Chotisi Asha-PART 3


3. ಎಲಿನಾ...
ಇದೊಂದು ಹಾರ್ಟ್ ಟಚ್ಚಿಂಗ್ ಸ್ಟೋರಿ.. ಆ ಪುಟ್ಟಮಗುವಿಗೆ ವಯಸ್ಸು ಬರೀ ಆರಾಗಿದ್ರೂ.. ಸಾವೇನು ಅನ್ನೋದರ ಬಗ್ಗೆ ತಿಳಿವಳಿಕೆ ಬಂದಿತ್ತು.. ಯಾಕಂದ್ರೆ ಆ ಚಿಕ್ಕವಯಸ್ಸಿನಲ್ಲೇ ಆ ಹುಡುಗಿ ಬ್ರೈನ್ ಕ್ಯಾನ್ಸರ್ ಗೆ ತುತ್ತಾಗಿತ್ತು.. ಅವಳ ಬದುಕು ತಿಂಗಳಲ್ಲಲ್ಲ.. ದಿನಗಳಲ್ಲಿ ಅಳೆಯೋ ಸ್ಟೇಜ್ ಬಂದಿತ್ತು.. ಸರಿ ತಾನು ಸತ್ತ ಮೇಲೆ ತನ್ನ ತಂದೆ ತಾಯಿ ಎಲ್ಲಿ ಒಬ್ಬಂಟಿಯಾಗಿಬಿಡುತ್ತಾರೋ ಅಂತ ಆ ಎಳೇ ಜೀವ ಯೋಚಿಸತೊಡಗಿತು.. ಅದಕ್ಕಾಗಿ ಆ ಪಾಪು ಮಾಡಿದ್ದಾದ್ರೂ ಏನು ಗೊತ್ತಾ.. ಈ ಸ್ಟೋರಿ ನೋಡಿ.. 
 


ಈ ಫೋಟೋವನ್ನ ನೋಡ್ತಿದ್ರೆ ಸಾಕು.. ಎಷ್ಟು ಮುದ್ದಾಗಿದೆ ಮಗು ಅಂತ ಎತ್ತಿ ಮುದ್ದಾಡಬೇಕು ಅಂತ ಅನ್ನಿಸುತ್ತೆ ಅಲ್ವಾ.. ಹೌದು. ಆದ್ರೆ ದುರಾದೃಷ್ಟವಶಾತ್ ಈ ಮಗುವನ್ನ ಹೆಚ್ಚು ದಿನ ಸಾಕೋ ಸೌಭಾಗ್ಯ ಈಕೆಯ ತಂದೆ ತಾಯಿಗೂ ಸಿಗಲಿಲ್ಲ.. ಬರೀ 6 ವರ್ಷದ ಎಲೆನಾ ಬ್ರೈನ್ ಕ್ಯಾನ್ಸರ್ ಗೆ ತುತ್ತಾದಳು..ಅದೀಗ ತಾನೆ ಓದಲು, ಬರೆಯಲು ಕಲೆತ ಎಲೆನಾ, ಸದಾ ಏನಾದ್ರೊಂದು ಗೀಚುತ್ತಿದ್ದಳು.. ಮಕ್ಕಳ ಬುದ್ಧಿಯಲ್ವೇ ಅಂತ ತಂದೆ ತಾಯಂದಿರೂ ಸುಮ್ಮನಾಗಿ ಬಿಡುತ್ತಿದ್ದರು..

