Wanted- Mullah Omer Part 3

Wanted- Mullah Omer Part 2

ಮುಲ್ಲಾ ಒಮರ್ ನಿಜವಾಗಿಯೂ ಸತ್ತಿದ್ದಾನಾ..? ಅಥವಾ ಅಮೆರಿಕಾದಿಂದ ಸಿಂಪಥಿ ಗಿಟ್ಟಿಸಿಕೊಳ್ಳಲು ಪಾಕ್ ಆಡುತ್ತಿರುವ ನಾಟಕವಾ..? ಯಾಕೆ ಈ ಪ್ರಶ್ನೆ ಉಧ್ಬವವಾಯ್ತು ಅಂತಿರಾ... ಏಕಂದ್ರೆ, ಪಾಕಿಸ್ತಾನದ್ದು ಯಾವಾಗಲೂ ಎರೆಡೆರಡು ನಾಲಿಗೆ. ಈ ಹಿಂದೆ ಪಾಕ್ ಪ್ರಮುಖ ತಾಲಿಬಾನ್ ಲೀಡರ್ ಫಕೀಮುಲ್ಲಾ ಮಸೂದ್ ಬಗ್ಗೆಯೂ ಇಂತದ್ದೇ ಹೇಳಿಕೆಯನ್ನ ನೀಡಿತ್ತು. ಆದ್ರೆ ಆಮೇಲೇನಾಯ್ತು..

 ಫಕೀಮುಲ್ಲಾ ಮಸೂದ್... ಈತ ಕೂಡ ಮುಲ್ಲಾ ಒಮರ್ ನಂತೆ ತಾಲಿಬಾನ್ ನ ಪ್ರಮುಖ ಲೀಡರ್. 2010ರಲ್ಲಿ ಫಕೀಮುಲ್ಲಾನ ಕಥೆ ಮುಗಿಸಿದ್ದೇವೆ ಅಂತ ಪಾಕಿಸ್ತಾನದ ಐಎಸ್ ಐ ಬಡಾಯಿ ಕೊಚ್ಚಿಕೊಂಡಿತು. ಆದ್ರೆ ಆಮೇಲೇನಾಯ್ತು. ಎರಡೇ ಎರಡು ದಿನ... ಖುದ್ದು ಫಕೀಮುಲ್ಲಾ ತಾಲಿಬಾನ್ ನ ಖಾಸಗಿ ವಿಡಿಯೋಗಳಲ್ಲಿ, ಚಾನೆಲ್ ಗಳಲ್ಲಿ ಕಾಣಿಸಿಕೊಂಡು ಬಿಟ್ಟಿದ್ದ.. ತಾನಿನ್ನೂ ಬದುಕಿದ್ದೇನೇ, ಪಿಚ್ಚರ್ ಅಭಿ ಬಾಕಿ ಹೈ ಮೇರೆ ದೋಸ್ತ್ ಅಂತ ಖಿಲ್ಲನೆ ನಕ್ಕಿದ್ದ. ಅದು ಪಾಪಿ ಪಾಕ್ ಗಾದ ಅತಿದೊಡ್ಡ ಮುಖಭಂಗ.

ಆಗ ಕೂಡ ಪಾಕ್ ಅಮೆರಿಕಾವನ್ನ ಇಂಪ್ರೆಸ್ ಮಾಡಲು ಇಷ್ಟೇಲ್ಲಾ ಕಸರತ್ತು ನಡಿಸಿತ್ತು. ಆದ್ರೆ ಅದು ಟುಸ್ಸಾಗಿತ್ತು.. ಅದ್ರಂತೆ ಮತ್ತೇ ಈಗ ಪಾಕ್ ಮುಲ್ಲಾ ಒಮರ್ ನನ್ನ ನ್ಯಾಟೋ ಕಾರ್ಯಾಚರಣೆಯಲ್ಲಿ ಕೊಂದಿದ್ದೇವೆ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಅದು ನಿಜವಾ.. ಇಲ್ಲಾ ಅನ್ನುತ್ತಿವೆ ತಾಲಿಬಾನ್ ಸಂಘಟನೆಗಳು,.

ಆದ್ರೆ ಅದಕ್ಕೆ ಪುರಾವೆ ಸಿಕ್ಕಿವೆ ಅಂತ ಪಾಕ್ ನ ಅಧಿಕಾರಿಗಳು, ಅಫಘಾನಿಸ್ತಾನದ ಮೂಲಗಳು ತಿಳಿಸಿವೆ. ಆದ್ರೆ ಪಾಕಿಸ್ತಾನದ ಮಾತುಗಳನ್ನ ನಂಬೋದಾದ್ರೂ ಹೇಗೆ..? ಭಯೋತ್ಪಾದಕರ ತವರು ಮನೆಯಂತಾಗಿರುವ ಪಾಕಿಸ್ತಾನದಲ್ಲೇ ಸಾಲು ಸಾಲು ಉಗ್ರರು ನೆಲೆ ಕಂಡುಕೊಂಡಿದ್ದಾರೆ. ಒಮರ್ ನ ಹತ್ಯೆಯಾಗಿದ್ದು ಕೂಡ ಅಲ್ಲೇ. ಕ್ವೆಟ್ಟಾದಿಂದ ಉತ್ತರ ವರಿಜಿಸ್ತಾನಕ್ಕೆ ತೆರಳುತ್ತಿದ್ದ ಮುಲ್ಲಾ ಒಮರ್ ನ್ನ ಹತ್ಯೆಗೆಯ್ದಿದ್ದೇವೆ ಅಂತ ಖುದ್ದು ಅಫಘಾನಿಸ್ತಾನ ಹೇಳಿಕೊಳ್ತಿದೆ. ಆದ್ರೆ ಪುರಾವೆಯಿಲ್ದೆ ನಂಬೋದಾದ್ರೂ ಹೇಗೆ ?
!-- Facebook share button Start -->