HI-FI HOUSE- Fairfield Pond, The Hamptons

ಅಂಬಾನಿಯ ಹೈಟೆಕ್ ಮನೆಗಿಂತ, ಫ್ರಾನ್ಸ್ ನ ಲಿಯೋಪಾಲ್ಡ್ ಬಂಗ್ಲೋ ಗಿಂತ ಈ ಮನೆ ಕೊಂಚ ಡಿಫರೆಂಟ್. ದಟ್ಟ ಕಾನನದ ನಡುವೆ ಹಬ್ಬಿಕೊಂಡಿರುವ ಈ ಅರಮನೆಗೆ ಎಲ್ಲಿಲ್ಲದ ಬೇಡಿಕೆಯಿದೆ. ಒಂದು ಕಾಲದಲ್ಲಿ ವಾಸಕ್ಕಂತಲೇ ಈ ಬಂಗ್ಲೆಯನ್ನ ಕಟ್ಟಲಾಗಿದ್ರು, ಈಗ ಇದು ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ. ಅದು ಯಾವ ಅರಮನೆ ಅಂದ್ರಾ..



ಫೇರ್ ಫೀಲ್ಡ್ ಪಾಂಡ್. ಇದು ದಕ್ಷಿಣ ಅಮೇರಿಕಾದ ಹ್ಯಾಂಪ್ಟನ್ ಕಾಡಿನಲ್ಲಿರುವ ಬೃಹತ್ ಬಂಗಲೆ. 83 ಎಕರೆಯಲ್ಲಿ ಹಬ್ಬಿಕೊಂಡಿರುವ ಈ ಅರಮನೆ ಇಡೀ ಪ್ರಂಪದಲ್ಲಿಯೇ ಅತಿದೊಡ್ಡ ನಿವಾಸಿ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಮೊದಲು ವಾಸಕ್ಕೇಂದೇ ಈ ಬಂಗಲೆಯನ್ನ ಕಟ್ಟಲಾಗಿತ್ತು. ಆದ್ರೆ ದಿನಕಳೆದಂತೆ ಈ ಬಂಗ್ಲೋಗೆ ಹೆಚ್ಚುತ್ತಿರುವ ಪಾಪುಲಾರಿಟಿಯನ್ನ ಕಂಡ ಮನೆಮಾಲೀಕ ಇದನ್ನ ಪ್ರವಾಸಿ ತಾಣನ್ನಾಗಿ ಬದಲಾಯಿಸಿಬಿಟ್ಟ. ಹಾಂಗತ ಹೇಳಿ ಈತ ಮನೆಬಿಟ್ಟು ಬರಲಿಲ್ಲ. ತನ್ನ ಮನೆಯಲ್ಲೇ ಇದ್ದೂ ಬೇರೆಯವರೂ ದುಡ್ಡುಕೊಟ್ಟು ವಾಸವಿರಲು ಅವಕಾಶಮಾಡಿಕೊಟ್ಟಿದ್ದಾನೆ.



ಈ ಫೇರ್ ಫೀಲ್ಡ್ ಪಾಂಡ್ ನ ವಿಶೇಷತೆ ಅಂದ್ರೆ ಫಿಶ್ಶಿಂಗ್. ಹೌದು, ಬಿರು ಬಿರು ಬೇಸಿಗೆಗಾಲದಲ್ಲಿ , ರಜೆಯ ಮಜವನ್ನ ಅನುಭವಿಸಲು ಇಡೀ ಅಮೇರಿಕಾದಿಂದ ಜನ ಇಲ್ಲಿಗೆ ಹರಿದು ಬರ್ತಾನೆ. ತಮ್ಮ ಹಾಲಿಡೇಸ್ ಅನ್ನ ಕಲರ್ ಕಲರ್ ಮೀನನ್ನ ಹಿಡಿತಾ ಎಂಜಾಯ್ ಮಾಡ್ತಾರೆ. ಅಂದ್ಹಾಗೆ ಈ ಅರಮನೆಯ ಒನರ್ ಬಿಲೇನಿಯರ್ ಇರಾ ರೆನೆರ್ಟ್..!



ಫೇರ್ ಫೀಲ್ಡ್ ಪಾಂಡ್ ಎಂಬ ಅರಮನೆಯಲ್ಲಿ ಒಟ್ಟು 29 ಶಯನ ಗೃಹಗಳಿವೆ. 5 ಆಟದ ಅಂಕಣಗಳಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮನೆಯಲ್ಲಿ ಪ್ರಪಂಚದ ಅತಿ ದುಬಾರಿ ಸ್ನಾನದ ಗೃಹವಿದೆ. ಅಂದ್ಹಾಗೆ ಈ ಮನೆಯ ಮೌಲ್ಯ 750 ಕೋಟಿಗೂ ಅಧಿಕ...!

!-- Facebook share button Start -->