The People's Princess-Diana


ಆಕೆ ಡಯಾನಾ. ದಿ ಪೀಪಲ್ಸ್ ಪ್ರಿನ್ಸೆಸ್. ಹೌದು ಆಕೆ ಮಾಡಿದ ಮೋಡಿಯೇ ಅಂತದ್ದು. ಬರೀ ತನ್ನ 20 ನೇ ವಯಸ್ಸಿನಲ್ಲೇ ಲಂಡನ್ ನ ರಾಜಕುಮಾರಿಯಾದ ಡಯಾನಾ, ಇಡೀ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬಳು. ಆಕೆ ಮಾಡಿದ್ದೇ ಸ್ಟೈಲ್, ಆಕೆ ನಡೆದದ್ದೇ ದಾರಿ ಅನ್ನೋವಷ್ಟರ ಮಟ್ಟಿಗೆ ಆಕೆ ಫೇಮಸ್. ಇಂದಿಗೂ ಆಕೆಯ ಮತ್ತಿನ ನೆಕ್ ಲೆಸ್, ಮದ್ವೆಯ ಡ್ರೆಸ್, ಆಕೆ ತೊಟ್ಟಿದ್ದ ಶೂಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. 

ಡಯಾನಾ. ಮೋಸ್ಟ್ ಬ್ಯೂಟಿಫುಲ್ ಲೇಡಿ ಆಫ್ ದಿ ವರ್ಲ್ಡ್. ಆಕೆಯ ಜೀವನವೇ ಒಂದು ಯಕ್ಷಿಣಿಯ ಕಥೆಯಿದ್ದಂಗೆ. ಅದಕ್ಕಾಗೇ ಇವಳನ್ನ ಸಿಂಡ್ರೆಲ್ಲಾಗೆ ಹೋಲಿಸಲಾಗುತ್ತಿತ್ತು. ಆಕೆಯ ಜೀವನಕ್ಕೂ ಆ ಫೇರಿಟೇಲ್ ಗೂ ತುಂಬಾ ಸಿಮಿಲಾರಿಟಿಗಳಿದ್ವು. ಯಾಕಂದ್ರೆ ಒಬ್ಬ ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಡಯಾನಾ, ಲಂಡನ್ ನ ರಾಜಕುಮಾರಿಯಾಗಿ ಮೆರೆದವಳು. ಅಷ್ಟೇ ಅಲ್ಲದೆ ಡಯಾನಾಗೆ ಕಿರುಕುಳ ನೀಡುವ ಮಲತಾಯಿಯೂ ಇದ್ದಳು. ಅದಕ್ಕಾಗೇ ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾರನ್ನ ಪ್ರಿನ್ಸ್ ಆಂಡ್ ಸಿಂಡ್ರೆಲ್ಲಾ, ಅ ಫೇರಿ ಟೇಲ್ ವೆಡ್ಡಿಂಗ್ ಅಂದೆಲ್ಲಾ ಕರೆಯಲಾಗುತ್ತಿತ್ತು.


ಮದ್ವೆ ನಡೆಯುವ ಮೂರು ವಾರಗಳ ಹಿಂದಷ್ಟೇ ಡಯಾನ 20ನೇ ವಯಸ್ಸಿಗೆ ಕಾಲಿಟ್ಟಿದ್ದಳು. ಡಯಾನ ಸ್ನಿಗ್ಧ ಸುಂದರಿ. ಬಡ ಕುಟುಂಬದಲ್ಲಿ ಜನಿಸಿದ್ರು ಆಕೆ ಸೌಂದರ್ಯದಲ್ಲಿ ಶ್ರೀಮಂತಳಾಗಿದ್ಳು. ಆಕೆ ಅದೇನೂ ಮೋಡಿ ಮಾಡಿದ್ಲೋ ಗೊತ್ತಿಲ್ಲಾ.. ಆಕೆಯ ಮಾತಿಗೆ, ಆಕೆಯ ನಡೆಗೆ, ಆಕೆಯ ಸೌಂದರ್ಯಕ್ಕೆ ಪ್ರಿನ್ಸ್ ಚಾರ್ಲ್ಸ್ ಕ್ಲೀನ್ ಬೋಲ್ಡ್ ಆಗಿದ್ದ. ಈ ಹಿಂದೆ ಪ್ರಿನ್ಸ್ ಚಾರ್ಲ್ಸ್ ಸಾಲು ಸಾಲು ಹುಡುಗಿಯರೊಂದಿಗೆ ಸುತ್ತಾಡಿದ್ರೂ, ಡಯಾನ ಅವ್ರೆಲ್ಲರಿಗಿಂತ ಡಿಫರೆಂಟಾಗಿದ್ಳು. ಚಿಕ್ಕವಯಸ್ಸಿನಲ್ಲೇ ಜವಾಬ್ದಾರಿ ಹೆಗಲೇರಿತ್ತು. ಒಂದು ಪುಟ್ಟ ಬೇಬಿ ಸಿಟ್ಟಿಂಗ್ ನಲ್ಲಿ ಡಯಾನಾ, ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ಪ್ರಿನ್ಸ್ ಚಾರ್ಲ್ಸ್ ಡಯಾನಾಳನ್ನ ಭೇಟಿಯಾಗೋದಕ್ಕಿಂತ ಮೊದಲು ಆಕೆಯ ಅಕ್ಕನನ್ನ ಡೇಟ್ ಮಾಡ್ತಾಯಿದ್ದ ಅನ್ನೋದು ಇಲ್ಲಿ ಗಮನಾರ್ಹ.

!-- Facebook share button Start -->