Showing posts with label Puneeth Rajkumar Lyrics. Show all posts
Showing posts with label Puneeth Rajkumar Lyrics. Show all posts

ತುಂಬಾ ನೋಡ್ಬೇಡಿ - ಅಣ್ಣಾ ಬಾಂಡ್

ಚಿತ್ರ : ಅಣ್ಣಾ ಬಾಂಡ್
ಸಂಗೀತ : ವಿ ಹರಿಕೃಷ್ಣ
ರಚನೆ : ಯೋಗರಾಜ್ ಭಟ್
ಗಾಯಕ : ವಿ ಹರಿಕೃಷ್ಣ
ತಾರಾಗಣ : ಪುನೀತ್ ರಾಜಕುಮಾರ್ , ಪ್ರಿಯಾಮಣಿ, ನಿಧಿ ಸುಬ್ಬಯ್ಯ 
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಡಾನ್
ಬರುವಾಗ ಬೆತ್ತಲೆ ... ಹೋಗುವಾಗ ಬೆತ್ತಲೆ
ಸೆನ್ಟರಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ ... ಎತ್ತಲೇ ಎತ್ತಲೇ
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಕನ್ನಡಿಗೆ ನಾನ್ ಕಣ್ಣು ಹೊಡಿತೀನಿ
ಲೈಟು ಕಂಬಕೆ ಡಿಕ್ಕಿ ಹೊಡಿತೀನಿ
ಗಂಟೆಗೆ ಒಂದ್ಸಲ ತಲೆ ಬಾಚ್ತೀನಿ
ತಡನ್ ಟನ್ ಡಾನ್
ಪ್ರಿಯಾಮಣಿ ಯಾಮಾರಿ, ಒಮ್ಮೆ ತಿರುಗಿ ನೋಡಿದರೆ, ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೇ ... ಫ್ರೀ ಸೈಟು ಸಿಕ್ಕರೇ ... ಸೆನ್ಟರಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ …
ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಕೆಲ್ಸಕ್ ಹೋದರೆ ಸಂಬ್ಳ ಕೊಡ್ತಾರೆ
ಬ್ಯಾಂಕಿಗ್ ಹೋದರೆ ಸಾಲ ಕೊಡ್ತಾರೆ
ಪ್ರೀತಿಯೋಳಗದೆ ಏನು ಸಿಗ್ತದೆ
ತಡನ್ ಟನ್ ಡಾನ್
ಲವ್ವು ಕಂಫಾರ್ಮ್ ಆಗ್ದೇನೆ , ಫ್ರೆಂಡ್ಸು ಹತ್ರ ಮಾತಾಡಿ, ಫೋನಿನಲ್ಲಿ ಕರೆನ್ಸಿ ಖಾಲಿ ಆಯ್ತದೆ
ಹೇಳ್ತಾನೆ ಹೋದರೆ ,
ಮುಗಿಯಲ್ಲ ಮಾನ್ಯರೇ, ಸೆನ್ಟರಲ್ಲಿ ನನ್ನ ಹುಡ್ಗಿ ನಂಗೆ ಬೈತಾಳೆ ಬೈತಾಳೆ
ಎತ್ತಲೇ ... ಎತ್ತೋಲೆ 

ತುಂಬಾ ನೋಡ್ಬೇಡಿ ಲವ್ವು ಆಯ್ತದೆ
ಲವ್ವು ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ತಡನ್ ಟನ್ ಡಾನ್
ಗಿಫ್ಟು ಕೊಡ್ಬೇಡಿ ಖರ್ಚು ಆಯ್ತದೆ
ಲಿಫ್ಟು ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ತಡನ್ ಟನ್ ಡಾನ್
!-- Facebook share button Start -->

ಏನೆಂದು ಹೆಸರಿಡಲಿ -ಅಣ್ಣ ಬಾಂಡ್

ಚಿತ್ರ : ಅಣ್ಣ ಬಾಂಡ್
ಸಂಗೀತ : ಜಯಂತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯ ಘೋಷಾಲ್
ಏನೆಂದು ಹೆಸರಿಡಲಿ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಮೋಹದ ರೂವಾರಿ ನೀನಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಜಾತ್ರೆಲೂ ಸಂತೆಲೂ ನೀ ಕೈಯ್ಯ ಬಿಡದಿರು
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು
ಅದೇ ಪ್ರೀತಿ ಬೇರೆ ರೀತಿ ... ಹೇಗಂತ ಹೇಳೋದು
ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು
ಸ್ವಪ್ನದ ಸಂಚಾರ ಸಾಕಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ
ನೀನಿಟ್ಟ ಮುತ್ತುಂಟು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನನ್ದೂನು ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ 

