Powerful Five- Sonia Gandhi


ಈಕೆ ಇವ್ರೆಲ್ಲರಿಗಿಂತ ಡಿಫರೆಂಟ್. ಒಬ್ಬ ವಿದೇಶಿಗಳಾಗಿ ಹುಟ್ಟಿ, ವಿದೇಶದಲ್ಲೇ ಓದಿ, ತುಂಬಾ ಹೈ ಫೈ ಲೈಫನ್ನ ಲೀಡ್ ಮಾಡಿ ಒಬ್ಬ ಸಾಮಾನ್ಯ ಗೃಹಿಣಿಯಂತೆ ಜೀವಿಸಲು ತನ್ನ ಪ್ರೇಮಿಯ ಜೊತೆಗೆ ಭಾರತಕ್ಕೆ ಬಂದ ಯುವತಿಯಿಕೆ.




ಸೋನಿಯಾ ಗಾಂಧಿ. ಈ ಹೆಸ್ರನ್ನ ಭಾರತೀಯರಿಗೆ ಪರಿಚಯಿಸುವ ಅವಶ್ಯಕತೆಯೇ ಇಲ್ಲ. ಯಾಕಂದ್ರೇ ಈಕೆ ನಮ್ಮ ದೇಶದ ಸೊಸೆ. ಎಲ್ಲೋ ಹುಟ್ಟಿ, ಇನ್ನೇಲ್ಲೋ ಬೆಳೆದು. ಪ್ರೀತಿಯ ಮಾಯೆಗೆ ಸಿಲುಕಿ , ತನ್ನ ದೇಶವನ್ನೇ ಬಿಟ್ಟು ರಾಜೀವ್ ಗಾಂಧಿಯನ್ನ ತನ್ನ ಬಾಳಸಂಗಾತಿಯನ್ನಾಗಿ ಆರಿಸಿ ಭಾರತಕ್ಕೆ ಬಂದವಳು. ಹೀಗೆ ಬಂದ ಈಕೆ, ಒಬ್ಬ ಸಾಮಾನ್ಯ ಗೃಹಿಣಿ , ತನ್ನ ಅತ್ತೆ ಮನೆಯಲ್ಲಿ ಅನುಭವಿಸೋ ಎಲ್ಲಾ ಕಷ್ಟಗಳನ್ನೂ ಈ ಕಾಂಗ್ರೆಸ್ ಅಧಿನಾಯಕಿ ಅನುಭವಿಸಿದ್ದಾಳೆ.



ಮೊದಮೊದಲು ಸೋನಿಯಾ ಬಗ್ಗೆ ವಿದೇಶಿಯೆಂಬ ಮೂದಲಿಕೆಯಿತ್ತು. ಹಾಗೋ ಹೀಗೋ ಸಂಸಾರವನ್ನ ನಿಭಾಯಿಸಿಕೊಂಡು ಹೋಗುತ್ತಿದ್ದ ಸೋನಿಯಾಗೆ ದೊಡ್ಡ ಆಘಾತ. ಗಾಂಧಿ ಸಂಸಾರದ ಯಜಮಾನಿಯಾಗಿದ್ದ ಇಂದಿರಾ ಗಾಂಧಿಯನ್ನ ಆಪ್ತರಕ್ಷಕರೇ ಗುಂಡಿಟ್ಟು ಕೊಂದ್ರು. ಆಗ ಇಡೀ ಕುಟುಂಬಕ್ಕೆ ಆದ ಆಘಾತ ಅಷ್ಟಿಷ್ಟಲ್ಲ. ಇನ್ನೇನೂ ಎಲ್ಲವೂ ಸರಿಹೋಯ್ತು, ರಾಜೀವ್ ಗಾಂಧಿ ಪ್ರಧಾನಿಯಾದ್ರು ಅಂತಯಿದ್ರೆ, ಆಕೆಗೆ ಮತ್ತೊಂದು ಆಘಾತ. ಧರೆಯೇ ಕುಸಿದಂತ ಅನುಭವ. ಅದು ರಾಜೀವ್ ಗಾಂಧಿಯ ಮರಣ.



ಸೋನಿಯಾಗೆ ಇನ್ನು ಭಾರತದಲ್ಲಿ ನೆಲೆಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಾಯಿದ್ವು. ಹತ್ತು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸೋನಿಯಾ ಜನ್ರ ಮುಂದೆ ಬಂದಿದ್ದು ಸೋನಿಯಾ ಗಾಂಧಿಯಾಗಿ. ಅಲ್ಲಿಂದ ಆಕೆ ಹಿಂತಿರುಗಿ ನೋಡಲಿಲ್ಲ. ಮನೆ ಸೊಸೆಯಾಗಿ, ಕಾಂಗ್ರೆಸ್ ಎಂಬ, ಬಂದ ಮನೆಗೆ ದೀವಿಗೆಯಾದ್ರು. ಕಾಂಗ್ರೆಸ್ ಜ್ಯೋತಿ ಬೆಳಗಿದ್ರು. ಸತತವಾಗಿ ಎರಡು ಬಾರಿ ಕಾಂಗ್ರೇಸ್ ಅನ್ನ ಗೆಲ್ಲಿಸಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ರು.

ಪ್ರತ್ಯಕ್ಷವಾಗಿ ಸೋನಿಯಾ ದೇಶವನ್ನ ಆಳುತ್ತಿಲ್ಲವಾದ್ರೂ, ಯುಪಿಎ ಅಧ್ಯಕ್ಷೆಯಾಗಿ ಅವ್ರೇ ಸೂತ್ರಧಾರಿ. ಕಾಂಗ್ರೇಸ್ ಅಧಿನಾಯಕಿಯಾಗಿ ಮೆರೆಯುತ್ತಿರುವ ಸೋನಿಯಾ ಗಾಂಧಿಯ ದಿಟ್ಟತನವನ್ನ ನಿಜಕ್ಕೂ ಮೆಚ್ಚಲೇ ಬೇಕು.
!-- Facebook share button Start -->