ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Last

ನಮ್ಮ ದಿನನಿತ್ಯದ ಒತ್ತಡದ ಜೀವನದಿಂದಾಗಿ ಅನೇಕರು ಪ್ರಶಾಂತ ಜೀವನವನ್ನೇ ಮರೆತುಬಿಟ್ಟಿದ್ದಾರೆ. ನಿಜವಾಗಿಯೂ ಒತ್ತಡ ಮುಕ್ತ ಮತ್ತು ಶಾಂತ ಸ್ತಿತಿ ಅಂದರೇನು ಅನ್ನೋದು ಗೊತ್ತೆಯಿಲ್ಲದಾಗಿದೆ. ಮಗುವಿನ ಮುಗ್ಧ ನಗುವನ್ನ ನೆನಪಿಸಿಕೊಳ್ಳಿ. ಅದು ನಿಮ್ಮ ಮುಖದಲ್ಲೂ ಶಾಂತ, ಸಂತೋಷದ ಭಾವನೆಯನ್ನ ಮೂಡಿಸುತ್ತದೆ. ತಾರುಣ್ಯದಲ್ಲಿ ನಾವು ಸದಾ ಜಾಗರುಕರಾಗಿ, ಶಾಂತರಾಗಿ, ಸಮತೊಲಿತವಾಗಿದ್ದರೆ ಒತ್ತಡ ಮುಕ್ತ ಜೀವನ ಸಾಧ್ಯ. 

* ನೀವು ಒತ್ತದದಲ್ಲಿದ್ದಿರಾ ಅಂತ ಕಂಡುಕೊಳ್ಳಲು ಸಲಹೆಗಳು.
' ನಾನೊಬ್ಬ ಒಳ್ಳೆಯ ವ್ಯಕ್ತಿ ' ಅಂತ ನಿಮಗೆ ನೀವೇ ಅಂದುಕೊಂಡಾಗ ನಿಮ್ಮ ಉಸಿರಾಟದಲ್ಲಾದ ಬದಲಾವಣೆಯನ್ನ ಗಮನಿಸಿದ್ದೀರಾ? ನಿಮ್ಮ ಸ್ನಾಯುಗಳು ಉದ್ವಿಗ್ನವಾಗಿವೆಯೇ? ಒತ್ತಡ ನಿಮ್ಮ ಭೌತಿಕ ಪ್ರತಿಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ನೀವು ದಣಿದಾಗ ನಿಮ್ಮ ಕಣ್ಣುಗಳು ಭಾರವಾಗುತ್ತವೆ. ನೀವು ನಿಮ್ಮ ತಲೆಯನ್ನ ಕೈಗೆ ಆನಿಸಿ ವಿಶ್ರಾಂತಿ ಪಡೆಯುತ್ತೀರಿ. ನೀವು ಖಿಶಿಯಾಗಿದ್ದಾಗ , ಸುಲಭವಾಗಿ ನಗುತ್ತಿರಿ. ಅಂತೆಯೇ ಒತ್ತಡವು ಕೂಡ ನಿಮ್ಮ ದೇಹಕ್ಕೆ ಸುಳಿವು ನೀಡುತ್ತದೆ. ಹೀಗಾಗಿ ನಿಮ್ಮ ದೇಹ ನಿಮ್ಮ ಮನಸ್ಸಿಗೆ ನಿಡುವ ಸುಳಿವಿನ ಬಗ್ಗೆ ಗಮನಹರಿಸಿ.

* ನಿಮ್ಮ ಸ್ನಾಯುಗಳನ್ನ ಗಮನಿಸಿ. ಅವು ಬಿಗಿಯಾಗಿವೆಯೇ ಅಥವಾ ಸಡಿಲವಾಗಿವೆಯೇ?
* ನಿಮ್ಮ ಉಸಿರಾಟವನ್ನ ಗಮನಿಸಿ. ನೀವು ನಿಟ್ಟುಸಿರು ಬಿಡುತ್ತ ಇದ್ದೀರಾ? ಅಥವಾ ಜೋರಾಗಿ ಉಸಿರಾಡುತ್ತಿದ್ದಿರಾ? ಈಗ ಒಂದು ಕೈಯನ್ನ ನಿಮ್ಮ ಎದೆಯಮೇಲು ಮತ್ತೊಂದು ಕೈಯನ್ನ ಹೊಟ್ಟೆಯ ಮೇಲೂ ಇಡಿ. ನಿಮ್ಮ ಉಸಿರಾಟದ ಏರಿಳಿತವನ್ನ ಗಮನಿಸಿ. ಒತ್ತಡದಿಂದಾಗಿ ನೀವು ಉಸಿರಾಡೋದನ್ನೇ ಮರೆತುಬಿಟ್ಟಿದ್ದೀರಾ?

