ಕಂಬದ ಮ್ಯಾಲಿನ ಗೊಂಬೆಯೇ - ನಾಗಮಂಡಲ

ಚಿತ್ರ : ನಾಗಮಂಡಲ
ಸಂಗೀತ : ಸಿ ಅಶ್ವಥ್
ಗಾಯಕಿ : ಸಂಗೀತಾ ಕಟ್ಟಿ 
ಕಂಬದ ಮ್ಯಾಲಿನ ಗೊಂಬೆಯೇ ... ನಂಬಲೇನ ನಿನ್ನ ನಗೆಯನ್ನ
ಬಿತ್ತಿಯ ಮ್ಯಾಲಿನ ಚಿತ್ತಾರವೇ ... ಚಿತ್ತ ಗೊಟ್ಟ ಹೇಳೇ ಉತ್ತಾರವ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ

(ನೀರೋಳೆಯ ನಿಗಿ ಕೆಂಡ ಸತ್ಯವೇ
ಅಭ್ಯಂಜನವಿನ್ನು ನಿತ್ಯವೇ
ಒಳ್ಳೇ ಗಮಗುಡುತಿಯಲ್ಲೇ ಸೀಗೆಯೇ
ನಿನ್ನ ವಾಸನೆಯೇ ಹರಡಿರಲಿ ಹೀಗೆಯೇ )-2
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ
(ಒಪ್ಪಿಸುವೆ ಹೂ ಹಣ್ಣು ಭಗವಂತ
ನೆಪ್ಪಿಲೆ ಹರಸುಣಗಿ ಇರಲೆಂತ
ಕರ್ಪೂರವ ಬೆಳಗುವೆ ದೇವನೇ
ತಪ್ಪದೇ ಬರಲೆನ್ನ ಗುಣವಂತ)-2
ಒಬ್ಬಳೇ ನಾನಿಲ್ಲಿ ತಬ್ಬಿಬ್ಬು ಗೊಂಡಿಹೇನ ... ಮಬ್ಬು ಹರಿಯುವುದೇನ
ಹಬ್ಬವಾಗುವುದೆನಾ

ಕಂಬದ ಮ್ಯಾಲಿನ ಗೊಂಬೆಯೇ ... ನಂಬಲೇನ ನಿನ್ನ ನಗೆಯನ್ನ
ಬಿತ್ತಿಯ ಮ್ಯಾಲಿನ ಚಿತ್ತಾರವೇ ... ಚಿತ್ತ ಗೊಟ್ಟ ಹೇಳೇ ಉತ್ತಾರವ
!-- Facebook share button Start -->