Chotisi Asha-PART 3


3. ಎಲಿನಾ...
ಇದೊಂದು ಹಾರ್ಟ್ ಟಚ್ಚಿಂಗ್ ಸ್ಟೋರಿ.. ಆ ಪುಟ್ಟಮಗುವಿಗೆ ವಯಸ್ಸು ಬರೀ ಆರಾಗಿದ್ರೂ.. ಸಾವೇನು ಅನ್ನೋದರ ಬಗ್ಗೆ ತಿಳಿವಳಿಕೆ ಬಂದಿತ್ತು.. ಯಾಕಂದ್ರೆ ಆ ಚಿಕ್ಕವಯಸ್ಸಿನಲ್ಲೇ ಆ ಹುಡುಗಿ ಬ್ರೈನ್ ಕ್ಯಾನ್ಸರ್ ಗೆ ತುತ್ತಾಗಿತ್ತು.. ಅವಳ ಬದುಕು ತಿಂಗಳಲ್ಲಲ್ಲ.. ದಿನಗಳಲ್ಲಿ ಅಳೆಯೋ ಸ್ಟೇಜ್ ಬಂದಿತ್ತು.. ಸರಿ ತಾನು ಸತ್ತ ಮೇಲೆ ತನ್ನ ತಂದೆ ತಾಯಿ ಎಲ್ಲಿ ಒಬ್ಬಂಟಿಯಾಗಿಬಿಡುತ್ತಾರೋ ಅಂತ ಆ ಎಳೇ ಜೀವ ಯೋಚಿಸತೊಡಗಿತು.. ಅದಕ್ಕಾಗಿ ಆ ಪಾಪು ಮಾಡಿದ್ದಾದ್ರೂ ಏನು ಗೊತ್ತಾ.. ಈ ಸ್ಟೋರಿ ನೋಡಿ.. 
 


ಈ ಫೋಟೋವನ್ನ ನೋಡ್ತಿದ್ರೆ ಸಾಕು.. ಎಷ್ಟು ಮುದ್ದಾಗಿದೆ ಮಗು ಅಂತ ಎತ್ತಿ ಮುದ್ದಾಡಬೇಕು ಅಂತ ಅನ್ನಿಸುತ್ತೆ ಅಲ್ವಾ.. ಹೌದು. ಆದ್ರೆ ದುರಾದೃಷ್ಟವಶಾತ್ ಈ ಮಗುವನ್ನ ಹೆಚ್ಚು ದಿನ ಸಾಕೋ ಸೌಭಾಗ್ಯ ಈಕೆಯ ತಂದೆ ತಾಯಿಗೂ ಸಿಗಲಿಲ್ಲ.. ಬರೀ 6 ವರ್ಷದ ಎಲೆನಾ ಬ್ರೈನ್ ಕ್ಯಾನ್ಸರ್ ಗೆ ತುತ್ತಾದಳು..ಅದೀಗ ತಾನೆ ಓದಲು, ಬರೆಯಲು ಕಲೆತ ಎಲೆನಾ, ಸದಾ ಏನಾದ್ರೊಂದು ಗೀಚುತ್ತಿದ್ದಳು.. ಮಕ್ಕಳ ಬುದ್ಧಿಯಲ್ವೇ ಅಂತ ತಂದೆ ತಾಯಂದಿರೂ ಸುಮ್ಮನಾಗಿ ಬಿಡುತ್ತಿದ್ದರು..

ಪುಟ್ಟ ಹುಡುಗಿ ದಿನೇ ದಿನೇ ಕೃಶವಾದಂತೆ, ತನ್ನ ತಂದೆ ತಾಯಂದಿರ ಬಗ್ಗೆ ಚಿಂತೆ ಹೆಚ್ಚಾಯ್ತು.. ಸಾವಿನ ಮುಡಿಲಲ್ಲಿ ತಾನಿದ್ದೇನೆ ಅಂತ ಆ ಚಿಕ್ಕ ವಯಸ್ಸಿನಲ್ಲೇ ಆಕೆ ತಿಳಿದುಕೊಂಡಿದ್ದಳು.. ಕೊನೆಗೊಂದು ದಿನ ಆಕೆಯನ್ನ ಪರೀಕ್ಷಿಸಿದ ಡಾಕ್ಟರ್ ಗಳು ಇನ್ನೇನು ಇವ್ಳು ಕೆಲವು ದಿನಗಳ ಅತಿಥಿಯಂತ ಘೋಷಿಸಿ ಬಿಟ್ರು.. ಯಾಕಂದ್ರೆ ಎಲಿನಾ ಬಳಿಯಿದ್ದದ್ದು ಕೇವಲ 135 ದಿನಗಳು ಮಾತ್ರ.. ತನಗೆ ಸಾಯೋವಷ್ಟು ನೋವಾಗುತ್ತಿದ್ದರೂ , ಎಲ್ಲಿ ತನ್ನ ತಂದೆ ತಾಯಂದಿರುವ ನೊಂದು ಕೊಂಡು ಬಿಡುತ್ತಾರೋ ಅಂತ ಸಾದ ಹಸನ್ಮುಖಿಯಾಗಿರುತ್ತಿದ್ದಳು..


