ಚಿಂತೆ ಎಂಬ ಚಿತೆಯನ್ನ ಸುಡೋದು ಹೇಗೆ? Part-5

ಚಿಂತೆಗಳನ್ನ ಪ್ರಶ್ನಿಸುವುದರ ಮೂಲಕ ಚಿಂತಿಸೋದನ್ನ ನಿಲ್ಲಿಸಿ. 
* ನೀವು ಚಿಂತಿಸುತ್ತಿರುವ ಸಂಗತಿ ಸತ್ಯ ಅನ್ನೋದಕ್ಕೆ ಸಾಕ್ಷಿ ಇದೆಯೇ? ಅಥವಾ ಸಲ್ಲು ಅನ್ನೋದಕ್ಕೆನಾದರು ಪುರಾವೆ ಇದೆಯೇ?
* ನಾನು ಹೆದರುತ್ತಿರುವ ವಿಷಯಗಳು ವಾಸ್ತವವಾಗಿ ಘಟಿಸುವ ಸಾಧ್ಯತೆ ಎಷ್ಟಿದೆ?
* ಒಂದು ವೇಳೆ ವಾಸ್ತವಿಕವಾಗಿ ಘಟಿಸುವ ಸಂಭವನೀಯತೆ ಕಡಿಮಯಿದ್ದರೆ, ಮತ್ಯಾಕೆ ಈ ವಿಷಯ ನಿಮ್ಮನ್ನ ಬಾಧಿಸುತ್ತಿದೆ?
* ಈ ಚಿಂತನೆ ನನಗೆ ಸಹಾಯಕವಾಗಿದೆಯೆ? ಇದು ನನಗೆ ಹೇಗೆ ಸಹಾಯಕವಾಗಿದೆ ಮತ್ತು ಹೇಗೆ ನನ್ನನ್ನ ಘಾಸಿಗೊಳಿಸುತ್ತಿದೆ?
* ಇಂಥದ್ದೇ ಸಮಸ್ಯೆ ಹೊಂದಿರುವ ನನ್ನ ಸ್ನೇಹಿತನ ಬಳಿ , ನಾನು ಏನೆಂದು ಹೇಳಿಕೊಳ್ಳಲಿ?

ಸಾಮಾನ್ಯವಾಗಿ ಚಿಂತೆ ಅನ್ನೋದು ಭವಿಷ್ಯದಲ್ಲಿ ನಾವೇನು ಮಾಡುತ್ತೇವೆ ಅನ್ನೋದರ ಮೇಲೆ ಕೇಂದ್ರಿಕೃತವಾಗಿರುತ್ತದೆ. ಶತ ಶತಮಾನಗಳಷ್ಟು ಹಳೆಯದಾದ ಅಭ್ಯಾಸ ಸಾವಧನತೆ; ಪ್ರಸ್ತುತ ನಿಮ್ಮನ್ನ ಚಿಂತೆ ಮುಕ್ತ ಮಾಡಲು ಸಹಾಯ ಮಾಡಬಹುದು. 


* ನಿಮ್ಮ ಆಸಕ್ತಿ, ಚಿಂತನೆ, ಭಾವನೆಗಳನ್ನ ಗಮನಿಸಿ ಮತ್ತು ಅಂಗೀಕರಿಸಿ. ನಿಮ್ಮ ಚಿಂತನೆಯನ್ನ ನಿರ್ಲಕ್ಷಿಸಬೇಡಿ, ಅವುಗಳ ಜೊತೆ ಹೊರಡಬೇಡಿ. ಮತ್ತು ನಿಯಂತ್ರಿಸಲು ಸಹ ಪ್ರಯತ್ನಿಸಬೇಡಿ; ಬದಲಾಗಿ ಚಿಂತೆಯನ್ನ ಹೊರಗಿನವರ ದೃಷ್ಟಿಕೋನದಿಂದ ಗಮನಿಸಿ. 
* ನೀವು ಹೆಚ್ಚು ಚಿಂತೆಗೆ ಒತ್ತು ಕೊಡದಿದ್ದಾಗ ಅವು ಮೋಡ ಸರಿದಷ್ಟು ಸಲಿಸಾಗಿ ನಿಮ್ಮ ಬಾಳಿಂದ ಸರಿದುಹೊಗುತ್ತವೆ ಅನ್ನೋದನ್ನ ನೆನಪಿಡಿ. 
* ಯಾವಾಗಲು ವಾಸ್ತವಿಕವಾಗಿರಿ. ಇಂದಿನ ಬಗ್ಗೆ ಯೋಚಿಸಿ. ನಿಮ್ಮ ದೇಹವನ್ನೇ ಗಮನಿಸಿ, ನಿಮ್ಮ ಉಸಿರಾಟದ ಲಯ ಬದ್ಧ ಸಂಗೀತವನ್ನ ಆಸ್ವಾದಿಸಿ, ದಿನ ನಿತ್ಯ ಬದಲಾಗುವ ನಿಮ್ಮ ಭಾವನೆಗಳನ್ನ ಗಮನಿಸಿ. ಇವೆಲ್ಲ ನಿಮ್ಮ ಗಮನವನ್ನ ಪ್ರಸ್ತುತ ಕ್ಷಣಗಳಿಗೆ ಮರಳುವಂತೆ ಮಾಡುತ್ತವೆ.

