Seal Of Death-Part3


ದಿ ಮೋಸ್ಟ್ ವಾಟೆಂಡ್ ಟೆರರಿಸ್ಟ್ ನ ಮಟ್ಟಹಾಕಲು ಅಮೇರಿಕಾ ಆಯ್ದುಕೊಂಡದ್ದು ನೆವಿ ಸೀಲ್ಸ್ ಗಳನ್ನ. ಯಾಕಂದ್ರೆ ಅವ್ರು ಪ್ರಪಂಚದ ಮೋಸ್ಟ್ ಸ್ಕಿಲ್ಡ್ ಕಿಲ್ಲರ್ಸ್. ಅಂದ್ಹಾಗೆ ಅವ್ರು ಯಾವೆಲ್ಲಾ ವೆಪನ್ ಗಳನ್ನ ಉಪಯೋಗಿಸ್ತಾರೆ ಗೊತ್ತಾ.. ಕೆಲವು ವೆಪನ್ ಗಳು ಇಂದಿಗೂ ನಿಗೂಢವಾಗಿದ್ರು, ಗೊತ್ತಿರುವ ವೆಪನ್ ಗಳ ಲಿಸ್ಟ್ ಇಲ್ಲಿವೆ ನೋಡಿ.. 

ಸೀಲ್ ಅಂದ್ರೆ ಸೀ, ಎರ್, ಲ್ಯಾಂಡ್. ಅಂದ್ರೆ ಸಮುದ್ರ, ಆಕಾಶ ಮತ್ತು ಭೂಮಿಯ ಮೇಲೆ ಅಷ್ಟೇ ಅಕ್ಯೂರೇಟ್ ಆಗಿ, ಅಷ್ಟೇ ಪರ್ಫೆಕ್ಟಾಗಿ ಹೋರಾಡೋರು ಅಂತ ಅರ್ಥ. ಹೀಗಾಗೇ ಈ ಸೀಲ್ಸ್ ಗಳಿಗೆ ಅತ್ಯಂತ ಆಧುನಿಕಯ ಶಸ್ತ್ರಾಸ್ತ್ರಗಳನ್ನ ಒದಗಿಸಲಾಗುತ್ತೆ. ಇವ್ರ ವೆಪನ್ ಗಲು ಪ್ರಪಂಚದ ಅತ್ಯಂತ ಕ್ವಾಲಿಟಿ ವೆಪೆನ್ ಗಳು. ಅಂದ್ಹಾಗೆ ಇವ್ರು ಉಪಯೋಗಿಸಲು ಹಲವಾರು ಶಸ್ತ್ರಾಸ್ತ್ರಗಳ ಮಾಹಿತಿ ಯಾರಿಗೂ ತಿಳಿದಿಲ್ಲ. ಅವುಗಳನ್ನ ಗೌಪ್ಯವಾಗಿ ಇಡಲಾಗಿದೆ. ಇವುಗಳ ಬಗ್ಗೆ ಖುದ್ದಿ ಯು.ಎಸ್ ಮಿಲಿಟರಿಗೆ ಗೊತ್ತಿಲ್ಲ. ಮೋಸ್ಟ್ ಕಾಮನ್ ಅನ್ನವಂತ ವೆಪನ್ ಗಳನ್ನ ಮಾತ್ರ ಎಲ್ಲರಿಗೂ ತೊರಿಸಲಾಗುತ್ತೆ.

ಗ್ರಾಫಿಕ್ಸ್- MH-47 ಸ್ಪೆಷಲ್ ಒಪ್ಸ್ ಚಿನೂಕ್.


ಇದು ಪ್ರಪಂಚ ಅತ್ಯಂತ ಕಾಸ್ಟ್ಲಿ ಯುದ್ಧ ವಿಮಾನ. ಇದನ್ನ ಕೇವಲ ಮತ್ತು ಕೇವಲ ಸೀಲ್ಸ್ ಗಳು ಬಳಸ್ತಾರೆ. ಅವ್ರು ಮಿಷನ್ ನಲ್ಲಿದ್ದಾಗ ವೈರಿಯನ್ನ ಅತ್ಯಂತ ಹತ್ತಿರದಿಂದ ಹೊಡೆಯಲು ಈ ವಿಮಾನ ಅತ್ಯಂತ ಸಹಾಯಕಾರಿ. ಯಾಕಂದ್ರೆ ಇದು ಭೂಮಿಯ ಮೇಲೆ ಅತ್ಯಂತ ಕೆಳಮಟ್ಟದಲ್ಲೂ ಹಾರಬಹುದಾದ ಯುದ್ಧ ವಿಮಾನ.

