ಶ್ರೀ ಮಂಜುನಾಥ - ಆನಂದ ಪರಮಾನಂದ

ಚಿತ್ರ: ಶ್ರೀ ಮಂಜುನಾಥ
ಸಂಗೀತ : ಹಂಸಲೇಖ
ರಚನೆ : ಹಂಸಲೇಖ
ಗಾಯಕ : ಎಸ್ ಪಿ ಬಿ , ಚಿತ್ರ 
ಆನಂದ ಪರಮಾನಂದ
ಆನಂದ ಪರಮಾನಂದ
ತಾಯಿ ತಂದ ಜನ್ಮದಿಂದ ಜಗದಾನಂದ
ಗುರುವು ತಂದ ಪುಣ್ಯದಿಂದ ಜನುಮನಂದ
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ
ಬಾಳಿನ ಜೊತೆ ಬಂದ ಸಕಲಕು ಸಮನಾದ ಮಡದಿಯ ನೆರಳಿಂದ ಧರ್ಮಾನಂದ
ಹೃದಯದ ನೋವನ್ನು ಪ್ರೀತಿಯ ಸುಧೆ ಮಾಡಿ ನಾಲ್ವರ ನಗಿಸುವುದೇ ಮನುಜಾನಂದ
ಬೆಲ್ಲದ ಕನದೊಳಗೆ ಬೇವಿನ ಎಲೆ ಇರುವ ...
ಬೆಲ್ಲದ ಕನದೊಳಗೆ ಬೇವಿನ ಎಲೆ ಇರುವ, ಬಾಳು ತಂದ ಹಬ್ಬದಿಂದ ಬ್ರಹ್ಮಾನಂದ
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ
ವಂಶದ ಲತೆಯಲ್ಲಿ ಅಂಶದ ಸುಮವಾಗಿ ಅರಳುವ ಮಗನಿಂದ ಮಧುರಾನಂದ
ಬೆಳೆಯುವ ಶಶಿಯಂತೆ ಮಗನು ಮೆರೆದಾಗ ಹೆತ್ತೆವರ ಒಡಲಲ್ಲಿ ಸ್ವರ್ಗಾನಂದ
ದಾನ ಧರ್ಮಗಳ ಫಲದಲ್ಲಿ ಮಗನು
ದಾನ ಧರ್ಮಗಳ ಫಲದಲ್ಲಿ ಮಗನು, ನೂರು ಕಾಲ ಬಾಳಿದಾಗ ಪುನ್ಯಾನಂದ
ನಾವು ತಂದ ಪುಣ್ಯದಲ್ಲೇ ನಮಗಾನಂದ 
ನಿ ರೀ ... ರೀ ... ರೀ ... ನಿ ರೀ ... ನಿ ... ರೀ ...
ಆನಂದ ಪರಮಾನಂದ ... ಪರಮಾನಂದ

ಪರಮಾನಂದ… ಪರಮಾನಂದ
!-- Facebook share button Start -->