Crazy Invention, USB Vacuume Cleaner!!!


ನಿಮ್ಮನೇಲಿ ಕಂಪ್ಯೂಟರ್ರೂ, ಲ್ಯಾಪ್ ಟಾಪು ಇದೇ ಅಂದ್ಮೇಲೆ ಅದ್ರ ಕೀ ಬೋರ್ಡ್ ನಲ್ಲಿ ಕಿಲೋಗಟ್ಟಲೆ ಧೂಳು ಇದ್ದಿರಲೇ ಬೇಕು.. ಬರೀ ಮನೆಗಳಲ್ಲಷ್ಟೇ ಅಲ್ಲಾ, ಆಫೀಸುಗಳಲ್ಲೂ ಇದೇ ಕಥೆ. ಯಾಕಂದ್ರೆ ಕೀ ಬೋರ್ಡ್ ನ ಸಂದಿಗೊಂದಿಗಳಲ್ಲಿ ಸೇರಿಕೊಂಡಿರುವ ಧೂಳನ್ನ ಕ್ಲೀನ್ ಮಾಡೋದು ಸುಲಭದ ಮಾತಲ್ಲ. ಅದಕ್ಕಂತಾನೇ ಜಪಾನಿಗರು ಹೊಸ ವ್ಯಾಕ್ಯೂಮ್ ಕ್ಲೀನರ್ ಕಂಡುಹಿಡಿದಿದ್ದಾರೆ.. 

ಅಷ್ಟು ದೊಡ್ಡ ವ್ಯಾಕ್ಯೂಮ್ ಕ್ಲೀನರ್ ನಿಂದ ಇಷ್ಟು ಪುಟ್ಟಕೀಬೋರ್ಡನ್ನ ಹೇಗಪ್ಪಾ ಕ್ಲೀನ್ ಮಾಡ್ತಾರೆ ಅಂತ ಕನ್ಫೂಸ್ ಆಗ್ಬೇಡಿ. ಪುಟ್ಟದಾದ ಕೀಬೋರ್ಡನ್ನ ಕ್ಲೀನ್ ಮಾಡಲು ಪುಟ್ಟದಾದ ವ್ಯಾಕುಮ್ ಕ್ಲೀನರ್ ನ್ನೇ ಕಂಡು ಹಿಡಿಯಲಾಗಿದೆ.. ಆದ್ರೆ ಇದು ಕಾಮನ್ ವ್ಯಾಕ್ಯೂಮ್ ಕ್ಲೀನರ್ ಅಲ್ಲ. ಬದಲಾಗಿ ಯುಎಸ್ ಬಿ ವ್ಯಾಕ್ಯೂಮ್ ಕ್ಲೀನರ್.


ಹೌದು. ಈ ಚಿಕ್ಕದಾದ ಚೊಕ್ಕದಾದ ವ್ಯಾಕ್ಯೂಮ್ ಕ್ಲೀನರ್ ನಿಂದ ಯಾವುದೇ ಕಷ್ಟವಿಲ್ಲದೆ ಕೀ ಬೋರ್ಡನ್ನ ಕ್ಲೀನ್ ಮಾಡಬಹುದು. ಈ ಮಷೀನನ್ನ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನ ಯು.ಎಸ್ ಬಿ ಪೋರ್ಟ್ ಗೆ ಕನೆಕ್ಟ್ ಮಾಡಲಾಗುತ್ತೆ. ಹೀಗಾಗೇ ಇದಕ್ಕೆ ಯು.ಎಸ್. ಬಿ ವ್ಯೂಕ್ಯೂಮ್ ಕ್ಲೀನರ್ ಎಂಬ ಹೆಸ್ರು ಬಂತು..



ಒಟ್ನಲ್ಲಿ ಈ ಕ್ರೇಜಿ invention ಸಿಲ್ಲಿಯಾಗಿದ್ರೂ ತುಂಬಾನೇ ಯ್ಯೂಸ್ ಫುಲ್ ಆಗಿದೆ ಅಲ್ವಾ.. ಮತ್ತೆ ತಡಯಾಕೆ. ಈಗ್ಲೇ ನಿಮ್ಮ ಮನೆಗೆ, ಆಫೀಸಿಗೆ ಈ ಮಷೀನನ್ನ ತಂದು ನಿಮ್ಮ ಕಂಪ್ಯೂಟರನ್ನ ಕ್ಲೀನ್ ಆಂಡ್ ನೀಟಾಗಿಡಿ.

!-- Facebook share button Start -->