The People's Princess-Diana- Last

The People's Princess-Diana-Part 3

 

ಡಯಾನಾ ಆಂಡ್ ಕೇಟ್ ಮಿಡ್ಲಟನ್ ಇವ್ರಿಬ್ರಲ್ಲಿ ಯಾರು ಬೆಟರ್ರು ಅಂದ್ರೇ, ಕೇಟ್ ಅನ್ನೋ ಉತ್ರ ಸಿಗುತ್ತೆ. ಅದ್ಹೇಗೆ ಅಂದ್ರಾ.. ಪ್ರಿನ್ಸ್ ಚಾರ್ಸ್ಲ್ ನ್ನ ಮದ್ವೆಯಾಗೋ ಟೈಮಲ್ಲಿ ಡಯಾನಾ ವಾಸ್ ಜಸ್ಟ್ 20. ಆದ್ರೆ ಕೇಟ್ ಹಾಗಲ್ಲ. ಕೇಟ್ ಮದ್ವೆ ವಿಚಾರದಲ್ಲಿ ಡಯಾನಾಗಿಂತ 9 ವರ್ಷದೊಡ್ಡವಳು. ಅಂದ್ರೆ ಕೇಟ್ ಗೆ ಈಗ 29ವರ್ಷ. ಡಯಾನಾ ಮದ್ವೆ ಸಮಯದಲ್ಲಿ ಚಾರ್ಲ್ಸ್ ಗೆ 32. ಚಾರ್ಲ್ಸ್ ಗಿಂತ ಡಯಾನಾ 12 ವರ್ಷಗಳಷ್ಟು ಚಿಕ್ಕವಳು. ಅಂದ್ರೆ ಚಾರ್ಲ್ಸ್ ಮತ್ತು ಡಯಾನಾರ ಮಧ್ಯೆ ದೊಡ್ಡ ಏಜ್ ಗ್ಯಾಪ್ ಇತ್ತು. ಆದ್ರೆ ಕೇಟ್ ಮತ್ತು ವಿಲಿಯಂ ರ ಮಧ್ಯೆ ಅಷ್ಟು ದೊಡ್ಡ ಜನರೇಷನ್ ಗ್ಯಾಪ್ ಇಲ್ಲಾ.. ಮೇಲಾಗಿ ಇಬ್ಬರು ಸಮಾನ ವಯಸ್ಕರು. ಹಾಗೆ ನೋಡಿದ್ರೆ ಕೇಟ್ ವಿಲಿಯಂಗಿಂತ 5 ತಿಂಗಳು ದೊಡ್ಡವಳು. ಹೀಗಾಗಿ ಅವ್ರಿಬ್ರ ಮಧ್ಯೆ ಒಂದೊಳ್ಳೆ ಬಾಂಧವ್ಯವಿದೆ, ಪ್ರೀತಿಯಿದೆ, ಒಳ್ಳೆ ಸ್ನೇಹವಿದೆ ಮೇಲಾಗಿ ಒಂದೇ ಟೇಸ್ಟ್ ಇದೆ. ಹೀಗಾಗಿ ಇವ್ರಿಬ್ರು ಚಾರ್ಲ್ಸ್ ಮತ್ತು ಡಯಾನಾರಿಗಿಂತ ಬೆಟರ್ ಪ್ರಿನ್ಸ್ ಆಂಡ್ ಪ್ರಿನ್ಸೆಸ್.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ ಕೇಟ್ಮತ್ತು ವಿಲಿಯಂ ಬಹಳಕಾಲ ಒಟ್ಟಾಗಿದ್ದವರು, ಜೊತೆಯಾಗಿ ಓದಿದವರು, ಒಂದೇ ಅಭಿರುಚಿಯನ್ನ ಉಳ್ಳವರು. ಒಂದಲ್ಲ ಎರಡಲ್ಲ. ಒಟ್ಟು 8 ವರ್ಷಗಳ ಕಾಲ ಇವ್ರಿಬ್ರು ಜೊತೆಯಾಗಿದ್ದವರು. 8 ವರ್ಷಗಳಲ್ಲಿ ಒಮ್ಮೆ ಮಾತ್ರ ಬ್ರೆಕ್ ಅಪ್ ಆಗಿದೆ. ಅಂದ್ರೆ ಇಬ್ಬರ ನಡುವೆ ಅಘಾತವಾದ ಪ್ರೀತಿಯಿದೆ. ಆ ಕಾರಣಕ್ಕಾಗೇ ಮತ್ತೇ ಇವ್ರಲ್ಲಿ ಪ್ರೀತಿ ಉಕ್ಕಿ ಹರಿದಿದೆ. ಆ ಪ್ರೀತಿಯೇ ಇಬ್ಬರನ್ನ ಒಂದುಗೂಡಿಸಿದೆ. ಆದ್ರೆ ಈ ಪ್ರೀತಿ, ಬಾಂಧವ್ಯ ಡಯಾನಾ ಮತ್ತು ಚಾರ್ಲ್ಸ್ ನ ಮಧ್ಯೆಯಿರಲಿಲ್ಲ. ಬರೀ ಆರು ತಿಂಗಳು ಸುತ್ತಾಡಿ ಡಾಯಾನಾ ಮತ್ತು ಚಾರ್ಲ್ಸ್ ಮದ್ವೆಯಾಗಿದ್ರು. ಅದು ಬರೀ ಆಕರ್ಷಣೆಯೇ, ಪ್ರೀತಿಯೇ ಅಂತ ಅರೆಯೋಕೆ ಮುಂಚೆನೇ ಮದ್ವೆಯಾಗಿತ್ತು..

