Powerful Five- Mayawati

ಬೆಹನ್ ಜಿ. ಮಾಯಾವತಿ ಯುಪಿಯಲ್ಲಿ ಈ ಹೆಸ್ರಿನಿಂದಲೇ ಫೇಮಸ್. ಪಕ್ಕಾ ಯುಪಿಯ ಸ್ಟೈಲಲ್ಲಿ ಸ್ಪೀಚ್ ಕೊಡೋದು ಈಕೆಯೆ ಸ್ಪೇಷಾಲಿಟಿ. ಮೇಲಾಗಿ ಪಂಚಿಂಗ್ ಡೈಲಾಗ್ ಗಳು ಬೇರೆ. ಯು.ಪಿಯವರ ಎದೆಗಾರಿಗೆಯನ್ನ ಪ್ರಶ್ನಿಸಬೇಕೆ. ಇಡೀ ದೇಶದ ಮುಂದೆ ತಮ್ಮ ಪ್ರತಿಮೆಗಾಗಿ, ತನ್ನ ಬರ್ತಡೆಗಾಗಿ, ತನ್ನ ಜ್ಯೂವೆಲರಿಗಾಗಿ ಕ್ಯೋಟ್ಯಾಂತರ ಹಣ ಖರ್ಚುಮಾಡಿ ಕಾಂಟ್ರವರ್ಸಿ ಕ್ವೀನ್ ಆದ್ರೂ, ಒನ್ಸ್ ಅಗೇನ್ ಯುಪಿ ಜನ ಪ್ರೀತಿಸೋದು ಮಾಯಾಳನ್ನೇ.


ಬರೀ ತನ್ನ 39ನೇ ವಯಸ್ಸಿನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿದ ಅತ್ಯಂತ ಚಿಕ್ಕವಯಸ್ಸಿನ ಮುಖ್ಯಮಂತ್ರಿಯೀಕೆ. ಅಷ್ಟೇ ಅಲ್ಲದೆ ದೇಶದ ಪ್ರಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿ ಅನ್ನೋ ಹೆಗ್ಗೆಳಿಕೆಯೂ ಸಹ ಈಕೆಗೇ ಸಲ್ಲುತ್ತೆ.



ಫುಲ್ ಖಡಕ್ಕಾಗಿಯೋ ಮಾಯಾ ಬಾಯಿಗೆ ಪ್ರತಿಪಕ್ಷಗಳು ಸಿಕ್ರೆ ಅವ್ರ ಕಥೆ ಮುಗೀತು ಅಂತಾನೇ ಅರ್ಥ. ಅಷ್ಟು ಖತರ್ನಾಕ್ ಆಗಿ ಪ್ರತಿಪಕ್ಷಗಳ ಜನ್ಮ ಜಾಲಾಡೋದ್ರಲ್ಲಿ ಮಾಯಾವತಿ ಸಿದ್ಧ ಹಸ್ತರು. ಜೊತೆಗೆ ಯು.ಪಿ ಜನತೆಗೆ ತಮ್ಮವರೇ ಅನ್ನಿಸುವಂತ ನಡೆನುಡಿ ಮಾಯಾಗಿದೆ. ಹೀಗಾಗಿ ಎಲ್ಲೇ ಹೋದ್ರು ಅವ್ರ ಡೈಲಾಗ್ ಗಳು ಫೇಮಸ್ಸಾಗಿ ಬಿಡುತ್ವೆ. ಅಂತ ಫೇಮಸ್, ಪಂಚಿಂಗ್ ಡೈಲಾಗ್ ಗಳಲ್ಲಿ ಕುವಾರಿ ಹೂಂ, ಚಮಾರಿ ಹೂಂ , ತಮ್ಹಾರಿ ಹೂಂ ಅನ್ನೋದು ತುಂಬಾನೇ ಪಾಪುಲರ್ ಡೈಲಾಗ್.


ಯುಪಿಯಲ್ಲಿ ದಲಿತರೇ ಹೆಚ್ಚಾಗಿರೋದ್ರಿಂದ ಮಾಯಾಲಿಗೆ ತಾನು ದಲಿತಳಾಗಿರೋದು ಪ್ಲಸ್ ಪಾಯಿಂಟೇ. ಆದ್ರೂ, ಹೆಚ್ಚು ದಿನ ಅದನ್ನೇ ನಂಬಿಕೊಂಡು ಅಧಿಕಾರವನ್ನ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋ ಸತ್ಯ ಮಾಯಾವತಿಗೂ ಗೊತ್ತು. ಹೀಗಾಗೇ ಯು.ಪಿಯ ಕಳವರ್ಗದ ಮತ್ತು ಮೇಲ್ವರ್ಗದ ಜನ್ರನ್ನ ಒಟ್ಟಾಗಿ ಸೇರಿಸಿದ ಕೀರ್ತಿ ಮಾಯಾಗೆ ಸಲ್ಲುತ್ತೆ. ಅಷ್ಟೇ ಅಲ್ಲದೆ ಜನ್ರೂ ಕನಸಲ್ಲೂ ಎಣಿಸಲಾರದ ಪ್ರಾಜೆಕ್ಟ್ ಗಳನ್ನ ಮಾಯಾ ಅಪ್ರೂವ್ ಮಾಡಿದ್ದಾಳೆ. ಅಲ್ಲಿ ಕೂಡ ಬಹು ಕೋಟಿ ಶಾಪಿಂಗ್ ಮಾಲ್ ಗಳು, ಹೈಟೆಕ್ ರೋಡ್ ಗಳು, ಟೂರಿಸ್ಟ್ ಕಾಂಪ್ಲೆಕ್ಸ್ ಗಳು, ಅಮ್ಯೂಸ್ ಮೆಂಟ್ ಪಾರ್ಕ್ ಗಳು, ರೆಸ್ಟೋರೆಂಟ್ ಗಳು ತಲೆಯತ್ತುತ್ತಿವೆ.


!-- Facebook share button Start -->