The Mossads Secret Wars..!ಇಸ್ರೆಲ್ಸ್ ಮೊಸಾಡ್ ಗಳು ಬರೀ ಆಪರೇಷನ್ ರ್ಯಾತ್ ಆಫ್ ಗಾಡ್ ನಲ್ಲಿ ಮಾತ್ರ ತಮ್ಮ ಕೈಚಳಕವನ್ನ ತೋರಿಸಿಲ್ಲ. ಬದಲಾಗಿ ಸಾಲು ಸಾಲು ಸಿಕ್ರೇಟ್ ಆಪರೇಷನ್ ಗಳನ್ನ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವ್ರ ಹತ್ತಿರ ಅಮೇರಿಕಾದ ನೆವಿ ಸೀಲ್ ಗಳ ಹತ್ತಿರವಿರುವಂತ ಆಧುನಿಕ ಶಸ್ತ್ರಾಸ್ತ್ರಗಳಿಲ್ಲ. ಮತ್ತು ಅವರಷ್ಟು ನಿಗೂಢರೂ ಅಲ್ಲ. ಆದ್ರೆ, ಇವ್ರು ನೆವಿ ಸೀಲ್ಸ್ ಗಳಿಗೆ ಪೈಪೋಟಿ ನೀಡೋವಷ್ಟು ಚುರುಕಾಗಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅ ಡೆತ್ ಇನ್ ದುಬೈ ಪ್ರಕರಣ. 

ಆತ ಇಡೀ ಐರೋಪ್ಯ ದೇಶಗಳಿಗೆ ತಲೆನೋವಾಗಿ ಪರಿಣಮಿಸಿದ್ದ ಒಬ್ಬ ಸಾಮಾನ್ಯ ಮೆಕ್ಯಾನಿಕ್. ಅಂದ್ರೆ ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದವು ಇದ್ದಕ್ಕಿದ್ದಂತೆ ಯೂರೋಪ್ ಖಂಡದ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಆಗಿ ಬದಲಾದ. ಆತನ ಹೆಸರೇ ಮೊಹ್ಮದ್ ಅಲ್ ಮಭೂ.


ನೋಡೋಕೆ ಸಿದಾ ಸಾದಾನಾಗಿದ್ದ ಮೊಹ್ಮದ್ ತೆಡಾ ಆಗಿದ್ದ. ಆತ ಮೆಕ್ಯಾನಿಕ್ ಆಗೇ ಇದ್ದಿದ್ರೆ ಬದುಕುತ್ತಿದ್ದನೇನೋ. ಆದ್ರೆ ಮತಾಂಧನಾದ ಮೊಹ್ಮದ್,ತನ್ನ ಚಿಕ್ಕ ಗ್ಯಾರೇಜ್ ನಲ್ಲಿ ಹುಟ್ಟುಹಾಕಿದ್ದು, ಇಸ್ ಅದ್ ದಿನ್ ಆಲ್ ಕ್ವಾಸಮ್ ಬ್ರಿಗೇಡ್ ಅನ್ನೋ ಉಗ್ರ ಸಂಘಟನೆಯನ್ನ. ಅಷ್ಟೇ ಅಲ್ಲದೆ ಆತ ಇಸ್ರೆಲ್ ನಲ್ಲಿ ನ ಬಹುತೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿರಂತರವಾಗಿ ಕಾಂಟ್ಯಾಕ್ಟ್ ನಲ್ಲಿದ್ದ.

ಇಸ್ರೇಲ್ ನನ್ನೇ ಟಾರ್ಗೆಟ್ ಮಾಡಿ ಹಲವಾರು ಬಾರಿ ದಾಳಿಯನ್ನೂ ಮಾಡಿದ್ದ. ಅಷ್ಟೇ ಅಲ್ಲದೆ ಈತ 1989ರಲ್ಲಿ ಇಬ್ಬರು ಇಸ್ರೇಲಿ ಸೈನಿಕರನ್ನ ಸಹ ಕೊಂದಿದ್ದ. ಇದು ಇಸ್ರೇಲ್ ಸರ್ಕಾರವನ್ನ ಕೆರಳಿಸಿತ್ತು. ಅಂದಿನಿಂದಲೇ ಮೊಹ್ಮದ್ ನ ಅಂತ್ಯಹಾಡಲು ಇಸ್ರೇಲ್ ಸರ್ಕಾರ ಕಾಯುತ್ತಿತ್ತು. ಆದ್ರೆ ಮೊಹ್ಮದ್ ತುಂಬಾ ಚಾಣಾಕ್ಷ, ಆತನ ಹತ್ತಿರವಿದ್ದದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ನಕಲಿ ಪಾಸ್ ಪೋರ್ಟ್ ಗಳು. ಆ ಪಾಸ್ ಪೋರ್ಟ್ ಗಳ ಸಹಾಯದಿಂದಲೇ ಆತ ವರ್ಡ್ಲ್ ಟೂರ್ ನಡೆಸಿದ್ದ. ಈ ವಿಶ್ವ ಪರ್ಯಟನೆಯಲ್ಲೇ ತನ್ನ ಹಮಾಸ್ ಸಂಘಟನೆಯನ್ನ ಬೆಳೆಸುತ್ತಿದ್ದ.


