The People's Princess-Diana -Part 2


The People's Princess-Diana- Part 1

ಭೇಟಿಯಾದ ದಿನವೇ ಡಯಾನಾಳ ಸೌಂದರ್ಯಕ್ಕೆ ಚಾರ್ಲ್ಸ್ ಮಾರು ಹೋಗಿದ್ದ. ಐದೇ ತಿಂಗಳಿಗೆ ಹುಚ್ಚನಂತಾಗಿದ್ದ. ಹೀಗಾಗಿ ತಡೆದುಕೊಳ್ಳಲಾಗದೆ ಒಂದು ದಿನ ಧೈರ್ಯಮಾಡಿ ಚಾರ್ಲ್ಸ್ ಡಯಾನಾಳನ್ನ ಪ್ರಪೋಸ್ ಮಾಡಿ ಬಿಟ್ಟಿ. ಚಾರ್ಲ್ಸ್ ಮಾತನ್ನ ಕೇಳಿ ಖಿಲ್ಲನೆ ನಕ್ಕ ಡಯಾನಾ , ಪ್ರಿನ್ಸ್ ನ ಪ್ರಪೋಸಲ್ಲನ್ನ ತಕ್ಷಣ ಒಪ್ಪಿಕೊಂಡಳು. ಚಾರ್ಲ್ಸ್ ಬ್ಲೂ ಸಫಾಯ, ವಿತ್ ಡೈಮಂಡ್ ಇರುವ ರಿಂಗನ್ನ ತೊಡಿಸಿಯೋ ಬಿಟ್ಟ.  ಇವ್ರ ಎಂಗೇಜ್ ಮೆಂಟಾಗಿ 18 ದಿನಗಳಾದ್ರೂ ಈ ಸುದ್ದಿ ಹೊರಬಿದ್ದೇಯಿರಲಿಲ್ಲ. ಈ ವಿಚಾರ ಚಾರ್ಲ್ಸ್ ನ ತಮ್ಮ ಆಂಡ್ರೂ
 ( ANDREW ) ಅನ್ನ ಬಿಟ್ರೆ ಮತ್ಯಾರಿಗೂ ಗೊತ್ತೇ ಇರಲಿಲ್ಲ. ಮೊದ್ಲೇ ಬಡ ಕುಟುಂಬದ ಹುಡುಗಿ, ಇವಳನ್ನ ಚಾರ್ಲ್ಸ್ ಮದ್ವೆ ಆಗ್ತಾನೆ ಅಂದ್ರೆ, ರಾಜಮನೆತನದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತೆ. ಹೀಗಾಗಿ ಚಾರ್ಲ್ಸ್ ಮತ್ತು ಡಯಾನಾ ಓಡಿ ಹೋಗ್ತಾರೆ ಅಂತ ಆಂಡ್ರೂ ನಂಬಿದ್ದ.

ಆದ್ರೆ ಹಾಗಾಗಲಿಲ್ಲ. ಒಬ್ಬ ಸಾಮಾನ್ಯ ಹುಡುಗಿ ಇಂಗ್ಲೆಂಡ್ನ ರಾಜಕುಮಾರಿಯಾಗಲಿದ್ದಾಳೆ ಎಂಬ ಸುದ್ದಿ ತಿಳಿದ ಮಾಧ್ಯಮದವ್ರು ಇವ್ರ ಮದ್ವೆಗೆ ಸಿಕ್ಕಾಪಟ್ಟೆ ಪ್ರಚಾರಕೊಟ್ರು. ರಾತ್ರೋ ರಾತ್ರಿ ಡಯಾನಾ ಸ್ಟಾರ್ ಆಗಿಬಿಟ್ಟಳು. ಎಷ್ಟರ ಮಟ್ಟಿಗೆ ಅಂದ್ರೆ, ರಾಜಮನೆತನವನ್ನೇ ಮರೆಸಿಬಿಡುವಷ್ಟು. ಎವ್ರ ಮದ್ವೆ ಸಮಯದಲ್ಲಿ ಎಲ್ಲರದ್ದೂ ಒಂದೇ ಕುತೂಹಲ ಡಯಾನಾ ಹೇಗೆ ಕಾಣ್ತಾಳೆ.. ಯಾವ ಗೌನ್ ಹಾಕ್ತಾಳೆ,.. ಅವ್ರ ಹನಿಮೂನ್ ಎಲ್ಲಿ. ಹೀಗೆ ಸಾವಿರಾರು ಪ್ರಶ್ನೆಗಳು. ಕೊನೆಗೂ ಆ ದಿನ ಬಂದೇ ಬಿಟ್ತು.

!-- Facebook share button Start -->