ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-3

* ಬಗೆಹರಿಸಬಹುದಾದ ಮತ್ತು ಬಗೆಹರಿಸಲಾರದ ತಲ್ಲಣಗಳ ನಡುವಿನ ವ್ಯತ್ಯಾಸ. 
ಒಂದು ವೇಳೆ ನಿಮಗೆ ನೀವೇ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಲ್ಲಬಲ್ಲಿರಿ ಅಂತ ಅನ್ನಿಸಿದರೆ, ಈ ಕೆಲವೊಂದು ಪ್ರಶ್ನೆಗಳು ನಿಮಗೆ ಉಪಯೋಗವಾಗಬಹುದು. ೧.ಪ್ರಸ್ತುತ ನೀವು ಸಮಸ್ಯೆಯನ್ನ ಎದುರಿಸುತ್ತಾ ಇದ್ದೀರಾ? ಅಥವಾ ಅದು ಕಾಲ್ಪನಿಕ ಸಮಸ್ಯೆಯೇ?
೨. ಒಂದುವೇಳೆ ಸಮಸ್ಯೆ ಕಾಲ್ಪನಿಕವಾಗಿದ್ದರೆ, ಅದು ನಿಜವಾಗಿಯೂ ನಿಮ್ಮ ಜೀವನದಲ್ಲಿ ಸಂಭವಿಸ ಬಹುದೇ? ಆ ಸಮಸ್ಯೆಯ ಬಗ್ಗೆ ನಿಮಗಿರುವ ಕಾಳಜಿ ವಾಸ್ತವಿಕವೇ?

೩ ನಿಮ್ಮ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ನೀವೇನಾದರೂ ತಯಾರಿ ಮಾದಿಕೊಂಡಿದ್ದಿರಿಯೇ? ಅಥವಾ ಪರಿಸ್ಥಿತಿ ನಿಮ್ಮ ಕೈ ತಪ್ಪಿ ಹೋಗಿದೆಯೇ?

ಸಮಸ್ಯೆಯನ್ನ ಪರಿಹರಿಸೋದ್ರಿಂದ ನಿಮಗೆ ಉಪಯೋಗವಾಗುತ್ತಿದ್ದರೆ, ತಕ್ಷಣವೇ ಅದನ್ನ ಬಗೆಹರಿಸಿ. ಉದಾಹರಣೆಗೆ ನೀವು ನಿಮ್ಮ ಬಿಲ್ಲುಗಳನ್ನ ಹೇಗೆ ಪವತಿಸೋದು ಅಂತ ಯೋಚಿಸುತ್ತಿದ್ದರೆ ಕೂಡಲೇ ಬಿಲ್ಲುಗಳಿಗೆ ಸಂಬಂಧ ಪಟ್ಟವರನ್ನ ಸಂಪರ್ಕಿಸಿ ಹಣ ಪವತಿಸಿಬಿಡಿ. ಹೀಗೆ ಮಾಡೋದ್ರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ. ಒಂದುವೇಳೆ ನಿಮ್ಮ ಸಮಸ್ಯೆ ಅನುಪಯುಕ್ತ ವಾಗಿದ್ದರೆ ಅದರ ಬಗ್ಗೆ ಚಿಂತಿಸೋದನ್ನ ಬಿಟ್ಟುಬಿಡಿ. ಉದಾಹರಣೆಗೆ ' ಮುಂದೊಂದು ದಿನ ನಾನು ಕ್ಯಾನ್ಸರ್ ಗೆ ತುತ್ತಾದರೆ ಏನು ಮಾಡಬೇಕು?. ಅಥವಾ ' ನನ್ನ ಮಕ್ಕಳಿಗೆ ಅಪಘಾತವಾದರೆ ಹೇಗೆ? ಅಂತ ಯೋಚಿಸೋದನ್ನ ಬಿಟ್ಟುಬಿಡಿ. 

ಒಂದುವೇಳೆ ನಿಮ್ಮ ಚಿಂತೆ ಬಗೆಹರಿಯೋವಂತಾಗಿದ್ದರೆ ಅದರ ಬಗ್ಗೆ ಹೆಚ್ಚೆಚ್ಚಾಗಿ ಯೋಚಿಸಿ. ನೀವು ಪರಿಹಾರದ ಎಲ್ಲ ಸಂಭಾವ್ಯ ಪಟ್ಟಿಯನ್ನ ತಯಾರಿಸಿ. ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯದಿದ್ದರೂ ತಕ್ಕ ಮಟ್ಟಿಗೆ ಪರಿಹರಿಸಬಹುದು. ನಿಮಗೆ ಯಾವ ಸಮಸ್ಯೆ ಬಗೆಹರಿಸಲು ಸಾಧ್ಯವೋ ಅದರ ಕಡೆಗೆ ಹೆಚ್ಚು ಗಮನ ಕೊಡಿ. ಸಮಸ್ಯೆಯ ಮೌಲ್ಯಮಾಪನದ ನಂತರ ಬಗೆಹರಿಸೋ ವಿಧಾನವನ್ನ ಕಾರ್ಯ ರೂಪಕ್ಕೆ ತನ್ನಿ. ಆನಂತರ ತಂತಾನೇ ನೀವು ಸಮಸ್ಯೆಗಳ ಬಗ್ಗೆ ಚಿಂತಿಸೋದನ್ನ ಕಡಿಮೆಮಾಡುತ್ತಿರಿ. 


!-- Facebook share button Start -->