Deadliest Creatures- Blue Ringed Octopus!!

ತುಂಬಾನೆ ಚಿಕ್ಕದು, ಬರಿ ಗಾಲ್ಫ್ ಬಾಲ್ ನ ಸೈಜಿನಲ್ಲಿರುವ ಈ ಬ್ಲೂ ರಿಂಗಡ್ ಆಕ್ಟೋಪಸ್, ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೋಡ್ಡದು ಅನ್ನೋಹಾಗೆ, ನೋಡೊಕೆ ಇಶ್ಟೇ ಇಶ್ಟಿದ್ರೂ ವಿಶ ಇರೋದು ಮಾತ್ರ 26 ಜನರನ್ನ ಒಂದೇ ಏಟಿಗೆ ಕೊಲ್ಲೋವಶ್ಟು. ಇದನ್ನೇ ಕೇಳಿ ಹೌಹಾರಿದ್ರಾ. ವೈಟ್ ಅ ಮಿನಟ್ ಹೇದ್ರೋಕೆ ಇನ್ನೂ ಒಂದು ವಿಶಯ ಇದೇ. ಅದೆನೆಂದ್ರೆ ಈ ಆಕ್ಟೋಪಸ್ ನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಸೇರಿದ್ರೂ ಏನೂ ಉಪಯೋಗವಿಲ್ಲ. ಯಾಕೆಂದ್ರೆ ಇದರ ವಿಶಕ್ಕೆ ಇನ್ನೂ ಮದ್ದೇ ಕಂಡುಹಿಡಿದಿಲ್ಲಾ.

 ಈಗ ಏನಪ್ಪಾ ಮಾಡೋದು ಅಂತ ಚಿಂತಿಸಬೇಡಿ ಯಾಕೆಂದ್ರೆ ಇದಿರೋದು ಜಪಾನ್ ಮತ್ತು ಆಶ್ಟರೇಲಿಯಾದ ಸಮುದ್ರಗಳಲ್ಲಿ ಮಾತ್ರ. ಸೋ ಫ್ರೇಂಡ್ಸ , ನೀವು ಅಂದುಕೊಂಡ ಹಾಗೆನೆ ದಿ ಟಾಪ್ ಫೋರ್ ಪಾಯ್ಸನಸ್ ಆಕ್ಟೋಪಸ್ ಅವಾರ್ಡ್ ಗೋಸ್ ಟು ಬ್ಲೂ ರಿಂಗಡ್ ಆಕ್ಟೋಪಸ್.


!-- Facebook share button Start -->

Deadliest Creatures-Marbled Cone Snail.

ಅಯ್ಯೋ ಎಶ್ಟು ಮುದ್ದಾಗಿದೆ ಈ ಮೆರಗುಗಲ್ಲು ಅಂತೇನಾದ್ರು ಈ ಕಲ್ಲನ್ನ ಕೈಗೆತ್ತಿಕೊಂಡ್ರೋ ಈ ಲೋಕದಿಂದಾನೆ ನಿಮ್ಮನ್ನ ಎತ್ತಿಬಿಡುತ್ತೆ ಈ ಮಾರ್ಬಲ್ ಕೋನ್ ಸ್ನೇಲ್. ಹೌದು, ಇದರ ಒಂದು ತೊಟ್ಟು ವಿಶ ಈಸಿಯಾಗಿ ಇಪ್ಪತ್ತು ಜನರನ್ನ ಇಹಲೋಕಕ್ಕೆ ಕಳಿಸ ಬಹುದು.

 ಉಪ್ಪುನೀರಲ್ಲಿ ಸಿಗುವ ಕಲ್ಲಿನಂಗೆ ಕಾಣುವ ಈ ಸ್ನೇಲ್ ತನ್ನ ಆಹಾರಕ್ಕಾಗಿ ಹೀಗೆ ವೇಶ ಬದಲಿಸಿಕೊಂಡಿರುತ್ತದೆ. ಇದರ ವಿಶ ನಿಧಾನವಾಗಿ ದೇಹದಲ್ಲೆಲ್ಲಾ ಆವರಿಸಿಕೊಳ್ಳುತ್ತೆ. ದೇಹ ಊದಿಕೊಳ್ಳುತ್ತೆ. ವಿಪರೀತ ನೋವಾಗುತ್ತೆ ಕಲವರಿಗೆ ಪಾರ್ಶ್ವವಾಯು ಕೂಡ ಬರಬಹುದು ಆದ್ರೆ ಎಲ್ಲಾರಿಗೆ ಸಾವು ಮಾತ್ರ ನಿಶ್ಚಿತ.