* ನಿಮ್ಮ ದಾಹದ ಒತ್ತಡದ ಪ್ರತಿಕ್ರಿಯಯನ್ನ ಗುರುತಿಸಿ.
ಆಂತರಿಕವಾಗಿ, ನಾವೆಲ್ಲರೂ ಒತ್ತಡಕ್ಕೆ ಒಂದೇ ರೀತಿ ಪ್ರತಿಕ್ರಿಯಿಸುತ್ತೇವೆ. ಒತ್ತಡದಲ್ಲಿದ್ದಾಗ ನಮ್ಮ ರಕ್ತದೊತ್ತಡ ಹೆಚ್ಚಾಗುತ್ತದೆ, ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ. ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಸಾಮಾನ್ಯವಾಗಿ ನಾವು ಒತ್ತಡದಲ್ಲಿದ್ದಾಗ ಮೂರು ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ. ಒಂದೋ ಆ ಸ್ಥಳ ಬಿಟ್ಟು ಹೊರ ನಡೆದರೆ, ಮತ್ತೆ ಕೆಲವರು ಕೋಪಗೊಂಡು ಕ್ಷೋಭೆಗೊಳಗಾಗುತ್ತಾರೆ. ಇನ್ನೂ ಕೆಲವರು ಹೆದರಿಕೊಂಡು ಬಿಡುತ್ತಾರೆ.
!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-6

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-5

ಚಿಂತೆಗಳನ್ನ ಪ್ರಶ್ನಿಸುವುದರ ಮೂಲಕ ಚಿಂತಿಸೋದನ್ನ ನಿಲ್ಲಿಸಿ. 
* ನೀವು ಚಿಂತಿಸುತ್ತಿರುವ ಸಂಗತಿ ಸತ್ಯ ಅನ್ನೋದಕ್ಕೆ ಸಾಕ್ಷಿ ಇದೆಯೇ? ಅಥವಾ ಸಲ್ಲು ಅನ್ನೋದಕ್ಕೆನಾದರು ಪುರಾವೆ ಇದೆಯೇ?
* ನಾನು ಹೆದರುತ್ತಿರುವ ವಿಷಯಗಳು ವಾಸ್ತವವಾಗಿ ಘಟಿಸುವ ಸಾಧ್ಯತೆ ಎಷ್ಟಿದೆ?
* ಒಂದು ವೇಳೆ ವಾಸ್ತವಿಕವಾಗಿ ಘಟಿಸುವ ಸಂಭವನೀಯತೆ ಕಡಿಮಯಿದ್ದರೆ, ಮತ್ಯಾಕೆ ಈ ವಿಷಯ ನಿಮ್ಮನ್ನ ಬಾಧಿಸುತ್ತಿದೆ?
* ಈ ಚಿಂತನೆ ನನಗೆ ಸಹಾಯಕವಾಗಿದೆಯೆ? ಇದು ನನಗೆ ಹೇಗೆ ಸಹಾಯಕವಾಗಿದೆ ಮತ್ತು ಹೇಗೆ ನನ್ನನ್ನ ಘಾಸಿಗೊಳಿಸುತ್ತಿದೆ?
* ಇಂಥದ್ದೇ ಸಮಸ್ಯೆ ಹೊಂದಿರುವ ನನ್ನ ಸ್ನೇಹಿತನ ಬಳಿ , ನಾನು ಏನೆಂದು ಹೇಳಿಕೊಳ್ಳಲಿ?

ಸಾಮಾನ್ಯವಾಗಿ ಚಿಂತೆ ಅನ್ನೋದು ಭವಿಷ್ಯದಲ್ಲಿ ನಾವೇನು ಮಾಡುತ್ತೇವೆ ಅನ್ನೋದರ ಮೇಲೆ ಕೇಂದ್ರಿಕೃತವಾಗಿರುತ್ತದೆ. ಶತ ಶತಮಾನಗಳಷ್ಟು ಹಳೆಯದಾದ ಅಭ್ಯಾಸ ಸಾವಧನತೆ; ಪ್ರಸ್ತುತ ನಿಮ್ಮನ್ನ ಚಿಂತೆ ಮುಕ್ತ ಮಾಡಲು ಸಹಾಯ ಮಾಡಬಹುದು. 

