4. ಬ್ರೆಟ್ ಮೇರಿ ಕ್ರಿಶ್ಚಿಯನ್
ಈಕೆ ಪ್ರಿಟಿ ಗರ್ಲ್. ಅದ್ರಲ್ಲೂ ತನ್ನ ಟೀನ್ ಏಜ್ ನಲ್ಲಿ ಲೈಫನ್ನ ತುಂಬಾನೇ ಎಂಜಾಯ್ ಮಾಡುತ್ತಿದ್ದಳು.. ಎಲ್ಲಾ 15 ವರ್ಷದ ಹುಡುಗಿಯರಂತೆ ಈಕೆಗೂ ಹಾಡುವ, ಕುಣಿಯುವ ಹುಚ್ಚಿತ್ತು.. ಆದ್ರೆ ದೇವ್ರಿಗೆ ಈಕೆಯ ಖುಷಿ ಸಹಿಸಲಾಗಲಿಲ್ಲ ಅಂತ ಅನ್ನಿಸುತ್ತೆ.. ಬ್ರೆಟ್ ಮೇರಿ ಕ್ರಿಶ್ಚಿಯನ್ ಲುಕುಮಿಯಾಗೆ ತುತ್ತಾದಳು.. ಬದುಕುವ ಆಸೆ ಕೈಬಿಟ್ಟಳು.. ಆದ್ರೆ ಆಕೆಯ ಕೊನೆಯಾಸೆ ಮಾತ್ರ ಆಕೆಯನ್ನ ಸದಾ ಕಾಡುತ್ತಲೇ ಇತ್ತು.. ಡಾನ್ಸ್ ಮಾಡಬೇಕು ಅಂತ ಸದಾ ಆಕೆಯ ಮನಸ್ಸು ತುಡಿಯುತ್ತಿತ್ತು.. ಸರಿ, ಆಕೆಯ ಪೋಷಕರು, ಸ್ನೇಹಿತರು ಮೇರಿಯ ಕೊನೆಯಾಸೆ ತೀರಿಸಲು ಸಿದ್ಧರಾದ್ರು.. ಮೇರಿಯ ಕ್ಲೋಸ್ ಫ್ರೆಂಡ್ ಆಕೆಗಾಗಿ ಚೈನ್ ತಂದ,. ಡಾನ್ಸ್ ಗಾಗಿ ಸ್ಟೇಜ್ ರೆಡಿ ಮಾಡಿದ..
ಪಿಂಕ್ ಡ್ರೆಸ್ ನಲ್ಲಿ ಬಂದ ಮೇರಿ ಪುಟ್ಟ ಏಂಜಲ್ ನಂತೆ ಕಾಣುತ್ತಿದ್ದಳು.. ತೀರಾ ಸೋತವಳಂತೆ
ಕಾಣುತ್ತಿದ್ದ ಮೇರಿಯ ಮುಖದಲ್ಲಿ ಅವತ್ತೇನೋ ಹುಮ್ಮಸ್ಸು.. ಹೀಗೆ ತನ್ನ ಆಸೆಯನ್ನ ತೀರಿಸಿಕೊಂಡಳು.. ಖುಷಿಯಿಂದ ಡಾನ್ಸ್
ಮಾಡಿದಳು.. ಆದದ ಮೂರೆ ದಿನದಲ್ಲಿ ಕೊನೆಯುಸಿರೆಳೆದಳು..