 ಈಗಾಗಲೇ ಇದರ ವಿಶಕ್ಕೆ 30 ಮಂದಿ ಬಲಿಯಾಗಿದ್ದಾರೆ. ಸೋ ದಿ ಟಾಪ್ poisonous ಸ್ನೇಲ್ Award goes to Marbled cone snail.

!-- Facebook share button Start -->

Deadliest Creatures- Box Jelly Fish

ನಿಸರ್ಗ ನೂರು ಕೋಟಿಗೂ ಹೆಚ್ಚು ಜೀವಸಂಕುಲವಿದೆ. ಒಂದೊಂದು ಜೀವಿಯ ಬದುಕು, ಆಹಾರ, ಆಕಾರ ವಿಭಿನ್ನ, ವಿಶಿಷ್ಟ. ಕೆಲವು ಜೀವಿಗಳು ಮುದ್ದಾಗಿವೆ ಎಂದು ಅಪ್ಪಿಕೊಳ್ಳೋಕೆ ಹೋದ್ರೆ ಅಪಾಯ ಕಟ್ಟಿಟ್ಟಬುತ್ತಿ. ಅಪ್ಪಿತಪ್ಪಿ ಅವುಗಳು ಏನಾದ್ರೂ ನಿಮಗೆ ಮುತ್ತಿಟ್ರೆ ನೀವು ಈ ಲೋಕದಿಂದ ಟಿಕೆಟ್ ಪಡೆಯೋದು ಗ್ಯಾರಂಟಿ. ಅಂತ ಜೀವಿಗಳ ಪರಿಚಯ ಇಲ್ಲಿದೆ. 


ಈ ಜೀವಿಗಳನ್ನ ದೂರದಿಂದಲೆ ನೋಡಿ ದಿಗ್ಭ್ರಮೆಪಡಿ. ಹತ್ತಿರ ನೋಡಬೆಕೆಂಬ ಆಸೆಯಿಂದ ಹೊದ್ರೆ ನಿಮ್ಮ ಜೀವದ ಆಸೆಯೇ ಬಿಡಬೇಕಾದಿತು. ನಾವು ಟಾಪ್ ಪಾಯ್ಸನಸ್ ಫಿಶ್ ಅಂತೇನಾದ್ರು ಅವಾರ್ಡ್ ಕೊಡಲಿಕ್ಕೆ ಹೋದ್ರೆ , ದಿ ಫಸ್ಟ್ ಪ್ರೈಸ್ ಗೋಸ್ ಟು ಬಾಕ್ಸ್ ಜೆಲ್ಲಿ ಫಿಶ್. ಆಹಾ! ನೋಡಲಿಕ್ಕೆ ಇಶ್ಟು ಮುದ್ದಾದ ಜೀವಿ ಅದ್ಹ್ಯೇಗೆ ಜೀವಾ ತೆಗೆಯುತ್ತೆ ಅಂತಿರಾ. ನೋಡಿದ್ರೆ ನೀರಿನ ಗುಳ್ಳೆತರ ಕಾಣೋ ಬಾಕ್ಸ್ ಜೆಲ್ಲಿ ಫಿಶ್ ಈಗಾಗಲೆ 1954 ರಿಂದ ಹಿಡಿದು ಇಲ್ಲಿವರೆಗೂ 5 ಸಾವಿರದ 567 ಜನರ ಜೀವ ತೆಗೆದುಕೊಂಡಿದೆ. ಎಶ್ಟು ಮುದ್ದಾಗಿ ಕಾಣುತ್ತೋ ಅಶ್ಟೇ ಭಯಾನಕ ಸಾವನ್ನ ನೀಡುತ್ತೆ ಈ ಡೆಡ್ಲಿ ಫಿಶ್. ಇದು ಮೋದಲು ಹೃದಯ ಸ್ತಂಭನ ವನ್ನ ನಲ್ಲಿಸೋ ಇದರ ವಿಶ ನಿಧಾನವಾಗಿ ನರಮಂಡಲವನ್ನೇ ಸಾಯುಸುತ್ತದೆ. ಇದರ ವಿಶದಾಳಿಗೆ ತುತ್ತಾದವರು ನರಕವನ್ನೇ ನೋಡುತ್ತಾರೆ.