* ನಿಮ್ಮ ಆಸಕ್ತಿ, ಚಿಂತನೆ, ಭಾವನೆಗಳನ್ನ ಗಮನಿಸಿ ಮತ್ತು ಅಂಗೀಕರಿಸಿ. ನಿಮ್ಮ ಚಿಂತನೆಯನ್ನ ನಿರ್ಲಕ್ಷಿಸಬೇಡಿ, ಅವುಗಳ ಜೊತೆ ಹೊರಡಬೇಡಿ. ಮತ್ತು ನಿಯಂತ್ರಿಸಲು ಸಹ ಪ್ರಯತ್ನಿಸಬೇಡಿ; ಬದಲಾಗಿ ಚಿಂತೆಯನ್ನ ಹೊರಗಿನವರ ದೃಷ್ಟಿಕೋನದಿಂದ ಗಮನಿಸಿ. 
* ನೀವು ಹೆಚ್ಚು ಚಿಂತೆಗೆ ಒತ್ತು ಕೊಡದಿದ್ದಾಗ ಅವು ಮೋಡ ಸರಿದಷ್ಟು ಸಲಿಸಾಗಿ ನಿಮ್ಮ ಬಾಳಿಂದ ಸರಿದುಹೊಗುತ್ತವೆ ಅನ್ನೋದನ್ನ ನೆನಪಿಡಿ. 
* ಯಾವಾಗಲು ವಾಸ್ತವಿಕವಾಗಿರಿ. ಇಂದಿನ ಬಗ್ಗೆ ಯೋಚಿಸಿ. ನಿಮ್ಮ ದೇಹವನ್ನೇ ಗಮನಿಸಿ, ನಿಮ್ಮ ಉಸಿರಾಟದ ಲಯ ಬದ್ಧ ಸಂಗೀತವನ್ನ ಆಸ್ವಾದಿಸಿ, ದಿನ ನಿತ್ಯ ಬದಲಾಗುವ ನಿಮ್ಮ ಭಾವನೆಗಳನ್ನ ಗಮನಿಸಿ. ಇವೆಲ್ಲ ನಿಮ್ಮ ಗಮನವನ್ನ ಪ್ರಸ್ತುತ ಕ್ಷಣಗಳಿಗೆ ಮರಳುವಂತೆ ಮಾಡುತ್ತವೆ.

ಒಂದು ಸಂಶೋಧನೆಯ ಪ್ರಕಾರ ಭಾವನೆಗಳು ಸಾಂಕ್ರಾಮಿಕವಂತೆ. ಹೀಗಾಗಿ ನಕಾರಾತ್ಮಕವಾಗಿ ಯೋಚಿಸುವ ಜನರಿಂದ ಆದಷ್ಟು ದೂರವಿರಿ. ನೀವು ಯಾರ ಜೊತೆ ಹೆಚ್ಚು ಸಮಯ ಕಳೆಯುತ್ತಿರೋ ಅವರು ನಿಮ್ಮ ಮಾನಸಿಕ ಸ್ತಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾರೆ.

* ಒಂದು ಚಿಂತೆಯ ಡೈರಿ ನಿಮ್ಮ ಜೋತೆಯಲ್ಲಿರಲಿ. ನಿಮಗೆ ಗೊತ್ತಿಲ್ಲದೇ ಬಹಳಷ್ಟು ಜನರು, ಬಹಳಷ್ಟು ಸನ್ನಿವೇಶಗಳಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಯಾವಾಗ, ಯಾರ ಜೊತೆಯಲ್ಲಿದ್ದಾಗ ಚಿಂತೆ ನಿಮ್ಮನ್ನ ಹೆಚ್ಚಾಗಿ ಕಾಡುತ್ತದೆಯೋ ಅದನ್ನ ಬರೆದಿಡಿ. ಅದಕ್ಕೆ ಕಾರಣವೇನು ಅನ್ನೋದನ್ನ ಸಹ ಬರೆಯಿರಿ.

* ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುವಂತ ವ್ಯಕ್ತಿಗಳಿಂದ ದೂರವಿರಿ.

ನಿಮ್ಮ ಬಗ್ಗೆ ಕಾಳಜಿಯಿರುವಂತಹ ವ್ಯಕ್ತಿಗಳನ್ನ ಗುರುತಿಸಿ. ಕೆಲವರು ನಿಮ್ಮ ಚಿಂತೆ, ಸಂಶಯ ಮತ್ತು ಆತಂಕಕ್ಕೆ ಕಾರಣವಾದರೆ, ಮತ್ತೆ ಕೆಲವರು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸಲು ಸಹಾಯ ಮಾಡಬಹುದು. 

* ಬಹುಬೇಗ ಚಿಂತೆಯಿಂದ ಮುಕ್ತಿ ಪಡೆಯೋದು ಹೇಗೆ?

ಎಂದಾದರು ಒಬ್ಬ ಒತ್ತಡದಿಂದ ಬಳಲಿ ಬೆಂಡಾದ ಸೂಪರ್ ಹಿರೋ ನಿಮ್ಮನ್ನ ಟ್ರಾಫಿಕ್ ಜಾಮ್ ನಿಂದ, ಅಸ್ತವ್ಯಸ್ತವಾದ ಸಭೆಗಳಿಂದ, ದತ್ತ ಕಾನನಗಳಿಂದ ಉಳಿಸಬಲ್ಲನೆ? ಇಲ್ಲ ಅಲ್ಲವೇ?. ಆದರೆ ನೀವು ಒತ್ತಡವನ್ನ ನಿಯಂತ್ರಿಸುವ ಸೂಪರ್ ಹಿರೋ ಆಗಬಹುದು. ಪ್ರತಿಯೊಬ್ಬರಿಗೂ ಅಂತದ್ದೊಂದು ಶಕ್ತಿ ಇದ್ದೆಯಿದೆ. ಸತತ ಪ್ರಯತ್ನದಿಂದ ಒತ್ತಡದ ಸನ್ನಿವೇಶಗಳ ಮೇಲಿನ ನಿಯಂತ್ರಣ ಖಂಡಿತ ಸಾದ್ಯ.
!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-4

ನೀವು ಅನಿಶ್ಚಿತತೆ ಮತ್ತು ಅಸಹಿಷ್ಣು ಗಳಂತಹ ಸಮಸ್ಯೆಯಿಂದ ಬಳಲುತ್ತಿದ್ದಾರೆ, ನಿಮಗೆ ನೀವೇ ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ ಮತ್ತು ಅದಕ್ಕೆ ಪ್ರತಿಕ್ರಿಯಯನ್ನ ಸಹ ಬರೆದಿಡಿ.
* ಜೀವನ ಅಂದ್ರೆ ಇದೆ, ಹೀಗೆ, ಇಷ್ಟೇ ಅಂತ ಹೇಳಲು ಸಾಧ್ಯನ?
* ಜೀವನದಲ್ಲಿ ನಿಶ್ಚಿತ ವಾಗಿ ಇರೋದ್ರಿಂದ ಆಗೋ ಉಪಯೋಗಗಳು ಮತ್ತು ದುರುಪಯೋಗಗಳು ಏನು? 
* ನಿಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅನಿಶ್ಚಿತತೆಯೇ ಕಾರಣವಾ? 
* ಕೆಟ್ಟದ್ದು ಸಂಭವಿಸಿದರೆ ,ಸಂಭವಿಸಲಿ ಅಂತ ಧೃಢವಾಗಿ ಇರೋಕೆ ನಿಮ್ಮಿಂದ ಸಾಧ್ಯನಾ?

