Deadliest Creatures- STONE FISH


ಇನ್ನು ಹತ್ತು ಜನ್ಮ ಎತ್ತಿದ್ರೂನು ಇದು ಬ್ಯೂಟಿ ಕಾಂಟೆಸ್ಟನ್ನ ವಿನ್ನಾಗಲ್ಲ. ನೋಡೋಕೆ ಕುರೂಪಿಯಾಗಿರೋ ಈ ಸ್ಟೋನ್ ಫಿಶ್ ನ ಗುಣಾನು ಇದರ ಮುಖದಶ್ಟೇ ಕುರೂಪಿ. 

ಬಲು ಚಾಣಾಕ್ಷವಾಗಿರೋ ಸ್ಟೋನ್ ಫಿಶ್ ತನ್ನಂತೆ ಇರುವ ಕಲ್ಲಿನ ಹತ್ರ ಬಚ್ಚಿಟ್ಟುಕೊಂಡು ಯಾಮಾರಿಸಿ ಬೇರೆ ಜೀವಿಗಳನ್ನ ಬೇಟೆಯಾಡುತ್ತೆ. ಫೆಸಿಫಿಕ್, ಭಾರತದ ಸಮುದ್ರಗಳು, ಕೆಂಪು ಸಮುದ್ರ ದಂತಹ ಸುಂದರ ತಾಣಗಳಲ್ಲಿ ಇಂತಹ ಕರೂಪಿ ಮತ್ತು ಭಯಾನಕ ಫಿಶ್ ಗಳು ಕೂಡ ಇರುತ್ತವೆ ಅನ್ನೋದು ನೆನಪಿರಲಿ. 


ಈ ಸ್ಟೋನ್ ಫಿಶ್ ಟಾಪ್ ಪಾಯ್ಸನಸ್ ಫಿಶ್ ನ ಸ್ಥಾನ ತನ್ನದಾಗಿಸಿಕೊಂಡಿದೆ.
!-- Facebook share button Start -->

Deadliest Creatures- The Deathstalker Scorpion..!!!

ಮಾತಾಡಿದ್ರೇ ಚೇಳು ಕುಟುಕಿದಂಗಿರುತ್ತೆ ಅಂತಾರಲ್ಲ. ಆದ್ರೆ ಈ ಚೇಳು ಕುಟುಕಿದ್ರೆ ಮಾತೆ ಬರೋದಿಲ್ಲಾ ಸೀದಾ ಸ್ವರ್ಗಕ್ಕೆ ಫ್ರೀ ಟಿಕೇಟ್. ಸಾಮಾನ್ಯವಾಗಿ ಚೇಳುಗಳು ಮನುಶ್ಯರಿಗೆ ಜೀವಹಾನಿ ಮಾಡೊದಿಲ್ಲಾ ಎನ್ನುವುದು ನಂಬಿಕೆ. ಆದ್ರೆ ಈ ಚೇಳು ಸಾಮಾನ್ಯದಲ್ಲ. ಮಕ್ಕಳಿಗೆ ವಯಸ್ಸಾದವರಿಗೆ ಅಶ್ಟೇ ಯಾಕೆ ಸದೃಡವಾಗಿದ್ದವರ ಜೀವತೋಗೆದ ಅಪಕೀರ್ತಿ ಈ ಡೆತ್ ಸ್ಟಾರ್ಕರ್ ಚೇಳಿಗೆ ಸಲ್ಲುತ್ತೆ. 


ಸದ್ಯ ಈ ಚೇಳಿನ ಕಾಟ ನಮ್ಮಲ್ಲಿಲ್ಲ. ಈದು ಬರೀ ಉತ್ತರ ಆಫ್ರೀಕಾದಲ್ಲಿ ಕಂಡು ಬರುತ್ತೆ. ಇದನ್ನ ಕೇಳಿ ನಾವು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಇಂದಿನ ನಮ್ಮ ಕೌಂಟ್ ಡೈನ್ ನಲ್ಲಿ ದಿ ಟಾಪ್ ಪಾಯ್ಸನಸ್ ಸ್ಕಾರ್ಪಿಯನ್ ಅವಾರ್ಡ್ ಗೋಸ್ ಟು ದಿ ಡೆತ್ ಸ್ಟ್ರಾಕರ್ ಸ್ಕಾರ್ಪಿಯನ್.

!-- Facebook share button Start -->

Deadliest Creatures- Blue Ringed Octopus!!