ಏಶಿಯಾ ಮತ್ತು ಆಸ್ಟ್ರೇಲಿಯಾದ ಸಮುದ್ರದಲ್ಲಿ ಕಂಡುಬರುವ ಬಾಕ್ಸ್ ಫಿಶ್ ವಿಶಕ್ಕೆ ಸಿಕ್ಕು ಬದುಕೋದು ಸಾಧ್ಯವೇ ಇಲ್ಲಾ. ಅದಕ್ಕೆ ಇರಬೇಕು ಮುಖ ನೋಡಿ ಮಣೆ ಹಾಕಬಾದ್ರು ಅನ್ನೋದು.
!-- Facebook share button Start -->

Operation Fire From HELL..!



ಎಲ್ಲರಿಗೂ ಗೊತ್ತಿರೋ ಹಾಗೆ ಅಮೇರಿಕಾದ ನೆವಿಸೀಲ್ಸ್ ಗಳು ಸಾವಿದ್ದಹಾಗೆ. ಅವ್ರ ಎದುರಿಗಿದ್ದವರ್ಯಾರೂ ಬದುಕುವ ಚಾನ್ಸೇ ಇರೋದಿಲ್ಲ. ಇನ್ನು ಅಂತ ಕಮಾಂಡೋಗಳು ಒಂದು ಆಪರೇಷನ್ ನನ್ನ ಕೈಗೊಂಡ್ರೆ ಒಂದಿಂಚೂ ಬಿಡದ ಹಾಗೆ ಮುಗಿಸೋದು ಅವ್ರ ಕೆಪ್ಯಾಸಿಟಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಗಳಾಗಿರೋ ಸಿಲ್ಸ್ ಗಳು ಕೈಗೊಂಡ ಮತ್ತೊಂದು ಪರ್ಫೆಕ್ಟ್ ಮಿಷನ್ ಫೈರ್ ಫ್ರಂಮ್ ಹೆಲ್..! 

ಒಂದು ಕಾಲದಲ್ಲಿ ಅಲ್ ಖೈದಾದ ಮುಖ್ಯಸ್ಥ. ಆಗಿನ್ನು ಒಸಮಾ ಬಿನ್ ಲಾಡೆನ್ ಇಷ್ಟು ಪಾಪುಲರ್ ಆಗಿರಲಿಲ್ಲ. ಆತನೇನಿದ್ದರು ಎಲೆ ಮರೆಕಾಯಾಗಿದ್ದ.. ಆದ್ರೆ ಜರ್ಕಾವಿ, ಅಲ್ ಖೈದಾದ ವಿಷಬೀಜವನ್ನ ವಿಶ್ವದಾದ್ಯಂತ ಪಸರಿಸಲು ಪಣತೊಟ್ಟಂತವನು. ಹೀಗಾಗೇ ಈತನ್ನ ಅಮೆರಿಕಾ ಟಾರ್ಗೆಟ್ ಮಾಡಿತ್ತು. ಈತ ಅಲ್ ಖೈದಾದ ಬಾಂಬಿಂಗ್ ಸ್ಪೆಷಲಿಸ್ಟೇ ಸರಿ. ಯಾಕಂದ್ರೆ ಈತ ದೇಶ ವಿದೇಶಗಳಲ್ಲಿ ಬಾಂಬ್ ಗಳನ್ನ ಸಿಡಿಸೋದ್ರಲ್ಲಿ, ಸೂಸೈಡ್ ಬಾಂಬರ್ ಗಳನ್ನ ತಯಾರು ಮಾಡೋದ್ರಲ್ಲಿ ಸಿದ್ಧ ಹಸ್ತ.