ನೀವು ಸದಾ ತೀವ್ರ ಆತಂಕ ಮತ್ತು ಚಿಂತೆಗಳಿಂದ ಬಳಲುತ್ತಿದ್ದರೆ, ನಿಮ್ಮ ಕಣ್ಣಿಗೆ ಇಡೀ ಪ್ರಪಂಚ ಅಪಾಯಕಾರಿಯಾಗಿ ಗೋಚರಿಸುತ್ತದೆ. ಇಡೀ ವಿಶ್ವವೇ ನಿಮ್ಮ ವಿರುದ್ಧವಿದೆ ಅನ್ನೋ ಭಾವನೆ ಮೂಡುತ್ತದೆ. ಉದಾಹರಣೆಗೆ ನೀವು ಚಿಕ್ಕ ಚಿಕ್ಕ ಘಟನೆಯ ಬಗ್ಗೆಯೂ ಹೆಚ್ಚೆಚ್ಚಾಗಿ ಯೋಚಿಸಿ, ಭಯಾನಕ ಸನ್ನಿವೇಶಗಳನ್ನ ಕಲ್ಪಿಸಿಕೊಳ್ಳುತ್ತಿರಿ. ಸಣ್ಣ ಸಮಸ್ಯೆಯನ್ನ ಎದುರಿಸಬೇಕಾದರು ಭಯಪಡುತ್ತಿರಿ. ಸದಾ ನಕಾರಾತ್ಮಕ ವಾಗಿ ಯೋಚಿಸಿ, ನೀವು ನಿಮ್ಮ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರಿ. ಇಂತಹ ವಿವೇಚನಾರಹಿತ, ನಿರಾಶಾವಾದಿ ವರ್ತನೆಯನ್ನ ಅರಿವಿನ ವಿರೂಪಗಳು ಅಂತ ಅನ್ನುತ್ತಾರೆ. ಇಂತಹ ಕೆಟ್ಟ ಚಿಂತೆಗಳಿಗೆ ಆಹಾರ ವಾಗುವ ಬದಲು, ನಿಮ್ಮ ಚಿಂತೆ ಮತ್ತು ಆತಂಕಗಳನ್ನ ನಿಯಂತ್ರಿಸಲು ನಿಮ್ಮ ಮನಸ್ಸು ಮತ್ತು ಮೆದುಳನ್ನ ತರಬೇತಿಗೊಳಿಸಿ. 

ಸಾಧ್ಯವಾದಷ್ಟು ನೀವು ಯಾವ ಭಯಾನಕ ಚಿಂತೆಗಳು ನಿಮ್ಮ ಭಯಕ್ಕೆ ಮತ್ತು ಚಿಂತೆಗೆ ಕಾರಣವಾಗುತ್ತವೆ ಅನ್ನೋದನ್ನ ಗರುತಿಸಲು ಪ್ರಾರಂಭಿಸಿ. ನಂತರ ಅವುಗಳ ಬಗ್ಗೆ ಆಲೋಚಿಸುವ ಬದಲಾಗಿ ಪರಿಹಾರ ಕಂಡುಕೊಳ್ಳಲು ಶುರುಮಾಡಿ. ನೀವು ಹೆಚ್ಚೆಚ್ಚು ಸಮಸ್ಯೆಗಳನ್ನ ಪರಿಶಿಲಿಸಿದಷ್ಟು ನಿಮ್ಮ ಚಿಂತೆ, ಆತಂಕಗಳು ಮತ್ತು ಸವಾಲುಗಳ ಬಗ್ಗೆ ಹೆಚ್ಚು ಸಮತೋಲನ ದೃಷ್ಟಿ ಕೋನದಿಂದ ನೋಡಲು ಪ್ರಾರಂಭ ಮಾಡುತ್ತಿರಿ. 

!-- Facebook share button Start -->

ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-4

* ಬಗೆಹರಿಸಲಾಗದ ಸಮಸ್ಯೆಗಳ ಜೊತೆ ವ್ಯವಹರಿಸೋದು ಹೇಗೆ? 

ಚಿಂತೆಯನ್ನ ನೀವು ಹೇಗೆ ಬಗೆಹರಿಸಬಹುದು? ದೀರ್ಘಕಾಲ ದಿಂದ ನಿಮ್ಮನ್ನ ಕೊಳ್ಳುತ್ತಿರುವ ಚಿಂತೆಗಳು ನಿಮ್ಮನ್ನ ಒಟ್ಟಾಗಿ ಬಾಧಿಸಬಹುದು. ಅಂತ ಸಮಯದಲ್ಲಿ ನೀವು ಭಾವನಾತ್ಮಕವಾಗಿ ಗತ್ತಿಯಗೋದು ಒಳ್ಳೆಯದು. 

