ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-2

ನಿಮಗೆ ಸಂಪೂರ್ಣವಾಗಿ ಚಿಂತಿಸದೆ ಇರಲು ಸಾಧ್ಯವಾಗುತ್ತಿಲ್ಲ ಅಂತ ಆದ್ರೆ , ಸಮಸ್ಯಗೆ ಅಂತಾನೆ ಒಂದು ಸಮಯ ಕೊಟ್ಟುಬಿಡಿ.
* ಚಿಂತೆಯನ್ನ ಮುಂದೆ ಹಾಕೋ ಕಲೆಯನ್ನ ಕಲೆತುಕೊಳ್ಳಿ.



೧. ಚಿಂತೆ ಮಾಡೋ ಸಮಯವನ್ನ ನಿಗದಿ ಪಡಿಸಿ. ಚಿಂತೆ ಮಾಡೋದಕ್ಕೆ ಅಂತಾನೆ ಒಂದು ಸ್ತಳ ಮತ್ತು ಸಮಯವನ್ನ ಆರಿಸಿ. ಉದಾಹರಣೆಗೆ , ನಿಮ್ಮ ಪಡಸಾಲೆ, ಸಮಯ ೫..ರಿಂದ ೫.೨೦. ಹೀಗೆ ನಿಗದಿ ಪಡಿಸಿದ ಮೇಲೆ ಯಾವುದೇ ಕಾರಣಕ್ಕೂ ಆ ಸಮಯಕ್ಕಿಂತ ಮೊದಲು ಸಮಸ್ಯೆಗಳ  ಬಗ್ಗೆ ಯೋಚಿಸಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ಇಡೀ ದಿನವನ್ನ ನೀವು ಸಂತೋಷದಿಂದ ಕಳೆಯಬಹುದು.

೨. ಚಿಂತೆಯಲ್ಲ ಮುಂದೆ ಹಾಕಿ. ನೀವು ಯಾವುದಾದರು ಕೆಲಸ ಮಾಡುತ್ತಿದ್ದಾಗ ನಿಮ್ಮ ಕಷ್ಟಗಳ ಬಗ್ಗೆ ನೆನಪಾದರೆ ತಕ್ಷಣ ಅದನ್ನ ಪೇಪರ್ ಮೇಲೆ ಪಟ್ಟಿ ಮಾಡಿ, ಮತ್ತು ಆ ಕಷ್ಟದ ಬಗ್ಗೆ ಯೋಚಿಸೋದನ್ನ ಚಿಂತೆಯ ಸಮಯಕ್ಕೆ ಮುಂದೂಡಿ. ನಿಮಗೆ ನೀವೇ, ನನಗೆ ಇದರ ಬಗ್ಗೆ ಚಿಂತಿಸಲು ನಿರ್ಧಿಷ್ಟ ಸಮಯವಿದೆ ಅಂತ ಅಂದುಕೊಳ್ಳಿ. ಹೀಗೆ ಮಾಡೋದ್ರಿಂದ ನೀವು ನಿಮ್ಮ ದಿನದ ಬಹುಕಾಲದ ಸಮಯವನ್ನ ಸಂತೋಷದಿಂದ ಕಳೆಯಬಹುದು.

೩. ದಿನವೂ ನಿಮ್ಮ 'ಚಿಂತೆಯ ಪಟ್ಟಿ'ಯನ್ನ ನಿಗದಿ ಪಡಿಸಿದ ಸಮಯದಲ್ಲಿ ಪರಿಶೀಲಿಸುತ್ತಿರಿ. ಒಂದು ವೇಳೆ ನೀವು ಎಷ್ಟೇ ಪ್ರಯತ್ನಿಸಿದರೂ ಚಿಂತೆ ನಿಮ್ಮನ್ನ ಬಾದಿಸುತ್ತಿದ್ದರೆ ಆ ಸಮಸ್ಯೆಗೆ ಹೆಚ್ಚು ಸಮಯ ಕೊಡಿ. ಒಂದು ವೇಳೆ ಪಟ್ಟಿಯಲ್ಲಿರುವ ಕೆಲವು ಚಿಂತೆಗಳಿಗೆ ಈಗ ನಿಮ್ಮ ಜೀವನದಲ್ಲಿ ಮಹತ್ವ ವಿರದಿದ್ದರೆ ಅಂತ ಚಿಂತೆಗಳನ್ನ ಪಟ್ಟಿಯಿಂದ ತೆಗೆದು ಹಾಕಿ, ನಿಮ್ಮ ದಿನವನ್ನ ಆನಂದಿಸಿ.

ಈ ಅಭ್ಯಾಸ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಯಾಕಂದ್ರೆ, ಚಿಂತಿಸೋದಕ್ಕೆ ಅಂತಾನೆ ಒಂದು ಸಮಯ ನಿಗದಿ ಪಡಿಸಿದಾಗ ನೀವು ನಿಮ್ಮ ಬಹಳಷ್ಟು ಸಮಯವನ್ನ ಉಳಿಸಬಹುದು. ಅಷ್ಟೇ ಅಲ್ಲದೆ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನೂ ಕಂಡುಕೊಳ್ಳಬಹುದು. ಕೆಲವು ಸಂಶೋಧನೆಗಳ ಪ್ರಕಾರ, ನಿಮ್ಮನ್ನ ಚಿಂತೆ ಆವರಿಸಿ ಕೊಂಡಿದ್ದಾರೆ, ನೀವು ಜೀವನದ ಮೇಲೆ ಕಡಿಮೆ ಆಸಕ್ತಿ ತೋರುವ ಸಾಧ್ಯತೆ ಇದೆಯಂತೆ.

ಸದಾ ಚಿಂತೆಯ ಬಗ್ಗೆಯೇ ಯೋಚಿಸುತ್ತಿದ್ದರೆ ಅದು ನಿಮ್ಮನ್ನ ಭಾವನಾತ್ಮಕವಾಗಿ ಕುಗ್ಗಿಸುತ್ತದೆ. ಚಿಂತೆ ಮಾಡುವವರು, ಚಿಂತೆ ಮಾಡೋದು ಮತ್ತು ಸಮಸ್ಯೆ ಬಗೆಹರಿಸೋದು ಎರಡು ಬೇರೆ ಬೇರೆ ವಿಚಾರ ಅನ್ನೋದನ್ನ ಅರ್ಥೈಸಿಕೊಳ್ಳಬೇಕು. ಸಮಸ್ಯೆಯ ಸನ್ನಿವೇಶವನ್ನ ಅರ್ಥಮಾಡಿಕೊಳ್ಳೋದು, ಸಮಸ್ಯೆಯನ್ನ ಬಗೆಹರಿಸಲು ಕೆಲವು ಮಾರ್ಗಗಳನ್ನ ಅನುಸರಿಸೋದು, ಅದರ ಮೌಲ್ಯಮಾಪನ ಮಾಡೋದ್ರಿಂದ ಸಮಸ್ಯೆ ಗಳನ್ನ ಬಗೆಹರಿಸಬಹುದು. ಬರಿ ಚಿಂತೆ ಮಾಡೋದ್ರಿಂದ ಸಮಸ್ಯೆ ಪರಿಹಾರವಾಗೋದಿಲ್ಲ, ಬದಲಾಗಿ ಅದು ನಿಮ್ಮನ್ನ ಮಾನಸಿಕವಾಗಿ ಕುಗ್ಗಿಸುತ್ತದೆ. 

!-- Facebook share button Start -->