ತುಂಬಾನೆ ಚಿಕ್ಕದು, ಬರಿ ಗಾಲ್ಫ್ ಬಾಲ್ ನ ಸೈಜಿನಲ್ಲಿರುವ ಈ ಬ್ಲೂ ರಿಂಗಡ್ ಆಕ್ಟೋಪಸ್, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೋಡ್ಡದು ಅನ್ನೋಹಾಗೆ, ನೋಡೊಕೆ ಇಶ್ಟೇ ಇಶ್ಟಿದ್ರೂ ವಿಶ ಇರೋದು ಮಾತ್ರ 26 ಜನರನ್ನ ಒಂದೇ ಏಟಿಗೆ ಕೊಲ್ಲೋವಶ್ಟು. ಇದನ್ನೇ ಕೇಳಿ ಹೌಹಾರಿದ್ರಾ. ವೈಟ್ ಅ ಮಿನಟ್ ಹೇದ್ರೋಕೆ ಇನ್ನೂ ಒಂದು ವಿಶಯ ಇದೇ. ಅದೆನೆಂದ್ರೆ ಈ ಆಕ್ಟೋಪಸ್ ನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಸೇರಿದ್ರೂ ಏನೂ ಉಪಯೋಗವಿಲ್ಲ. ಯಾಕೆಂದ್ರೆ ಇದರ ವಿಶಕ್ಕೆ ಇನ್ನೂ ಮದ್ದೇ ಕಂಡುಹಿಡಿದಿಲ್ಲಾ.

 ಈಗ ಏನಪ್ಪಾ ಮಾಡೋದು ಅಂತ ಚಿಂತಿಸಬೇಡಿ ಯಾಕೆಂದ್ರೆ ಇದಿರೋದು ಜಪಾನ್ ಮತ್ತು ಆಶ್ಟರೇಲಿಯಾದ ಸಮುದ್ರಗಳಲ್ಲಿ ಮಾತ್ರ. ಸೋ ಫ್ರೇಂಡ್ಸ , ನೀವು ಅಂದುಕೊಂಡ ಹಾಗೆನೆ ದಿ ಟಾಪ್ ಫೋರ್ ಪಾಯ್ಸನಸ್ ಆಕ್ಟೋಪಸ್ ಅವಾರ್ಡ್ ಗೋಸ್ ಟು ಬ್ಲೂ ರಿಂಗಡ್ ಆಕ್ಟೋಪಸ್.


!-- Facebook share button Start -->

Deadliest Creatures-Marbled Cone Snail.

ಅಯ್ಯೋ ಎಶ್ಟು ಮುದ್ದಾಗಿದೆ ಈ ಮೆರಗುಗಲ್ಲು ಅಂತೇನಾದ್ರು ಈ ಕಲ್ಲನ್ನ ಕೈಗೆತ್ತಿಕೊಂಡ್ರೋ ಈ ಲೋಕದಿಂದಾನೆ ನಿಮ್ಮನ್ನ ಎತ್ತಿಬಿಡುತ್ತೆ ಈ ಮಾರ್ಬಲ್ ಕೋನ್ ಸ್ನೇಲ್. ಹೌದು, ಇದರ ಒಂದು ತೊಟ್ಟು ವಿಶ ಈಸಿಯಾಗಿ ಇಪ್ಪತ್ತು ಜನರನ್ನ ಇಹಲೋಕಕ್ಕೆ ಕಳಿಸ ಬಹುದು.

 ಉಪ್ಪುನೀರಲ್ಲಿ ಸಿಗುವ ಕಲ್ಲಿನಂಗೆ ಕಾಣುವ ಈ ಸ್ನೇಲ್ ತನ್ನ ಆಹಾರಕ್ಕಾಗಿ ಹೀಗೆ ವೇಶ ಬದಲಿಸಿಕೊಂಡಿರುತ್ತದೆ. ಇದರ ವಿಶ ನಿಧಾನವಾಗಿ ದೇಹದಲ್ಲೆಲ್ಲಾ ಆವರಿಸಿಕೊಳ್ಳುತ್ತೆ. ದೇಹ ಊದಿಕೊಳ್ಳುತ್ತೆ. ವಿಪರೀತ ನೋವಾಗುತ್ತೆ ಕಲವರಿಗೆ ಪಾರ್ಶ್ವವಾಯು ಕೂಡ ಬರಬಹುದು ಆದ್ರೆ ಎಲ್ಲಾರಿಗೆ ಸಾವು ಮಾತ್ರ ನಿಶ್ಚಿತ.


 ಈಗಾಗಲೇ ಇದರ ವಿಶಕ್ಕೆ 30 ಮಂದಿ ಬಲಿಯಾಗಿದ್ದಾರೆ. ಸೋ ದಿ ಟಾಪ್ poisonous ಸ್ನೇಲ್ Award goes to Marbled cone snail.

