ಕೆಂಪಾದೋ ಕೆಂಪಾದೋ - ಯಾರೇ ಕೂಗಾಡಲಿ

ಚಿತ್ರ :ಯಾರೇ ಕೂಗಾಡಲಿ
ಸಂಗೀತ : ವಿ ಹರಿಕೃಷ್ಣ
ಗಾಯಕ : ಕೈಲಾಶ್ ಖೇರ್
ನಿರ್ದೇಶನ : ಸಮುದ್ರಖನಿ 

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
ಅರ ಹೊಯ್ ..
ಕಾಲಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ
ಹೇಯ್ ರಂಗ ನಿನ್ನ ಮಲಗಿಸಿಬಿಟ್ಟರೋ
ತತ್ತೆರಿತೆರಿ ತತ್ತೆರಿತೆರಿ ಹಿತ್ಮೆಲಿದು ಅವರೇಕಾಳು
ಎಂತದೋ ಇದು ಎಂತದೋ ಇದು ಬುದ್ಧಿ ಇರದ ಮಂಶನ ಬಾಳು 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ

ಬೆಟ್ಟ ಗುಡ್ಡ ಎಲ್ಲಾ ಖಾಲಿ.. ಎಲ್ಲ ನುಂಗಿ ನೀರು ಕುಡಿದ
ಮಯ್ಯ ತುಂಬಾ ರೋಗ ಪಡೆದ
ಹಾಕ್ಬಿಟ್ಟ ಎಲ್ಲದಕ್ಕೂ ಬೇಲಿ .. ನಾನು ನನ್ನದೆಂದು ನೋಡಿದ
ಮನ್ಸು ಮನ್ಸುಗಳ ಹೊಡೆದ 

ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು
ನೀ ಹೋಗೋ ದಾರೀಲಿ ಮುಳ್ಳು ನೆಟ್ಟರು
ಯಾರೇ ಕೂಗಾಡಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್
ಹೋಗೋ ಸರಿ ದಾರೀಲಿ .. ಅರ ಹೊಯ್ .. ಅರ ಹೊಯ್ .. ಅರ ಹೊಯ್ 
ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಕಾಲನ್ನು ಎಳಿತಾರೆ ಸ್ವಾಮಿ .. ಮೇಲೆ ಹತ್ತಲಿಕ್ಕೆ ಬಿಡರು
ಅಯ್ಯೋ ತಾವೂ ಕೂಡ ಹತ್ತರು
ಮಾನಕ್ಕೆ ಅಂಜೋದಿಲ್ಲ ಸ್ವಾಮಿ
ನಾವು ಉಪ್ಪು ತಿಂದ ಮನೆಗೆ .. ಅನ್ನ ಹಾಕುವಂತ ಜನರು 
ಸರಿಯಾದ ದಾರಿಯಲ್ಲಿ ಯಾರು ಹೋಗಲ್ಲ
ನೀ ಹೋದ್ರು ಅಡ್ಬಾಯಿ ಹಾಕ್ದೆ ಬಿಡಲ್ಲ
ಯಾರೇ ಕೂಗಾಡಲಿ .. ಅರ ಹೊಯ್...  ಅರ ಹೊಯ್... ಅರ ಹೊಯ್...
ಹೋಗೋ ನಿನ್ನ ದಾರೀಲಿ.. ಅರ ಹೊಯ್...  ಅರ ಹೊಯ್... ಅರ ಹೊಯ್...

ಕೆಂಪಾದೋ ಕೆಂಪಾದೋ ನೆಲ ಮುಗಿಲು ಕೆಂಪಾದೋ
ನೆತ್ತರಣ್ಣ ಹೀರಿ ಕೆಂಪಾದೋ
ಅರ ಹೊಯ್ .. ಅರ ಹೊಯ್ ..
ಕಪ್ಪಾದೋ ಕಪ್ಪಾದೋ ಗಾಳಿ ಗಂಧ ಕಪ್ಪಾದೋ
ಮನ್ಸನನ್ನ ಮುಟ್ಟಿ ಕಪ್ಪಾದೋ
!-- Facebook share button Start -->