ಪುಟ್ಟ ಹುಡುಗಿ ದಿನೇ ದಿನೇ ಕೃಶವಾದಂತೆ, ತನ್ನ ತಂದೆ ತಾಯಂದಿರ ಬಗ್ಗೆ ಚಿಂತೆ ಹೆಚ್ಚಾಯ್ತು.. ಸಾವಿನ ಮುಡಿಲಲ್ಲಿ ತಾನಿದ್ದೇನೆ ಅಂತ ಆ ಚಿಕ್ಕ ವಯಸ್ಸಿನಲ್ಲೇ ಆಕೆ ತಿಳಿದುಕೊಂಡಿದ್ದಳು.. ಕೊನೆಗೊಂದು ದಿನ ಆಕೆಯನ್ನ ಪರೀಕ್ಷಿಸಿದ ಡಾಕ್ಟರ್ ಗಳು ಇನ್ನೇನು ಇವ್ಳು ಕೆಲವು ದಿನಗಳ ಅತಿಥಿಯಂತ ಘೋಷಿಸಿ ಬಿಟ್ರು.. ಯಾಕಂದ್ರೆ ಎಲಿನಾ ಬಳಿಯಿದ್ದದ್ದು ಕೇವಲ 135 ದಿನಗಳು ಮಾತ್ರ.. ತನಗೆ ಸಾಯೋವಷ್ಟು ನೋವಾಗುತ್ತಿದ್ದರೂ , ಎಲ್ಲಿ ತನ್ನ ತಂದೆ ತಾಯಂದಿರುವ ನೊಂದು ಕೊಂಡು ಬಿಡುತ್ತಾರೋ ಅಂತ ಸಾದ ಹಸನ್ಮುಖಿಯಾಗಿರುತ್ತಿದ್ದಳು..


ಒಳ್ಳೆಯವರ ಜೀವನ ಕ್ಷಣಿಕ ಅನ್ನೋ ಹಾಗೆ. ಆಕೆಯ ವಯಸ್ಸು ಚಿಕ್ಕದಾಗಿದ್ರೂ ಮನಸ್ಸು ಪಕ್ವವಾಗಿತ್ತು.. ಇರೋವಷ್ಟು ದಿನ ತನ್ನ ತಂದೆ ತಾಯಿ ಮತ್ತು ಮುದ್ದು ತಂಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದಳು ಎಲಿನಾ.. ಕೊನೆಗೊಮ್ಮೆ ತನ್ನ ತಂದೆ ತಾಯಿಗಳನ್ನ ಅಗಲುವ ದುರ್ದಿನ ಬಂದೇ ಬಿಟ್ಟಿತು.. ತಂದೆ, ತಾಯಂದಿರು ದೇವರನ್ನ ಶಪಿಸಿದ್ದೂ ಆಯ್ತು.. ಎಲಿನಾ ತಿರುಗಿ ಬಾರದ ಲೋಕಕ್ಕೆ ಹೋದಳು...

ಆದ್ರೆ ಎಲಿನಾ ಸುಮ್ಮನೆ ಹೋಗಲಿಲ್ಲ.. ತನ್ನ ತಂದೆ ತಾಯಿಯ ನೆನಪಿನಲ್ಲಿ ತಾನು ಸದಾ ಇರಬೇಕು ಎಂಬ ತನ್ನ ಕೊನೆಯ ಇಚ್ಛೆಯಂತೆ, ಆಕೆ ಪುಟ್ಟ ಪುಟ್ಟ ಪ್ರೇಮ ಪತ್ರವನ್ನ ಬರೆದು ಬಚ್ಚಿಟ್ಟಿದ್ದಳು.. ಆಕೆ ತನ್ನ ಫ್ಯಾಮಿಲಿಯನ್ನ ಎಷ್ಟು ಪ್ರೀತಿಸುತ್ತಿದ್ದಾಳೆ ಅನ್ನೋದನ್ನ ತನ್ನ ಪತ್ರದಲ್ಲಿ ವ್ಯಕ್ತಪಡಿಸಿದ್ದಳು.. ಎಲಿನಾಳ ತಂದೆ ತಾಯಿಯರಿಗೆ ಆಶ್ಚರ್ಯ,... ಸಿಡಿ ಕೇಸಸ್, ಬುಕ್ ಶೆಲ್ಫ್ಸ್, ಡ್ರೆಸ್ ಗಳು, ಕಬಾಡ್ ಗಳು ಏನು ತೆಗೆದ್ರೂ ಅಲ್ಲಿ ಎಲಿನಾಳ ಪುಟ್ಟ ಪತ್ರ.. ಖುದ್ದು ಎಲಿನಾಳೇ ಬಂದು ಹಗ್ ಮಾಡಿಗಂತಹ ಅನುಭವ..
 