ಒಂದು ಸಂಶೋಧನೆಯ ಪ್ರಕಾರ ಭಾವನೆಗಳು ಸಾಂಕ್ರಾಮಿಕವಂತೆ. ಹೀಗಾಗಿ ನಕಾರಾತ್ಮಕವಾಗಿ ಯೋಚಿಸುವ ಜನರಿಂದ ಆದಷ್ಟು ದೂರವಿರಿ. ನೀವು ಯಾರ ಜೊತೆ ಹೆಚ್ಚು ಸಮಯ ಕಳೆಯುತ್ತಿರೋ ಅವರು ನಿಮ್ಮ ಮಾನಸಿಕ ಸ್ತಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾರೆ.

* ಒಂದು ಚಿಂತೆಯ ಡೈರಿ ನಿಮ್ಮ ಜೋತೆಯಲ್ಲಿರಲಿ. ನಿಮಗೆ ಗೊತ್ತಿಲ್ಲದೇ ಬಹಳಷ್ಟು ಜನರು, ಬಹಳಷ್ಟು ಸನ್ನಿವೇಶಗಳಲ್ಲಿ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಯಾವಾಗ, ಯಾರ ಜೊತೆಯಲ್ಲಿದ್ದಾಗ ಚಿಂತೆ ನಿಮ್ಮನ್ನ ಹೆಚ್ಚಾಗಿ ಕಾಡುತ್ತದೆಯೋ ಅದನ್ನ ಬರೆದಿಡಿ. ಅದಕ್ಕೆ ಕಾರಣವೇನು ಅನ್ನೋದನ್ನ ಸಹ ಬರೆಯಿರಿ.

* ನಿಮ್ಮ ಆತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುವಂತ ವ್ಯಕ್ತಿಗಳಿಂದ ದೂರವಿರಿ.

ನಿಮ್ಮ ಬಗ್ಗೆ ಕಾಳಜಿಯಿರುವಂತಹ ವ್ಯಕ್ತಿಗಳನ್ನ ಗುರುತಿಸಿ. ಕೆಲವರು ನಿಮ್ಮ ಚಿಂತೆ, ಸಂಶಯ ಮತ್ತು ಆತಂಕಕ್ಕೆ ಕಾರಣವಾದರೆ, ಮತ್ತೆ ಕೆಲವರು ನಿಮ್ಮ ಆತ್ಮವಿಶ್ವಾಸವನ್ನ ಹೆಚ್ಚಿಸಲು ಸಹಾಯ ಮಾಡಬಹುದು. 

* ಬಹುಬೇಗ ಚಿಂತೆಯಿಂದ ಮುಕ್ತಿ ಪಡೆಯೋದು ಹೇಗೆ?

ಎಂದಾದರು ಒಬ್ಬ ಒತ್ತಡದಿಂದ ಬಳಲಿ ಬೆಂಡಾದ ಸೂಪರ್ ಹಿರೋ ನಿಮ್ಮನ್ನ ಟ್ರಾಫಿಕ್ ಜಾಮ್ ನಿಂದ, ಅಸ್ತವ್ಯಸ್ತವಾದ ಸಭೆಗಳಿಂದ, ದತ್ತ ಕಾನನಗಳಿಂದ ಉಳಿಸಬಲ್ಲನೆ? ಇಲ್ಲ ಅಲ್ಲವೇ?. ಆದರೆ ನೀವು ಒತ್ತಡವನ್ನ ನಿಯಂತ್ರಿಸುವ ಸೂಪರ್ ಹಿರೋ ಆಗಬಹುದು. ಪ್ರತಿಯೊಬ್ಬರಿಗೂ ಅಂತದ್ದೊಂದು ಶಕ್ತಿ ಇದ್ದೆಯಿದೆ. ಸತತ ಪ್ರಯತ್ನದಿಂದ ಒತ್ತಡದ ಸನ್ನಿವೇಶಗಳ ಮೇಲಿನ ನಿಯಂತ್ರಣ ಖಂಡಿತ ಸಾದ್ಯ.
!-- Facebook share button Start -->