ಎಲ್ಲರಲ್ಲೂ
ಒಂದಲ್ಲಾ ಒಂದು ಕಲೆ, ಪ್ರತಿಭೆ ಅನ್ನೋದು ಇದ್ದೇ ಇರುತ್ತೆ.
ಕೆಲವರಲ್ಲಿ ಈ ಪ್ರತಿಭೆ ಸ್ವಾಭಾವಿಕವಾಗಿ ಬಂದಿದ್ರೆ ಮತ್ತೆ
ಕೆಲವರು ಕಷ್ಟಪಟ್ಟು, ಇಷ್ಟಪಟ್ಟು ಆ ಕಲೆಯಲ್ಲಿ ಚಾಂಪಿಯನ್ ಅಂತ
ಅನ್ನಿಸಿಕೊಂಡಿರುತ್ತಾರೆ. ಕೆಲವು ಟ್ಯಾಲೆಂಟ್ ಗಳು ಅಬ್ಬಾ.. ಏನಪ್ಪಾ ಇವ್ರು ಹೀಗೆ ಅಂದ್ರೆ ಮತ್ತೆ ಕೆಲವು
ನಕ್ಕು ಬಿಡುವಷ್ಟು ಸಿಲ್ಲಿಯಾಗಿರುತ್ತವೆ.
ಗ್ಯಾರಿ ಟರ್ನರ್
ಏನಾಪ್ಪ ಇವ್ನು, ತನ್ನ ಚರ್ಮವನ್ನ ಹೀಗೆ ಚಪಾತಿ ಎಳೆದಂಗೆ ಎಳಿತಾನೆ ಎಂತ ಹುಬ್ಬೇರಿಸಬೇಡಿ.. ಈತ ಗ್ಯಾರಿ ಟರ್ನರ್
ಉರುಫ್ ಸ್ಟ್ರೆಚ್ಚಿ ಸ್ಕಿನ್ ಮ್ಯಾನ್ ( stretchy skin man ). ಈತನಿಗೆ ಯಾಕೆ ಈ ಹೆಸ್ರು ಬಂತು ಅನ್ನೋದನ್ನ
ನಿಮಗೆ ಈಗಾಗಲೇ ಗೊತ್ತಾಗಿರ ಬೇಕು.
ಈ ಮನುಷ್ಯ ತನ್ನ ಚರ್ಮವನ್ನ 15.8 ಸೆಂಟಿಮೀಟರ್ ವರೆಗೂ ಎಳೆಯಬಲ್ಲ. ಅದಕ್ಕಾಗಿ ಈಗ ಗ್ಯಾರಿ ಟರ್ನರ್ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.
ಒಂಚೂರು ಚರ್ಮ ಮೆತ್ತಗಾದರು ಮುಖ ಸುಕ್ಕುಗಟ್ಟುತ್ತೆ. ಅದ್ಹೇಗ ಇವ್ನ ಮುಖ ಇಷ್ಟು ಚೆನ್ನಾಗಿದೆ ಅಂತ ಕನ್ಫೂಸ್ ಆಗಬಹುದು. ನಿಜ ಹೇಳಬೇಕಂದ್ರೆ ಗ್ಯಾರಿ ಟರ್ನರ್ ಪಾಲಿಗೆ ಇದು ವರವಲ್ಲ, ಶಾಪ. ಯಾಕಂದ್ರೆ ಇದೊಂದು ಖಾಯಿಲೆ. ಎಹ್ಲರ್ಸ್ ಡ್ಯಾನಲೋಸ್ ಸಿಂಡ್ರೋಮ್ ( ehlers danlos syndrome ) ಅನ್ನೋದು ಇದ್ರ ಹೆಸ್ರು.. ಇದು ಖಾಯಿಲೆಯಾಗಿದ್ರು, ಗಿನ್ನಿಸ್ ಬುಕ್ಕಲ್ಲಿ ಹೆಸ್ರಾದ್ರೂ ಬಂತಲ್ಲ ಅಂತ ಖುಷಿಯಾಗಬಹುದೇನೋ...