Seal Of Death!


ದಿ ಸೀಲ್ಸ್. ಲಾಡೆನ್ ನ ಹುಟ್ಟಡಗಿಸಲು ಅಮೇರಿಕಾ ಬಳಸಿದ ಪ್ರಪಂಚದ ಅತ್ಯಂತ ಸುಸಜ್ಜಿತ ಸೇನೆಯಿದು. ಲಾಡೆನ್ ನನ್ನ ಬೇಟೆಯಾಡಲು ಈ ಸೀಲ್ಸ್ ಅನ್ನ ಕಳಿಸಿದ್ದಾರೆ ಅಂದ್ರೆ ಲಾಡೆನ್ ಗೆ ಸಾವು ಹತ್ತಿರವಾಗಿದೆಯಂತಾನೇ ಅರ್ಥ. ಅಷ್ಟರ ಮಟ್ಟಿಗೆ ಅವ್ರು ಮಿಸ್ಟರ್ ಪರ್ಫಕ್ಷನಿಸ್ಟುಗಳು. ಇವ್ರು ಎಲ್ಲರಂತಲ್ಲ. ಹಿಡಿದ ಮಿಷನ್ ಅನ್ನ ಮುಗಿಸೋವರೆಗೂ ಮಲಗೋದಿಲ್ಲ..


ಪ್ರಪಂಚದ ಮೋಸ್ಟ್ ವಾಂಟೆಡ್ ಟೆರರಿಸ್ಟ್ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ಇಡೀ ವಿಶ್ವವೇ ಖುಷಿಯಲ್ಲಿ ತೇಲಾಡಿತ್ತು. ವಿಶ್ವವನ್ನೇ ಗೆದ್ದ ಖುಷಿಯಲ್ಲಿ ಅಮೇರಿಕಾ ಇತ್ತು. ನಮ್ಮ ತಂಟೆಗೆ ಬಂದ್ರೆ ಹುಷಾರ್ ಅನ್ನೋ ಸಂದೇಶವನ್ನ ಅಮೇರಿಕಾ ಇಡೀ ಪ್ರಪಂಚಕ್ಕೆ ಸಾರಿತ್ತು. ಅಂದ್ಹಾಗೆ ಲಾಡೆನ್ ನ ತೆಲೆಗೆ, ಎದೆಗೆ ಗುಂಡನ್ನ ಇಟ್ಟವರು ಯಾರು ಗೊತ್ತೇ.. ಇವ್ರೇ ಯು.ಎಸ್. ಆರ್ಮಿಯ ನೆವಿ ಸೀಲ್ಸ್.. 


ಒಸಾಮಾ ಪಾಕ್ ಪಾಪಿಗಳ ನಾಡಿನಲ್ಲಿದ್ದಾನೇ ಅನ್ನೋದು ಅನ್ ಡೌಟ್ ಫುಲ್ ಆದ ತಕ್ಷಣ, ಅಮೇರಿಕಾ ಆತನನ್ನ ನಿರ್ನಾಮ ಮಾಡಲು ಸ್ಕೆಚ್ ಹಾಕತೊಡಗಿತು. ಒಸಾಮಾ ಬದುಕಲು ಚಾನ್ಸೇ ಕೊಡದ ಹಾಗೆ ಆತನನ್ನ ಬೇಟೆಯಾಡಲಾಯಿತು. ಯಾಕಂದ್ರೆ ಲಾಡೆನ್ ನ ಮುಂದೆ ನಿಂದದ್ದು ಖುದ್ದು ಸಾವು. ಅಂದ್ರೆ ಯು.ಎಸ್ ನೆವಿಯ ಸೀಲ್ಸ್. ಮೇ ಒಂದರ ಮಧ್ಯರಾತ್ರಿಯಂದು ಲಾಡೆನ್ ಎದುರಿಗಿದ್ದವರು ಪ್ರಪಂಚದ ಖತನಾಕ್ ಸೇನೆಯ ಪರ್ಫೆಕ್ಟ್ ಸೋಲ್ಜರ್ಸ್ ಸೀಲ್ಸ್. 


ಎರಡು ಡಜನ್ ಸೀಲ್ಸ್ ಗಳು ಲಾಡೆನ್ ನನ್ನ ಅಟ್ಟಾಡಿಸಿ ಕೊಂದ್ರು. ಕಡುಗಪ್ಪಿನ ಮಧ್ಯರಾತ್ರಿಯ ಮಂದ ಬೆಳಕಿನಲ್ಲೂ ಅವ್ರು ತಮ್ಮ ಶತ್ರುವನ್ನ ಬಿಡಲಿಲ್ಲ. ದಿಟ್ಟತನ ದಿಂದ ಹೋರಾಡಿದ ಸೀಲ್ಸ್ ಕಡೆಗೂ ಲಾಡೆನ್ ದೇಹಕ್ಕೆ ಗುಂಡನ್ನ ತೂರಿಸಿಯೇ ಬಿಟ್ರು. ಅವ್ರು ಸೀಲ್ಸ್. ಹೈಲಿ ಸ್ಕಿಲ್ಡ್ ಕಿಲ್ಲರ್ಸ್ ಆಫ್ ದಿ ವರ್ಡ್. ಅವ್ರಿಗೆ ತಾವು ಸೀಲ್ಸ್ ಆಗಿರೋದಕ್ಕೆ ತುಂಬಾ ಹೆಮ್ಮೆಯಿದೆ.

ಹಾಗಂತ ಅವ್ರು ಲಾಡೆನ್ ನ ಕೊಂದ ಕ್ರೆಡಿಟನ್ನ ತಮ್ಮ ಕೊರಳಿಗೆ ಹಾಕಿಕೊಳ್ಳೋದಿಲ್ಲ. ಎಲ್ಲರ ಮುಂದೆಯೂ ಬಡಾಯಿಕೊಚ್ಚಿಕೊಳ್ಳೋದಿಲ್ಲ. ಮೇಲಾಗಿ ಅವ್ರ ಹೆಸ್ರುಗಳೇನು ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ಅವ್ರಿಗಿರುವ ಏಕೈಕ ಉದ್ದೇಶ ಒಬ್ಬ ಶತ್ರುವನ್ನೂ ಉಳಿಸಬಾರದು ಅನ್ನೋದಷ್ಟೇ. ಹೀಗಾಗೆ ದ್ಯಾಟ್ ವಾಸ್ ಅ ಪರ್ಫೆಕ್ಸ್ ಮಿಷನ್..
!-- Facebook share button Start -->