ಪುಟ್ಟ
ಪುಟ್ಟ ಮಕ್ಕಳು ಮುದ್ದು ಮುದ್ದಾಗಿ ಅಂಬೇಗಾಲು ಇಡುತ್ತಿದ್ದರೆ ಎಂಥವರಿಗೂ ಅಪ್ಪಿಕೊಂಡು ಮದ್ದಾಡಬೇಕೆನಿಸುತ್ತೆ. ಆದ್ರೆ
ಅದೇ ಜಪಾನಿನಲ್ಲಿ ಪುಟ್ಟ ಮಕ್ಕಳು ಅಂಬೇಗಾಲಿಡಲು
ಪ್ರಾರಂಭಿಸಿದ್ರೆ ಅವ್ರೇನು ಮಾಡ್ತಾರೆ ಗೊತ್ತಾ... ಈ ಸ್ಟೋರಿ ನೋಡಿ.
ಹೀಗೆ
ಕ್ಯೂಟ್ ಕ್ಯೂಟಾಗಿ ಅದಾಗ ತಾನೆ ಅಂಬೆಗಾಲಿಡಲು ಕಲೆತ ಮಕ್ಕಳನ್ನ ನೋಡೋದೆ ಒಂದು ಖುಷಿ. ಸೋ ಸ್ವೀಟ್ ಅಂತ ಮಗುವನ್ನ
ಮುದ್ದುಮಾಡೋರೆ ಹೆಚ್ಚು. ಅಂತದ್ರಲ್ಲಿ ಜಪಾನಿಗರು ಅಂಬೇಗಾಲಿಡಲು ಶುರುಮಾಡಿದ ಮಕ್ಕಳನ್ನ ಏನ್
ಮಾಡ್ತಾರೆ ಗೊತ್ತಾ... ಪುಟಾಣಿಗಳಿಂದ ಮನೆಯೊರೆಸೋ
ಕಾರ್ಯ ಶುರು ಹಚ್ಕೋತಾರೆ.
ಹೇಗಿದ್ರೂ ಮನೇತುಂಬಾ ತೆವಳುತ್ತಾ ಓಡಾಡಿಕೊಂಡಿರ್ತವೆ ಅಂತ, ಮಕ್ಕಳಿಗೆ ನೆಲ ಒರೆಸಲು ಅನುಕೂಲವಾಗುವಂತ ಬಟ್ಟೆಯನ್ನ ಹೊಲಸಿ ಮನೆಯಲ್ಲಿ ಬಿಟ್ಟು ಬಿಡ್ತಾರೆ. ಇದ್ರಿಂದಾಗಿ ಮನೇನೂ ಕ್ಲೀನ್, ಮಗುನೂ ಖುಷ್ ಅನ್ನೋದು ಇವ್ರ ಮಾತು..
ಹೀಗೆ ಇಂಥದ್ದೊಂದು ವಿಚಿತ್ರ ಕಾಸ್ಟೂಮನ್ನ ಜಪಾನಿಗರು ಕಂಡುಹಿಡಿದದ್ದೇ ತಡ
ಈ ಕ್ಲೀನಿಂಗ್ ಡ್ರೆಸ್ ಫುಲ್ ಫೇಮಸ್ಸಾಯ್ತು..
ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಈ ಡ್ರೆಸ್ ನ ಬೇಡಿಕೆಯೂ ಹೆಚ್ಚಿದೆ. ವಿಚಿತ್ರಾ ಅಲ್ವಾ...