ನಮ್ಮ ದಿನನಿತ್ಯದ ಒತ್ತಡದ ಜೀವನದಿಂದಾಗಿ ಅನೇಕರು ಪ್ರಶಾಂತ ಜೀವನವನ್ನೇ ಮರೆತುಬಿಟ್ಟಿದ್ದಾರೆ. ನಿಜವಾಗಿಯೂ ಒತ್ತಡ ಮುಕ್ತ ಮತ್ತು ಶಾಂತ ಸ್ತಿತಿ ಅಂದರೇನು ಅನ್ನೋದು ಗೊತ್ತೆಯಿಲ್ಲದಾಗಿದೆ. ಮಗುವಿನ ಮುಗ್ಧ ನಗುವನ್ನ ನೆನಪಿಸಿಕೊಳ್ಳಿ. ಅದು ನಿಮ್ಮ ಮುಖದಲ್ಲೂ ಶಾಂತ, ಸಂತೋಷದ ಭಾವನೆಯನ್ನ ಮೂಡಿಸುತ್ತದೆ. ತಾರುಣ್ಯದಲ್ಲಿ ನಾವು ಸದಾ ಜಾಗರುಕರಾಗಿ, ಶಾಂತರಾಗಿ, ಸಮತೊಲಿತವಾಗಿದ್ದರೆ ಒತ್ತಡ ಮುಕ್ತ ಜೀವನ ಸಾಧ್ಯ.
* ನೀವು ಒತ್ತದದಲ್ಲಿದ್ದಿರಾ ಅಂತ ಕಂಡುಕೊಳ್ಳಲು ಸಲಹೆಗಳು.
' ನಾನೊಬ್ಬ ಒಳ್ಳೆಯ ವ್ಯಕ್ತಿ ' ಅಂತ ನಿಮಗೆ ನೀವೇ ಅಂದುಕೊಂಡಾಗ ನಿಮ್ಮ ಉಸಿರಾಟದಲ್ಲಾದ ಬದಲಾವಣೆಯನ್ನ ಗಮನಿಸಿದ್ದೀರಾ? ನಿಮ್ಮ ಸ್ನಾಯುಗಳು ಉದ್ವಿಗ್ನವಾಗಿವೆಯೇ? ಒತ್ತಡ ನಿಮ್ಮ ಭೌತಿಕ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
ನೀವು ದಣಿದಾಗ ನಿಮ್ಮ ಕಣ್ಣುಗಳು ಭಾರವಾಗುತ್ತವೆ. ನೀವು ನಿಮ್ಮ ತಲೆಯನ್ನ ಕೈಗೆ ಆನಿಸಿ ವಿಶ್ರಾಂತಿ ಪಡೆಯುತ್ತೀರಿ. ನೀವು ಖಿಶಿಯಾಗಿದ್ದಾಗ , ಸುಲಭವಾಗಿ ನಗುತ್ತಿರಿ. ಅಂತೆಯೇ ಒತ್ತಡವು ಕೂಡ ನಿಮ್ಮ ದೇಹಕ್ಕೆ ಸುಳಿವು ನೀಡುತ್ತದೆ. ಹೀಗಾಗಿ ನಿಮ್ಮ ದೇಹ ನಿಮ್ಮ ಮನಸ್ಸಿಗೆ ನಿಡುವ ಸುಳಿವಿನ ಬಗ್ಗೆ ಗಮನಹರಿಸಿ.
* ನಿಮ್ಮ ಸ್ನಾಯುಗಳನ್ನ ಗಮನಿಸಿ. ಅವು ಬಿಗಿಯಾಗಿವೆಯೇ ಅಥವಾ ಸಡಿಲವಾಗಿವೆಯೇ?
* ನಿಮ್ಮ ಉಸಿರಾಟವನ್ನ ಗಮನಿಸಿ. ನೀವು ನಿಟ್ಟುಸಿರು ಬಿಡುತ್ತ ಇದ್ದೀರಾ? ಅಥವಾ ಜೋರಾಗಿ ಉಸಿರಾಡುತ್ತಿದ್ದಿರಾ? ಈಗ ಒಂದು ಕೈಯನ್ನ ನಿಮ್ಮ ಎದೆಯಮೇಲು ಮತ್ತೊಂದು ಕೈಯನ್ನ ಹೊಟ್ಟೆಯ ಮೇಲೂ ಇಡಿ. ನಿಮ್ಮ ಉಸಿರಾಟದ ಏರಿಳಿತವನ್ನ ಗಮನಿಸಿ. ಒತ್ತಡದಿಂದಾಗಿ ನೀವು ಉಸಿರಾಡೋದನ್ನೇ ಮರೆತುಬಿಟ್ಟಿದ್ದೀರಾ?
* ನಿಮ್ಮ ದಾಹದ ಒತ್ತಡದ ಪ್ರತಿಕ್ರಿಯಯನ್ನ ಗುರುತಿಸಿ.
ಆಂತರಿಕವಾಗಿ, ನಾವೆಲ್ಲರೂ ಒತ್ತಡಕ್ಕೆ ಒಂದೇ ರೀತಿ ಪ್ರತಿಕ್ರಿಯಿಸುತ್ತೇವೆ. ಒತ್ತಡದಲ್ಲಿದ್ದಾಗ ನಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಸಾಮಾನ್ಯವಾಗಿ ನಾವು ಒತ್ತಡದಲ್ಲಿದ್ದಾಗ ಮೂರು ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಒಂದೋ ಆ ಸ್ಥಳ ಬಿಟ್ಟು ಹೊರ ನಡೆದರೆ, ಮತ್ತೆ ಕೆಲವರು ಕೋಪಗೊಂಡು ಕ್ಷೋಭೆಗೊಳಗಾಗುತ್ತಾರೆ. ಇನ್ನೂ ಕೆಲವರು ಹೆದರಿಕೊಂಡು ಬಿಡುತ್ತಾರೆ.