ಮೊದಲೇ ಹೇಳಿದಂತೆ ಚಿಂತೆಗೆ ಪರಿಹಾರ ಕಂಡುಕೊಳ್ಳಬೇಕೇ ಹೊರತು ಮಾನಸಿಕವಾಗಿ ಕುಗ್ಗಬಾರದು. ಕೆಲವೊಮ್ಮೆ ನೀವು ತಾತ್ಕಾಲಿಕವಾಗಿ ಪ್ರಕ್ಷುಭ್ದರಾಗಬಹುದು , ಹಿಂದೆಯೇ ಆತಂಕ ನಿಮ್ಮನ್ನ ಕಾಡಲು ಶುರುಮಾಡಬಹುದು. ಅಂತ ಸಮಯದಲ್ಲಿ ನೀವು ' ನನಗೇ ಯಾಕೆ ಹಿಗಗುತ್ತಿದೆ? ನಾನು ಈ ತರಹ ಯೋಚಿಸಬಾರದು?' ಅಂತನೂ ಅನ್ನಿಸಬಹುದು. ಇಂತಹ ವಿಷವರ್ತುಲದಿಂದ ಹೊರಬರುವ ಏಕೈಕ ಮಾರ್ಗವೆಂದರೆ ಭಾವನಾತ್ಮಕವಾಗಿ ಸಮಸ್ಯೆಗಳನ್ನ ಎದುರಿಸೋದನ್ನ ಕಲಿಯೋದು. ನಕಾರಾತ್ಮಕ ನಂಬಿಕೆಗಳು ನಿಮ್ಮನ್ನ ಬೆದರಿಸಬಹುದು, ನನ್ನ ಯೋಚನೆಗಳು ತರ್ಕಬದ್ಧವಾಗಿಯೂ , ನಿಯಂತ್ರಣ ದಲ್ಲಿಯೂ ಇರಬೇಕು ಅಥವಾ ನನಗೇ ಭಯ ಮತ್ತು ಕೋಪದ ಮೇಲೆ ನಿಯಂತ್ರಣ ವಿದೆ ಅಂತ ಭಾವಿಸಬೇಕು. 

ನಿಮ್ಮ ಭಯಗಳು, ಭಾವನೆಗಳು ನೈಸರ್ಗಿಕವಾದವು ಅಂತ ಅರ್ಥಮಾಡಿಕೊಳ್ಳಿ. ಕಷ್ಟ, ಚಿಂತೆ, ದುಃಖ, ಸಮಸ್ಯೆಗಳು ಮಾನವ ಜೀವನದ ಒಂದು ಭಾಗ ಅನ್ನೋದನ್ನ ತಿಳಿದುಕೊಳ್ಳಿ. ಆಗ ಮಾತ್ರ ನಿಮಗೆ ಸಮಸ್ಯೆ ಎದುರಿಸೋ ಶಕ್ತಿ ಬರುತ್ತೆ. ಈ ಸಲಹೆಗಳು ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಭಾವನೆಗಳ ನಡುವೆ ಒಂದು ಉತ್ತಮ ಸಮತೋಲನವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತವೆ. 

ಅನಿಶ್ಚಿತತೆ ಅನ್ನೋದು ಚಿಂತೆ ಮತ್ತು ಆತಂಕವನ್ನ ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಆಗಬಹುದಾದ ತಪ್ಪುಗಳನ್ನೇ ಚಿಂತಿಸುತ್ತಾ ಹೋದರೆ ಉಪಯೋಗವಿಲ್ಲ. ನೀವು ಭವಿಷ್ಯದ ಬಗ್ಗೆ ಚಿಂತಿಸಿದಷ್ಟು , ನಿಮ್ಮ ಭವಿಷ್ಯ ಸುರಕ್ಷಿತವಾಗಿರಬಹುದು ಅಂತ ಭಾವಿಸಿದರೆ ಅದು ನಿಮ್ಮ ಭ್ರಮೆಯಷ್ಟೇ. ನೀವು ನಿಮ್ಮ ಮುಂಬರುವ ದಿನಗಳಲ್ಲಿ ಬರೀ ಕೆಟ್ಟದ್ದನ್ನೇ ಪಟ್ಟಿಮಾಡಿದರೆ ಹೇಗೆ? ಅದನ್ನೆಲ್ಲ ಬಿಟ್ಟು ಪ್ರಸಕ್ತ ಸಮಯವನ್ನ ಆನಂದಿಸೋದನ್ನ ಕಲೆತುಕೊಳ್ಳಿ. 

!-- Facebook share button Start -->