ನಿರಂತರವಾಗಿ ಈತನ ಮೇಲೆ ಕಣ್ಣಿಟ್ಟಿದ್ದ ಇಸ್ರೆಲ್ ಸರ್ಕಾರ, ಆತನನ್ನ ಮುಗಿಸೋ ಮುಹೂರ್ತಕ್ಕಾಗಿ ಕಾಯುತ್ತಿತ್ತು. ಅದಕ್ಕವರು ಆಯ್ಕೆ ಮಾಡಿಕೊಂಡದ್ದು ಒನ್ಸ್ ಅಗೇನ್ ಇಸ್ರೇಲ್ಸ್ ಮೊಸಾಡ್ ಗಳನ್ನ. ತುಂಬಾನೇ ಪ್ರೀಪ್ಲಾನ್ಡ್ ಆಗಿದ್ದ ಮೊಸಾಡ್ ಗಳು ಮೊಹ್ಮದ್ ನನ್ನ ಮುಗಿಸಿದ್ದು  ಜನವರಿ 19, 2010ರಂದು. ಮೊಹ್ಮದ್ ನ ಸಾವು ಖಚಿತವಾಗಿತ್ತು. ಯಾಕಂದ್ರೆ ಅವ್ನ ಎದುರಿಗಿದ್ದದ್ದು ಖುದ್ದು ಸಾವು. ಉರುಫ್ ಮೊಸಾಡ್ ಗಳು.

ದುಬೈನ ರೊಟಾನಾ ಹೋಟೆಲ್ ನಲ್ಲಿ ತಂಗಿದ್ದ ಮೊಹ್ಮದ್ ನ ಪತ್ತೆ ಹಚ್ಚಿದ ಮೊಸಾಡ್ ತಂಡ , ಆತನನ್ನ ಸುಸಜ್ಜಿತವಾಗೇ ಮುಗಿಸಿತ್ತು. ಮೊಹ್ಮದ್ ಹೋಟೆಲ್ ನಲ್ಲಿ ಓಡಾಡುತ್ತಿದ್ದ ಫೂಟೆಜ್ ಗಳು ಸಿಸಿ ಕ್ಯಾಮೆರಾಗಳಿಗೆ ಸೆರೆಸಿಕ್ಕಿವೆ. 
ಈತನನ್ನ ಕೊಲ್ಲಲು ಮೊಸಡ್ ಗಳು ಒಂದೂ ಗುಂಡನ್ನ ಹಾರಿಸಿಲ್ಲ ಅಂದ್ರೆ ಅಚ್ಚರಿಯಾಗುತ್ತೆ. ಜೊತೆಗೆ ಈ ಟೆರರಿಸ್ಟ್ ನ ಹತ್ಯೆ ನಡೆದದ್ದು ಖುದ್ದು ಹೋಟೆನ್ ನಲ್ಲಿರೋರಿಗೂ ಗೊತ್ತಾಗಿರಲಿಲ್ಲ. ಅಷ್ಟು ವ್ಯವಸ್ಥಿತವಾಗಿ ಮೊಸಾಡ್ ಗಳು ತಮ್ಮ ಕಾರ್ಯ ನಿರ್ವಹಿಸಿದ್ರು. ಮೊಹ್ಮದ್ ನನ್ನ ಮುಖಾಮುಖಿಯಾದ ಮೊಸಾಡ್ ಗಳು ಆತನಿಗೆ ಪಾರ್ಶ್ವವಾಯು ತಗಲುವಂತೆ ಇಂಜೆಕ್ಷನ್ ನೀಡಿ, ದಿಂಬಿನಿಂದ ಉಸಿರುಕಟ್ಟುವಂತೆ ಮಾಡಿ ಮೊಹ್ಮದ್ ನ ಕಥೆ ಮುಗಿಸಿದ್ರು.
!-- Facebook share button Start -->