Powerful Five- Sheila Dixit

ಶಿ ಇಸ್ ಫನ್ ಲವ್ವಿಂಗ್. ಕ್ರೇಜಿ ಅಬೌಟ್ ಮೂವೀಸ್, ಮ್ಯೂಸಿಕ್ ಆಂಡ್ ದೇವಾನಂದ್. ಹೌದು ಆಕೆಗೆ ಯುವಜನತೆಗಿರುವಂತ ಎಲ್ಲಾ ಗೀಳುಗಳೂ ಇವೆ. ಹುಣಸೇ ಮರ ಮುಪ್ಪಾದ್ರೆ, ಹುಳಿ ಮುಪ್ಪೇ ಅನ್ನೋ ಹಾಗೆ ಇನ್ನೂ ಈಕೆಗೆ ಕಾರ್ ನಲ್ಲಿ 193 ಕಿಲೋ ಪರ್ ಅವರ್ ಸ್ಪೀಡ್ ನಲ್ಲಿ ಸುತ್ತಾಡೋ ಆಸೆ ಇದೆ. ಹೀಗಾಗೇ ಆಕೆ ದೆಹಲಿಯಲ್ಲಿ ಮಾಡಿದ್ದು, ಫ್ಲೈಒವರ್ ಗಳನ್ನ, ಸೂಪರ್ ಫಾಸ್ಟ್ ಮೆಟ್ರೋ ಸ್ಟೇಷನ್ ಗಳನ್ನ, ರನ್ ವೇ ಥರ ಇರೋ ರೋಡ್ ಗಳನ್ನ. ಆಕೆ ಯಾರು ಅಂದ್ರಾ... ಈ ಸ್ಟೋರಿ ನೋಡಿ.


ಶೀಲಾ ದಿಕ್ಷೀತ್. ದೆಹಲಿ ಖಾಯಂ ಮುಖ್ಯಮಂತ್ರಿಯಾಗೋ ಮುನ್ಸೂಚನೆಯನ್ನ ನೀಡ್ತಿರೋ ರಾಜಕಾರಣಿ. ಯಾಕಂದ್ರೆ ಶೀಲಾ ದೀಕ್ಷಿತ್ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಬಾರಿ ದೆಹಲಿಯಲ್ಲಿ ಕಾಂಗ್ರೇಸನ್ ವಿಜಯ ಪತಾಕೆ ಹಾರಿಸಿದಾಕೆ. ಮೇಲಿಂದ ಮೇಲೇ ಮುಖ್ಯಮಂತ್ರಿಯಾದಾಕೆ. ಸರಳ, ಸುಂದರ ಅನ್ನೋ ಮನೋಭಾವನನ್ನ ಹೊಂದಿರುವ ಶೀಲಾ 2008ರಲ್ಲಿ ಬೆಸ್ಟ್ ಚೀಫ್ ಮಿನಿಸ್ಟರ್ ಆಫ್ ಇಂಡಿಯಾ ಅನ್ನೋ, ಪತ್ರಕರ್ತರ ಅವಾರ್ಡನ್ನ ಬಾಚಿಕೊಂಡಾಕೆ.


ರಾಷ್ಟ್ರ ರಾಜಧಾನಿಯ ಮುಖ್ಯ ಮಂತ್ರಿಯಾದ ಈಕೆ ದೆಹಲಿಯನ್ನ ಮತ್ತಷ್ಟು ಸುಂದರಗೊಳಿಸಲು ಹತ್ತಾರು ಯೋಜನೆಗಳನ್ನ ಕೈಗೊಂಡಾಕೆ. ಈಕೆಯ ಕೃಪಾಕಟಾಕ್ಷದಿಂದಾಗಿಯೇ ಇಂದು ದೆಹಲಿಯಲ್ಲಿ ಸುಸಜ್ಜಿತ ಫ್ಲೈಓವರ್ ಗಳಿವೆ. ಸೂಪರ್ ಫಾಸ್ಟ್ ಮೆಟ್ರೋ ಟ್ರೈನ್ ಇದೆ. ವರ್ಲ್ಡ್ ಕ್ಲಾಸ್ ಇನ್ಫ್ರಾಸ್ಟ್ರಕ್ಚರ್ ( infrastructure ) ಇದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ರನ್ ವೇ ಥರ ಇರೋ ರೋಡ್ ಗಳಿವೆ. ಈ ಎಲ್ಲಾ ಕಾರಣಗಳಿಂದಾಗಿಯೇ ಶೀಲಾ ಪದೇ ಪದೇ ದೆಹಲಿಯಿಂದ ಆರಿಸಿ ಬರುತ್ತಿದ್ದಾರೆ.


ಬೇರೆ ರಾಜಕಾರಣಿಗಳ ತರಹ ಉದ್ದುದ್ದ ಭಾಷಣವನ್ನ ಬಿಗಿಯದ ಶೀಲಾರ ಒಂದು ಮಾತು, ಬೇರೆಯವರ ಹ್ತತು ಮಾತಿಗೆ ಸಮ. ಕೊಟ್ಟ ಮಾತಿಗೆ ತಪ್ಪದ ದಿಕ್ಷೀತ್ ದೆಹಲಿಯ ಜನತೆಯ ಪಾಲಿಗೆ ಆಲ್ ಟೈಮ್ ಫೇವರೇಟ್. ಹೀಗಾಗೇ ಈಕೆ ಮಾಜಿ ಪ್ರಧಾನಿ ಇಂದಿರಾಗಾಂಧಿಯ ಆಪ್ತರಾಗಿದ್ರು. ಇಂದಿರಾ ಗಾಂಧಿಗೆ ಆಪ್ತರಾಗಿದ್ರು ಅನ್ನೋ ಕಾರಣಕ್ಕಾಗಿಯೇ ಇಂದು ರಾಹುಲ್ ಮತ್ತು ಸೋನಿಯಾಗೂ ಇವ್ರು ಫುಲ್ ಕ್ಲೋಸ್.

ಇವತ್ತು ದೆಹಲಿಯಲ್ಲಿ ಕಾಂಗ್ರೇಸ್ ನ ರಣಕಹಳೆ ಮೊಳಗೋದಕ್ಕೆ ಶೀಲಾ ದೀಕ್ಷಿತ್ ರೇ ನೇರ ಕಾರಣ ಅಂದ್ರೆ ತಪ್ಪಾಗಲಾರದು.
!-- Facebook share button Start -->