ರಿಯಲ್ ಲೈಫ್ ಹೀರೋಸ್.....
ಸೂಪರ್ ಹೀರೋಸ್
ಅಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್
ಮತ್ತು ನಮ್ಮ ಹನುಮಾನ್. ತಮ್ಮ ಸೂಪರ್ಬ್ ಎಬಿಲಿಟಿಸ್ ಮೂಲಕ, ತುಂಬಾನ್
ಫಿಕ್ಷನ್ ಮೂಲಕ ಸಾಧ್ಯವೇ ಇಲ್ಲಾ ಅನ್ನೋದನ್ನ ಕ್ಷಣಮಾತ್ರದಲ್ಲಿ ಮಾಡಿತೋರಿಸುತ್ತಾರೆ. ಆದ್ರೆ ಅವರೆಲ್ಲರೂ ಇಮ್ಯಾಜಿನರಿ
ಮತ್ತು ರೀಲ್ ಲೈಫ್ ಹೀರೋಸ್ ಆದ್ರೆ ಅಂಥದ್ದೇ
ಅದ್ಭುತ ಅಸಾಧಾರಣಗಳನ್ನ ಮಾಡಿತೋರಿಸುವ ರಿಯಲ್ ಲೈಫ್ ಸೂಪರ್ ಹೀರೋಸ್ ಬಗ್ಗೆ ಗೋತ್ತಾ...
ಈ ಹುಡುಗನಿಂದ ಕಲಿಯೋದು ತುಂಬಾನೆ ಇದೆ. ಹೀಗೆ
ಎಲ್ಲರಂತೆ ಆಟವಾಡುತ್ತಿರುವ ಇವನ ಹೆಸ್ರು ಬೆನ್ ಅಂಡರ್ ವುಡ್. ಈತನಿಗೆ ಎರಡೂ ಕಣ್ಣುಗಳಿಲ್ಲ ಅಂತಂದ್ರೆ ಅಚ್ಚರಿಯಾಗುತ್ತೆ. 3 ವರ್ಷದವನಿದ್ದಾಗಲೇ ಕ್ಯಾನ್ಸರ್ ನಿಂದಾಗಿ ಈತನ ಕಣ್ಣುಗಳನ್ನ
ತೆಗೆಯಲಾಗಿತ್ತು.
ಆದ್ರೂ ಕೂಡ ಅಂದಿನಿಂದ ಆತ ಅಂಜದೆ, ಅಳುಕದೆ, ಧೃತಿಗೆಡದೆ ನಾರ್ಮಲ್ ಲೈಫನ್ನ ಲೀಡ್ ಮಾಡಿದ್ದಾನೆ. ಬರೀ ಶಬ್ಧವನ್ನ ಕೇಳಿಸಿಕೊಂಡೇ ರೋಡ್ ಕ್ರಾಸ್ ಮಾಡಬಲ್ಲ, ಬಾಸ್ಕೆಟ್ ಬಾಲ್ ಆಡಬಲ್ಲ. ಸೈಕಲ್ ರೈಡಿಂಗ್ ಅಂತೂ ಈ ಪೋರನಿಗೆ ನೀರು ಕುಡಿದಷ್ಟೇ ಸುಲಭ. ಬೆನ್ ಅಂಡರ್ ವುಡ್ ವೈದ್ಯಲೋಕಕ್ಕೊಂದು ಸವಾಲಾಗಿ ಪರಿಣಮಿಸಿದ್ದ. ಯಾಕಂದ್ರೆ ಕಣ್ಣಿದೆ ಹ್ಯಾಗೆ ಈತ ಎಲ್ಲ ಕೆಲಸಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಎನ್ನುವುದೇ ಎಲ್ಲರಿಗೂ ಅಚ್ಚರಿ.
ಹಲವು ಬಾರಿ ಈತನನ್ನ ವೈದ್ಯಕೀಯ ತಪಾಸಣೆಗೆ
ಒಳಪಡಿಸಲಾಗಿತ್ತು. ಎಲ್ಲಾ ಟೆಸ್ಟ್ ಗಳು ಈತನಿಗೆ ಕಣ್ಣೀಲ್ಲಾ ಎಂದೇ ಹೇಳುತ್ತಿದ್ದವು. ಆದ್ರೂ ಕೂಡ ಬೆನ್ ಇಸ್ ಗ್ರೇಟ್. ಕಣ್ಣುಕಾಣದವರ ಪಾಲಿಗೆ ರೋಲ್ ಮಾಡಲ್ ಆಗಿದ್ದ ಬೆನ್ ಕ್ಯಾನ್ಸರ್
ನಂಜು ವ್ಯಾಪಿಸಿದ್ದರಿಂದ ಇಹಲೋಕ ತ್ಯಜಿಸಬೇಕಾಯಿತು. ವಿ ಮಿಸ್ ಯು ಬೆನ್..
|