ಏನೆಂದು ಹೆಸರಿಡಲಿ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
!-- Facebook share button Start -->

ಹಲೋ ೧ ೨ ೩ ಮೈಕು ಟೆಸ್ಟಿಂಗ್ - ಯಾರೇ ಕೂಗಾಡಲಿ

ಚಿತ್ರ : ಯಾರೇ ಕೂಗಾಡಲಿ
ಸಂಗೀತ : ವಿ ಹರಿಕೃಷ್ಣ
ಸಾಹಿತ್ಯ : ಯೋಗರಾಜ್ ಭಟ್
ಗಾಯಕಿ : ಮಮತಾ ಶರ್ಮಾ
ಗಾಯಕ : ಉದಿತ್ ನಾರಾಯಣ್ 
ಎಕ್ಸ್ಕುಸ್ ಮಿ .. ಊರಲ್ಲಿ ಕರೆಂಟು ಇಲ್ಲಾ
ಅದಕಾಗಿ ಫ್ಯಾನು ಗೀನು ತಿರುಗೋದಿಲ್ಲ
ನಂದು ಬ್ಯಾಸಿಗೆ ಕಾಲದ ಬಟ್ಟೆ ಸ್ವಾಮಿ
ಪ್ಲೀಸ್ ಡೋಂಟ್ ಮಿಸ್ಟೇಕ್ ಮೀ 
ಹಲೋ ಮೈಕು ಟೆಸ್ಟಿಂಗ್
ಪ್ರಿಯ ಗಂಡಸ್ರೇ ಗುಡ್ಡು ಇವಿನಿಂಗ್
ನಾನು ತುಂಬಾ ತುಂಟಿ ಹೆಣ್ಣು
ಮುಚ್ಚಿಕೊಳ್ಳುವೆ ಒಂದು ಕಣ್ಣು
ಕಳ್ಳ ರಸಿಕರ ಒಂದು ವಿನಂತಿ ಪ್ಲೀಸು ಹತ್ರ ಬನ್ರಿ
ನಾನು ಪಡುವಾರಳ್ಳಿ ಪಾಂಚಾಲಿ
ನವ ಹುಡುಗರ ಹುಡುಕೋ ಸಂಚಾರಿ 
ಹಲೋ ಮೈಕು ಟೆಸ್ಟಿಂಗ್
ಪ್ರಿಯ ಗಂಡಸ್ರೇ ಗುಡ್ಡು ಇವಿನಿಂಗ್
ನಲ್ಲಿ ಮೂಲೆ ಸೌನ್ಡಿನಲ್ಲು ನನ್ನ ಹೆಸರೈತೆ
ಕದ್ದು ಸೆದೊ ಬೀಡಿಯಲ್ಲೂ ನನ್ನ ಹೊಗೆಯೈತೆ
ಹಲೋ ... ಮೇಡಂ
ಹುಡುಗೀರಿಲ್ಲದೆ ಕುರುಡು ಯೌವನ
ಬನ್ರಿ ಬೆಚ್ಚಗೆ ಕಾಫಿ ಕುಡಿಯೋಣ
ಹುಡುಗರ ನಿಯತ್ತು ನಂಬುವದೆ ಎಡವಟ್ಟು
ಹಿರೋಯಿನ್ಗೆ ನಿಮ್ಮ ವೋಟು ಅದಕ್ಕೆ ನಂಗೆ ತುಂಬಾ ಸಿಟ್ಟು
ಹಾಳು ಹರೆಯ ಡೆಸು.. ಹಾಗೇ ಬಿಟ್ರೆ ಹೆವಿ ಲಾಸ್ಸು
ನಾನು ಊರು ಬಿಡುವ ಮೊದಲೇ.. ಪ್ಲೀಸು ಪ್ರೀತಿ ಮಾಡಿ
ನಾನು ಪಡುವಾರಳ್ಳಿ ಪಾಂಚಾಲಿ .. ನಿಮ್ ಎದೆಗೆ ಬಿಡಲೇ ರಂಗೋಲಿ 
ಹಲೋ ಮೈಕು ಟೆಸ್ಟಿಂಗ್
ಪ್ರಿಯ ಗಂಡಸ್ರೇ ಗುಡ್ಡು ಇವಿನಿಂಗ್
ನನ್ನ ಬಿಡ್ರಿ ನಿಮ್ದು ಹೇಳ್ರಿ ಹೆಂಗೈತೆ ಲೈಫು
ನನ್ನ ಹಿಂದೆ ನೀವು ಬಂದ್ರೆ ಬಯ್ಯಲ್ವಾ ವೈಫು
ಹೆಲ್ಲೊ ... ಮೇಡಂ ...
ಮೋಹ ದಾಹಕೆ .. ಒಂದೇ ಕಾರಣ ...
ಮದುವೆ ಇಲ್ಲದ ಖಾಲೀ ಜೀವನ
ಒಂದು ಸಣ್ಣ ಮಿಸ್ಟೇಕು ಮಾಡುವುದೇ ಕರೆಕ್ಟು
ಬಾಳೊಂದು ಪುಟ್ಟ ಪೋಲಿ ಜೋಕು ಎಷ್ಟು ದಿನ ಆಯ್ತು ನೀವು ನಕ್ಕು
ನನ್ನ ಹಾಡು, ನನ್ನ ಡಾನ್ಸು ಕಣ್ಣು ಎತ್ತಿ ಸೀದ ನೋಡು
ರಾತ್ರಿ ಕದ್ದು ನೋಡಿ ಹಗಲು ಪ್ಲೀಸು ಬಯ್ಯಬೇಡಿ 
ನಾನು ಪಡುವಾರಳ್ಳಿ ಪಾಂಚಾಲಿ
ನವ ಹುಡುಗರ ಹುಡುಕೋ ಸಂಚಾರಿ 

