HI-FI HOUSE- The Penthouse England


ಇದು ಇಂಗ್ಲೆಂಡ್ ನ ಸುಪ್ರಸಿದ್ಧ ಅಪಾರ್ಟ್ ಮೆಂಟ್ ಪೆಂಟ್ ಹೌಸ್ ಹೈಡ್ ಪಾರ್ಕ್. ಇಂತ ಅಪಾರ್ಟ್ ಮೆಂಟ್ನಲ್ಲಿ ಒಂದೇ ಒಂದು ರೂಮು ಪಡಿಯೋಕೆ ಅಂತ ಲಂಡನ್ ನ ಶ್ರೀಮಂತರೆಲ್ಲರೂ ತುದಿಗಾಲಲ್ಲಿ ನಿಂತಿರ್ತಾರೆ. ಹೀಗಾಗೇ ಇದನ್ನ ಶ್ರೀಮಂತರ ಅಡ್ಡಾ ಅನ್ನಬಹುದೇನೋ. ಯಾಕಂದ್ರೆ ಬಡವರಿಗೆ ಕೈಗೆಟುಕದ ದರದಲ್ಲಿ ಈ ಅಪಾರ್ಟ್ ಮೆಂಟ್ ನ ರೂಮುಗಳಿವೆ.



ಬಾಡಿಗೆದಾರನ ಅಭಿರುಚಿಗೆ ತಕ್ಕಂತೆ ಇಲ್ಲಿನ ಮನೆಗಳ ಇಂಟೀರಿಯರ್ ಡಿಸೈನನ್ನ ಮಾಡಲಾಗುತ್ತೆ. ಅತ್ಯಂತ ಮುತುವರ್ಜಿವಹಿಸಿ, ಕಿಟಕಿ ಕರ್ಟನ್ ನಿಂದ ಹಿಡಿದು ಪ್ರತಿಯೊಂದನ್ನೂ ತುಂಬಾ ಕ್ರಿಯೇಟಿವ್ ಆಗಿ ಡಿಸೈನ್ ಮಾಡಲಾಗುತ್ತೆ. ಇದು ಅತಿ ಪ್ರಸಿದ್ಧ ವಾಸಸ್ಥಳವಷ್ಟೇ ಅಲ್ಲದೆ, ಸುಪ್ರಸಿದ್ಧ ವ್ಯವಹಾರ ಕೇಂದ್ರವೂ ಹೌದು. ಇಲ್ಲಿ ರೋಲೆಕ್ಸ್, ಮೆಕ್ ಲಾರೆನ್, ಆಟೋಮೇಟಿವ್, ಆಂಡ್ ಅಬುದಾಭಿ ಇಸ್ಲಾಮಿಕ್ ನಂತಹ ಪ್ರಮುಖ ವಾಣಿಜ್ಯ ವ್ಯವಹಾರಗಳು ನಡಿಯೋದು ಇದೇ ಪೆಂಟೆ ಹೌಸ್ ಹೈಡ್ ಪಾರ್ಕ್ ನಲ್ಲಿ.






ಈ ಅಪಾರ್ಟ್ ಮೆಂಟ್ ನ ಒಟ್ಟೂ ವಿಸ್ತೀರ್ಣ ಮೂರು ಲಕ್ಷ 85 ಸಾವಿರ ಚದರ ಅಡಿಗಳು. ಇದ್ರಲ್ಲಿ 86 ನಿವಾಸಿ ಗೃಹಗಳಿವೆ. ಅಂದ್ಹಾಗೆ ಅಲ್ಲಿನ ಒಂದು ಮನೆಯ ಒಂದು ತಿಂಗಳ ಬಾಡಿಗೆ ಜಸ್ಟ್ 60 ಲಕ್ಷ ಡಾಲರ್ ಗಳಿಂದ ಪ್ರಾರಂಭ. ಅಷ್ಟೋಂದು ದುಡ್ಡಿದ್ದರೆ ನೀವು ಕೂಡ ಈ ಅಪಾರ್ಟ್ ಮೆಂಟ್ನಲ್ಲಿ ಎಂಜಾಯ್ ಮಾಡಿ. ಜೊತೆ ಜೊತೆಗೆ ನಿಮ್ಮ ಬಿಸಿನೆಸ್ಸಲ್ಲೂ ಇಂಟರ್ ನ್ಯಾಷನಲ್ ಲೆವೆಲ್ ಗೆ ಕೊಂಡೋಯ್ಯಿರಿ.
!-- Facebook share button Start -->