ಅಷ್ಟೇ ಅಲ್ದೆ ಜರ್ಕಾವಿ, ಅಮೆರಿಕಾದ ಸುಪ್ರಸಿದ್ಧ ವ್ಯಕ್ತಿಗಳನ್ನ ಅಪಹರಿಸಿ ತಮ್ಮ ಛೇಲಾಗಳನ್ನ ಬಿಡುವಂತೆ ಕಾಡುತ್ತಿದ್ದ. ಅಷ್ಟೇ ಅಲ್ಲದೆ ಇರಾಕ್ ನಲ್ಲಿ ಜರ್ಕಾವಿ ತನ್ನದೇ ಆದ ಒಂದು ಸುಸಜ್ಜಿದ ಸಂಘವನ್ನ ಕಟ್ಟಿಕೊಂಡಿದ್ದ. ಅಲ್ಲಿ ಕುಳಿತುಕೊಂಡೇ ಅಮೆರಿಕಾದ ಮೇಲೆ ನಡೆಸಬಹುದಾದ ದಾಳಿಗಳ ಬಗ್ಗೆ ಪ್ಲಾನ್ ಮಾಡ್ತಿದ್ದ. ಈತನಿಂದ ರೋಸಿಹೋಗಿದ್ದ ಅಮೆರಿಕಾ ಈತನಿಗೊಂದು ಗತಿ ಕಾಣಿಸಲೇ ಬೇಕು ಅಂತ ನಿರ್ಧರಿಸಿತ್ತು. ಹೀಗಾಗೇ ಅವ್ರು ಮೊರೆ ಹೋಗಿದ್ದು, ವರ್ಡ್ದ್ಸ್ ಮೋಸ್ಟ್ ಡೇಂಜರಸ್ ಕಮಾಂಡೋಗಳಾದ ನೆವಿ ಸೀಲ್ಸ್ ಗೆ.

ಪರ್ಫೆಕ್ಷನಿಸ್ಟ್ ಗಳಾದ ಕಮಾಂಡೋಗಳು, ಜರ್ಕಾವಿ ಎಲ್ಲಿದ್ದಾನೇ ಅನ್ನೋದನ್ನ ಮೊದಲೇ ತಿಳಿದಿದ್ವು. ಅದು 2010ರ ಜೂನ್ ತಿಂಗಳು, ಜರ್ಕಾವಿ ತನ್ನ ಛೇಲಾಗಳ ಜೊತೆಗೂಡಿ ಇರಾಕ್ ನ ಬಾಗ್ದಾದ್ ನಲ್ಲಿ ತನ್ನ ಸಭೆ ನಡೆಸಿದ್ದ. ಈ ವಿಷಯವನ್ನ ತಿಳಿದ ಸೀಲ್ ಗಳು ಅಲ್ಲಿಗೆ ಧಾವಿಸಿದ್ರು. ಲಾಡೆನ್ ನನ್ನ ಕೊಂದ ಹಾಗೆ ಅವ್ರು ಜರ್ಕಾವಿಯನ್ನ ಅಟ್ಟಾಡಿಸಿ ಕೊಲ್ಲಲಿಲ್ಲ. ಬದಲಾಗಿ MH-47 ಸ್ಪೆಷಲ್ ಒಪ್ಸ್ ಚಿನೂಕ್ ಯುದ್ಧವಿಮಾನದಲ್ಲಿ ತೆರಳಿದ್ದ ಸೀಲ್ ಗಳು , ಆತನ ಅಡುಗುದಾಣವನ್ನ ಜಸ್ಟ್ ಒಂದು ಬಾಂಬ್ ಹಾಕಿ ಉಡಾಯಿಸಿದ್ರು . 

 ಅಷ್ಟೇ.. ಜರ್ಕಾವಿಯ ಚಾಪ್ಟರ್ ಕ್ಲೋಸ್ ಆಗಿ ಹೋಯ್ತು. ಜೊತೆಗೆ ಆತನ ಛೇಲಾಗಳದ್ದೂ..ಇಂತಹ ಡಿಫರೆಂಟ್ ಕಾನ್ಸೆಪ್ಟ್ ಗಳಿಂದಾಗೇ ನೆವಿ ಸೀಲ್ ಗಳು ಭೂಮಿ ಮೇಲಿರೋ ಮೋಸ್ಟ್ ಡೇಂಜರಸ್ ಕಮಾಂಡೊಗಳು ಅನ್ನೋ ಹೆಸ್ರು ಪಡೆದದ್ದು

!-- Facebook share button Start -->

The Mossads Secret Wars..!