ನಾನು ಪಡುವಾರಳ್ಳಿ ಪಾಂಚಾಲಿ
ನವ ಹುಡುಗರ ಹುಡುಕೋ ಸಂಚಾರಿ 
!-- Facebook share button Start -->

ಕೆಂಪಾದೋ ಕೆಂಪಾದೋ - ಯಾರೇ ಕೂಗಾಡಲಿ

ಚಿತ್ರ :ಯಾರೇ ಕೂಗಾಡಲಿ
ಸಂಗೀತ : ವಿ ಹರಿಕೃಷ್ಣ
ಗಾಯಕ : ಕೈಲಾಶ್ ಖೇರ್
ನಿರ್ದೇಶನ : ಸಮುದ್ರಖನಿ 

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
ಅರ ಹೊಯ್ ..
ಕಾಲಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ
ಹೇಯ್ ರಂಗ ನಿನ್ನ ಮಲಗಿಸಿಬಿಟ್ಟರೋ
ತತ್ತೆರಿತೆರಿ ತತ್ತೆರಿತೆರಿ ಹಿತ್ಮೆಲಿದು ಅವರೇಕಾಳು
ಎಂತದೋ ಇದು ಎಂತದೋ ಇದು ಬುದ್ಧಿ ಇರದ ಮಂಶನ ಬಾಳು 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ

ಬೆಟ್ಟ ಗುಡ್ಡ ಎಲ್ಲಾ ಖಾಲಿ.. ಎಲ್ಲ ನುಂಗಿ ನೀರು ಕುಡಿದ
ಮಯ್ಯ ತುಂಬಾ ರೋಗ ಪಡೆದ
ಹಾಕ್ಬಿಟ್ಟ ಎಲ್ಲದಕ್ಕೂ ಬೇಲಿ .. ನಾನು ನನ್ನದೆಂದು ನೋಡಿದ
ಮನ್ಸು ಮನ್ಸುಗಳ ಹೊಡೆದ 

ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು
ನೀ ಹೋಗೋ ದಾರೀಲಿ ಮುಳ್ಳು ನೆಟ್ಟರು
ಯಾರೇ ಕೂಗಾಡಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್
ಹೋಗೋ ಸರಿ ದಾರೀಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್ 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಕಾಲನ್ನು ಎಳಿತಾರೆ ಸ್ವಾಮಿ .. ಮೇಲೆ ಹತ್ತಲಿಕ್ಕೆ ಬಿಡರು
ಅಯ್ಯೋ ತಾವೂ ಕೂಡ ಹತ್ತರು
ಮಾನಕ್ಕೆ ಅಂಜೋದಿಲ್ಲ ಸ್ವಾಮಿ
ನಾವು ಉಪ್ಪು ತಿಂದ ಮನೆಗೆ .. ಅನ್ನ ಹಾಕುವಂತ ಜನರು 
ಸರಿಯಾದ ದಾರಿಯಲ್ಲಿ ಯಾರು ಹೋಗಲ್ಲ
ನೀ ಹೋದ್ರು ಅಡ್ಬಾಯಿ ಹಾಕ್ದೆ ಬಿಡಲ್ಲ
ಯಾರೇ ಕೂಗಾಡಲಿ .. ಅರ ಹೊಯ್...  ಅರ ಹೊಯ್... ಅರ ಹೊಯ್...
ಹೋಗೋ ನಿನ್ನ ದಾರೀಲಿ.. ಅರ ಹೊಯ್...  ಅರ ಹೊಯ್... ಅರ ಹೊಯ್...

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
!-- Facebook share button Start -->