ಇನ್ನು ಕೇಟ್ , ಡಯಾನಾಳಂತೆ ಬಡತನವನ್ನ ಕಂಡವಳಲ್ಲ. ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟದಿದ್ದರೂ, ಕೇಟ್ ಸೇಲ್ಫ್ ಮೇಡ್ ಮಿಲೇನಿಯರ್ ಮೈಕಲ್ ರ ಮಗಳು. ಕೇಟ್ ಗೆ ಡನಾಗೆ ಇದ್ದಂತ ಕೆಟ್ಟ ಬಾಲ್ಯವೂ ಇರಲಿಲ್ಲ. ಜೊತೆಗೆ ಕೇಟ್ ಡಯಾನಾಗಿಂತ ಹೆಚ್ಚು ಓದಿಕೊಂಡವಳು. ಡಯಾನಾ ಚಿಕ್ಕಂದಿನಲ್ಲೇ ಶಾಲೆ ಬಿಟ್ಟು ಬೇಬಿ ಸಿಟ್ಟಿಂಗ್ ನಲ್ಲಿ ಕೇರ್ ಟೇಕರ್ ಆಗಿ ಕೆಲಸಕ್ಕೆ ಸೇರಿಕೊಂಡವಳು. ಆದ್ರೆ ಕೇಟ್ ಹಾಗಲ್ಲ. ವಿಲಿಯಂನಂತೆ ಆಕೆ ಕೂಡ ಪ್ರತಿಷ್ಟಿತ ಯುನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾಳೆ. ಕೇಟ್ ಒಬ್ಬ ಪಾಪುಲರ್ ಮಾಡಲ್, ಡಾನ್ಸರ್ ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆ ಸಮಾಜ ಸೇವಕಿ.

ಹೀಗಾಗಿ ಇವ್ರ ಮದ್ವೆ ಬಹುಕಾಲ ಬಾಳುವಲ್ಲಿ ಸಂಶಯವಿಲ್ಲ, ಸೋ ಕೇಟ್ ಇಸ್ ಬೆಟರ್ ದ್ಯಾನ್ ಡಯಾನಾ..ಇದಕ್ಕೆ ನೀವೇನ್ ಹೇಳ್ತೀರಿ..?.


!-- Facebook share button Start -->