ಆಲೋಚನೆ ಆರಾಧನೆ - ರೋಮಿಯೋ

ಚಿತ್ರ : ಅರ್ಜುನ್ ಜನ್ಯ
ರಚನೆ : ಕವಿರಾಜ್
ಗಾಯಕಿ : ಶ್ರೇಯಾ ಘೋಷಾಲ್ 
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ನಾವಿಬ್ಬರೂ ಒಂದಾದರೆ ಖಂಡಿತ
ಜೀವನ ಅಲ್ಲಿಂದಲೇ ಅದ್ಭುತ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೇ ಸುಳ್ಳು ನನಗೆ ನಿನ್ನ ವಿನಃ
ಯಾರೋ ನನಗೆ ನೀನು 
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ... ಮನುಜನೋ ಗಂಧರ್ವನೋ
ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡ ನೋಡದಂತೆ ನಡಿದೆಯಾ
ಹುಡುಗಿಯ ಹೀಗೆ ಹೆದರಿಸ ಬೇಡ ಕಣೋ
ಅಂದು ನೀನು ಆಗುಂತಕ ... ಇಂದು ನೀನೇ ನನ್ನಾ ಸಖಾ
ಕನಸಿಗಿಂತ ಸೊಗಸು ನಿನ್ನಾ ಸನಿಹ
ಜಗವೇ ಸುಳ್ಳು ನನಗೆ ನಿನ್ನಾ ವಿನಃ
ಯಾರೋ ನನಗೆ ನೀನು
ಆಲೋಚನೆ ಆರಾಧನೆ ಎಲ್ಲಾ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೆ
 ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆದರೆ ಇನ್ನು ತಡೆಯೆನು ನಾ ನನ್ನನು
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿ ನೆಲ
ಬೆವರುವೆ ಯಾಕೋ ... ಅರಳುವೆ ನಾನೆತಕೋ
ಕೇಳೋ ಆಸೆ ಆಲಿಂಗನ ... ಯಾಕೋ ನಾಚಿ ನೀರಾದೆನಾ 

ಕನಸಿಗಿಂತ ಸೊಗಸು ನಿನ್ನಾ ಸನಿಹ
ಜಗವೇ ಸುಳ್ಳು ನನಗೆ ನಿನ್ನಾ ವಿನಃ
ಯಾರೋ ನನಗೆ ನೀನು
!-- Facebook share button Start -->