ಬಾನಲ್ಲಿ ಬದಲಾಗೋ - ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಚಿತ್ರ : ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಮ್ಯೂಸಿಕ್ : ಭರತ್ ಬಿ. ಜೆ
ಸಾಹಿತ್ಯ : ಸಿದ್ದು ಕೋಡಿಪುರ
ಗಾಯಕ : ಸೋನು ನಿಗಮ್ 

ಬಾನಲ್ಲಿ ಬದಲಾಗೋ ಬಣ್ಣವೆ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ

ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಯಾಕೆ ಬಳಿ ಬಂದು ಸರಿ ಮಾಡದೇ
ಗೆಳತಿ ನನ್ನ ಗೆಳತಿ .. ತೆರೆದ ಮನದ ಕಿಟಕಿ
ಕರುಣಿಸು ಪ್ರೇಮಧಾರೆ ..  ಬಯಕೆಯ ತೋರದೆ 
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ

 ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಹರಿಸೆ ಬೇಗ ಕರೆ ಮಾಡು ತಡಮಾಡದೆ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೆಮಭಾಷೆ .. ಪದಗಳ ನೋಡದೆ 
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ

ಅದೇ ಗಾನ ನಗೆ ಬಾಣ ಎದೆಯಲ್ಲಿ ನಾಟಿದೆ
!-- Facebook share button Start -->