The People's Princess-Diana -Part 2
ಅದು ಜುಲೈ 29, 1981. ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾರ ಮದ್ವೆ ದಿನ. ಸುಂದರ ಗೌನನ್ನ ತೊಟ್ಟ ಡಯಾನಾ ಅಕ್ಷರಶಃ ರಾಜಕುಮಾರಿಯಂತೆ ಕಾಣುತ್ತಿದ್ದಳು. ಮೇಲಾಗಿ ಸಿಂಡ್ರೆಲ್ಲಾದೇ ರೂಪು. ಅಂದು ಚಾರ್ಲ್ಸ್ ನ ಕೈಹಿಡಿದ ಡಯಾನಾಳ ವಯಸ್ಸು ಜಸ್ಟ್ 20. ಮತ್ತು ಚಾರ್ಲ್ಸ್ ಆಕೆಗಿಂತ 12 ವರ್ಷ ಹಿರಿಯನಾಗಿದ್ದ. ಅಂದ್ರೆ ಚಾರ್ಲ್ಸ್ ವಾಸ್ 32.
ಇವ್ರು ಅಂದು ಟಾಕ್ ಆಫ್ ದಿ ಟೌನ್ ಆಗಿದ್ರು. 15 ವರ್ಷಗಳ ಕಾಲ ಡಯಾನಾ ಸುದ್ದಿಯಲ್ಲೇ ಇದ್ಳು. ಅವ್ಳು ಲಂಡನ್ ಜನತೆಯ ಮನಗಳಲ್ಲಿ ಅನಭಿಶಕ್ತ ರಾಣಿಯಾಗೇ ಮರೆದಳು. ಆ ಮದ್ವೆ ನಡೆದು 3 ದಶಕಗಳೇ ಕಳೆದಿವೆ. ಆದ್ರೂ ಇಂದಿಗೂ ಲಂಡನ್ ಜನ ಆ ರಾಯಲ್ ವೆಡ್ಡಿಂಗನ್ನ ಮೆಲುಕು ಹಾಕುತ್ತಲೇ ಇರುತ್ತಾರೆ. ಡಯಾನಾಳ ಸ್ನಿಗ್ಧ ಸೌಂದರ್ಯವನ್ನ ಹೊಗಳುತ್ತಲೇ ಇರ್ತಾರೆ. ಹ್ಜ್ಞಾಂ ಅಂದ್ಹಾಗೆ, ಡಯಾನಾ ತೊಟ್ಟಿದ್ದ ವೆಡ್ಡಿಂಗ್ ಗೌನ್ ನ ಉದ್ದ 25 ಫೀಟ್ ಇದು ಅತ್ಯಂತ ದೊಡ್ಡ ವೆಡ್ಡಿಂಗ್ ಗೌನ್ ಎಂಬ ದಾಖಲೆಗೆ ಸೇರ್ಪಡೆಯಾಗಿದೆ.
ರಾಜಮನೆತನದಲ್ಲೇ ಮದ್ವೆಗೆ ಮೊದಲು ಕೆಲ್ಸಾ ಮಾಡ್ತಿದ್ದ ಪ್ರಿನ್ಸೆಸ್ ಈಕೆ, ಈಕೆಗೆ ಅತ್ಯಂತ ಬಡ ಕುಟುಂಬದಿಂದ ಬಂದ ಮೊದಲ ಪ್ರಿನ್ಸೆಸ್, 100 ಚಾರಿಟೇಬಲ್ ಸಂಸ್ಥೆಯನ್ನ ನಡೆಸುತ್ತಿದ್ದ ಏಕೈಕ ರಾಜಕುಮಾರಿ.
ಅತ್ಯಂತ ಚಿಕ್ಕ ವಯಸ್ಸಿನ ಲಂಡನ್ ಪ್ರಿನ್ಸೆಸ್ ಡಯಾನಾ. ಇದೆಲ್ಲದಕ್ಕಿಂತ ಮುಖ್ಯವಾಗಿ 20 ವರ್ಷದ ಏಕೈಕ ವರ್ಜಿನ್ ಪ್ರಿನ್ಸೆಸ್ ಈಕೆ..!