!-- Facebook share button Start -->

Deadliest Creatures- Box Jelly Fish

ನಿಸರ್ಗ ನೂರು ಕೋಟಿಗೂ ಹೆಚ್ಚು ಜೀವಸಂಕುಲವಿದೆ. ಒಂದೊಂದು ಜೀವಿಯ ಬದುಕು, ಆಹಾರ, ಆಕಾರ ವಿಭಿನ್ನ, ವಿಶಿಷ್ಟ. ಕೆಲವು ಜೀವಿಗಳು ಮುದ್ದಾಗಿವೆ ಎಂದು ಅಪ್ಪಿಕೊಳ್ಳೋಕೆ ಹೋದ್ರೆ ಅಪಾಯ ಕಟ್ಟಿಟ್ಟಬುತ್ತಿ. ಅಪ್ಪಿತಪ್ಪಿ ಅವುಗಳು ಏನಾದ್ರೂ ನಿಮಗೆ ಮುತ್ತಿಟ್ರೆ ನೀವು ಈ ಲೋಕದಿಂದ ಟಿಕೆಟ್ ಪಡೆಯೋದು ಗ್ಯಾರಂಟಿ. ಅಂತ ಜೀವಿಗಳ ಪರಿಚಯ ಇಲ್ಲಿದೆ. 


ಈ ಜೀವಿಗಳನ್ನ ದೂರದಿಂದಲೆ ನೋಡಿ ದಿಗ್ಭ್ರಮೆಪಡಿ. ಹತ್ತಿರ ನೋಡಬೆಕೆಂಬ ಆಸೆಯಿಂದ ಹೊದ್ರೆ ನಿಮ್ಮ ಜೀವದ ಆಸೆಯೇ ಬಿಡಬೇಕಾದಿತು. ನಾವು ಟಾಪ್ ಪಾಯ್ಸನಸ್ ಫಿಶ್ ಅಂತೇನಾದ್ರು ಅವಾರ್ಡ್ ಕೊಡಲಿಕ್ಕೆ ಹೋದ್ರೆ , ದಿ ಫಸ್ಟ್ ಪ್ರೈಸ್ ಗೋಸ್ ಟು ಬಾಕ್ಸ್ ಜೆಲ್ಲಿ ಫಿಶ್. ಆಹಾ! ನೋಡಲಿಕ್ಕೆ ಇಶ್ಟು ಮುದ್ದಾದ ಜೀವಿ ಅದ್ಹ್ಯೇಗೆ ಜೀವಾ ತೆಗೆಯುತ್ತೆ ಅಂತಿರಾ. ನೋಡಿದ್ರೆ ನೀರಿನ ಗುಳ್ಳೆತರ ಕಾಣೋ ಬಾಕ್ಸ್ ಜೆಲ್ಲಿ ಫಿಶ್ ಈಗಾಗಲೆ 1954 ರಿಂದ ಹಿಡಿದು ಇಲ್ಲಿವರೆಗೂ 5 ಸಾವಿರದ 567 ಜನರ ಜೀವ ತೆಗೆದುಕೊಂಡಿದೆ. ಎಶ್ಟು ಮುದ್ದಾಗಿ ಕಾಣುತ್ತೋ ಅಶ್ಟೇ ಭಯಾನಕ ಸಾವನ್ನ ನೀಡುತ್ತೆ ಈ ಡೆಡ್ಲಿ ಫಿಶ್. ಇದು ಮೋದಲು ಹೃದಯ ಸ್ತಂಭನ ವನ್ನ ನಲ್ಲಿಸೋ ಇದರ ವಿಶ ನಿಧಾನವಾಗಿ ನರಮಂಡಲವನ್ನೇ ಸಾಯುಸುತ್ತದೆ. ಇದರ ವಿಶದಾಳಿಗೆ ತುತ್ತಾದವರು ನರಕವನ್ನೇ ನೋಡುತ್ತಾರೆ.


ಏಶಿಯಾ ಮತ್ತು ಆಸ್ಟ್ರೇಲಿಯಾದ ಸಮುದ್ರದಲ್ಲಿ ಕಂಡುಬರುವ ಬಾಕ್ಸ್ ಫಿಶ್ ವಿಶಕ್ಕೆ ಸಿಕ್ಕು ಬದುಕೋದು ಸಾಧ್ಯವೇ ಇಲ್ಲಾ. ಅದಕ್ಕೆ ಇರಬೇಕು ಮುಖ ನೋಡಿ ಮಣೆ ಹಾಕಬಾದ್ರು ಅನ್ನೋದು.
!-- Facebook share button Start -->