Showing posts with label Sonu Nigam Kannada Lyrics. Show all posts
Showing posts with label Sonu Nigam Kannada Lyrics. Show all posts

ಮಿಡಿವ ನಿನ್ನ -ರಾಜಧಾನಿ

ಚಿತ್ರ : ರಾಜಧಾನಿ
ಸಂಗೀತ : ಅರ್ಜುನ್ ಜನ್ಯ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯಾ ಘೋಷಾಲ್ 
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತ ... ನವಿರಾಗಿ ಏನನ್ನು ಹೇಳುತ
ನನ್ನನು ಅಪಹರಿಸಿದೆ ನೀನು...
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ 
(ಕಣ್ಣ ಮುಚ್ಚೆ ಕಾದೆ ಗೋಡೆ ... ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ... ಬಿಟ್ಟೆ ಬಿಟ್ಟೆ )
ಇಲ್ಲೇ ಎಲ್ಲೋ ನೀನು ಅವಿತಿರುವಂತೆ ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವನ
ಋತುಮಾನಕು ಬಣ್ಣ ಬಂತು ... ಇಡೀ ದಿನ ಕಾಯುತ
ಅತಿಯಾಸೆಗು ಭಾಷೆ ಬಂತು ... ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ ... ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ... ಅಪಹರಿಸಿದೆ ನೀನು ... 
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಒಂದೇ ಒಂದು ಮಾತು ನುಡಿಯದೆ ನೀನು , ಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ ಕನಸನ್ನು ದಯಪಾಲಿಸು
ಅಪರೂಪದ ನಿನ್ನ ರೂಪ ... ಸಮೀಪವೇ ಕಾದಿದೆ
ದಿನ ರಾತ್ರಿಯು ಇನ್ನು ಇದೆ ಕಥೆಯಾಗಿದೆ
ಅಂಗೈನೆ ಬೆರಳಿಂದ ಗೀರುತ ... ಮುದ್ದಾದ ಬೆಳಕನ್ನು ಬೀರುತ
ನನ್ನನು ... ಅಪಹರಿಸಿದೆ ನೀನು 

ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
!-- Facebook share button Start -->

ಏನೆಂದು ಹೆಸರಿಡಲಿ -ಅಣ್ಣ ಬಾಂಡ್

ಚಿತ್ರ : ಅಣ್ಣ ಬಾಂಡ್
ಸಂಗೀತ : ಜಯಂತ್ ಕಾಯ್ಕಿಣಿ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯ ಘೋಷಾಲ್
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಈ ಮೋಹದ ರೂವಾರಿ ನೀನಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಜಾತ್ರೆಲೂ ಸಂತೆಲೂ ನೀ ಕೈಯ್ಯ ಬಿಡದಿರು
ಆಗಾಗ ಕಣ್ಣಲ್ಲಿ ಸಂದೇಶ ಕೊಡುತಿರು
ಅದೇ ಪ್ರೀತಿ ಬೇರೆ ರೀತಿ ... ಹೇಗಂತ ಹೇಳೋದು
ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು
ಈ ಸ್ವಪ್ನದ ಸಂಚಾರ ಸಾಕಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ
ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
ಹೊತ್ತಿಲ್ಲ ಗೊತ್ತಿಲ್ಲ ಬೆನ್ನಲ್ಲೇ ಬರುವೆ ನಾ
ನೀನಿಟ್ಟ ಮುತ್ತುಂಟು ಇನ್ನೆಲ್ಲಿ ಬಡತನ
ಗಸ್ತು ಹೊಡೆವ ಚಂದ್ರ ಬಂದ ಕೇಳುತ್ತ ಮಾಮೂಲು
ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು
ನಿನ್ನಾಸೆಯು ನನ್ದೂನು ಹೌದಲ್ಲವೇ
ಇನ್ನೇತಕೆ ಬೇಜಾರು ನಾನಿಲ್ಲವೇ 

ಏನೆಂದು ಹೆಸರಿಡಲಿ ಈ ಚಂದ ಅನುಭವಕೆ
ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ
!-- Facebook share button Start -->

ಬಾನಲ್ಲಿ ಬದಲಾಗೋ - ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಚಿತ್ರ : ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಮ್ಯೂಸಿಕ್ : ಭರತ್ ಬಿ. ಜೆ
ಸಾಹಿತ್ಯ : ಸಿದ್ದು ಕೋಡಿಪುರ
ಗಾಯಕ : ಸೋನು ನಿಗಮ್ 

ಬಾನಲ್ಲಿ ಬದಲಾಗೋ ಬಣ್ಣವೆ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ

ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಯಾಕೆ ಬಳಿ ಬಂದು ಸರಿ ಮಾಡದೇ
ಗೆಳತಿ ನನ್ನ ಗೆಳತಿ .. ತೆರೆದ ಮನದ ಕಿಟಕಿ
ಕರುಣಿಸು ಪ್ರೇಮಧಾರೆ ..  ಬಯಕೆಯ ತೋರದೆ 
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ

 ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಹರಿಸೆ ಬೇಗ ಕರೆ ಮಾಡು ತಡಮಾಡದೆ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೆಮಭಾಷೆ .. ಪದಗಳ ನೋಡದೆ 
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ

ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ
!-- Facebook share button Start -->