Wanted- Mullah Omer Part 2

Wanted- Mulla Omer Part 1

ಮುಲ್ಲಾ ಒಮರ್ ಬರೀ ಪಾಶ್ಚಿಮಾತ್ಯ ದೇಶಗಳಿಗಷ್ಟೇ ಕಂಟಕ ಪ್ರಾಯನಾಗಿರಲಿಲ್ಲ.... ಇಡೀ ವಿಶ್ವಕ್ಕೆ ವಿಷಜಂತುವಾಗಿದ್ದ. ವಿಶ್ವದ ಮೇಲೆ ಯುದ್ಧ ಸಾರಿದ ಚಾಲಾಕಿ ಈತ...... ಅಫಘಾನಿಸ್ತಾನವೆಂಬ ಬಡರಾಷ್ಟ್ರವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದ್ದ ಈ ರಾಕ್ಷಸ ಕಾಕ ದೃಷ್ಟಿ ಭಾರತದ ಮೇಲೂ ಬಿದ್ದಿತ್ತು... ಅದ್ಹೇಗೆ... ಭಾರತಕ್ಕೆ ಅವನಿಂದಾದ ಕಿರಿಕಿರಿ ಏನು... ಇಲ್ಲಿದೆ ಸಂಪೂರ್ಣ ಮಾಹಿತಿ.....

ಮುಲ್ಲಾ ಒಮರ್ ಎಲ್ಲೋ ದೂರದಲ್ಲಿದ್ದುಕೊಂಡೇ ಪಾಶ್ಚಿಮಾತ್ಯ ದೇಶಗಳಿಗೆ ಕೆಟ್ಟ ಕನಸಾಗಿ ಕಾಡುತ್ತಿದ್ದ. ಅಷ್ಟೇ ಅಲ್ಲದೆ ನಿಮಗೆ ನೆನಪಿರ ಬಹುದು, ಈ ಪಾಪಿ, ಇಂಡಿಯಾಏರ್ ಲೈನ್ಸ್ ವಿಮಾನವನ್ನ ಸಹ ಅಪಹರಿಸಲು ಸಹಕಾರ ನೀಡಿದ್ದ. ಆ ಮೂಲಕ ಈತನ ಕಾಕ ದೃಷ್ಟಿ ಭಾರತದ ಮೇಲೂ ಬಿದ್ದಿತ್ತು. ಹೀಗಾಗೇ , 1999 ರ ಡಿಸೆಂಬರ್ 26ರ ರಂದು ಭಾರತದಿಂದ ಅಪಹರಿಸಿದ್ದ, ಐಇಸಿ 814 ವಿಮಾನವನ್ನ ಉಗ್ರರು ಇಳಿಸಿದ್ದು, ತಾಲಿಬಾನ್ ಆಡಳಿತವಿದ್ದ ಇದೇ ಕಂದಹಾರ್ ನಲ್ಲಿ. 160 ಪ್ರಯಾಣಿಕರನ್ನು ಮುಂದಿರಿಸಿಕೊಂಡೇ, ಜೈಷ್ ಎ ಮೊಹಮ್ಮದ್ ಸಂಘಟನೆ ತಾಲಿಬಾನಿಗಳ ನೆರವಿನಿಂದ ನೆಟೋರಿಯಸ್ ಉಗ್ರರನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ..
   



ಇಂತ ಉಗ್ರ ಬರೀ ಪಾಶ್ಚಿಮಾತ್ಯ ದೇಶಗಳಿಗಷ್ಟೇ ಅಲ್ಲ,ಭಾರತಕ್ಕೂ ಕಂಟಕನಾಗಿದ್ದ. ಈ ಎಲ್ಲಾ ಕಾರಣಕ್ಕಾಗೇ ಅಮೆರಿಕಾ ಮುಲ್ಲಾನ ಹುಟ್ಟಡಗಿಸಬೇಕು ಅಂತ ನಿರ್ಧರಿಸಿತ್ತು. ಅದಕ್ಕಾಗಿ ಪ್ರಯತ್ನವನ್ನ ಸಹ ನಡೆಸುತ್ತಿತ್ತು. ಮುಲ್ಲಾ ಒಮರ್ 2001ರಿಂದ ಪಾಕಿಸ್ತಾನದಲ್ಲೇ ಇದ್ದಾನೇ ಅನ್ನೋದು ಅಮೆರಿಕಾಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ, ಮುಲ್ಲಾಗಿಂತ ಅಮೆರಿಕಾಗೇ ಹೆಚ್ಚು ಮುಖ್ಯವಾಗಿದ್ದು ಒಸಾಮಾ ಬಿನ್ ಲಾಡೆನ್. ಹೀಗಾಗೇ ಮೊದ್ಲಿಗೆ ಅವ್ರು ಹೆಚ್ಚು ಒತ್ತು ಕೊಟ್ಟಿದ್ದು ಒಸಾಮಾನ ಬಗ್ಗೆ.


ಯು.ಎಸ್ ಆರ್ಮಿಗೆ ಮುಲ್ಲಾ ಐಎಸ್ ಐನ ರಾಯಲ್ ಟ್ರೀಟ್ ಮೆಂಟ್ ನಲ್ಲಿ ಸುಖವಾಗಿದ್ದಾನೇ ಅನ್ನೋದು ಚೆನ್ನಾಗೆ ಗೊತ್ತಿತ್ತು. ಲಾಡೆನ್ ನ ಸಾವಿಗೂ ಮುಂಚೆಯೇ ಈ ವಿಷಯ ಜಗಜ್ಜಾಹಿರಾಗಿತ್ತು. ಯಾಂಕಂದ್ರೆ 2011 ಜನವರಿ ತಿಂಗಳಲ್ಲಿ ಮುಲ್ಲಾ ಒಮರ್ ಗೆ ಹೃದಯಾಘಾತವಾಗಿತ್ತು. ಹೀಗಾಗೇ ಆತ ಪಾಕಿಸ್ತಾನದ ಹೈಟೆಕ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ. ಅದೂ ಕೂಡ ಐ.ಎಸ್.ಐನ ಟೈಟ್ ಸೆಕ್ಯೂರಿಟಿಯ ನಡುವೆ. ಪಾಕ್ ನಲ್ಲಿ ಮುಲ್ಲಾ ಗೆ ರಾಜಾಥಿತ್ಯವಿತ್ತು. ಮತ್ತು ಈ ವಿಷಯ ಅಮೆರಿಕಾಗೂ ಚೆನ್ನಾಗೇ ಗೊತ್ತಿತ್ತು.

ಲಾಡೆನ್ ಹತ್ಯೆಯ ನಂತ್ರ ಅಮೆರಿಕಾದ ಮುಂದೆ ಪಾಕ್ ನ ಬಣ್ಣಗೇಡಿತನ ಬಯಲಾದ ನಂತ್ರ, ತನ್ನ ಭರವಸೆಯನ್ನ ಉಳಿಸಿಕೊಳ್ಳಲು ಪಾಕ್ ಏನಾದರೂ ಕಸರತ್ತು ನಡೆಸಲೇ ಬೇಕಿತ್ತು. ಅದಕ್ಕಾಗೇ ಮುಲ್ಲಾ ಒಮರ್ ನ ಮಾರಣ ಹೋಮವಾಗಿದೆ ಅನ್ನೋದನ್ನ ಅಲ್ಲಗಳಿಯೋ ಪರಿಸ್ಥಿತಿಯಲ್ಲೂ ಪಾಕಿಸ್ತಾನ ಇಲ್ಲ...

!-- Facebook share button Start -->