ಪವಡಿಸು ಪರಮಾತ್ಮ ಶ್ರೀ ವೆಂಕಟೇಶ - ಶ್ರೀನಿವಾಸ ಕಲ್ಯಾಣ

ಚಿತ್ರ : ಶ್ರೀನಿವಾಸ ಕಲ್ಯಾಣ
ಗಾಯಕ : ಎಸ್ ಪಿ . ಬಾಲಸುಬ್ರಮಣ್ಯ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ಧನ್ಯನಾಗುವೆ ಇಂದು ಕರುಣಿಸೋ ದಯ ಮಾಡಿ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 
ಇರುಳು ಮುಗಿಯದೆ ಇರಲಿ .. ಹಗಲು ಮೂಡದೆ ಇರಲಿ ..
ಅನುಗಾಲ ಸೇವೆ ಸಾಗುತಲೇ ಇರಲಿ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯ 
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ 

ಶ್ರೀ ವೆಂಕಟೇಶ ... ಸಪ್ತಗಿರಿವಾಸ 
!-- Facebook share button Start -->