ಇಸ್ರೆಲ್ಸ್ ಮೊಸಾಡ್ ಗಳು ಬರೀ ಆಪರೇಷನ್ ರ್ಯಾತ್ ಆಫ್ ಗಾಡ್ ನಲ್ಲಿ ಮಾತ್ರ ತಮ್ಮ ಕೈಚಳಕವನ್ನ ತೋರಿಸಿಲ್ಲ. ಬದಲಾಗಿ ಸಾಲು ಸಾಲು ಸಿಕ್ರೇಟ್ ಆಪರೇಷನ್ ಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವ್ರ ಹತ್ತಿರ ಅಮೇರಿಕಾದ ನೆವಿ ಸೀಲ್ ಗಳ ಹತ್ತಿರವಿರುವಂತ ಆಧುನಿಕ ಶಸ್ತ್ರಾಸ್ತ್ರಗಳಿಲ್ಲ. ಮತ್ತು ಅವರಷ್ಟು ನಿಗೂಢರೂ ಅಲ್ಲ. ಆದ್ರೆ, ಇವ್ರು ನೆವಿ ಸೀಲ್ಸ್ ಗಳಿಗೆ ಪೈಪೋಟಿ ನೀಡೋವಷ್ಟು ಚುರುಕಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅ ಡೆತ್ ಇನ್ ದುಬೈ ಪ್ರಕರಣ. 

ಆತ ಇಡೀ ಐರೋಪ್ಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಅಂದ್ರೆ ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದವು ಇದ್ದಕ್ಕಿದ್ದಂತೆ ಯೂರೋಪ್ ಖಂಡದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಆಗಿ ಬದಲಾದ. ಆತನ ಹೆಸರೇ ಮೊಹ್ಮದ್ ಅಲ್ ಮಭೂ.


ನೋಡೋಕೆ ಸಿದಾ ಸಾದಾನಾಗಿದ್ದ ಮೊಹ್ಮದ್ ತೆಡಾ ಆಗಿದ್ದ. ಆತ ಮೆಕ್ಯಾನಿಕ್ ಆಗೇ ಇದ್ದಿದ್ರೆ ಬದುಕುತ್ತಿದ್ದನೇನೋ. ಆದ್ರೆ ಮತಾಂಧನಾದ ಮೊಹ್ಮದ್,ತನ್ನ ಚಿಕ್ಕ ಗ್ಯಾರೇಜ್ ನಲ್ಲಿ ಹುಟ್ಟುಹಾಕಿದ್ದು, ಇಸ್ ಅದ್ ದಿನ್ ಆಲ್ ಕ್ವಾಸಮ್ ಬ್ರಿಗೇಡ್ ಅನ್ನೋ ಉಗ್ರ ಸಂಘಟನೆಯನ್ನ. ಅಷ್ಟೇ ಅಲ್ಲದೆ ಆತ ಇಸ್ರೆಲ್ ನಲ್ಲಿ ನ ಬಹುತೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿರಂತರವಾಗಿ ಕಾಂಟ್ಯಾಕ್ಟ್ ನಲ್ಲಿದ್ದ.

ಇಸ್ರೇಲ್ ನನ್ನೇ ಟಾರ್ಗೆಟ್ ಮಾಡಿ ಹಲವಾರು ಬಾರಿ ದಾಳಿಯನ್ನೂ ಮಾಡಿದ್ದ. ಅಷ್ಟೇ ಅಲ್ಲದೆ ಈತ 1989ರಲ್ಲಿ ಇಬ್ಬರು ಇಸ್ರೇಲಿ ಸೈನಿಕರನ್ನ ಸಹ ಕೊಂದಿದ್ದ. ಇದು ಇಸ್ರೇಲ್ ಸರ್ಕಾರವನ್ನ ಕೆರಳಿಸಿತ್ತು. ಅಂದಿನಿಂದಲೇ ಮೊಹ್ಮದ್ ನ ಅಂತ್ಯಹಾಡಲು ಇಸ್ರೇಲ್ ಸರ್ಕಾರ ಕಾಯುತ್ತಿತ್ತು. ಆದ್ರೆ ಮೊಹ್ಮದ್ ತುಂಬಾ ಚಾಣಾಕ್ಷ, ಆತನ ಹತ್ತಿರವಿದ್ದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ನಕಲಿ ಪಾಸ್ ಪೋರ್ಟ್ ಗಳು. ಆ ಪಾಸ್ ಪೋರ್ಟ್ ಗಳ ಸಹಾಯದಿಂದಲೇ ಆತ ವರ್ಡ್ಲ್ ಟೂರ್ ನಡೆಸಿದ್ದ. ಈ ವಿಶ್ವ ಪರ್ಯಟನೆಯಲ್ಲೇ ತನ್ನ ಹಮಾಸ್ ಸಂಘಟನೆಯನ್ನ ಬೆಳೆಸುತ್ತಿದ್ದ.