ಹೀಗೆ ತನ್ನ ಕೊನೆಯ ಆಸೆಯನ್ನ ಎಲಿನಾ ತೀರಿಸಿಕೊಂಡಳು.. ಎಲಿನಾಳ ಕೈಬರಹದ ಪತ್ರಗಳನ್ನ ನೋಡಿ ಪಾಲಕರಿಗೆ ಎಲ್ಲಿಲ್ಲದ ದುಃಖ, ಜೊತೆ ಜೊತೆಗೆ ಒಂದು ನಿರ್ಲಿಪ್ತ ಆನಂದ, ಎಲಿನಾ ನಮ್ಮನ್ನ ಅಗಲಿಲ್ಲ ಎಂಬ ಖುಷಿ.. ಕೊನೆಗೆ ಎಲಿನಾಳ ತಂದೆ ತಾಯಂದಿರು ಆಕೆ ಬರೆದ ನೂರಾರು ಪತ್ರಗಳನ್ನ ಒಟ್ಟಾರೆ ಸೇರಿಸಿ ನೋಟ್ ಲೆಫ್ಟ್ ಬಿಹೈಂಡ್ ( NOTES LEFT BEHIND ) ಎಂಬ ಪುಸ್ತಕ ಹೊರತಂದಿದ್ದಾರೆ.. ಆ ಪುಸ್ತಕ ಹಾಟ್ ಕೇಕ್ ನಂತೆ ಖರ್ಚಾಗಿದ್ದು ಇತಿಹಾಸ,.. ಪುಸ್ತಕದಿಂದ ಬಂದ ಹಣವನ್ನ ಬ್ರೈನ್ ಕ್ಯಾನ್ಸರ್ ಇರುವ ಮಕ್ಕಳಿಗಾಗಿ ವಿನಿಯೋಗಿಸಲಾಗುತ್ತಿದೆ.. ಸಾವಿನಲ್ಲೂ ಸಾರ್ಥಕತೆ ಅಂದ್ರೆ ಇದೇ ಅಲ್ವಾ...


ಈಗ ಹೇಳಿ ನೀವೆಷ್ಟು ಬಾರಿ ನಿಮ್ಮ ಪ್ರೀತಿಯನ್ನ ನಿಮ್ಮ ತಂದೆ ತಾಯಂದಿರಿಗೆ ವ್ಯಕ್ತಪಡಿಸಿದ್ದೀರಾ.. ಇಲ್ಲಾ ಅಂತದಾರೇ ಪ್ಲೀಸ್ ಹೇಳಿ..ಯಾಕಂದ್ರೆ ಕಲ್ ಹೋ ನ ಹೋ..
!-- Facebook share button Start -->

Real Life Heroes


ರಿಯಲ್ ಲೈಫ್ ಹೀರೋಸ್.....
ಸೂಪರ್ ಹೀರೋಸ್ ಅಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಮತ್ತು ನಮ್ಮ ಹನುಮಾನ್. ತಮ್ಮ ಸೂಪರ್ಬ್ ಎಬಿಲಿಟಿಸ್ ಮೂಲಕ, ತುಂಬಾನ್ ಫಿಕ್ಷನ್ ಮೂಲಕ ಸಾಧ್ಯವೇ ಇಲ್ಲಾ ಅನ್ನೋದನ್ನ ಕ್ಷಣಮಾತ್ರದಲ್ಲಿ ಮಾಡಿತೋರಿಸುತ್ತಾರೆ. ಆದ್ರೆ ಅವರೆಲ್ಲರೂ ಇಮ್ಯಾಜಿನರಿ ಮತ್ತು ರೀಲ್ ಲೈಫ್ ಹೀರೋಸ್ ಆದ್ರೆ ಅಂಥದ್ದೇ ಅದ್ಭುತ ಅಸಾಧಾರಣಗಳನ್ನ ಮಾಡಿತೋರಿಸುವ ರಿಯಲ್ ಲೈಫ್ ಸೂಪರ್ ಹೀರೋಸ್ ಬಗ್ಗೆ ಗೋತ್ತಾ...
ಇಂಪಾಸಿಬಲ್ ಇಟ್ ಸೆಲ್ಫ್ ಸೇಸ್ ಆಯಮ್ ಪಾಸಿಬಲ್ ( Impossible itself says i m possible ) ಅನ್ನೋ ಮಾತಿದೆ. ಅದಕ್ಕೆ ಉತ್ತಮ ಉದಾಹರಣೆಯಂತಿದ್ದಾರೆ ಈ ರಿಯಲ್ ಹೀರೋಸ್. ಇದು ಫಿಕ್ಷನ್ ಅಲ್ಲಾ,

