ್ಮ ಮನಸ್ಸು, ಮೆದುಳನ್ನ ತರಬೇತಿಗೊಳಿಸಿ. 


ನಮಗೆ ಚಿಂತಿಸದೆ ಇರುವುದಕ್ಕೆ  ಸಾಧ್ಯವಾಗೋದಿಲ್ಲ ಯಾಕೆ?  

ನಾವು ಯಾಕೆ ಚಿಂತಿಸಬೇಕು?ನೀವು ನಿಮ್ಮ  ತಲ್ಲಣಗಳ ಬಗ್ಗೆ ಮಿಶ್ರ ಭಾವನೆಗಳನ್ನ ಹೊಂದಿದ್ದೀರಿ. ನಿಮ್ಮನ್ನ ಚಿಂತೆಗಳು ಬಾಧಿಸುತ್ತಿದ್ದರೆ, ನಿಮಗೆ ಸರಿಯಾಗಿ ನಿದ್ದೆಮಾಡಲು ಸಾಧ್ಯವಾಗೋದಿಲ್ಲ. ನಿರಾಶದಾಯಕ ಆಲೋಚನೆಗಳು ಸದಾ ನಿಮ್ಮನ್ನು ಬಾಧಿಸುತ್ತಿರುತ್ತವೆ. ಆ ಸಮಯದಲ್ಲಿ ನೀವು ನಾನು ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಲ್ಲೇ ಅಂತ ಅನ್ನಿಸಲೂ ಬಹುದು. ಉದಾಹರಣೆಗೆ, ನೀವು * ನಾನು ಈ ಸಮಸ್ಯೆಗೆ ಪರಿಹಾರ ಹುಡುಕಬಲ್ಲೆ.* ನಾನು ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ.* ನಾನು ಸಮಸ್ಯೆಗಳ ಬಗ್ಗೆ ಹೆಚ್ಚೆಚ್ಚು ಯೋಚಿಸಿದಷ್ಟು , ಸಮಸ್ಯೆಯನ್ನ ಅರ್ಥೈಸಿ ಕೊಳ್ಳಬಲ್ಲೆ.* ನಾನು ಆಶ್ಚರ್ಯ ವಾಗೋದಿಲ್ಲ.* ನಾನು ಜವಾಬ್ದಾರಿಯುತವಾಗಿ ವರ್ತಿಸುತ್ತೇನೆ.

ನಿಮಗೆ ಚಿಂತೆಗಳ ಬಗ್ಗೆ ಚಿಂತಿಸೋದು ಕಡಿಮೆ ಮಾಡಲು ಕಷ್ಟವಾಗುತ್ತದೆ ಯಾಕಂದ್ರೆ ಚಿಂತೆ ಈಗಾಗಲೇ ನಿಮ್ಮನ್ನ ಸಂಪೂರ್ಣವಾಗಿ ಆವರಿಸಿಕೊಂಡಿದೆ. ಸತತವಾಗಿ ಚಿಂತಿಸುತ್ತಲೇ ಇದ್ದಾರೆ ಮುಂದೆ ನೀವು ದೊಡ್ಡ ಮೊತ್ತವನ್ನೇ ತೆರಬೇಕಾದಿತು. ಚಿಂತೆ ರಾತ್ರಿ ನಿಮ್ಮ ನಿದ್ದೆಯನ್ನ ಕದ್ದರೆ, ಬೆಳ್ಳಿಗ್ಗೆ ನಿಮ್ಮನ್ನ ಉದ್ವಿಗ್ನ ಗೊಳಿಸಬಹುದು. ಚಿಂತೆ ನಿಮಗೆ ನಿಮ್ಮ ಮೇಲೆಯೇ ದ್ವೇಷ ಉಂಟಾಗುವಂತೆ ಮಾಡಬಹುದು. ಅದ್ದರಿಂದ ಚಿಂತೆಗಳ ಬಗ್ಗೆ ಚಿಂತಿಸುವುದನ್ನ ನಿಲ್ಲಿಸೋದು ಕಷ್ಟವಾಗುತ್ತದೆ. 

!-- Facebook share button Start -->