ನೀವು ಅನಿಶ್ಚಿತತೆ ಮತ್ತು ಅಸಹಿಷ್ಣು ಗಳಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ, ನಿಮಗೆ ನೀವೇ ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ ಮತ್ತು ಅದಕ್ಕೆ ಪ್ರತಿಕ್ರಿಯಯನ್ನ ಸಹ ಬರೆದಿಡಿ.* ಜೀವನ ಅಂದ್ರೆ ಇದೆ, ಹೀಗೆ, ಇಷ್ಟೇ ಅಂತ ಹೇಳಲು ಸಾಧ್ಯನ?* ಜೀವನದಲ್ಲಿ ನಿಶ್ಚಿತ ವಾಗಿ ಇರೋದ್ರಿಂದ ಆಗೋ ಉಪಯೋಗಗಳು ಮತ್ತು ದುರುಪಯೋಗಗಳು ಏನು?* ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅನಿಶ್ಚಿತತೆಯೇ ಕಾರಣವಾ?* ಕೆಟ್ಟದ್ದು ಸಂಭವಿಸಿದರೆ ,ಸಂಭವಿಸಲಿ ಅಂತ ಧೃಢವಾಗಿ ಇರೋಕೆ ನಿಮ್ಮಿಂದ ಸಾಧ್ಯನಾ?ನೀವು ಸದಾ ತೀವ್ರ ಆತಂಕ ಮತ್ತು ಚಿಂತೆಗಳಿಂದ ಬಳಲುತ್ತಿದ್ದರೆ, ನಿಮ್ಮ ಕಣ್ಣಿಗೆ ಇಡೀ ಪ್ರಪಂಚ ಅಪಾಯಕಾರಿಯಾಗಿ ಗೋಚರಿಸುತ್ತದೆ. ಇಡೀ ವಿಶ್ವವೇ ನಿಮ್ಮ ವಿರುದ್ಧವಿದೆ ಅನ್ನೋ ಭಾವನೆ ಮೂಡುತ್ತದೆ. ಉದಾಹರಣೆಗೆ ನೀವು ಚಿಕ್ಕ ಚಿಕ್ಕ ಘಟನೆಯ ಬಗ್ಗೆಯೂ ಹೆಚ್ಚೆಚ್ಚಾಗಿ ಯೋಚಿಸಿ, ಭಯಾನಕ ಸನ್ನಿವೇಶಗಳನ್ನ ಕಲ್ಪಿಸಿಕೊಳ್ಳುತ್ತಿರಿ. ಸಣ್ಣ ಸಮಸ್ಯೆಯನ್ನ ಎದುರಿಸಬೇಕಾದರು ಭಯಪಡುತ್ತಿರಿ. ಸದಾ ನಕಾರಾತ್ಮಕ ವಾಗಿ ಯೋಚಿಸಿ, ನೀವು ನಿಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರಿ. ಇಂತಹ ವಿವೇಚನಾರಹಿತ, ನಿರಾಶಾವಾದಿ ವರ್ತನೆಯನ್ನ ಅರಿವಿನ ವಿರೂಪಗಳು ಅಂತ ಅನ್ನುತ್ತಾರೆ. ಇಂತಹ ಕೆಟ್ಟ ಚಿಂತೆಗಳಿಗೆ ಆಹಾರ ವಾಗುವ ಬದಲು, ನಿಮ್ಮ ಚಿಂತೆ ಮತ್ತು ಆತಂಕಗಳನ್ನ ನಿಯಂತ್ರಿಸಲು ನಿಮ್ಮ ಮನಸ್ಸು ಮತ್ತು ಮೆದುಳನ್ನ ತರಬೇತಿಗೊಳಿಸಿ.
ಸಾಧ್ಯವಾದಷ್ಟು ನೀವು ಯಾವ ಭಯಾನಕ ಚಿಂತೆಗಳು ನಿಮ್ಮ ಭಯಕ್ಕೆ ಮತ್ತು ಚಿಂತೆಗೆ ಕಾರಣವಾಗುತ್ತವೆ ಅನ್ನೋದನ್ನ ಗರುತಿಸಲು ಪ್ರಾರಂಭಿಸಿ. ನಂತರ ಅವುಗಳ ಬಗ್ಗೆ ಆಲೋಚಿಸುವ ಬದಲಾಗಿ ಪರಿಹಾರ ಕಂಡುಕೊಳ್ಳಲು ಶುರುಮಾಡಿ. ನೀವು ಹೆಚ್ಚೆಚ್ಚು ಸಮಸ್ಯೆಗಳನ್ನ ಪರಿಶಿಲಿಸಿದಷ್ಟು ನಿಮ್ಮ ಚಿಂತೆ, ಆತಂಕಗಳು ಮತ್ತು ಸವಾಲುಗಳ ಬಗ್ಗೆ ಹೆಚ್ಚು ಸಮತೋಲನ ದೃಷ್ಟಿ ಕೋನದಿಂದ ನೋಡಲು ಪ್ರಾರಂಭ ಮಾಡುತ್ತಿರಿ.