!-- Facebook share button Start -->

CHOTISI AASHA PART-2...!

೨. ಬ್ರೆಂಡನ್ ಫೋಸ್ಟರ್
ಇದೊಂದು ಕಿನ್ನರನ ಕಥೆ. ೧೧ ವರ್ಷದ ಬ್ರೆಂಡನ್ ಗೆ ತಾನೊಬ್ಬ ಕಿನ್ನರನಾಗಬೇಕು ಎಂಬ ಮಹದಾಸೆ... ಯಾಕಪ್ಪ ಹಾಗೆ ಅಂದ್ರೆ, ನಾನು ಕಿನ್ನರನಾಗಿ ಮನೆಯಿಲ್ಲದವರಿಗೆ ಮನೆಕೊಡುತ್ತೇನೆ...ಅವ್ರು  ತುತ್ತು ಅನ್ನಕ್ಕಾಗಿ ಪರದಾಡದಂತೆ ನೋಡಿಕೊಳ್ಳುತ್ತೇನೆ ಅಂತ ಮುದ್ದು ಮುದ್ದಾಗಿ ಹೇಳುತ್ತಿದ್ದ. ಮತ್ತದು ಅವ್ನ ಕೊನೆಯಾಸೆ ಕೂಡ ಆಗಿತ್ತು.  ಯಾಕಂದ್ರೆ  ಆ ಪುಟ್ಟಪೋರ ಲುಕುಮಿಯಾಗೆ ತುತ್ತಾಗಿದ್ದ .
ಹೀಗೆ ಮುದ್ದು ಮುದ್ದಾಗಿರುವ ಹುಡುಗನ ಹೆಸರು ಬ್ರೆಂಡನ್ ಫೋಸ್ಟರ್ ಅಂತ.  ವಯಸ್ಸು ಬರೀ ಹನ್ನೊಂದು ಆಗಿದ್ರೂ, ಸಾವಿಗೆ ಹತ್ತಿರವಾಗಿಬಿಟ್ಟಿದ್ದ. ಮಾನವನಾಗಿ ಹುಟ್ಟಿದ ಮೇಲೆ ಸಾವು ಬಂದೆ ಬರುತ್ತೇ ನಿಜ, ಆದ್ರೆ ಬ್ರೆಂಡನ್ ಗೆ ಇದು ಬಲು ಬೇಗ ಬಂದಿತ್ತು. ವಯಸ್ಸು  ಚಿಕ್ಕದಾದರು, ಮನಸ್ಸು ದೊಡ್ಡದು. ಸದಾ ಬಡವರನ್ನ ನಿರ್ಗತಿಕರನ್ನ ಕಂಡ್ರೆ ಸಾಕು, ಆತನ ಮನ ಕರಗುತ್ತಿತ್ತು.
ಅಮ್ಮನಿಗೆ ಮಗನ ಸಾವಿನ ಬಗ್ಗೆ ತಿಳಿದಿತ್ತು... ಹೀಗಾಗಿ ಸತ್ತವರೆಲ್ಲ ಏಂಜೆಲ್ ಗಳಾಗುತ್ತರಪ್ಪ ಅಂತ ಕಣ್ಣಿರಾಗುತ್ತಿದ್ದಳು. ಬ್ರೆಂಡನ್ ಗೆ ತಾನು ಏಂಜೆಲ್ ಆಗಬೇಕೆಂಬ ಆಸೆ ಬಲವಾಗತೊಡಗಿತು.. ಮಗು ಹಾಗಂದಾಗಲೆಲ್ಲ ತಾಯಿಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ಬ್ರೆಂಡನ್ ಗೆ ಬಡವರಿಗಾಗಿ ಏನಾದ್ರು ಮಾಡಬೇಕು ಅನ್ನೋ ಆಸೆ ಹೆಚ್ಚಾಗತೊಡಗಿತು. ಪುಟ್ಟ ಪೋರನ ಈ ಸ್ಟೋರಿಯನ್ನ ಲೋಕಲ್ ಚಾನೆಲ್ ಪ್ರಸರ ಮಾಡಿತು. ಬ್ರೆಂಡನ್ ನ ಮಾತು, ನಡತೆ ಎಷ್ಟೋ ಜನರನ್ನ ಇಂಪ್ರೆಸ್ ಮಾಡಿತು. ಹಲವರು ಬ್ರೆಂಡನ್ ನ ಮಹತ್ತರ ಕೊನೆಯಾಸೆಯನ್ನ ತೀರಿಸಲೇ ಬೇಕು ಅಂತ ಪಣತೊಟ್ಟರು. ಕೆಲವೇ ದಿನಗಳಲ್ಲಿ ಬ್ರೆಂಡನ್ ನ ಕೊನೆಯಸೆ ತೀರುವ ಕಾಲ ಹತ್ತಿರವಾಯ್ತು . ಜನರ ಸಹಕಾರದಿಂದ ಬ್ರೆಂಡನ್ ನ ಹೆಸರಿನಲ್ಲಿ ಊರಲ್ಲೆಲ್ಲ ಅನ್ನದಾಸೋಹಗಳು ನಡೆದವು . 
ಬ್ರೆಂಡನ್ ಅದ್ಯಾವ ಪರಿ ಸುದ್ದಿ ಮಾಡಿದನೆಂದರೆ ವಾಶಿಂಗ್ ಟನ್ ನಿಂದಲೂ ಇತನಿಗೆ ಸಹಾಯ ದೊರೆಯಲಾರಂಭಿಸಿತು . ನೋಡ ನೋಡುತ್ತಿದ್ದಂತೆ ಬ್ರೆಂಡನ್ ಅಂತಾರಾಷ್ಟ್ರೀಯ ಪ್ರಖ್ಯಾತಿ ಪಡೆದ . ಪ್ರಪಂಚದಾದ್ಯಂತ ಬ್ರೆಂಡನ್ ಹೆಸರಿನಲ್ಲಿ ಚಾರಿಟಿಗಳು, ಎನ್.ಜಿ. ಓ ಗಳು ಶುರುವಾದವು. ಹೀಗೆ ಬ್ರೆಂಡನ್ ಬದುಕಿದ್ದಾಗಲೇ ಬಡವರ ಪಾಲಿಗೆ ಏಂಜೆಲ್ ಆಗಿಬಿಟ್ಟ.
ಆದ್ರೆ ದುರದೃಷ್ಟವಶಾತ್ , ದಿನಕಳೆದಂತೆ ಆತ ಕೃಶ ನಾದ . ಕೊನೆಗೆ ನವೆಂಬರ್ ೨೧,೨೦೦೮ ರಂದು ಕೊನೆಯುಸಿರೆಳೆದ ... ಈ ಪುಟ್ಟ ಪೋರ ಆತನ ತಾಯಿ ಮಾತಿನಂತೆ ಕಿನ್ನರನಾಗಿರಬಹುದೇನೋ....!


 Mamata Patil,


!-- Facebook share button Start -->