Seal Of Death-Last


ಆಪರೇಷನ್ ಜಿರೊನಿಮೊ. ಇದು ಅಮೇರಿಕಾ ಲಾಡೆನ್ ನನ್ನ ಸದೆಬಡೆಯಲು ಇಟ್ಟ ಹೆಸ್ರು. ಯು.ಎಸ್ ನೆವಿ ಸೀಲ್ಸ್ ಯಾವುದೇ ಕೆಲ್ಸ್ ಮಾಡಬೇಕಂದ್ರು ಅದ್ರ ನೀಲ ನಕ್ಷೆ ತಯಾರಿಸದೆ ಹೆಜ್ಜೆ ಮುಂದಿಡುತ್ತಿರಲಿಲ್ಲ. ಈ ಕಾರಣಕ್ಕಾಗೇ ಅವ್ರು ಮಿಸ್ಟರ್ ಪರ್ಫೆಕ್ಟ್ ಗಳು. ಅಬಾಟಾಬಾದ್ ನಲ್ಲಿ ಲಾಡೆನ್ ಅಡಗುತಾಣದ ಮೇಲೆ ದಾಳಿ ನಡೆಸುವ ಮೊದ್ಲೂ ಇಂತದ್ದೇ ದಾಳಿಯ ಪ್ರಾಕ್ಟೀಸನ್ನ ಸೀಲ್ ಗಳು ಮೊದಲೇ ಮಾಡಿದ್ರು. ಹೀಗಾಗೇ ರೀಯಲ್ ಟೈಂನಲ್ಲಿ ಅವ್ರು ಅನ್ ಸ್ಟಾಪೆಬಲ್ ಆಗಿ ಕಾರ್ಯನಿರ್ವಹಿಸಿದ್ರು. ಆಪರೇಷನ್ ಜಿರೊನಿಮೊ ಅನ್ನ ಯಶಸ್ವಿಗೊಳಿಸಿದ್ರು. 

ಇದೊಂದು ಕ್ರಿಮಿನಲ್ ಮ್ಯಾನ್ ಹಂಟ್. ಲಾಡೆನ್ನ ಬೇಟೆಗಿಳಿದ ಸೀಲ್ ಗಳು ಅಕ್ಷರಶಃ ಹಸಿದಿದ್ರು. ಬೇಟೆಯಾಡದೆ ಯಾವುದೇ ಕಾರಣಕ್ಕೂ ಹಿಂತಿರುಗಬಾರದು ಅಂತ ಪಣತೊಟ್ಟಿದ್ರು. ಅದಕ್ಕಾಗೇ ಅವ್ರು ಪ್ರಿಪ್ಲಾನ್ಡ್ ಆಗಿ ತೆರಳಿದ್ರು. ಯಾವಾಗ ಸಿಐಎ, ಅಬಾಟಾಬಾದ್ ನಲ್ಲಿ ಲಾಡೆನ್ ನ ನೆಲೆಯಿದೆ ಅಂತ ಮಾಹಿತಿ ಪಡೆಯಿತೋ, ಅಂದಿನಿಂದಲೇ ಸೀಲ್ ಗಳು ಪ್ಲಾನ್ ಮಾಡತೊಡಗಿದ್ರು. ಅವ್ರು ಪಕ್ಕಾ ಪ್ಲಾನ್ ಮಾಡ್ತಾರೆ. ಲಾಡೆನ್ ನ ಮನೆ ಹೇಗಿದೆ. ಹೇಗೆ ಹೋದ್ರೆ ಆತನನ್ನ ಹಿಡಿಬಹುದು. ಯಾವಾಗಲು ಆತ ಯಾವ ಕೋಣೆಲ್ಲಿರ್ತಾನೆ. ನಾವು ಹೇಗೆ ಪಾಕಿಸ್ತಾನದ ರೆಡಾರ್ ಗಳ ಕಣ್ತಪ್ಪಿಸಿ ಒಳಹೋಗಬಹುದು. ಹೀಗೆ ಅಂತ ನೂರಾರು ಪ್ರಶ್ನೆಗಳ ಉತ್ತರವನ್ನ ಅವ್ರು ಮೊದ್ಲೇ ಪ್ಲಾನ್ ಮಾಡಿದ್ರು.


ಮಿಶನ್ ಜಿರೊನಿಮೊ ಪಕ್ಕಾ ಸಕ್ಸಸ್ ಆಗ್ಬೇಕು ಅಂತಾನೇ ಅವ್ರು ಏಪ್ರೀಲ್ 12 ಮತ್ತು 13ರಂದು ಎಕ್ಸಾಕ್ಟಿಲಿ ಹೇಗೆ ಅಬಾಟಾಬಾದ್ ನಲ್ಲಿ ಲಾಡೆನ್ ನ ಮನೆ ಮೇಲೆ ದಾಳಿ ನಡೆಸಿದ್ರೋ ಅಂತ ರಿಪ್ಲಿಕಾವನ್ನ ಅವ್ರು ಪ್ರಾಕ್ಟೀಸ್ ಮಾಡಿದ್ರು. ಹೀಗಾಗೇ ಮೇ 1 ರಂದು ಸೀಲ್ಸ್ ವರ್ ಅನ್ ಸ್ಟಾಪೆಬಲ್. ಅಲ್ಲಿರುವ ಒಬ್ಬರನ್ನೂ ಬಿಡದೆ ಮಕಾಡೆ ಮಲಗಿಸಿ ಬಿಟ್ಟಿದ್ರು.

ಲಾಡೆನ್ ನ ಅಡುಗುತಾಣವನ್ನ ಪತ್ತೆ ಹಚ್ಚಲು ಅಮೇರಿಕಾ ತೆಗೆದುಕೊಂಡದ್ದು ಬರೋಬ್ಬರಿ ಒಂದು ದಶಕ. ಆದ್ರೆ ಅವ್ನ ಅಂತ್ಯ ಹಾಡಲು ಸೀಲ್ಸ್ ತೆಗೆದುಕೊಂಡಿದ್ದು ಬರೀ 40 ನಿಮಿಷ. ದ್ಯಾಟ್ ಇಸ್ ದಿ ಪವರ್ ಆಪ್ ಸೀಲ್ಸ್. ಈ ಕಾರಣಕ್ಕಾಗೇ ಸೀಲ್ ಗಳನ್ನ ಪವರ್ ಫುಲ್ ಸೂಪರ್ ಹ್ಯೂಮನ್ ಗಳೆನ್ನಲಾಗುತ್ತೆ.

ತಮ್ಮ ಪ್ರಾಣವನ್ನ ಒತ್ತೆಯಿಟ್ಟು ಲಾಡೆನ್ ನ ಬಲಿತೆಗೆದುಕೊಂಡ ಸೂಪರ್ ಸೀಲ್ ಗಳಿಗೆ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳಲೇ ಬೇಕು.

!-- Facebook share button Start -->