ಹಳೆಯ ಚಿಂತೆಗಳು ಸಹ ನಿಮ್ಮನ್ನ ಕಾಡಬಹುದು. ಕೆಲವೊಮ್ಮೆ ಅದು ಸಕಾರಾತ್ಮಕವಾಗಿಯೂ ಮತ್ತೆ ಕೆಲವೊಮ್ಮೆ ನಕಾರಾತ್ಮಕವಾಗಿಯೂ ಇರಬಹುದು. ನಕಾರಾತ್ಮಕವಾಗಿ ಹೇಳೋದಾದ್ರೆ , ಚಿಂತೆ ಬರಿ ನಿಮ್ಮ ಮಾನಸಿಕ ಆರೋಗ್ಯದ ಮೇಲಷ್ಟೇ ಅಲ್ಲದೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
ಚಿಂತೆ ಮಾಡೋದರ ಸಕಾರಾತ್ಮಕ ಅಂಶ ಅಂದ್ರೆ ನೀವು ಎಂತ ಸನ್ನಿವೇಶ ಬಂದ್ರು, ಕಠಿಣ ಸಮಸ್ಯೆ ಎದುರಾದರು ಎದುರಿಸೋ ಧೈರ್ಯ ಬರುತ್ತೆ.
ಚಿಂತೆ ಮಾಡೋದ್ರಿಂದ ಯಾವಾಗಲು ಸಹಾಯವಾಗುತ್ತೆ ಅನ್ನೋದು ತಪ್ಪು ಕಲ್ಪನೆ. ಚಿಂತೆ ಮಾಡೋದ್ರಿಂದ ನಷ್ಟವೇ ಹೊರತು ಲಾಭವಿಲ್ಲ ಅಂತ ತಿಳಿದಾಗ ಮಾತ್ರ ನಿಮ್ಮ ಮನಸ್ಸು ಚಿಂತೆ ಮಾಡೋದನ್ನ ನಿಲ್ಲಿಸುತ್ತೇ. ಚಿಂತೆ ಎಂಬ ಭೂತ ಸದಾ ನಿಮ್ಮ ಬೆನ್ನು ಹತ್ತಿ ಬಿಟ್ಟರೆ ಯಾವ ಕೆಲಸವೂ ಸಾಧ್ಯವಾಗೋದಿಲ್ಲ. ಚಿಂತೆ ಅನ್ನೋದು ಚಿತೆಯ ವರೆಗೂ ಜೊತೆಗೆ ಬರುತ್ತೆ ಅನ್ನೋ ಮಾತಿದೆ. ಪದೇ ಪದೇ ನೆನಪಗೋ ತಪ್ಪುಗಳು ನಿಮ್ಮನ್ನ ಘಾಸಿಗೊಳಿಸಬಹುದು. ಹೀಗಾಗಿ ಕೆಲವು ಧೃಡ ನಿರ್ಧಾರ ತೆಗೆದುಕೊಳ್ಳೋದು ಅವಶ್ಯಕ.
ನಿಮ್ಮನ್ನ ನೀವೇ ಪರೀಕ್ಷಿಸಿಕೊಳ್ಳಲು ಹೀಗೆ ಮಾಡಿ : ಕಣ್ಣು ಮುಚ್ಚಿ ಗುಲಾಬಿ ಬಣ್ಣದ ಆನೆಯನ್ನ ಕಲ್ಪಿಸಿಕೊಳ್ಳಿ. ಒಮ್ಮೆ ನಿಮಗೆ ಗುಲಾಬಿ ಆನೆ ಕಂಡ ತಕ್ಷಣ ಅದರ ಬಗ್ಗೆ ಚಿಂತಿಸೋದನ್ನ ನಿಲ್ಲಿಸಿಬಿಡಿ. ಏನೇ ಆದ್ರೂ ಮುಂದಿನ ಕೆಲ ನಿಮಿಷಗಳ ತನಕ ಆನೆಯನ್ನ ನೆನೆಸಿ ಕೊಳ್ಳಲೆ ಬೇಡಿ. ಈಗ ನಿಮಗೆ ಹೀಗೆ ಅನ್ನಿಸುತ್ತಿದೆ? ಇನ್ನೂ ನಿಮ್ಮ ತಲೆಯಲ್ಲಿ ಗುಲಾಬಿ ಆನೆ ಸುಳಿಯತ್ತಾ ಇದೆಯೇ? ಗುಲಾಬಿ ಆನೆಯನ್ನ ಮನಸಿಂದ ತೆಗೆಯಲು ಕಷ್ಟವಾಗುತ್ತಿದೆಯಲ್ಲ? ನಿಜ. ನಾವು ಯಾವುದನ್ನ ಯೋಚಿಸಬಾರದು ಅಂತ ಅಂದುಕೊಳ್ಳುತ್ತಿವೋ ,ಅವೇ ಯೋಚನೆಗಳನ್ನ ನಮ್ಮ ಸ್ಮೃತಿ ಪಟಲ ಮರುಕಳಿಸುತ್ತೆ. ಹಾಗಂತ ನೀವು ನಿಮ್ಮ ಯೋಚನೆ,ಮನಸ್ಸು , ಮಿದುಳಿನ ಮೇಲೆ ಹಿಡಿತ ಸಾಧಿಸಲಾಗದು ಅಂತ ಅರ್ಥವಲ್ಲ . ಆದ್ರೆ ಅದಕ್ಕೆ ಅನುಸರಿಸೋ ಮಾರ್ಗ ಬೇರೆಯಿದೆ.
!-- Facebook share button Start -->