ಒಳ್ಳೆಯವರ ಜೀವನ ಕ್ಷಣಿಕ ಅನ್ನೋ ಹಾಗೆ. ಆಕೆಯ ವಯಸ್ಸು ಚಿಕ್ಕದಾಗಿದ್ರೂ ಮನಸ್ಸು ಪಕ್ವವಾಗಿತ್ತು.. ಇರೋವಷ್ಟು ದಿನ ತನ್ನ ತಂದೆ ತಾಯಿ ಮತ್ತು ಮುದ್ದು ತಂಗಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದಳು ಎಲಿನಾ.. ಕೊನೆಗೊಮ್ಮೆ ತನ್ನ ತಂದೆ ತಾಯಿಗಳನ್ನ ಅಗಲುವ ದುರ್ದಿನ ಬಂದೇ ಬಿಟ್ಟಿತು.. ತಂದೆ, ತಾಯಂದಿರು ದೇವರನ್ನ ಶಪಿಸಿದ್ದೂ ಆಯ್ತು.. ಎಲಿನಾ ತಿರುಗಿ ಬಾರದ ಲೋಕಕ್ಕೆ ಹೋದಳು...

ಆದ್ರೆ ಎಲಿನಾ ಸುಮ್ಮನೆ ಹೋಗಲಿಲ್ಲ.. ತನ್ನ ತಂದೆ ತಾಯಿಯ ನೆನಪಿನಲ್ಲಿ ತಾನು ಸದಾ ಇರಬೇಕು ಎಂಬ ತನ್ನ ಕೊನೆಯ ಇಚ್ಛೆಯಂತೆ, ಆಕೆ ಪುಟ್ಟ ಪುಟ್ಟ ಪ್ರೇಮ ಪತ್ರವನ್ನ ಬರೆದು ಬಚ್ಚಿಟ್ಟಿದ್ದಳು.. ಆಕೆ ತನ್ನ ಫ್ಯಾಮಿಲಿಯನ್ನ ಎಷ್ಟು ಪ್ರೀತಿಸುತ್ತಿದ್ದಾಳೆ ಅನ್ನೋದನ್ನ ತನ್ನ ಪತ್ರದಲ್ಲಿ ವ್ಯಕ್ತಪಡಿಸಿದ್ದಳು.. ಎಲಿನಾಳ ತಂದೆ ತಾಯಿಯರಿಗೆ ಆಶ್ಚರ್ಯ,... ಸಿಡಿ ಕೇಸಸ್, ಬುಕ್ ಶೆಲ್ಫ್ಸ್, ಡ್ರೆಸ್ ಗಳು, ಕಬಾಡ್ ಗಳು ಏನು ತೆಗೆದ್ರೂ ಅಲ್ಲಿ ಎಲಿನಾಳ ಪುಟ್ಟ ಪತ್ರ.. ಖುದ್ದು ಎಲಿನಾಳೇ ಬಂದು ಹಗ್ ಮಾಡಿಗಂತಹ ಅನುಭವ..
 



ಹೀಗೆ ತನ್ನ ಕೊನೆಯ ಆಸೆಯನ್ನ ಎಲಿನಾ ತೀರಿಸಿಕೊಂಡಳು.. ಎಲಿನಾಳ ಕೈಬರಹದ ಪತ್ರಗಳನ್ನ ನೋಡಿ ಪಾಲಕರಿಗೆ ಎಲ್ಲಿಲ್ಲದ ದುಃಖ, ಜೊತೆ ಜೊತೆಗೆ ಒಂದು ನಿರ್ಲಿಪ್ತ ಆನಂದ, ಎಲಿನಾ ನಮ್ಮನ್ನ ಅಗಲಿಲ್ಲ ಎಂಬ ಖುಷಿ.. ಕೊನೆಗೆ ಎಲಿನಾಳ ತಂದೆ ತಾಯಂದಿರು ಆಕೆ ಬರೆದ ನೂರಾರು ಪತ್ರಗಳನ್ನ ಒಟ್ಟಾರೆ ಸೇರಿಸಿ ನೋಟ್ ಲೆಫ್ಟ್ ಬಿಹೈಂಡ್ ( NOTES LEFT BEHIND ) ಎಂಬ ಪುಸ್ತಕ ಹೊರತಂದಿದ್ದಾರೆ.. ಆ ಪುಸ್ತಕ ಹಾಟ್ ಕೇಕ್ ನಂತೆ ಖರ್ಚಾಗಿದ್ದು ಇತಿಹಾಸ,.. ಪುಸ್ತಕದಿಂದ ಬಂದ ಹಣವನ್ನ ಬ್ರೈನ್ ಕ್ಯಾನ್ಸರ್ ಇರುವ ಮಕ್ಕಳಿಗಾಗಿ ವಿನಿಯೋಗಿಸಲಾಗುತ್ತಿದೆ.. ಸಾವಿನಲ್ಲೂ ಸಾರ್ಥಕತೆ ಅಂದ್ರೆ ಇದೇ ಅಲ್ವಾ...


ಈಗ ಹೇಳಿ ನೀವೆಷ್ಟು ಬಾರಿ ನಿಮ್ಮ ಪ್ರೀತಿಯನ್ನ ನಿಮ್ಮ ತಂದೆ ತಾಯಂದಿರಿಗೆ ವ್ಯಕ್ತಪಡಿಸಿದ್ದೀರಾ.. ಇಲ್ಲಾ ಅಂತದಾರೇ ಪ್ಲೀಸ್ ಹೇಳಿ..ಯಾಕಂದ್ರೆ ಕಲ್ ಹೋ ನ ಹೋ..
!-- Facebook share button Start -->