ನಿರಂತರವಾಗಿ ಈತನ ಮೇಲೆ ಕಣ್ಣಿಟ್ಟಿದ್ದ ಇಸ್ರೆಲ್ ಸರ್ಕಾರ, ಆತನನ್ನ ಮುಗಿಸೋ ಮುಹೂರ್ತಕ್ಕಾಗಿ ಕಾಯುತ್ತಿತ್ತು. ಅದಕ್ಕವರು ಆಯ್ಕೆ ಮಾಡಿಕೊಂಡದ್ದು ಒನ್ಸ್ ಅಗೇನ್ ಇಸ್ರೇಲ್ಸ್ ಮೊಸಾಡ್ ಗಳನ್ನ. ತುಂಬಾನೇ ಪ್ರೀಪ್ಲಾನ್ಡ್ ಆಗಿದ್ದ ಮೊಸಾಡ್ ಗಳು ಮೊಹ್ಮದ್ ನನ್ನ ಮುಗಿಸಿದ್ದು  ಜನವರಿ 19, 2010ರಂದು. ಮೊಹ್ಮದ್ ನ ಸಾವು ಖಚಿತವಾಗಿತ್ತು. ಯಾಕಂದ್ರೆ ಅವ್ನ ಎದುರಿಗಿದ್ದದ್ದು ಖುದ್ದು ಸಾವು. ಉರುಫ್ ಮೊಸಾಡ್ ಗಳು.

ದುಬೈನ ರೊಟಾನಾ ಹೋಟೆಲ್ ನಲ್ಲಿ ತಂಗಿದ್ದ ಮೊಹ್ಮದ್ ನ ಪತ್ತೆ ಹಚ್ಚಿದ ಮೊಸಾಡ್ ತಂಡ , ಆತನನ್ನ ಸುಸಜ್ಜಿತವಾಗೇ ಮುಗಿಸಿತ್ತು. ಮೊಹ್ಮದ್ ಹೋಟೆಲ್ ನಲ್ಲಿ ಓಡಾಡುತ್ತಿದ್ದ ಫೂಟೆಜ್ ಗಳು ಸಿಸಿ ಕ್ಯಾಮೆರಾಗಳಿಗೆ ಸೆರೆಸಿಕ್ಕಿವೆ. 
ಈತನನ್ನ ಕೊಲ್ಲಲು ಮೊಸಡ್ ಗಳು ಒಂದೂ ಗುಂಡನ್ನ ಹಾರಿಸಿಲ್ಲ ಅಂದ್ರೆ ಅಚ್ಚರಿಯಾಗುತ್ತೆ. ಜೊತೆಗೆ ಈ ಟೆರರಿಸ್ಟ್ ನ ಹತ್ಯೆ ನಡೆದದ್ದು ಖುದ್ದು ಹೋಟೆನ್ ನಲ್ಲಿರೋರಿಗೂ ಗೊತ್ತಾಗಿರಲಿಲ್ಲ. ಅಷ್ಟು ವ್ಯವಸ್ಥಿತವಾಗಿ ಮೊಸಾಡ್ ಗಳು ತಮ್ಮ ಕಾರ್ಯ ನಿರ್ವಹಿಸಿದ್ರು. ಮೊಹ್ಮದ್ ನನ್ನ ಮುಖಾಮುಖಿಯಾದ ಮೊಸಾಡ್ ಗಳು ಆತನಿಗೆ ಪಾರ್ಶ್ವವಾಯು ತಗಲುವಂತೆ ಇಂಜೆಕ್ಷನ್ ನೀಡಿ, ದಿಂಬಿನಿಂದ ಉಸಿರುಕಟ್ಟುವಂತೆ ಮಾಡಿ ಮೊಹ್ಮದ್ ನ ಕಥೆ ಮುಗಿಸಿದ್ರು.
!-- Facebook share button Start -->