Wanted- Mullah Omer

ಮುಲ್ಲಾ ಒಮರ್. ಇದು ಅಂತಿಂತ ಟೆರರಿಸ್ಟ್ ನ ಹೆಸ್ರಲ್ಲ. ಬದಲಾಗಿ ಟೆರರಿಸ್ಟ್ ಗಳಿಗೇ ಆಶ್ರಯ ನೀಡುತ್ತಿದ್ದ ಪವರ್ ಫುಲ್ ಉಗ್ರನ ನಾಮಧೇಯ. ಈ ಕಾರಣಕ್ಕಾಗೇ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳ ಲಿಸ್ಟ್ ನಲ್ಲಿ ಮುಲ್ಲಾ ಒಮರ್ ನದ್ದು ಎರಡನೇ ಸ್ಥಾನ. ಇಂತಿಪ್ಪ ಒಮರ್ ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ತಲೆಎತ್ತುವಂತೆ ಮಾಡಿದ್ದ.


ಚಿಕ್ಕಂದಿನಿಂದಲೇ ಕಟ್ಟರ್ ಮುಸ್ಲಿಂ ನಾಗಿದ್ದ ಮುಲ್ಲಾ, 1980ರಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಹೋರಾಡಿದ್ದ..ನಿರ್ಭಿಡೆಯಿಂದ ಇರುತ್ತಿದ್ದ ಮುಲ್ಲಾ ಅಫಘಾನಿಸ್ತಾನದಲ್ಲಿ ಆಡಿದ್ದೇ ಆಟ ಅನ್ನುವಂತಾಗಿತ್ತು. ಮುಲ್ಲಾ ಒಮರ್ 1996ರಿಂದ 2000ನೇ ಇಸವಿಯವರೆಗೆ ಅಫಘಾನಿಸ್ತಾನದಲ್ಲಿ ರಾಜನಂತೆ ಮೆರೆದ..ಯಾವಾಗ ಯು.ಎಸ್ ಆರ್ಮಿ ಅಫಘಾನಿಸ್ತಾನದ ಮೇಲೆ ಯುದ್ಧ ಸಾರಿತೋ, ಆಗ ಒಮರ್ ಅಫಘಾನಿಸ್ತಾನವನ್ನ ತೊರೆದು ಪಾಕಿಸ್ತಾನಕ್ಕೆ ಓಡಿಹೋದ. ಈತನೇ ಅಫಘಾನಿಸ್ತಾನದಲ್ಲಿ ಅಲ್ ಖೈದಾ ಬೇರು ಬಿಡಲು ಸಹಾಯ ಮಾಡ್ದಾ. ಅಷ್ಟೇ ಅಲ್ಲ, ಅಲ್ ಖೈದಾದ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಗೂ ಒಮರ್ರೇ, ಆಶ್ರಯಕೊಟ್ಟಿದ್ದ..


9/ 11 ರ ವಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಮುಂಚೆ, ಒಸಾಮಾಗೆ ಆಶ್ರಯ ನೀಡಿದ್ದು ಇದೇ ಒಮರ್.. ಆದ್ರೆ ಯಾವಾಗ ಅಮೆರಿಕಾ ಅಫಘಾನಿಸ್ತಾನದ ವಿರುದ್ಧ ಯುದ್ಧವನ್ನ ಸಾರಿತೋ, ಆಗ ಮುಲ್ಲಾ ಒಮರ್ ಅಕ್ಷರಶಃ ನಡುಗಿ ಹೋಗಿದ್ದ. ಹೀಗಾಗೇ ಅಫಘಾನಿಸ್ತಾನವನ್ನ ತೊರೆದು ಮುಲ್ಲಾ ತೆರಳಿದ್ದು ಪಾಕಿಸ್ತಾನಕ್ಕೆ. ಆ ಹೊತ್ತಿಗಾಗಲೇ ಅಮೆರಿಕಾ ಸರ್ಕಾರ ಮುಲ್ಲಾ ಒಮರ್ ಮೇಲೆ ಹತ್ತು ಮಿಲಿಯನ್ ಡಾಲರ್ ಬಹುಮಾನವ ಘೋಷಿಸಿತು. ಅವತ್ತಿನಿಂದ ಮುಲ್ಲಾ ಒಮರ್ ಪ್ರಪಂಚದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಲಿಸ್ಟ್ ಸೇರಿದ್ದ.
!-- Facebook share button Start -->