ಗ್ರಾಫಿಕ್ಸ್- ಸಿಕೋರಸ್ಕೈ UH-60 ಬ್ಲಾಕ್ ಹಾಕ್

ಈ ಯುದ್ಧವಿಮಾನವನ್ನ ಕಮಾಂಡರ್ ಗಳು ಬಳಸ್ತಾರೆ. ಸೀಲ್ ಗಳಿಗೆ ಕರೆಕ್ಟಾಗಿ ಆಜ್ಞೆ ನೀಡಲು. ಮತ್ತು ಸೀಲ್ ಗಳ ಪ್ರತಿಯೊಂದು ಕಾರ್ಯಾಚರಣೆಯ ಮೇಲೆ ಕಣ್ಣಿಟ್ಟಿರಲು ಇದನ್ನ ಬಳಸಲಾಗುತ್ತೆ. ಇಂತಹ ಎರಡು ವಿಮಾನಗಳನ್ನ ಒಸಾಮಾ ಮಿಷನ್ ನಲ್ಲಿ ಬಳಸಲಾಗಿತ್ತು.

ಗ್ರಾಫಿಕ್ಸ್- MH-6 ಲಿಟಲ್ ಬರ್ಡ್.

ಈ ಡೆಡ್ಲಿ ಲಿಟ್ಲ್ ಬರ್ಡ್ ಗಳನ್ನ ಕೆಲವೊಂದು ಸಿಕ್ರೇಟ್ ಮಿಷನ್ ಗಳನ್ನ ಮಾತ್ರ ಬಳಸಲಾಗುತ್ತೆ.

ಗ್ರಾಫಿಕ್ಸ್- ಸಾಬ್ AT-4 ಆರ್ಮರ್ ವೆಪನ್

ಇದೊಂದು ಡೆಡ್ಲಿ ವೆಪೆನ್ನೇ ಸರಿ. ಇದನ್ನ ಸೀಲ್ಸ್ ಗಳು ತಮ್ಮ ಭುಜದ ಮೇಲಿಟ್ಟಕೊಂಡು ಬಳಸ್ತಾರೆ. ಒಂದೇ ಒಂದು ಬಾರಿಗೆ ಇದ್ರಿಂದ ಹೊರಬರುವ ಗುಂಡುಗಳ ಸಂಖ್ಯೆ 116. ಅಂದ್ರೆ ನಿಂತ ನಿಂತಲ್ಲೇ ಸೀಲ್ಸ್ ಗಳು ನೂರು ಹೆಣಗಳನ್ನ ಉರುಳಿಸಬಲ್ಲರು.

ಗ್ರಾಫಿಕ್ಸ್- M14 ಸ್ನೀಪರ್ ರೈಫಲ್
M4A1 ಕಾರ್ಬೈನ್
H&K MK23 ಮಾಡ್ ಹ್ಯಾಂಡ್ ಗನ್


ಒಂದು ವೇಳೆ ಶತ್ರು ನಮ್ಮಿಂದ ಕೆಲವೇ ಹೆಜ್ಜೆ ದೂರ ಇದ್ರೆ ಅಂತವರನ್ನ ಸದೆಬಡಿಯುಲು ಸೀಲ್ಸ್ ಗಳು ಆಟೋಮ್ಯಾಟಿಕ್ ರೈಫಲ್ ಗಳನ್ನ, ಹ್ಯಾಂಡ್ ಗನ್ ಗಳನ್ನ ಬಳಸ್ತಾರೆ. ಅವುಗಳಲ್ಲಿ ಪ್ರಮುಖವಾದವು, M14 ಸ್ನೀಪರ್ ರೈಫಲ್, M4A1 ಕಾರ್ಬೈನ್, H&K MK23 ಮಾಡ್ ಹ್ಯಾಂಡ್ ಗನ್ ಗಳು.

ಇವಿಷ್ಟು ನಮಗೆ ಗೊತ್ತಿರುವ ಸೀಲ್ ವೆಪೆನ್ ಗಳು. ಆದ್ರೆ ಇವುಗಳಿಗಿಂತ ಪವರ್ ಫುಲ್, ಫುಲ್ಲಿ ಆಟೋಮ್ಯಾಟಿಕ್, ಅಡ್ವಾನ್ಸಡ್ ವೆಪನ್ ಗಳು ನೆವಿ ಸೀಲ್ಸ್ ಗಳ ಹತ್ತಿರ ಇವೆ. ಆದ್ರೆ ಅವೆಲ್ಲಾ ಯಾವವು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಆದ್ರೆ ಇವೆಲ್ಲದಕ್ಕಿಂತ ಮುಖ್ಯವಾಗಿ, ಎಲ್ಲಾ ವೆಪನ್ ಗಳಿಗಿಂತ ಖತರನಾಕ್ ವೆಪನ್ ಅಂದ್ರೆ ಅದು ಖುದ್ದು ಸೀಲ್ ಅನ್ನೋದ್ರಲ್ಲಿ ಎರಡು ಮಾತಿಲ್ಲ.



!-- Facebook share button Start -->